Site icon Vistara News

Ind vs Pak : ಪಾಕ್ ವಿರುದ್ಧ ಪಂದ್ಯದ ವೇಳೆ ತಪ್ಪು ಜೆರ್ಸಿ ಹಾಕಿಕೊಂಡು ಮೈದಾನಕ್ಕೆ ಬಂದ ಕೊಹ್ಲಿ

Virat jersey

ಅಹ್ಮದಾಬಾದ್​ : ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ (Ind vs Pak) ವಿಶ್ವಕಪ್ ಪಂದ್ಯದ ಆರಂಭದಲ್ಲಿ ಭಾರತದ ಸ್ಟಾರ್ ಬ್ಯಾಟರ್​ ವಿರಾಟ್ ಕೊಹ್ಲಿ ತಪ್ಪು ಜರ್ಸಿ ಧರಿಸಿ ಹಾಕಿಕೊಂಡು ಬಂದು ಮುಜುಗರಕ್ಕೆ ಒಳಗಾದರು. ರಾಷ್ಟ್ರಗೀತೆಯ ಸಮಯದಲ್ಲಿ ಕೊಹ್ಲಿ ವಿಶ್ವ ಕಪ್​​ಗಾಗಿ ವಿನ್ಯಾಸ ಮಾಡಿರುವ ಜೆರ್ಸಿಯನ್ನು ಬಿಟ್ಟು ದ್ವಿಪಕ್ಷೀಯ ಸರಣಿಗಾಗಿ ತಯಾರಿಸಿದ ಬಿಳಿ ಭುಜದ ಪಟ್ಟೆಗಳನ್ನು ಹೊಂದಿರುವ ಜೆರ್ಸಿಗಳನ್ನು ಹಾಕಿಕೊಂಡು ಬಂದರು.

ಭಾರತದ ಸಾಮಾನ್ಯ ಏಕದಿನ ಜರ್ಸಿಯನ್ನು ಧರಿಸಿದ್ದನ್ನು ಅಭಿಮಾನಿಗಳು ಗಮನಿಸಿದ್ದಾರೆ. ಸ್ವಲ್ಪ ಹೊತ್ತಿನ ಬಳಿ ವಿಷಯ ಅವರ ಗಮನಕ್ಕೆ ಬಂದಿದೆ. ಆದರೂ 34 ವರ್ಷದ ಆಟಗಾರ ಮೊದಲ ಓವರ್​ ಮುಕ್ತಾಯಗೊಳ್ಳುವ ತನಕ ತಪ್ಪು ಜೆರ್ಸಿಯನ್ನು ಧರಿಸಿಯೇ ಮೈದಾನದಲ್ಲಿದ್ದರು. ನಂತರ ಅದನ್ನು ಬದಲಾಯಿಸಲು ಡ್ರೆಸ್ಸಿಂಗ್ ಕೋಣೆಗೆ ಧಾವಿಸಿದರು.

ಏನು ಬದಲಾವಣೆ ಇದೆ

ಟೀಮ್​ ಇಂಡಿಯಾದ ಕಿಟ್​ಗಾಗಿ ಬಿಸಿಸಿಐ ಕೆಲವು ತಿಂಗಳ ಹಿಂದೆ ಕ್ರೀಡಾ ಉತ್ಪನ್ನಗಳ ತಯಾರಕ ಕಂಪನಿಯಾಗಿರುವ ಅಡಿಡಾಸ್​ ಜತೆ ಒಪ್ಪಂದ ಮಾಡಿಕೊಂಡಿದೆ. ಅಂತೆಯೇ ದ್ವಿಪಕ್ಷೀಯ ಸರಣಿಗಾಗಿ ಒಂದು ಜೆರ್ಸಿಯನ್ನು ಸಿದ್ಧಪಡಿಸಿತ್ತು ಬಿಸಿಸಿಐ. ಆ ಜೆರ್ಸಿಯಲ್ಲಿ ಭುಜದ ಮೇಲೆ ಮೂರು ಬಿಳಿ ಪಟ್ಟಿಯನ್ನು ಹಾಕಲಾಗಿತ್ತು. ಜತೆಗೆ ಆಟಗಾರನ ಎದೆ ಮೇಲೆ ಕಿಟ್​ ಪ್ರಾಯೋಜಕ ಡ್ರೀಮ್ ಇಲೆವೆನ್​ ಜಾಹೀರಾತು ಹಾಕಲಾಗಿತ್ತು. ಆದರೆ, ವಿಶ್ವ ಕಪ್​ಗೆ ಪ್ರತ್ಯೇಕ ಜೆರ್ಸಿಯನ್ನು ಸಿದ್ಧಪಡಿಸಲಾಗಿದೆ. ಅದರಲ್ಲಿ ಡ್ರಿಮ್​ ಇಲೆವೆನ್ ಜಾಗದಲ್ಲಿ ಇಂಡಿಯಾ ಎಂದು ಬರೆಯಲಾಗಿದೆ. ಜತೆಗೆ ಭುಜದ ಪಟ್ಟಿಯಲ್ಲಿ ತ್ರಿವರ್ಣ ಧ್ವಜದ ಬಣ್ಣವನ್ನು ಅಳವಡಿಸಲಾಗಿದೆ.

ತಂಡದಲ್ಲಿ ಒಂದು ಬದಲಾವಣೆ

ಭಾರತ ಹಾಗೂ ಪಾಕಿಸ್ತಾನ ನಡುವಿನ ಸರಣಿಗೆ ಟೀಂ ಇಂಡಿಯಾದಲ್ಲಿ ಕೇವಲ ಒಂದು ಬದಲಾವಣೆ ಮಾಡಲಾಗಿದೆ. ಇಶಾನ್ ಗಿಲ್ ಬದಲಿಗೆ ಶುಬ್ಮನ್ ಗಿಲ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆಚ್ಚರಿಯೆಂಬಂತೆ ಸ್ಪಿನ್ನರ್​ಗಳಿಗೆ ನೆರವು ನೀಡುವ ಟ್ರ್ಯಾಕ್​ನಲ್ಲಿ ಶಾರ್ದೂಲ್ ಠಾಕೂರ್ ಅವರೊಂದಿಗೆ ಮೆನ್ ಇನ್ ಬ್ಲೂ ಕಣಕ್ಕೆ ಇಳಿದಿದೆ. ವಿಶೇಷವೆಂದರೆ, ಏಕದಿನ ವಿಶ್ವ ಕಪ್​ನಲ್ಲಿ ಟೀಮ್ ಇಂಡಿಯಾ ಪಾಕಿಸ್ತಾನ ವಿರುದ್ಧ 7-0 ದಾಖಲೆಯನ್ನು ಹೊಂದಿದೆ. ಅದನ್ನು 8-0 ಮಾಡಲು ಎದುರು ನೋಡುತ್ತಿದೆ.

ಇದನ್ನೂ ಓದಿ:

ತಂಡಗಳು:
ಭಾರತ ತಂಡ: ರೋಹಿತ್ ಶರ್ಮಾ (ಸಿ), ಶುಭಮನ್ ಗಿಲ್, ವಿರಾಟ್ ಕೊಹ್ಲಿ ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆ), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

ಪಾಕಿಸ್ತಾನ ತಂಡ: ಇಮಾಮ್-ಉಲ್-ಹಕ್, ಅಬ್ದುಲ್ಲಾ ಶಫೀಕ್, ಬಾಬರ್ ಅಜಮ್ (ಸಿ), ಮೊಹಮ್ಮದ್ ರಿಜ್ವಾನ್ (ವಿಕೆ), ಸೌದ್ ಶಕೀಲ್, ಇಫ್ತಿಖರ್ ಅಹ್ಮದ್, ಶದಾಬ್ ಖಾನ್, ಮೊಹಮ್ಮದ್ ನವಾಜ್, ಹಸನ್ ಅಲಿ, ಶಾಹೀನ್ ಅಫ್ರಿದಿ, ಹ್ಯಾರಿಸ್ ರವೂಫ್.

Exit mobile version