ಧರ್ಮಶಾಲಾ: ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ(Virat Kohli) ಅವರು ಹಿಮಾಚಲ ಪ್ರದೇಶ ಮುಖ್ಯಮಂತ್ರಿ(Himachal Pradesh Chief Minister) ಸುಖ್ವಿಂದರ್ ಸಿಂಗ್(CM Sukhwinder Singh Sukhu) ಸುಖು ಅವರನ್ನು ಭೇಟಿಯಾಗಿದ್ದಾರೆ. ಈ ಭೇಟಿಯ ವೇಳೆ ಕ್ರಿಕೆಟ್ ಕುರಿತು ಚರ್ಚೆ ನಡೆದಿದ್ದು, ಧರ್ಮಶಾಲಾ(Dharamshala) ಕ್ರಿಕೆಟ್ ಸ್ಟೇಡಿಯಂನಲ್ಲಿ ಕಿವೀಸ್ ವಿರುದ್ಧ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದ ಕೊಹ್ಲಿಯನ್ನು ಸಿಎಂ ಸುಖ್ವಿಂದರ್ ಸಿಂಗ್ ಅಭಿನಂದಿಸಿದ್ದಾರೆ.
ಇದೇ ವೇಳೆ ವಿಶ್ವಕಪ್ ಅಭಿಯಾನದಲ್ಲಿ ಅಜೇಯ ಓಟವನ್ನು ಕಾಯ್ದುಕೊಂಡಿರುವ ಭಾರತ ತಂಡಕ್ಕೆ ಸುಖ್ವಿಂದರ್ ಸಿಂಗ್ ತಮ್ಮ ಮತ್ತು ರಾಜ್ಯದ ಜನತೆಯ ಪರವಾಗಿ ಶುಭ ಹಾರೈಸಿದರು. ಟೀಮ್ ಇಂಡಿಯಾ ಮೂರನೇ ವಿಶ್ವಕಪ್ ಗೆಲ್ಲಲಿ ಎಂಬುದು ಪ್ರತಿಯೊಬ್ಬ ಭಾರತೀಯನ ಹೃತ್ಪೂರ್ವಕ ಹಾರೈಕೆ ಈಡೇರಲಿ ಎಂದರು. ಈ ವೇಳೆ ಹಿಮಾಚಲ ಪ್ರದೇಶ ಕಾಂಗ್ರೆಸ್ ಉಸ್ತುವಾರಿ ಹಾಗೂ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ(Rajiv Shukla), ಸಹ ಉಸ್ತುವಾರಿ ತೇಜೇಂದ್ರ ಬಿಟ್ಟು, ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ ಸುನೀಲ್ ಶರ್ಮಾ, ಶಾಸಕ ಸುಧೀರ್ ಶರ್ಮಾ ಉಪಸ್ಥಿತರಿದ್ದರು.
ಇದನ್ನೂ ಓದಿ Viral Video: ಗೆದ್ದದ್ದು ಆಫ್ಘನ್, ಕುಣಿದು ಕುಪ್ಪಳಿಸಿದ್ದು ಇರ್ಫಾನ್ ಪಠಾಣ್
धर्मशाला में भारतीय क्रिकेट टीम के दिग्गज बल्लेबाज विराट कोहली से भेंट हुई। हमारे मध्य क्रिकेट को लेकर चर्चा हुई। विराट कोहली को न्यूजीलैंड के खिलाफ धर्मशाला क्रिकेट स्टेडियम में निर्णायक पारी खेलने के लिए बधाई। विश्व कप में भारतीय टीम के विजय अभियान को जारी रखने के लिए मैं,… pic.twitter.com/RTr4yi5IgI
— Sukhvinder Singh Sukhu (@SukhuSukhvinder) October 24, 2023
ವಿರಾಟ್ ಕೊಹ್ಲಿ ಅವರು ಈ ಪಂದ್ಯದಲ್ಲಿ 104 ಎಸೆತ ಎದುರಿಸಿ 8 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 95 ರನ್ ಬಾರಿಸಿದ್ದರು. ಅವರ ಈ ಬ್ಯಾಟಿಂಗ್ ನೆರವಿನಿಂದ ಭಾರತ 4 ವಿಕೆಟ್ಗಳ ರೋಚಕ ಗೆಲುವು ಸಾಧಿಸಿತು. ಅತ್ಯುತ್ತಮ ಬ್ಯಾಟಿಂಗ್ ಮೂಲಕ ಗಮನಸೆಳೆದ ಕೊಹ್ಲಿ ಅನೇಕ ದಾಖಲೆಯನ್ನು ಬರೆದರು.
ಇದನ್ನೂ ಓದಿ Virat Kohli: ಎಷ್ಟು ಬಾರಿ ವಿರಾಟ್ ಕೊಹ್ಲಿ ‘ನರ್ವಸ್ 90’ಗೆ ವಿಕೆಟ್ ಒಪ್ಪಿಸಿದ್ದಾರೆ?
ಕೊಹ್ಲಿ ಅವರು 95 ರನ್ ಗಳಿಸುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ರನ್(Most runs in ODIs) ಸಿಡಿಸಿದ ವಿಶ್ವದ 4ನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಹಿಂದೆ ನಾಲ್ಕನೇ ಸ್ಥಾನದಲ್ಲಿದ್ದ ಶ್ರೀಲಂಕಾದ ಸನತ್ ಜಯಸೂರ್ಯ ಇದೀಗ 5ನೇ ಸ್ಥಾನಕ್ಕೆ ಕುಸಿದಿದ್ದಾರೆ. ಜಯಸೂರ್ಯ 13430 ರನ್ ಸಿಡಿಸಿದ್ದರು. ಇದೀಗ ಕೊಹ್ಲಿ ಸದ್ಯ 13437* ರನ್ ಸಿಡಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಅವರು ಈ ಸಾಧಕರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಸಚಿನ್ 18426 ರನ್ ಸಿಡಿಸಿದ್ದಾರೆ. 14234 ರನ್ ಬಾರಿಸಿರುವ ಲಂಕಾದ ಕುಮಾರ ಸಂಗಕ್ಕಾರ ದ್ವಿತೀಯ ಸ್ಥಾನದಲ್ಲಿದ್ದಾರೆ. 13704 ರನ್ ಬಾರಿಸಿರುವ ಆಸ್ಟ್ರೇಲಿಯಾದ 2 ವಿಶ್ವಕಪ್ ವಿಜೇತ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಮೂರನೇ ಸ್ಥಾನದಲ್ಲಿದ್ದಾರೆ.
WHAT. A. KNOCK 🫡👑
— BCCI (@BCCI) October 22, 2023
Virat Kohli departs after a marvellous 95(104) 👏👏#TeamIndia | #CWC23 | #MenInBlue | #INDvNZ pic.twitter.com/RxXFNTnGKE
ಕ್ಯಾಚ್ ಮೂಲಕವೂ ದಾಖಲೆ ಬರೆದ ಕೊಹ್ಲಿ
ಬ್ಯಾಟಿಂಗ್ ಮಾತ್ರವಲ್ಲದೆ ಕ್ಯಾಚ್ ಪಡೆಯುವುದರಲ್ಲಿಯೂ ಕೊಹ್ಲಿ ದಾಖಲೆ ಬರೆದಿದ್ದಾರೆ. ಸಾರಸ್ಯವೆಂದರೆ ಎರಡೂ ದಾಖಲೆಗಳನ್ನು ಬರೆದದ್ದು ಜಯಸೂರ್ಯ ಅವರ ದಾಖಲೆಯನ್ನು ಹಿಂದಿಕ್ಕಿಯೇ. ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ಕಿವೀಸ್ ಆಟಗಾರ ಡೇರಿಯಲ್ ಮಿಚೆಲ್ ಮತ್ತು ಮಾರ್ಕ್ ಚಾಪ್ಮನ್ ಅವರ ಕ್ಯಾಚ್ ಹಿಡಿಯುವ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ಅತ್ಯಧಿಕ ಕ್ಯಾಚ್(Most catches in World Cup) ಪಡೆದ ಸಾಧಕರ ಪಟ್ಟಿಯಲ್ಲಿ ಮೂರನೇ ಆಟಗಾರ ಎನಿಸಿದರು. ಈ ಹಿಂದೆ ಮೂರನೇ ಸ್ಥಾನದಲ್ಲಿದ್ದ ಶ್ರೀಲಂಕಾದ ಮಾಜಿ ದಿಗ್ಗಜ ಸನತ್ ಜಯಸೂರ್ಯ ಅವರು ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದಾರೆ. ಜಯಸೂರ್ಯ ಅವರು 18 ಕ್ಯಾಚ್ಗಳನ್ನು ಹಿಡಿದಿದ್ದರು. ಸದ್ಯ ಕೊಹ್ಲಿ 19* ಕ್ಯಾಚ್ಗಳನ್ನು ಪಡೆದಿದ್ದಾರೆ.