Virat Kohli: ಹಿಮಾಚಲ ಪ್ರದೇಶ ಸಿಎಂ ಭೇಟಿಯಾದ ವಿರಾಟ್​ ಕೊಹ್ಲಿ - Vistara News

ಕ್ರಿಕೆಟ್

Virat Kohli: ಹಿಮಾಚಲ ಪ್ರದೇಶ ಸಿಎಂ ಭೇಟಿಯಾದ ವಿರಾಟ್​ ಕೊಹ್ಲಿ

ವಿರಾಟ್​ ಕೊಹ್ಲಿ(Virat Kohli) ಅವರು ಹಿಮಾಚಲ ಪ್ರದೇಶ ಮುಖ್ಯಮಂತ್ರಿ(Himachal Pradesh Chief Minister) ಸುಖ್ವಿಂದರ್ ಸಿಂಗ್‌(CM Sukhwinder Singh Sukhu) ಸುಖು ಅವರನ್ನು ಭೇಟಿಯಾಗಿದ್ದಾರೆ.

VISTARANEWS.COM


on

Virat Kohli Meets Himachal Pradesh Chief Minister
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಧರ್ಮಶಾಲಾ: ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ(Virat Kohli) ಅವರು ಹಿಮಾಚಲ ಪ್ರದೇಶ ಮುಖ್ಯಮಂತ್ರಿ(Himachal Pradesh Chief Minister) ಸುಖ್ವಿಂದರ್ ಸಿಂಗ್‌(CM Sukhwinder Singh Sukhu) ಸುಖು ಅವರನ್ನು ಭೇಟಿಯಾಗಿದ್ದಾರೆ. ಈ ಭೇಟಿಯ ವೇಳೆ ಕ್ರಿಕೆಟ್ ಕುರಿತು ಚರ್ಚೆ ನಡೆದಿದ್ದು, ಧರ್ಮಶಾಲಾ(Dharamshala) ಕ್ರಿಕೆಟ್ ಸ್ಟೇಡಿಯಂನಲ್ಲಿ ಕಿವೀಸ್​ ವಿರುದ್ಧ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದ ಕೊಹ್ಲಿಯನ್ನು ಸಿಎಂ ಸುಖ್ವಿಂದರ್ ಸಿಂಗ್‌ ಅಭಿನಂದಿಸಿದ್ದಾರೆ.

ಇದೇ ವೇಳೆ ವಿಶ್ವಕಪ್ ಅಭಿಯಾನದಲ್ಲಿ ಅಜೇಯ ಓಟವನ್ನು ಕಾಯ್ದುಕೊಂಡಿರುವ ಭಾರತ ತಂಡಕ್ಕೆ ಸುಖ್ವಿಂದರ್ ಸಿಂಗ್‌ ತಮ್ಮ ಮತ್ತು ರಾಜ್ಯದ ಜನತೆಯ ಪರವಾಗಿ ಶುಭ ಹಾರೈಸಿದರು. ಟೀಮ್ ಇಂಡಿಯಾ ಮೂರನೇ ವಿಶ್ವಕಪ್ ಗೆಲ್ಲಲಿ ಎಂಬುದು ಪ್ರತಿಯೊಬ್ಬ ಭಾರತೀಯನ ಹೃತ್ಪೂರ್ವಕ ಹಾರೈಕೆ ಈಡೇರಲಿ ಎಂದರು. ಈ ವೇಳೆ ಹಿಮಾಚಲ ಪ್ರದೇಶ ಕಾಂಗ್ರೆಸ್ ಉಸ್ತುವಾರಿ ಹಾಗೂ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ(Rajiv Shukla), ಸಹ ಉಸ್ತುವಾರಿ ತೇಜೇಂದ್ರ ಬಿಟ್ಟು, ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ ಸುನೀಲ್ ಶರ್ಮಾ, ಶಾಸಕ ಸುಧೀರ್ ಶರ್ಮಾ ಉಪಸ್ಥಿತರಿದ್ದರು.

ಇದನ್ನೂ ಓದಿ Viral Video: ಗೆದ್ದದ್ದು ಆಫ್ಘನ್​, ಕುಣಿದು ಕುಪ್ಪಳಿಸಿದ್ದು ಇರ್ಫಾನ್​ ಪಠಾಣ್​

ವಿರಾಟ್​ ಕೊಹ್ಲಿ ಅವರು ಈ ಪಂದ್ಯದಲ್ಲಿ 104 ಎಸೆತ ಎದುರಿಸಿ 8 ಬೌಂಡರಿ ಮತ್ತು 2 ಸಿಕ್ಸರ್​ ನೆರವಿನಿಂದ 95 ರನ್​ ಬಾರಿಸಿದ್ದರು. ಅವರ ಈ ಬ್ಯಾಟಿಂಗ್​ ನೆರವಿನಿಂದ ಭಾರತ 4 ವಿಕೆಟ್​ಗಳ ರೋಚಕ ಗೆಲುವು ಸಾಧಿಸಿತು. ಅತ್ಯುತ್ತಮ ಬ್ಯಾಟಿಂಗ್​ ಮೂಲಕ ಗಮನಸೆಳೆದ ಕೊಹ್ಲಿ ಅನೇಕ ದಾಖಲೆಯನ್ನು ಬರೆದರು.

ಇದನ್ನೂ ಓದಿ Virat Kohli: ಎಷ್ಟು ಬಾರಿ ವಿರಾಟ್​ ಕೊಹ್ಲಿ ‘ನರ್ವಸ್ 90’ಗೆ ವಿಕೆಟ್​ ಒಪ್ಪಿಸಿದ್ದಾರೆ?​

ಕೊಹ್ಲಿ ಅವರು 95 ರನ್​ ಗಳಿಸುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ರನ್​(Most runs in ODIs) ಸಿಡಿಸಿದ ವಿಶ್ವದ 4ನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಹಿಂದೆ ನಾಲ್ಕನೇ ಸ್ಥಾನದಲ್ಲಿದ್ದ ಶ್ರೀಲಂಕಾದ ಸನತ್ ಜಯಸೂರ್ಯ ಇದೀಗ 5ನೇ ಸ್ಥಾನಕ್ಕೆ ಕುಸಿದಿದ್ದಾರೆ. ಜಯಸೂರ್ಯ 13430 ರನ್ ಸಿಡಿಸಿದ್ದರು. ಇದೀಗ ಕೊಹ್ಲಿ ಸದ್ಯ 13437* ರನ್ ಸಿಡಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಅವರು ಈ ಸಾಧಕರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಸಚಿನ್ 18426 ರನ್ ಸಿಡಿಸಿದ್ದಾರೆ. 14234 ರನ್​ ಬಾರಿಸಿರುವ ಲಂಕಾದ ಕುಮಾರ ಸಂಗಕ್ಕಾರ ದ್ವಿತೀಯ ಸ್ಥಾನದಲ್ಲಿದ್ದಾರೆ. 13704 ರನ್​ ಬಾರಿಸಿರುವ ಆಸ್ಟ್ರೇಲಿಯಾದ 2 ವಿಶ್ವಕಪ್​ ವಿಜೇತ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಮೂರನೇ ಸ್ಥಾನದಲ್ಲಿದ್ದಾರೆ.

ಕ್ಯಾಚ್​ ಮೂಲಕವೂ ದಾಖಲೆ ಬರೆದ ಕೊಹ್ಲಿ

ಬ್ಯಾಟಿಂಗ್​ ಮಾತ್ರವಲ್ಲದೆ ಕ್ಯಾಚ್​ ಪಡೆಯುವುದರಲ್ಲಿಯೂ ಕೊಹ್ಲಿ ದಾಖಲೆ ಬರೆದಿದ್ದಾರೆ. ಸಾರಸ್ಯವೆಂದರೆ ಎರಡೂ ದಾಖಲೆಗಳನ್ನು ಬರೆದದ್ದು ಜಯಸೂರ್ಯ ಅವರ ದಾಖಲೆಯನ್ನು ಹಿಂದಿಕ್ಕಿಯೇ. ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್​ ಅಸೋಸಿಯೇಶನ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಅವರು ಕಿವೀಸ್​ ಆಟಗಾರ ಡೇರಿಯಲ್ ಮಿಚೆಲ್​ ಮತ್ತು ಮಾರ್ಕ್ ಚಾಪ್ಮನ್ ಅವರ ಕ್ಯಾಚ್​ ಹಿಡಿಯುವ ಮೂಲಕ ವಿಶ್ವಕಪ್​ ಟೂರ್ನಿಯಲ್ಲಿ ಅತ್ಯಧಿಕ ಕ್ಯಾಚ್(Most catches in World Cup)​ ಪಡೆದ ಸಾಧಕರ ಪಟ್ಟಿಯಲ್ಲಿ ಮೂರನೇ ಆಟಗಾರ ಎನಿಸಿದರು. ಈ ಹಿಂದೆ ಮೂರನೇ ಸ್ಥಾನದಲ್ಲಿದ್ದ ಶ್ರೀಲಂಕಾದ ಮಾಜಿ ದಿಗ್ಗಜ ಸನತ್​ ಜಯಸೂರ್ಯ ಅವರು ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದಾರೆ. ಜಯಸೂರ್ಯ ಅವರು 18 ಕ್ಯಾಚ್​ಗಳನ್ನು ಹಿಡಿದಿದ್ದರು. ಸದ್ಯ ಕೊಹ್ಲಿ 19* ಕ್ಯಾಚ್​ಗಳನ್ನು ಪಡೆದಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರಿಕೆಟ್

IPL 2024 : ಚೆನ್ನೈ ಮಣಿಸಿ ಪ್ಲೇಆಫ್​ಗೇರುವ ಮುನ್ನವೇ ಸಿಕ್ಸರ್​​ಗಳ ವಿಶೇಷ ದಾಖಲೆ ಬರೆದ ಆರ್​ಸಿಬಿ

IPL 2024: ಈ ಹಿಂದೆ 2018ರ ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 145 ಸಿಕ್ಸರ್ ಬಾರಿಸಿತ್ತು. ಈ ಋತುವಿನಲ್ಲಿ ಸನ್ರೈಸರ್ಸ್ ಹೈದರಾಬಾದ್ ಇದುವರೆಗೆ 146 ಸಿಕ್ಸರ್ಗಳನ್ನು ಬಾರಿಸಿದೆ ಮತ್ತು ಅದು ಆರ್​ಸಿಬಿ ನಂತರ ಒಂದು ಋತುವಿನಲ್ಲಿ 150 ಸಿಕ್ಸರ್​ಗಳನ್ನು ಬಾರಿಸಿದ ಎರಡನೇ ತಂಡವಾಗಿದೆ

VISTARANEWS.COM


on

IPL 2024
Koo

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೇರಿದಂತೆ ಒಂದೇ ಆವೃತ್ತಿಯ ಟಿ 20 ಟೂರ್ನಿಯೊಂದರಲ್ಲಿ 150 ಸಿಕ್ಸರ್​ಗಳನ್ನು ಬಾರಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಶನಿವಾರ (ಮೇ 18) ಪಾತ್ರವಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಐಪಿಎಲ್​ ಪಂದ್ಯದಲ್ಲಿ (IPL 2024) ಬೆಂಗಳೂರು ಮೂಲದ ತಂಡ ಈ ಸಾಧನೆ ಮಾಡಿದೆ.

ಈ ಹಿಂದೆ 2018ರ ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 145 ಸಿಕ್ಸರ್ ಬಾರಿಸಿತ್ತು. ಈ ಋತುವಿನಲ್ಲಿ ಸನ್ರೈಸರ್ಸ್ ಹೈದರಾಬಾದ್ ಇದುವರೆಗೆ 146 ಸಿಕ್ಸರ್ಗಳನ್ನು ಬಾರಿಸಿದೆ ಮತ್ತು ಅದು ಆರ್​ಸಿಬಿ ನಂತರ ಒಂದು ಋತುವಿನಲ್ಲಿ 150 ಸಿಕ್ಸರ್​ಗಳನ್ನು ಬಾರಿಸಿದ ಎರಡನೇ ತಂಡವಾಗಿದೆ. ಆರ್​ಸಿಬಿ ಶನಿವಾರ ಸಿಕ್ಸರ್​​ಗಳ ಪಟ್ಟಿಯಲ್ಲಿ ಎಸ್ಆರ್​ಎಚ್​​ ಅನ್ನು ಹಿಂದಿಕ್ಕಿ ಒಂದು ಋತುವಿನಲ್ಲಿ 150 ಸಿಕ್ಸರ್​ಗಳನ್ನು ಬಾರಿಸಿದ ಮೊದಲ ತಂಡ ಎಂಬ ಇತಿಹಾಸವನ್ನು ಸೃಷ್ಟಿಸಿತು.

ಈ ಋತುವಿನ ಮೊದಲ ಪಂದ್ಯದಲ್ಲಿ ಆರ್​ಸಿಬಿ ಸಿಎಸ್​ಕೆ ವಿರುದ್ಧ 6 ಸಿಕ್ಸರ್​ಗಳನ್ನು ಬಾರಿಸಿತು ಮತ್ತು ಪಂಜಾಬ್ ಕಿಂಗ್ಸ್ ವಿರುದ್ಧ ಇನ್ನೂ ಆರು ಸಿಕ್ಸರ್​ಗಳನ್ನು ಬಾರಿಸಿತು. ಮೂರನೇ ಮತ್ತು ನಾಲ್ಕನೇ ಪಂದ್ಯಗಳಲ್ಲಿ ಅವರು ಕ್ರಮವಾಗಿ 11 ಮತ್ತು 8 ಸಿಕ್ಸರ್ ಗಳನ್ನು ಬಾರಿಸಿದರು. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಐದನೇ ಪಂದ್ಯದಲ್ಲಿ ಬೆಂಗಳೂರು ಮೂಲದ ತಂಡವು ಆರು ಸಿಕ್ಸರ್​ಗಳನ್ನು ಬಾರಿಸಿತು. ಇದಾದ ನಂತರ ಮುಂಬೈ ಇಂಡಿಯನ್ಸ್ ವಿರುದ್ಧ 11 ಸಿಕ್ಸರ್​ಗಳನ್ನು ಬಾರಿಸಿ ಎಸ್ಆರ್​ಎಚ್​​ ವಿರುದ್ಧ 16 ಸಿಕ್ಸರ್​ಗಳನ್ನು ಬಾರಿಸಿತ್ತು.

ಇದನ್ನೂ ಓದಿ: RCB vs CSK: ಇದು ಆರ್​ಸಿಬಿಯ ಹೊಸ ಅಧ್ಯಾಯ; ಹಾಲಿ ಚಾಂಪಿಯನ್​ ಚೆನ್ನೈ ಮಣಿಸಿ ಪ್ಲೇ ಆಫ್​ಗೆ ಲಗ್ಗೆ

ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಆರ್​ಸಿಬಿ 17 ಸಿಕ್ಸರ್​ಗಳನ್ನು ಬಾರಿಸಿದ್ದು, ಎಸ್ಆರ್​ಚ್​​ ವಿರುದ್ಧ 8 ಸಿಕ್ಸರ್​ಗಳನ್ನು ಬಾರಿಸಿದೆ. ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ 16 ಮತ್ತು 8 ಸಿಕ್ಸರ್​ಗಳ ಬಾರಿಸಿತ್ತು. ಇದರ ನಂತರ ಪಿಬಿಕೆಎಸ್ ವಿರುದ್ಧ 16 ಸಿಕ್ಸರ್​ಗಳನ್ನು ಬಾರಿಸಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 11 ಸಿಕ್ಸರ್ ಸಿಡಿಸಿತು. ತಮ್ಮ ಕೊನೆಯ ಲೀಗ್ ಪಂದ್ಯದಲ್ಲಿ ಫಾಫ್ ಡು ಪ್ಲೆಸಿಸ್ ನೇತೃತ್ವದ ತಂಡವು ಸಿಎಸ್​​ಕೆ ವಿರುದ್ಧ 16 ಸಿಕ್ಸರ್​ಗಳನ್ನು ಬಾರಿಸಿದೆ. ಒಟ್ಟಾರೆಯಾಗಿ, ಅವರು ಇಲ್ಲಿಯವರೆಗೆ 157 ಸಿಕ್ಸರ್​ಗಳನ್ನು ಬಾರಿಸಿದ್ದಾರೆ.

ಟಿ20 ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ತಂಡಗಳ ಪಟ್ಟಿ ಇಂತಿದೆ

  • ಐಪಿಎಲ್ 2024: ಆರ್​​ಸಿಬಿ 157 ಸಿಕ್ಸರ್
  • ಐಪಿಎಲ್ 2024: ಎಸ್ಆರ್​ಎಚ್ 146 ಸಿಕ್ಸರ್​
  • ಐಪಿಎಲ್ 2018: ಸಿಎಸ್​ಕೆ 145 ಸಿಕ್ಸರ್​
  • 2023ರ ಟಿ20 ಬ್ಲಾಸ್ಟ್​ ಟೂರ್ನಿ: ಸರ್ರೆ ತಂಡದ 144 ಸಿಕ್ಸರ್​
  • ಐಪಿಎಲ್ 2019: ಕೆಕೆಆರ್ 143 ಸಿಕ್ಸರ್​

ಚೆನ್ನೈ ವಿರುದ್ಧದ ಪಂದ್ಯದಲ್ಲಿ ವಿಶೇಷ ದಾಖಲೆ ಬರೆದ ವಿರಾಟ್​ ಕೊಹ್ಲಿ

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ (ಮೇ 18) ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಐಪಿಎಲ್​ ಪಂದ್ಯದಲ್ಲಿ (IPL 2024) ವಿರಾಟ್ ಕೊಹ್ಲಿ(virat Kohli) ವಿಶೇಷ ಸಾಧನೆಯೊಂದನ್ನು ಮಾಡಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್​ ಟೂರ್ನಿಯಲ್ಲಿ 3000 ರನ್ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ವಿರಾಟ್ ಕೊಹ್ಲಿ 12 ರನ್ ಗಳಿಸಿದ ನಂತರ ಮೈದಾನದಲ್ಲಿ 3000 ರನ್ ಪೂರೈಸಿದರು, ತುಷಾರ್ ದೇಶಪಾಂಡೆ ಅವರ ಬೌಲಿಂಗ್ಗೆ ಸಿಕ್ಸರ್ ಗೆ ಹೊಡೆಯುವ ಮೂಲಕ ಶೈಲಿಯಲ್ಲಿ ದೊಡ್ಡ ಮೈಲಿಗಲ್ಲನ್ನು ಸಾಧಿಸಿದರು.

ಇದರೊಂದಿಗೆ ಕೊಹ್ಲಿ ಐಪಿಎಲ್​ನಲ್ಲಿ ಒಂದೇ ತಾಣದಲ್ಲಿ 3000 ರನ್ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಐಪಿಎಲ್​ನಲ್ಲಿ ಇದುವರೆಗೆ ಯಾವುದೇ ಆಟಗಾರ ಒಂದು ಸ್ಟೇಡಿಯಮ್​​ನಲ್ಲಿ 2500 ರನ್​ಗಳ ಗಡಿಯನ್ನು ಮುಟ್ಟಲು ಸಾಧ್ಯವಾಗಿಲ್ಲ. ರೋಹಿತ್ ಶರ್ಮಾ 2295 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ ಹೊರತುಪಡಿಸಿ, ಐಪಿಎಲ್​ನಲ್ಲಿ 2000 ರನ್ ಗಳಿಸಿದ ಏಕೈಕ ಬ್ಯಾಟ್ಸ್ಮನ್ ರೋಹಿತ್. ವಾಂಖೆಡೆ ಸ್ಟೇಡಿಯಂನಲ್ಲಿ ರೋಹಿತ್ 2295 ರನ್ ಗಳಿಸಿದ್ದಾರೆ. ಆರ್​ಸಿಬಿ ಮಾಜಿ ಬ್ಯಾಟರ್​ ಎಬಿ ಡಿವಿಲಿಯರ್ಸ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 1960 ರನ್ ಗಳಿಸಿದ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

Continue Reading

ಪ್ರಮುಖ ಸುದ್ದಿ

Virat kohli : ಚೆನ್ನೈ ವಿರುದ್ಧದ ಪಂದ್ಯದಲ್ಲಿ ವಿಶೇಷ ದಾಖಲೆ ಬರೆದ ವಿರಾಟ್​ ಕೊಹ್ಲಿ

Virat kohli : ಕೊಹ್ಲಿ ಐಪಿಎಲ್​ನಲ್ಲಿ ಒಂದೇ ತಾಣದಲ್ಲಿ 3000 ರನ್ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಐಪಿಎಲ್​ನಲ್ಲಿ ಇದುವರೆಗೆ ಯಾವುದೇ ಆಟಗಾರ ಒಂದು ಸ್ಟೇಡಿಯಮ್​​ನಲ್ಲಿ 2500 ರನ್​ಗಳ ಗಡಿಯನ್ನು ಮುಟ್ಟಲು ಸಾಧ್ಯವಾಗಿಲ್ಲ. ರೋಹಿತ್ ಶರ್ಮಾ 2295 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ.

VISTARANEWS.COM


on

Virat kohli
Koo

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ (ಮೇ 18) ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಐಪಿಎಲ್​ ಪಂದ್ಯದಲ್ಲಿ (IPL 2024) ವಿರಾಟ್ ಕೊಹ್ಲಿ(virat Kohli) ವಿಶೇಷ ಸಾಧನೆಯೊಂದನ್ನು ಮಾಡಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್​ ಟೂರ್ನಿಯಲ್ಲಿ 3000 ರನ್ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ವಿರಾಟ್ ಕೊಹ್ಲಿ 12 ರನ್ ಗಳಿಸಿದ ನಂತರ ಮೈದಾನದಲ್ಲಿ 3000 ರನ್ ಪೂರೈಸಿದರು, ತುಷಾರ್ ದೇಶಪಾಂಡೆ ಅವರ ಬೌಲಿಂಗ್ಗೆ ಸಿಕ್ಸರ್ ಗೆ ಹೊಡೆಯುವ ಮೂಲಕ ಶೈಲಿಯಲ್ಲಿ ದೊಡ್ಡ ಮೈಲಿಗಲ್ಲನ್ನು ಸಾಧಿಸಿದರು.

ಇದರೊಂದಿಗೆ ಕೊಹ್ಲಿ ಐಪಿಎಲ್​ನಲ್ಲಿ ಒಂದೇ ತಾಣದಲ್ಲಿ 3000 ರನ್ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಐಪಿಎಲ್​ನಲ್ಲಿ ಇದುವರೆಗೆ ಯಾವುದೇ ಆಟಗಾರ ಒಂದು ಸ್ಟೇಡಿಯಮ್​​ನಲ್ಲಿ 2500 ರನ್​ಗಳ ಗಡಿಯನ್ನು ಮುಟ್ಟಲು ಸಾಧ್ಯವಾಗಿಲ್ಲ. ರೋಹಿತ್ ಶರ್ಮಾ 2295 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ ಹೊರತುಪಡಿಸಿ, ಐಪಿಎಲ್​ನಲ್ಲಿ 2000 ರನ್ ಗಳಿಸಿದ ಏಕೈಕ ಬ್ಯಾಟ್ಸ್ಮನ್ ರೋಹಿತ್. ವಾಂಖೆಡೆ ಸ್ಟೇಡಿಯಂನಲ್ಲಿ ರೋಹಿತ್ 2295 ರನ್ ಗಳಿಸಿದ್ದಾರೆ. ಆರ್​ಸಿಬಿ ಮಾಜಿ ಬ್ಯಾಟರ್​ ಎಬಿ ಡಿವಿಲಿಯರ್ಸ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 1960 ರನ್ ಗಳಿಸಿದ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

ಐಪಿಎಲ್ನಲ್ಲಿ ಒಂದು ಸ್ಥಳದಲ್ಲಿ ಅತಿ ಹೆಚ್ಚು ರನ್

  • 3005* ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿ ಕೊಹ್ಲಿ
  • 2295 ರೋಹಿತ್ ಶರ್ಮಾ (ವಾಂಖೆಡೆ ಸ್ಟೇಡಿಯಂ)
  • 1960: ಎಬಿ ಡಿವಿಲಿಯರ್ಸ್ (ಎಂ ಚಿನ್ನಸ್ವಾಮಿ ಕ್ರೀಡಾಂಗಣ)

ಒಂದೇ ತಂಡದಲ್ಲಿ ಆಡುತ್ತಿರುವ ಕೊಹ್ಲಿ

ಟೂರ್ನಿಯ ಮೊದಲ ಋತುವಿನಿಂದಲೂ ಕೊಹ್ಲಿ ಒಂದೇ ತಂಡದ ಪರ ಆಡುತ್ತಿದ್ದಾರೆ. ಐಪಿಎಲ್​ನಲ್ಲಿ ಯಾವುದೇ ಆಟಗಾರ ಒಂದೇ ತಂಡಕ್ಕಾಗಿ ಇಷ್ಟು ದೀರ್ಘಕಾಲ ಆಡಿಲ್ಲ. ಎಂಎಸ್ ಧೋನಿ 2008 ರಿಂದ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದಾರೆ ಆದರೆ ಚೆನ್ನೈ ಮೂಲದ ತಂಡವನ್ನು ಅಮಾನತುಗೊಳಿಸಿದಾಗ ಎರಡು ವರ್ಷಗಳ ಕಾಲ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಪರ ಆಡಬೇಕಾಯಿತು.

ಇದನ್ನೂ ಓದಿ: Hyderabadi Biryani : ಎಸ್​ಆರ್​ಎಚ್​ ಅಭಿಮಾನಿಗಳೊಂದಿಗೆ ಹೈದ್ರಾಬಾದಿ ಬಿರಿಯಾನಿ ಸವಿದ ಹೇಡನ್ ಪುತ್ರಿ ಗ್ರೇಸ್​, ಇಲ್ಲಿದೆ ವಿಡಿಯೊ

ಪ್ರಸ್ತುತ ನಡೆಯುತ್ತಿರುವ ಐಪಿಎಲ್ 2024 ರಲ್ಲಿ ಕೊಹ್ಲಿ ಅದ್ಭುತ ಫಾರ್ಮ್ನಲ್ಲಿದ್ದಾರೆ. ಅವರು ಸ್ಪರ್ಧೆಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರು. ಈ ಪಂದ್ಯಕ್ಕೂ ಮುನ್ನ ಆಡಿರುವ 13 ಪಂದ್ಯಗಳಲ್ಲಿ ಒಂದು ಶತಕ ಹಾಗೂ 5 ಅರ್ಧಶತಕಗಳ ನೆರವಿನಿಂದ 661 ರನ್ ಗಳಿಸಿದ್ದಾರೆ. ಕೊಹ್ಲಿ ಅದ್ಭುತ ಫಾರ್ಮ್​ನಲ್ಲಿದ್ದು ಸಿಎಸ್ಕೆ ವಿರುದ್ಧದ ಪಂದ್ಯದಲ್ಲಿ ತಮ್ಮ ಮಾಜಿ ನಾಯಕ ದೊಡ್ಡ ಮೊತ್ತಕ್ಕೆ ಮಾರ್ಗದರ್ಶನ ನೀಡುತ್ತಾರೆ ಎಂದು ಆರ್ಸಿಬಿ ಆಶಿಸುತ್ತಿದೆ.

Continue Reading

ಕ್ರೀಡೆ

RCB vs CSK: ಇದು ಆರ್​ಸಿಬಿಯ ಹೊಸ ಅಧ್ಯಾಯ; ಹಾಲಿ ಚಾಂಪಿಯನ್​ ಚೆನ್ನೈ ಮಣಿಸಿ ಪ್ಲೇ ಆಫ್​ಗೆ ಲಗ್ಗೆ

RCB vs CSK: ಒಂದೊಮ್ಮೆ ಚೆನ್ನೈ 201 ರನ್​ ಬಾರಿಸುತ್ತಿದ್ದರೂ ಆರ್​ಸಿಬಿ ಪ್ಲೇ ಆಫ್​ನಿಂದ ಹೊರ ಬೀಳುತ್ತಿತ್ತು. ಆದರೆ ಈ ಮೊತ್ತವನ್ನು ಬಾರಿಸಲು ಅವಕಾಶ ಕೊಡದೆ ಪ್ಲೇ ಆಫ್​ಗೆ ಲಗ್ಗೆಯಿಟ್ಟಿತು.

VISTARANEWS.COM


on

RCB vs CSK
Koo

ಬೆಂಗಳೂರು: ಈ ಬಾರಿ ಹೊಸ ಅಧ್ಯಾಯ ಎಂದು ಹೇಳಿಕೊಂಡು ಆರಂಭಿಕ ಹಂತದಲ್ಲಿ ಸತತ ಸೋಲಿಗೆ ಸಿಲುಕಿ ಇನ್ನೇನು ಟೂರ್ನಿಯಿಯಿಂದ ಹೊರಬೀಳಬೇಕು ಎನ್ನುವಷ್ಟರಲ್ಲಿ ಪುಟಿದೆದ್ದ ಆರ್​ಸಿಬಿ(RCB vs CSK), ಇದೀಗ ಯಾರೂ ಊಹಿಸಿದ, ಪವಾಡ ಸಂಭವಿಸಿದ ರೀತಿಯಲ್ಲಿ 4ನೇ ತಂಡವಾಗಿ ಪ್ಲೇ ಆಫ್​ಗೆ ಅಧಿಕೃತ ಎಂಟ್ರಿ ಕೊಟಿದೆ. ಪ್ಲೇ ಆಫ್​ ಪ್ರವೇಶಕ್ಕೆ ಗೆಲ್ಲಲೇ ಬೇಕಿದ್ದ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ 27 ರನ್​ ಗಳ ಗೆಲುವು ಸಾಧಿಸಿ ಈ ಅಭೂತಪೂರ್ವ ಸಾಧನೆ ಮಾಡಿದೆ. ಒಂದೊಮ್ಮೆ ಚೆನ್ನೈ 201 ರನ್​ ಬಾರಿಸುತ್ತಿದ್ದರೂ ಆರ್​ಸಿಬಿ ಪ್ಲೇ ಆಫ್​ನಿಂದ ಹೊರ ಬೀಳುತ್ತಿತ್ತು.

ಇಲ್ಲಿನ ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಮಳೆ ಪೀಡಿತ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಆಹ್ವಾನ ಪಡೆದ ಆರ್​ಸಿಬಿ ವಿರಾಟ್​ ಕೊಹ್ಲಿ ಮತ್ತು ಫಾಫ್​ ಡುಪ್ಲೆಸ್​ ಮೊದಲ ವಿಕೆಟ್​ಗೆ ನಿರ್ಮಿಸಿದ ಭದ್ರ ಅಡಿಪಾಯದ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 218 ರನ್​ ಬಾರಿಸಿತು. ಜವಾಬಿತ್ತ ಚೆನ್ನೈ ಈ ಬೃಹತ್​ ಮೊತ್ತವನ್ನು ಬೆನ್ನಟ್ಟಿದ ಚೆನ್ನೈ ಹಲವು ಏರಿಳಿತ ಕಂಡು ಕೊನೆಗೆ ತನ್ನ ಪಾಲಿನ ಆಟದಲ್ಲಿ 7 ವಿಕೆಟ್​ಗೆ 191 ರನ್​ ಗಳಿಸಲಷ್ಟೇ ಶಕ್ತವಾಗಿ ಸೋಲಿಗೆ ಶರಣಾಯಿತು. ಜತೆಗೆ ಟೂರ್ನಿಯಿಂದಲೂ ಹೊರಬಿದ್ದು ಮಾಜಿ ಚಾಂಪಿಯನ್​ ಎನಿಸಿಕೊಂಡಿತು.

ದೊಡ್ಡ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಚೆನ್ನೈಗೆ ಆಲ್​ರೌಂಡರ್​ ಗ್ಲೆನ್​ ಮ್ಯಾಕ್ಸ್​ವೆಲ್​ ಮೊದಲ ಎಸೆತದಲ್ಲೇ ಆಘಾತವಿಕ್ಕಿದರು. ನಾಯಕ ಋತುರಾಜ್​ ಗಾಯಕ್ವಾಡ್​​ ಅವರನ್ನು ಶೂನ್ಯಕ್ಕೆ ಔಟ್​ ಮಾಡಿದರು. ಈ ಆಘಾತದಿಂದ ಚೇತರಿಸಿಕೊಳ್ಳುವ ಮುನ್ನವೇ ಚೆನ್ನೈ ಡೇಂಜಸರ್​ ಬ್ಯಾಟರ್​ ಡೇರಿಯಲ್​ ಮಿಚೆಲ್(4)​ ಅವರ ವಿಕೆಟ್​ ಕೂಡ ಕಳೆದುಕೊಂಡಿತು. ಆರ್​ಸಿಬಿ ಪಾಳಯದಲ್ಲಿ ಎಲ್ಲಿಲ್ಲದ ಸಂಭ್ರಮ ಮನೆ ಮಾಡಿತು. ಆದರೆ ಈ ಸಂಭ್ರಮ ಹೆಚ್ಚು ಹೊತ್ತು ಸಾಗಲಿಲ್ಲ. ಮೂರನೇ ವಿಕೆಟ್​ಗೆ ರಹಾನೆ ಮತ್ತು ರಚಿನ್ ರವೀಂದ್ರ​ ಸೇರಿಕೊಂಡು ಉತ್ತಮ ಜತೆಯಾಟವೊಂದನ್ನು ಸಂಘಟಿಸಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಉಭಯ ಆಟಗಾರರ ಈ ಬ್ಯಾಟಿಂಗ್​ನಿಂದ ತಂಡಕ್ಕೆ 10 ಸರಾಸರಿಯಲ್ಲಿ ರನ್​ ಹರಿದುಬಂತು.

ಉತ್ತಮವಾಗಿ ಆಡುತ್ತಿದ್ದ ಈ ಜೋಡಿಯನ್ನು ಫರ್ಗುಸನ್​ ಕೊನೆಗೂ ಬೇರ್ಪಡಿಸಿದರು. 33 ರನ್​ ಗಳಿಸಿದ ವೇಳೆ ರಹಾನೆ ವಿಕೆಟ್​ ಕಳೆದುಕೊಂಡರು. ರಹಾನೆ ಮತ್ತು ರಚಿನ್​ ಸೇರಿಕೊಂಡು ಮೂರನೇ ವಿಕೆಟ್​ಗೆ 66 ರನ್​ ಒಟ್ಟುಗೂಡಿಸಿದರು. ಕರ್ನಾಟಕ ಮೂಲದವರೇ ಆದ ನ್ಯೂಜಿಲ್ಯಾಂಡ್​ ಆಟಗಾರ ರಚಿನ್​ ರವೀಂದ್ರ ಅರ್ಧಶತಕ ಬಾರಿಸುವ ಮೂಲಕ ಕನ್ನಡಿಗರಿಗೇ ಕಂಟಕವಾಗುವ ಸೂಚನೆ ನೀಡಿದರು. ಆದರೆ ಇವರ ಬ್ಯಾಟಿಂಗ್​ ಅಬ್ಬರಕ್ಕೆ ಸ್ವಪ್ನಿಲ್ ಸಿಂಗ್​ ಬ್ರೇಕ್​ ಹಾಕಿದರು. ಮ್ಯಾಕ್ಸ್​ವೆಲ್​ ಓವರ್​ನಲ್ಲಿ ಜೀವದಾನ ಪಡೆದರೂ ಕೂಡ ಇದೇ ಓವರ್​ನಲ್ಲಿ ಇಲ್ಲದ ರನ್​ ಕದಿಯಲು ಹೋಗಿ ರನೌಟ್​ ಬಲೆಗೆ ಬಿದ್ದರು. ರಚಿನ್​ 37 ಎಸೆತಗಳಿಂದ 61 ರನ್(5 ಬೌಂಡರಿ, 3 ಸಿಕ್ಸರ್​) ಬಾರಿಸಿದರು. ಈ ವಿಕೆಟ್​ ಪತನದ ಬಳಿಕ ಶಿವಂ ದುಬೆ(7) ವಿಕೆಟ್​ ಕೂಡ ಬಿತ್ತು.

ಅಂತಿಮ ಹಂತದಲ್ಲಿ ರವೀಂದ್ರ ಜಡೇಜಾ ಮತ್ತು ಧೋನಿ ಸೇರಿಕೊಂಡು 201 ರನ್​ ಬಾರಿಸಲು ಶಕ್ತಿ ಮೀರಿ ಪ್ರಯತ್ನಪಟ್ಟರೂ ಕೂಡ ಇದು ಸಾಧ್ಯವಾಗಲಿಲ್ಲ. ಧೋನಿ ಕ್ರೀಸ್​ನಲ್ಲಿ ಇರುತ್ತಿದ್ದರೆ ಚೆನ್ನೈಗೆ ಗೆಲುವು ಖಚಿತವಾಗಿರುತ್ತಿತ್ತು. 6 ಎಸೆತಗಳಲ್ಲಿ 17 ರನ್​ ಬೇಕಿದ್ದಾಗ ಧೋನಿ ಯಶ್​ ದಯಾಳ್​ ಅವರ ಮೊದಲ ಎಸೆತವನ್ನೇ ಸ್ಟೇಡಿಯಂನಿಂದ ಹೊರಗೆಡೆ ಬಾರಿಸಿ 6 ರನ್​ ಕಲೆಹಾಕಿದರು. ಈ ಸಿಕ್ಸರ್​ 110 ಮೀಟರ್​ ದೂರಕ್ಕೆ ಸಿಡಿಯಿತು. ಆದರೆ ಮುಂದಿನ ಎಸೆತದಲ್ಲಿಯೂ ಧೋನಿ ಸಿಕ್ಸರ್​ ಬಾರಿಸುವ ಪ್ರಯತ್ನದಲ್ಲಿ ಬೌಂಡರಿ ಲೈನ್​ನಲ್ಲಿ ಕ್ಯಾಚ್​ ನೀಡಿ ವಿಕೆಟ್​ ಕಳೆದುಕೊಂಡರು. ಇಲ್ಲಿಗೆ ಚೆನ್ನೈ ಸೋಲು ಕೂಡ ಖಚಿತಗೊಂಡಿತು. ಅಂತಿಮ 2 ಎಸೆತದಲ್ಲಿ 10 ರನ್​ ಗಳಿಸುವ ಯತ್ನದಲ್ಲಿ ಜಡೇಜಾ ವಿಫಲರಾದರು. ಧೋನಿ 13 ಎಸೆತಗಳಿಂದ 25 ರನ್​ ಚಚ್ಚಿದರು.

18ರ ಅದೃಷ್ಟ ಗೆದ್ದ ಆರ್​ಸಿಬಿ


ವಿಶೇಷವೆಂದರೆ ಆರ್​ಸಿಬಿಗೆ ಮೇ 18 ಎನ್ನುವುದು ಬಹಳ ಅದೃಷ್ಟದ ದಿನವಾಗಿತ್ತು. ಹೌದು, ಇದುವರೆಗಿನ ಐಪಿಎಲ್​ ಇತಿಹಾಸದಲ್ಲಿ ಆರ್​ಸಿಬಿ ಈ ದಿನದಂದು ಆಡಿದ ಎಲ್ಲ ಪಂದ್ಯಗಳನ್ನು ಗೆದ್ದಿತ್ತು. ಹೀಗಾಗಿ ಇಂದು ಕೂಡ ಆರ್​ಸಿಬಿ ಗೆಲುವು ಸಾಧಿಸಬಹುದು ಎನ್ನುವುದು ಅಭಿಮಾನಿಗಳ ಬಲವಾದ ನಂಬಿಕೆಯಾಗಿತ್ತು. ಅದರಂತೆ ಆರ್​ಸಿಬಿ ಗೆಲುವು ಸಾಧಿಸಿ ಅಭಿಮಾನಿಗಳ ನಂಬಿಕೆಯನ್ನು ಉಳಿಸಿಕೊಂಡಿದೆ. ಮೇ 18ರಂದು ಆರ್​ಸಿಬಿ ವಿರುದ್ಧ ಚೆನ್ನೈ 3ನೇ ಸೋಲಿಗೆ ತುತ್ತಾಯಿತು.

ಕೊಹ್ಲಿ-ಡುಪ್ಲೆಸಿಸ್​ ಉತ್ತಮ ಜತೆಯಾಟ


ಮೊದಲು ಬ್ಯಾಟಿಂಗ್​ ನಡೆಸಿದ ಆರ್​ಸಿಬಿ ಮೊದಲ ಓವರ್​ನಲ್ಲಿ ಕೇವಲ 2 ರನ್​ ಮಾತ್ರ ಗಳಿಸಿತು. ಆ ಬಳಿಕದ 2 ಓವರ್​ನಲ್ಲಿ ಸಿಡಿದು ನಿಂತ ಕೊಹ್ಲಿ ಮತ್ತು ಡುಪ್ಲೆಸಿಸ್​ 29 ರನ್​ ಬಾಚಿದರು. 3 ಓವರ್​ಗೆ 31 ರನ್​ ಹರಿದು ಬಂತು. ಇದೇ ವೇಳೆ ಮಳೆ ಕೂಡ ಸುರಿಯಿತು. ಕೆಲ ಕಾಲ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿತು. ಮಳೆ ನಿಂತ ಮೇಲೆ ಪಿಚ್ ವರ್ತನೆ ಕೊಂಚ ಬದಲಾಯಿತು. ಸ್ಪಿನ್ನರ್​ಗಳು ನಿಯಂತ್ರ ಸಾಧಿಸಿದರು. ಇದರಿಂದ ಆರ್​ಸಿಬಿಯ ರನ್​ ಗಳಿಕೆಯೂ ಕೆಲ ಕಾಲ ನಿಧಾನಗತಿಯಿಂದ ಸಾಗಿತು.

ಪಿಚ್​ ವರ್ತನೆಯನ್ನು ಅರಿತುಕೊಂಡ ಬಳಿಕ ಕೊಹ್ಲಿ ಮತ್ತು ಡು ಪ್ಲೆಸಿಸ್​ ಮತ್ತೆ ಬಿರುಸಿನ ಬ್ಯಾಟಿಂಗ್​ಗೆ ಮುಂದಾದರು. ಅನುಭವಿ ರವೀಂದ್ರ ಜಡೇಜಾಗೆ ಡು ಪ್ಲೆಸಿಸ್​ ಸತತವಾಗಿ 2 ಸಿಕ್ಸರ್​ ಚಚ್ಚಿದರು. ಉತ್ತಮವಾಗಿ ಆಡುತ್ತಿದ್ದ ವಿರಾಟ್​ ಕೊಹ್ಲಿ ಬೌಂಡರಿ ಲೈನ್​ನಲ್ಲಿ ಡ್ಯಾರಿಲ್​ ಮಿಚೆಲ್ ಹಿಡಿದ ಅಸಾಮಾನ್ಯ ಕ್ಯಾಚ್​ಗೆ ಬಲಿಯಾದರು. 47 ರನ್​ ಗಳಿಸಿ ಕೇವಲ 3 ರನ್​ ಅಂತರದಲ್ಲಿ ಅರ್ಧಶತಕ ವಂಚಿತರಾದರು. ಅವರ ಈ ಸೊಗಸಾದ ಬ್ಯಾಟಿಂಗ್​ ಇನಿಂಗ್ಸ್​ನಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್​ ದಾಖಲಾಯಿತು. ಕೊಹ್ಲಿ 4 ಸಿಕ್ಸರ್​ ಬಾರಿಸುವ ಮೂಲಕ ಈ ಆವೃತ್ತಿಯಲ್ಲಿ ಅತ್ಯಧಿಕ ಸಿಕ್ಸರ್​ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನ ಪಡೆದರು.​ ಕೊಹ್ಲಿ ಒಟ್ಟು 36 ಸಿಕ್ಸರ್​ ಬಾರಿಸಿದ್ದಾರೆ. ಲಕ್ನೋ ತಂಡ ನಿಕೋಲಸ್​​ ಪೂರನ್​ ಕೂಡ 36 ಸಿಕ್ಸರ್​ ಬಾರಿಸಿದ್ದಾರೆ. ಇದು ಮಾತ್ರವಲ್ಲದೆ ಕೊಹ್ಲಿ ಈ ಬಾರಿ 700 ರನ್​ಗಳ ಗಡಿ ದಾಟಿದರು.

ಇದನ್ನೂ ಓದಿ IPL 2024 : ಹಾರ್ದಿಕ್ ಪಾಂಡ್ಯಗೆ ನಿಷೇಧ ಹೇರಿದ ಬಿಸಿಸಿಐ; ಮುಂದಿನ ಪಂದ್ಯದಲ್ಲಿ ಆಡದಂತೆ ತಾಕೀತು

ಕೊಹ್ಲಿ ವಿಕೆಟ್​ ಪತನದ ಬಳಿಕ ಆಡಲಿಳಿದ ರಜತ್​ ಪಾಟೀದಾರ್​ ಕೂಡ ಆಕ್ರಮಣಕಾರಿ ಬ್ಯಾಟಿಂಗ್​ಗೆ ಒತ್ತ ನೀಡಿದರು. ಆದರೆ ಸ್ಟ್ರೇಟ್​ ಡ್ರೈ ಮಾಡುವ ಯತ್ನದಲ್ಲಿ ನಾನ್​ ಸ್ಟ್ರೈಕರ್​ನಲ್ಲಿದ್ದ ಡು ಪ್ಲೆಸಿಸ್​ ಅವರನ್ನು ರನೌಟ್​ ಆಗುವಂತೆ ಮಾಡಿದರು. ಪಾಟಿದಾರ್​ ಹೊಡೆದ ಚೆಂಡು ಸ್ಯಾಂಟ್ನರ್​ ಅವರ ಕೈಗೆ ತಗುಲಿ ನೇರವಾಗಿ ವಿಕೆಟ್​ಗೆ ತಗುಲಿತು. ಕ್ರೀಸ್​ ಬಿಟ್ಟು ನಿಂತಿದ್ದ ಡು ಪ್ಲೆಸಿಸ್​ ರನೌಟ್​ ಸಂಕಟಕ್ಕೆ ಸಿಲುಕಿದರು. ಡು ಪ್ಲೆಸಿಸ್​ ತಲಾ ಮೂರು ಸಿಕ್ಸರ್​ ಮತ್ತು ಬೌಂಡರಿ ನೆರವಿನಿಂದ 54 ರನ್​ ಬಾರಿಸಿದರು.

ಜೀವದಾನ ಪಡೆದ ಗ್ರೀನ್​


ಮೂರನೇ ವಿಕೆಟ್​ಗೆ ಜತೆಯಾದ ಕ್ಯಾಮರೂನ್​ ಗ್ರೀನ್​ ಮತ್ತು ಪಾಟಿದಾರ್​ ಕೂಡ ಉತ್ತಮ ಜತೆಯಾಟವೊಂದನ್ನು ಸಂಘಟಿಸಿದರು. ಇದೇ ವೇಳೆ ಗ್ರೀನ್​ ಅವರು ನಾಯಕ ಋತುರಾಜ್​ ಗಾಯಕ್ವಾಡ್​ ಅವರಿಂದ ಕ್ಯಾಚ್​ ಕೈ ಚೆಲ್ಲಿ ಜೀವದಾನವೊಂದನ್ನು ಪಡೆದರು. ಈ ವೇಳೆ ಗ್ರೀನ್​ 18 ರನ್​ ಗಳಿಸಿದ್ದರು. ಸಿಕ್ಕ ಈ ಅವಕಾಶವನ್ನು ಎರಡೂ ಕೈಗಳಿಂದ ಬಾಚಿದ ಗ್ರೀನ್​ ಅಜೇಯ 38 ರನ್​ ಬಾರಿಸಿ ಚೆನ್ನೈಗೆ ಕಂಟಕವಾದರು. ಪಾಟಿದಾರ್​ ಮತ್ತು ಗ್ರೀನ್​ 3ನೇ ವಿಕೆಟ್​ಗೆ ಅತ್ಯಮೂಲ್ಯ 71 ರನ್​ಗಳ ಜತೆಯಾಟ ನಿಭಾಯಿಸಿದರು. ಪಾಟಿದಾರ್​ ಕೂಡ ಕೊಹ್ಲಿಯಂತೆ ಮಿಚೆಲ್​ ಕ್ಯಾಚ್​ಗೆ ವಿಕೆಟ್​ ಕಳೆದುಕೊಂಡರು. 23 ಎಸೆತ ಎದುರಿಸಿ 41 ರನ್​ ಬಾರಿಸಿದರು. ಈ ವೇಳೆ 4 ಸಿಕ್ಸರ್​ ಮತ್ತು 3 ಬೌಂಡರಿ ಸಿಡಿಯಿತು. ಬಳಿಕ ಬಂದ ದಿನೇಶ್​ ಕಾರ್ತಿಕ್​(14) ಮತ್ತು ಗ್ಲೆನ್​ ಮ್ಯಾಕ್ಸ್​ವೆಲ್​(16) ರನ್​ ಬಾರಿಸಿ ವಿಕೆಟ್​ ಕಳೆದುಕೊಂಡರು. ಚೆನ್ನೈ ಪರ ಶಾರ್ದೂಲ್​ ಠಾಕೂರ್​ 2 ವಿಕೆಟ್​ ಪಡೆದರೂ ಕೂಡ 61 ರನ್​ ಬಿಟ್ಟು ಕೊಟ್ಟು ದುಬಾರಿಯಾದರು. ಅನುಭವಿ ರವೀಂದ್ರ ಜಡೇಜಾ ವಿಕೆಟ್​ ಲೆಸ್​ ಎನಿಸಿಕೊಂಡರು.

Continue Reading

ಕರ್ನಾಟಕ

RCB vs CSK: ಆರ್‌ಸಿಬಿ-ಸಿಎಸ್‌ಕೆ ಪಂದ್ಯದ ವೇಳೆ ಚಿನ್ನಸ್ವಾಮಿ ಮೈದಾನಕ್ಕೆ ನುಗ್ಗುತ್ತೇನೆ ಎಂದಿದ್ದ ಯುವಕ ವಶಕ್ಕೆ

RCB vs CSK: ಆರ್‌ಸಿಬಿ-ಸಿಎಸ್‌ಕೆ ಪಂದ್ಯದ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ನುಗ್ಗುತ್ತೇನೆ ಎಂದು ವಿಡಿಯೊ ಮಾಡಿ ಹರಿಬಿಟ್ಟಿದ್ದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

VISTARANEWS.COM


on

RCB vs CSK
Koo

ಬೆಂಗಳೂರು: ಆರ್‌ಸಿಬಿ ಮತ್ತು ಸಿಎಸ್‌ಕೆ (RCB vs CSK) ನಡುವಿನ ಐಪಿಎಲ್‌ ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ನುಗ್ಗುತ್ತೇನೆ ಎಂದು ಹೇಳಿದ್ದ ಯುವಕನನ್ನು ಕಬ್ಬನ್ ಪಾರ್ಕ್ ಪೊಲೀಸರು ಶನಿವಾರ ವಶಕ್ಕೆ ಪಡೆದಿದ್ದಾರೆ. ಮ್ಯಾಚ್ ವೇಳೆ ಸ್ಟೇಡಿಯಂಗೆ ನುಗ್ಗುವುದಾಗಿ ವಿಡಿಯೊ ಮಾಡಿದ್ದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಯುವಕನನ್ನು ವಶಕ್ಕೆ ಪಡೆಯಲಾಗಿದೆ.

ನಿತಿನ್ (24) ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಮ್ಯಾಚ್ ವೇಳೆ ಸ್ಟೇಡಿಯಂಗೆ ನುಗ್ಗುವುದಾಗಿ ಯುವಕ ಹೇಳಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಮೇ 18ರಂದು ನಡೆಯುವ ಮ್ಯಾಚ್ ವೇಳೆ ಸ್ಟೇಡಿಯಂಗೆ ನುಗ್ಗುತ್ತೇನೆ ಎಂದು ಯುವಕ ವಿಡಿಯೊದಲ್ಲಿ ಹೇಳಿದ್ದ. ಈ ವಿಡಿಯೊವನ್ನು ಕಬ್ಬನ್‌ ಪಾರ್ಕ್‌ ಪೊಲೀಸರು ಗಮನಿಸಿ ನಿತಿನ್‌ನನ್ನು ವಶಕ್ಕೆ ಪಡೆದಿದ್ದಾರೆ.

ಈ ಹಿಂದೆ ಮಾರ್ಚ್‌ 25ರಂದು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಪಂಜಾಬ್‌ ಕಿಂಗ್ಸ್‌ ನಡುವಿನ ಪಂದ್ಯದ ವೇಳೆ ಅಭಿಮಾನಿಯೊಬ್ಬ ಚಿನ್ನಸ್ವಾಮಿ ಮೈದಾನಕ್ಕೆ ನುಗ್ಗಿ ವಿರಾಟ್‌ ಕೊಹ್ಲಿಯ(Virat Kohli) ಕಾಲಿಗೆ ಬಿದ್ದ ಪ್ರಸಂಗ ನಡೆದಿತ್ತು. ಈ ಘಟನೆಯಿಂದ ಪ್ರೇರಣೆಗೊಂಡ ಬೆಂಗಳೂರಿನ ಯುವಕ ನಿತಿನ್‌, ತಾನು ಕೂಡ ಮೈದಾನಕ್ಕೆ ನುಗ್ಗುವುದಾಗಿ ವಿಡಿಯೊದಲ್ಲಿ ಹೇಳಿದ್ದ. ಇದರಿಂದ ಪಂದ್ಯದ ವೇಳೆ ಸಮಸ್ಯೆಯಾಗಬಹುದು ಎಂದು ಕ್ರೀಡಾಂಗಣದ ಸಿಬ್ಬಂದಿ, ಪೊಲೀಸರಿಗೆ ಮಾಹಿತಿ ನೀಡಿದ್ದರು.

ಇದನ್ನೂ ಓದಿ | RCB vs CSK: ಆರ್​ಸಿಬಿಗೆ ಸಿದ್ದರಾಮಯ್ಯ, ಶಿವಣ್ಣ, ರಿಷಬ್​ ಶೆಟ್ಟಿ, ಗೇಲ್​ ಸೇರಿ ಗಣ್ಯರ ಸಪೋರ್ಟ್​

ಯುವಕನ ವಿಡಿಯೊ ವೈರಲ್‌ ಆದ ಬಳಿಕ ನಿಗಾ ವಹಿಸಿದ್ದ ಪೊಲೀಸರು, ಯುವಕ ಟಿಕೆಟ್‌ ಪಡೆದು ಪಂದ್ಯ ವೀಕ್ಷಿಸಲು ಶನಿವಾರ ಆಗಮಿಸಿದ್ದಾಗ ವಶಕ್ಕೆ ಪಡೆದಿದ್ದಾರೆ.

ವಿರಾಟ್‌ ಕೊಹ್ಲಿಯ ಕಾಲಿಗೆ ಬಿದ್ದಿದ್ದ ಅಭಿಯಾನಿ

ಮಾರ್ಚ್‌ನಲ್ಲಿ ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂಗೆ ನುಗ್ಗಿ ವಿರಾಟ್‌ ಕೊಹ್ಲಿಯ(Virat Kohli) ಕಾಲಿಗೆ ಬಿದ್ದ ಅಭಿಯಾನಿ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಪಂದ್ಯದಲ್ಲಿ ಆರ್‌ಸಿಬಿ ಬ್ಯಾಟಿಂಗ್‌ ಆರಂಭಿಸಲು ಸಿದ್ಧತೆ ನಡೆಸುತ್ತಿತ್ತು. ಆಗ ಕೊಹ್ಲಿ ಕ್ರೀಸ್‌ನಲ್ಲಿದ್ದರು. ಅ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ ಅಭಿಮಾನಿ ಪಿಚ್‌ ಕಡೆ ಬಂದು ಕೊಹ್ಲಿ ಕಾಲಿಗೆ ಬಿದ್ದು, ಆಲಿಂಗನ ಮಾಡಿದ್ದ. ಕೂಡಲೇ ಎಚ್ಚೆತ್ತುಕೊಂಡ ಭದ್ರತಾ ಸಿಬ್ಬಂದಿ ಆತನನ್ನು ಹಿಡಿದು ಮೈದಾನದಿಂದ ಹೊರಹಾಕಿದ್ದರು. ಇದರ ಫೋಟೋ, ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿತ್ತು.

ಇದನ್ನೂ ಓದಿ | RCB vs CSK: ಸಿಕ್ಸರ್​ ಮೂಲಕವೂ ದಾಖಲೆ ಬರೆದ ವಿರಾಟ್​ ಕೊಹ್ಲಿ

ರಾಯಚೂರು ಮೂಲದ ವಿರಾಟ್​ ಕೊಹ್ಲಿಯ ಅಪ್ಪಟ ಅಭಿಮಾನಿ ಕುರುಮಪ್ಪ‌ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ, ಅತ ಪೊಲೀಸ್​ ವಿಚಾರಣೆ ವೇಳೆ ತನ್ನ ಮೂಲ ಹೆಸರನ್ನು ಮರೆ ಮಾಚಿ ರಂಜಿತ್ ಎಂದು ಹೇಳಿದ್ದ. ದಾಖಲೆಗಳನ್ನು ಪರಿಶೀಲಿಸುವ ವೇಳೆ ಆತ ರಂಜಿತ್​ ಅಲ್ಲ ಕುರುಮಪ್ಪ‌ ಎಂಬ ವಿಚಾರ ಬೆಳಕಿಗೆ ಬಂದಿತ್ತು. ನಂತರ ಆತನ ವಿರುದ್ಧ ಎಫ್ಐಆರ್ ದಾಖಲಿಸಿ ಕರ್ತವ್ಯಕ್ಕೆ ಅಡ್ಡಿ, ಮೈದಾನಕ್ಕೆ ಅತಿಕ್ರಮಣ ಪ್ರವೇಶದಡಿ ಕೇಸ್ ದಾಖಲಿಸಲಾಗಿತ್ತು.

Continue Reading
Advertisement
IPL 2024
ಕ್ರಿಕೆಟ್17 mins ago

IPL 2024 : ಚೆನ್ನೈ ಮಣಿಸಿ ಪ್ಲೇಆಫ್​ಗೇರುವ ಮುನ್ನವೇ ಸಿಕ್ಸರ್​​ಗಳ ವಿಶೇಷ ದಾಖಲೆ ಬರೆದ ಆರ್​ಸಿಬಿ

Karnataka weather Forecast
ಮಳೆ17 mins ago

Karnataka Weather : ರಾಜ್ಯಾದ್ಯಂತ ಗುಡುಗು ಸಹಿತ ಭಾರಿ ಮಳೆ; ಆರೆಂಜ್‌, ಯೆಲ್ಲೋ ಎಚ್ಚರಿಕೆ

Virat kohli
ಪ್ರಮುಖ ಸುದ್ದಿ38 mins ago

Virat kohli : ಚೆನ್ನೈ ವಿರುದ್ಧದ ಪಂದ್ಯದಲ್ಲಿ ವಿಶೇಷ ದಾಖಲೆ ಬರೆದ ವಿರಾಟ್​ ಕೊಹ್ಲಿ

Health Tips in Kannada
ಆರೋಗ್ಯ41 mins ago

Health Tips in Kannada: ಕಾಮಕಸ್ತೂರಿ ಬೀಜದ ಪಾನಕ ಕುಡಿದರೆ ಆರೋಗ್ಯ ವೃದ್ಧಿ ಪಕ್ಕಾ!

Dina bhavishya
ಭವಿಷ್ಯ2 hours ago

Dina Bhavishya : ಈ ರಾಶಿಯವರಿಗೆ ರಹಸ್ಯ ಕಾರ್ಯಗಳಿಂದಲೂ ಸಿಗುತ್ತೆ ಯಶಸ್ಸು

Karnataka Police
ಸಂಪಾದಕೀಯ6 hours ago

ವಿಸ್ತಾರ ಸಂಪಾದಕೀಯ: ರಾಜ್ಯದಲ್ಲಿ ಕೊಲೆಗಳ‌ ಸರಮಾಲೆ; ಪೊಲೀಸ್ ಇಲಾಖೆ ಯಾಕಿಷ್ಟು‌ ದುರ್ಬಲವಾಗಿದೆ?

Jammu Kashmir
ದೇಶ6 hours ago

Jammu Kashmir: ಕಾಶ್ಮೀರದ 2 ಕಡೆ ಉಗ್ರರ ದಾಳಿ; ಮಾಜಿ ಸರ್ಪಂಚ್‌ ಬಲಿ, ರಾಜಸ್ಥಾನದ ದಂಪತಿಗೆ ಗಾಯ

RCB vs CSK
ಕ್ರೀಡೆ7 hours ago

RCB vs CSK: ಇದು ಆರ್​ಸಿಬಿಯ ಹೊಸ ಅಧ್ಯಾಯ; ಹಾಲಿ ಚಾಂಪಿಯನ್​ ಚೆನ್ನೈ ಮಣಿಸಿ ಪ್ಲೇ ಆಫ್​ಗೆ ಲಗ್ಗೆ

Anjali Murder Case
ಕರ್ನಾಟಕ7 hours ago

Anjali Murder Case: ಅಂಜಲಿ ಹತ್ಯೆ ಪ್ರಕರಣ; ಹು-ಧಾ ಐಪಿಎಸ್ ಅಧಿಕಾರಿಯ ತಲೆದಂಡ

Narendra Modi
ದೇಶ7 hours ago

Narendra Modi: ಗುರಿ ದೊಡ್ಡದಿದೆ, 3ನೇ ಅವಧಿಯ ಆಡಳಿತಕ್ಕೆ ಪ್ಲಾನ್‌ ರೆಡಿ ಇದೆ; ಮೋದಿ ವಿಶ್ವಾಸ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case JDS calls CD Shivakumar pen drive gang
ರಾಜಕೀಯ1 day ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ2 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ3 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು3 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ4 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ4 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ4 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20245 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌