Site icon Vistara News

Virat Kohli: ಐಪಿಎಲ್​ನ ನೆಚ್ಚಿನ ಎದುರಾಳಿ ತಂಡವನ್ನು ಹೆಸರಿಸಿದ ವಿರಾಟ್​ ಕೊಹ್ಲಿ

Virat Kohli

Virat Kohli: Not Mumbai Indians, Virat Kohli picks this IPL franchise as his favourite rival

ಮುಂಬಯಿ: ಐಪಿಎಲ್​ ಟೂರ್ನಿಯ(IPL) ಇದುವರೆಗಿನ 17 ಆವೃತ್ತಿಗಳಲ್ಲಿಯೂ ಆರ್​ಸಿಬಿ(RCB) ಒಂದೇ ತಂಡದ ಪರ ಆಡುತ್ತಿರುವ ವಿರಾಟ್​ ಕೊಹ್ಲಿ(Virat Kohli) ತಮ್ಮ ನೆಚ್ಚಿನ ಎದುರಾಳಿ ತಂಡ ಯಾವುದು ಎಂದು ಹೇಳಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿ 16 ವರ್ಷ ತುಂಬಿದ ಹಿನ್ನಲೆಯಲ್ಲಿ ನಡೆಸಿದ್ದ ಸಂದರ್ಶನದಲ್ಲಿ ಕೊಹ್ಲಿ ಈ ವಿಚಾರವನ್ನು ಬಹಿರಂಗಪಡಿಸಿದರು.

ಆಗಸ್ಟ್​ 18 ರಂದು ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಅಡಿ ಇರಿಸಿ 16 ವರ್ಷ ತುಂಬಿತ್ತು. ಇದೇ ಹಿನ್ನಲೆಯಲ್ಲಿ ಆರ್​ಸಿಬಿ ಕೊಹ್ಲಿಯೊಂದಿಗೆ ವಿಶೇಷ ಸಂದರ್ಶನ ನಡೆಸಿತ್ತು. ಈ ಸಂದರ್ಶನದಲ್ಲಿ ಕೊಹ್ಲಿಗೆ ನಿಮ್ಮ ನೆಚ್ಚಿನ ಐಪಿಎಲ್​ ಎದುರಾಳಿ ತಂಡ ಯಾವುದೆಂದು ಪ್ರಶ್ನೆ ಕೇಳಲಾಯಿತು. ಎಲ್ಲರು ಕೊಹ್ಲಿ ಚೆನ್ನೈ ಅಥವಾ ಮುಂಬೈ ಇಂಡಿಯನ್ಸ್​ ಆಯ್ಕೆ ಮಾಡುತ್ತಾರೆ ಎಂದು ನಿರೀಕ್ಷೆ ಮಾಡಿದ್ದರು. ಆದರೆ ಈ ನಿರೀಕ್ಷೆ ಹುಸಿಯಾಗಿದೆ. ಕೊಹ್ಲಿಯ ನೆಚ್ಚಿನ ಎದುರಾಳಿ ತಂಡ ಮೂರು ಬಾರಿಯ ಚಾಂಪಿಯನ್​ ಕೆಕೆಆರ್​.

ಹೌದು, ಕೊಹ್ಲಿ ಕೆಕೆಆರ್​ ತಂಡವನ್ನು ತನ್ನ ನೆಚ್ಚಿನ ಎದುರಾಳಿ ತಂಡವಾಗಿ ಆಯ್ಕೆ ಮಾಡಿಕೊಳ್ಳಲು ಕೂಡ ಒಂದು ಕಾರಣವಿದೆ. ಏಕೆಂದರೆ ಕೊಹ್ಲಿ ತಮ್ಮ ಚೊಚ್ಚಲ ಐಪಿಎಲ್​ ಪಂದ್ಯ ಆಡಿದ್ದು ಕೆಕೆಆರ್​ ವಿರುದ್ಧ. ಇದೇ ಕಾರಣದಿಂದ ಕೊಹ್ಲಿಗೆ ಕೆಕೆಆರ್​ ನೆಚ್ಚಿನ ಎದುರಾಳಿ ತಂಡವಾಗಿದೆ.

ಏಪ್ರಿಲ್ 18, 2008 ರಂದು ಆರ್‌ಸಿಬಿ ಮತ್ತು ಕೆಕೆಆರ್ ಮುಖಾಮುಖಿಯಾಗಿತ್ತು. ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ 5 ಎಸೆತಗಳಲ್ಲಿ 1 ರನ್ ಗಳಿಸಿ ಔಟಾಗಿದ್ದರು. ಆರ್​ಸಿಬಿ ಈ ಪಂದ್ಯದಲ್ಲಿ ಕೇವಲ 82 ರನ್‌ಗಳಿಗೆ ಆಲೌಟ್ ಆಗಿ ಹೀನಾಯ ಸೋಲು ಕಂಡಿತ್ತು. ಎದುರಾಳಿ ಕೆಕೆಆರ್​ 222 ರನ್ ಗಳಿಸಿತ್ತು.

ಒಂದೇ ಫ್ರಾಂಚೈಸಿ ಪರ ಆಡಿದ ಏಕೈಕ ಆಟಗಾರ ಎನಿಸಿಕೊಂಡಿರುವ ಕೊಹ್ಲಿ ನಾಯಕನಾಗಿ ಮತ್ತು ಆಟಗಾರನಾಗಿ ಒಟ್ಟು ಮೂರು ಸಲ ಐಪಿಎಲ್​ ಫೈನಲ್​ ಆಡಿದ್ದಾರೆ. ಆದರೆ ಒಮ್ಮೆಯೂ ಟ್ರೋಫಿ ಗೆದ್ದಿಲ್ಲ. ಮುಂದಿನ ಸಲವಾದರೂ ಕಪ್​ ಗೆಲ್ಲಲಿದೆಯಾ ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ Virat Kohli : ಕೊಹ್ಲಿ ಕಿಂಗ್ ಅಲ್ಲ; ಭಾರತದ ಸೂಪರ್​​ ಸ್ಟಾರ್​ ಬ್ಯಾಟರ್​​ ಬಗ್ಗೆ ಕಳಪೆ ಕಾಮೆಂಟ್ ಮಾಡಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ

ಮತ್ತೆ ನಾಯಕನಾಗಲಿದ್ದಾರಾ ಕೊಹ್ಲಿ?


ಟಿ20ಗೆ ನಿವೃತ್ತಿ ಹೇಳಿ ಎಲ್ಲ ಒತ್ತಡ ಕಡಿಮೆ ಮಾಡಿರುವ ಕೊಹ್ಲಿಯೇ ಮತ್ತೆ ಆರ್​ಸಿಬಿಗೆ ನಾಯಕನಾಗಲಿದ್ದಾರೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ. ವಿರಾಟ್​ ಕೊಹ್ಲಿ ಅವರು ಭಾರತ ತಂಡದ ಮೂರು ಮಾದರಿಯ ನಾಯಕತ್ವ ವಹಿಸಿಕೊಂಡಿದ್ದ ವೇಳೆ ಐಪಿಎಲ್​ನಲ್ಲಿಯೂ ತಂಡವನ್ನು ಮುನ್ನಡೆಸುವುದು ಕಷ್ಟವಾಗುತ್ತದೆ, ಕೆಲಸದ ಒತ್ತಡದಿಂದಾಗಿ ಆಟದ ಕಡೆ ಸರಿಯಾಗಿ ಗಮನ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಐಪಿಎಲ್​ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು. 

ವಿರಾಟ್​ ಕೊಹ್ಲಿ 2013ರಲ್ಲಿ ಆರ್​ಸಿಬಿಯ ಪೂರ್ಣ ಪ್ರಮಾಣದ ನಾಯಕನಾಗಿ ನೇಮಕಗೊಂಡಿದ್ದರು. 2021ರ ತನಕ ಅವರು ಆರ್​ಸಿಬಿಯನ್ನು ಮುನ್ನಡೆಸಿದ್ದರು. ಕೊಹ್ಲಿ ನಾಯಕತ್ವದಲ್ಲಿ ಒಟ್ಟು 140 ಪಂದ್ಯಗಳನ್ನು ಆಡಿದ್ದ ಆರ್​​ಸಿಬಿ 66 ಪಂದ್ಯಗಳನ್ನು ಜಯಿಸಿದೆ. 70 ಪಂದ್ಯಗಳಲ್ಲಿ ಸೋಲು ಕಂಡಿದೆ. ಐಪಿಎಲ್​ ಇತಿಹಾಸದಲ್ಲಿ ವಿನ್ನಿಂಗ್ಸ್​ ಸರಾಸರಿಯಲ್ಲಿ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಅವರ ನಾಯಕತ್ವದ ಸರಾಸರಿ ಗೆಲುವು ಶೇ. 46.15 ರಷ್ಟಿದೆ. ದಾಖಲೆ ಧೋನಿ ಹೆಸರಿನಲ್ಲಿದೆ. ಧೋನಿ ನಾಯಕತ್ವದ ಗೆಲುವಿನ ಸರಾಸರಿ 60.38 ರಷ್ಟಿದೆ.

Exit mobile version