Virat Kohli : ಕೊಹ್ಲಿ ಕಿಂಗ್ ಅಲ್ಲ; ಭಾರತದ ಸೂಪರ್​​ ಸ್ಟಾರ್​ ಬ್ಯಾಟರ್​​ ಬಗ್ಗೆ ಕಳಪೆ ಕಾಮೆಂಟ್ ಮಾಡಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ - Vistara News

ಕ್ರೀಡೆ

Virat Kohli : ಕೊಹ್ಲಿ ಕಿಂಗ್ ಅಲ್ಲ; ಭಾರತದ ಸೂಪರ್​​ ಸ್ಟಾರ್​ ಬ್ಯಾಟರ್​​ ಬಗ್ಗೆ ಕಳಪೆ ಕಾಮೆಂಟ್ ಮಾಡಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ

Virat Kohli : ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮತ್ತು ತರಬೇತುದಾರ ಬಾಸಿತ್ ಅಲಿ ಅವರು ಕೊಹ್ಲಿಯ ಕ್ರಿಕೆಟ್​ ಬದುಕಿನ ಬಗ್ಗೆ ಮಾತನಾಡಿದ್ದಾರೆ. ಆದರೆ, ಸಚಿನ್ ತೆಂಡೂಲ್ಕರ್, ಸುನಿಲ್ ಗವಾಸ್ಕರ್, ಸಯೀದ್ ಅನ್ವರ್, ಜಾವೇದ್ ಮಿಯಾಂದಾದ್ ಮತ್ತು ಇಂಜಮಾಮ್-ಉಲ್-ಹಕ್ ಅವರಂತಹ ದಂತಕಥೆಗಳಿಗೆ ಹೋಲಿಸುವ ಮೂಲಕ ಕೊಹ್ಲಿಯ ಸಾಧನೆ ಏನೂ ಅಲ್ಲ ಎಂದು ಹೇಳಿದ್ದಾರೆ.

VISTARANEWS.COM


on

Virat kohli
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಭಾರತದ ಬ್ಯಾಟಿಂಗ್ ಸೂಪಸ್ಟಾರ್ ಹಾಗೂ ಆಧುನಿಕ ಯುಗದ ಕ್ರಿಕೆಟ್​ನ ಮಹಾನ್ ಪ್ರತಿಭಾವಂತ ವಿರಾಟ್ ಕೊಹ್ಲಿ (Virat Kohli) ಆಗಸ್ಟ್ 18 ರಂದು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 16 ವರ್ಷಗಳ ಮೈಲಿಗಲ್ಲು ದಾಟಿದ್ದಾರೆ. ಇದು ಅವರ ಅಗಾಧ ಪ್ರತಿಭೆ ಹಾಗೂ ಶ್ರಮಕ್ಕೆ ಸಾಕ್ಷಿಯಾಗಿದೆ. ಕ್ರಿಕೆಟ್ ಆಟದಲ್ಲಿ ಅವರ ಪ್ರಾಬಲ್ಯದ ಬಗ್ಗೆ ಮೆಚ್ಚದವರೇ ಇಲ್ಲ. ಅಂತಾರಾಷ್ಟ್ರಿಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದಾಗಿನಿಂದ ಕೊಹ್ಲಿ ತಮ್ಮ ಅಭಿಮಾನಿಗಳು ಮತ್ತು ಕ್ರಿಕೆಟ್ ವಿಶ್ಲೇಷಕರನ್ನು ಮೋಡಿ ಮಾಡುತ್ತಿದ್ದಾರೆ. ಆದರೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಬಾಸಿತ್ ಅಲಿ ಕೊಹ್ಲಿ ಬಗ್ಗೆ ಕಳಪೆ ಕಾಮೆಂಟ್ ಮಾಡಿದ್ದಾರೆ. ಅವರನ್ನು ಕಿಂಗ್ ಎಂದು ಕರೆಯಬಾರದು ಎಂದು ಹೇಳಿದ್ದಾರೆ.

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮತ್ತು ತರಬೇತುದಾರ ಬಾಸಿತ್ ಅಲಿ ಅವರು ಕೊಹ್ಲಿಯ ಕ್ರಿಕೆಟ್​ ಬದುಕಿನ ಬಗ್ಗೆ ಮಾತನಾಡಿದ್ದಾರೆ. ಆದರೆ, ಸಚಿನ್ ತೆಂಡೂಲ್ಕರ್, ಸುನಿಲ್ ಗವಾಸ್ಕರ್, ಸಯೀದ್ ಅನ್ವರ್, ಜಾವೇದ್ ಮಿಯಾಂದಾದ್ ಮತ್ತು ಇಂಜಮಾಮ್-ಉಲ್-ಹಕ್ ಅವರಂತಹ ದಂತಕಥೆಗಳಿಗೆ ಹೋಲಿಸುವ ಮೂಲಕ ಕೊಹ್ಲಿಯ ಸಾಧನೆ ಏನೂ ಅಲ್ಲ ಎಂದು ಹೇಳಿದ್ದಾರೆ.

ಬಾಸಿತ್ ಅಲಿ ತಮ್ಮ ಯೂಟ್ಯೂಬ್ ಚಾನೆಲ್​​ನಲ್ಲಿ ಮಾತನಾಡುತ್ತಾ, ಕೊಹ್ಲಿಯದ್ದು ದೊಡ್ಡ ಸಾಧನೆ. ಅವರು ಇನ್ನೂ 3 ವರ್ಷಗಳ ಕಾಲ ಆಡಲಿದ್ದಾರೆ. ಒಟ್ಟು 19 ವರ್ಷಗಳ ಕಾಲ ಆಡಲಿದ್ದಾರೆ. ಅವರು ತುಂಬಾ ಫಿಟ್ ಆಗಿದ್ದಾರೆ. ವಿರಾಟ್ ಕೊಹ್ಲಿಯ ಬದ್ಧತೆ ಉತ್ತಮವಾಗಿದೆ. ಸಚಿನ್, ಅನ್ವರ್, ಜಾವೇದ್, ಇಂಜಮಾಮ್, ಗವಾಸ್ಕರ್, ಮೊಹಮ್ಮದ್ ಯೂಸುಫ್ ಮತ್ತು ಯೂನಿಸ್ ಖಾನ್ ಅವರು ಬದ್ಧತೆಯಿಂದಲೇ ಆಡಿದ್ದಾರೆ ಎಂದು ಹೇಳಿದರು.

ಕೊಹ್ಲಿಯ ಅವಿರತ ಕಠಿಣ ಪರಿಶ್ರಮವು ಅವರ ಯಶಸ್ಸಿಗೆ ನಿರ್ಣಾಯಕ ಎಂದು ಪಾಕಿಸ್ತಾನದ ಮಾಜಿ ಆಯ್ಕೆದಾರ ಉಲ್ಲೇಖಿಸಿದ್ದಾರೆ. ಇಂದಿನ ಮಕ್ಕಳು ಬಾಬರ್ ಅಜಮ್ ಕೊಹ್ಲಿಯ ರೀತಿ ಕವರ್​ ಡ್ರೈವ್​ ಹೊಡೆಯುತ್ತಾರೆ ಎಂದು ಹೇಳುತ್ತಾರೆ. ವಿರಾಟ್ ಕೊಹ್ಲಿ ಆ ರೀತಿ ಮಾಡಲು ಕೊಹ್ಲಿಯ ಸಾಕಷ್ಟು ಅಭ್ಯಾಸ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಎಂಎಸ್ ಧೋನಿ ಬೆಂಬಲದಿಂದ ಕೊಹ್ಲಿ ಕಿಂಗ್​ ಆದರು

ಕೊಹ್ಲಿ ಅಂಡರ್ 19ನಲ್ಲಿ ಕಾಣಿಸಿಕೊಂಡಾಗಿನಿಂದ ಕಳೆದ 16 ವರ್ಷಗಳಿಂದ ಕ್ರಿಕೆಟ್ ಜಗತ್ತನ್ನು ಆಳಿದ್ದಾರೆ. ಆಟಕ್ಕೆ ಇಳಿದ ತಕ್ಷಣದ ಪ್ರಭಾವ ಬೀರಿದ್ದಾರೆ. ಇನ್ನೂ ಕ್ರಿಕೆಟ್​ ಆಟವನ್ನು ಆಡುತ್ತಿದ್ದಾರೆ. ಕೊಹ್ಲಿಗೆ ಎಂಎಸ್ ಧೋನಿ ಮತ್ತು ಯುವರಾಜ್ ಸಿಂಗ್ ಅವರಂತಹ ಹಿರಿಯ ಆಟಗಾರರ ಬೆಂಬಲವಿದೆ. ಅವರಿಗೆ ಸಾಕಷ್ಟು ಸಹಾಯ ಮಾಡಿತು ಎಂದು ಅವರು ಹೇಳಿದ್ದಾರೆ. ಆದಾಗ್ಯೂ ಕೊಹ್ಲಿ ಕ್ರಿಕೆಟ್​​ನ “ಕಿಂಗ್” ಅಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Ishan Kishan : ಮ್ಯಾನ್​ ಆಫ್​ ದಿ ಮ್ಯಾಚ್​ ಪ್ರಶಸ್ತಿ ಪಡೆದು ಮೂಲಕ ಬಿಸಿಸಿಐಗೆ ಪ್ರತ್ಯುತ್ತರ ಕೊಟ್ಟ ಇಶಾನ್ ಕಿಶನ್​

ವಿರಾಟ್ ಕೊಹ್ಲಿಯ ಅತ್ಯುನ್ನತ ಕೌಶಲ್ಯ ಮತ್ತು ಪ್ರಭಾವವನ್ನು ಬಸಿತ್ ಒಪ್ಪಿಕೊಂಡಿದ್ದಾರೆ. ಆದರೆ “ಕಿಂಗ್” ಎಂಬ ಬಿರುದು ಸ್ವತಃ ಭಾರತೀಯ ಬ್ಯಾಟಿಂಗ್ ಮಾಂತ್ರಿಕನಿಗೆ ಸರಿಹೊಂದುವುದಿಲ್ಲ ಎಂದು ಅವರು ಹೇಳಿದ್ದಾರೆ. ಕ್ರಿಕೆಟ್ ಬಗ್ಗೆ ಕೊಹ್ಲಿಯ ಉತ್ಸಾಹಕ್ಕೆ ಸಾಟಿಯಿಲ್ಲ. ಆದರೆ ಕ್ರಿಕೆಟ್​​ ನಿಜವಾದ ರಾಜ ಎಂದು ಅವರು ಒತ್ತಿಹೇಳಿದರು. ಶ್ರೇಷ್ಠ ಡಾನ್ ಬ್ರಾಡ್ಮನ್ ಅಥವಾ ಸಚಿನ್ ತೆಂಡೂಲ್ಕರ್ ಅವರನ್ನೂ ಕಿಂಗ್​ ಎಂದು ಕರೆದಿಲ್ಲ. ಹೀಗಾಗಿ ಕೊಹ್ಲಿಯನ್ನು ಕಿಂಗ್ ಎಂದು ಕರೆಯಲಾಗಿಲ್ಲ ಎಂದು ಹೇಳಿದ್ದಾರೆ.

ವಿರಾಟ್ ಕೊಹ್ಲಿ ಕಿಂಗ್ ಅಲ್ಲ ಎಂದು ನಾನು ಭಾವಿಸುತ್ತೇನೆ: ಬಾಸಿತ್ ಅಲಿ

ನೀವು ಕಿಂಗ್ ಎಂದು ಕರೆದರೆ ನಾನು ಅಲ್ಲ ಎಂದು ಹೇಳುತ್ತೇನೆ. ಯಾಕೆಂದರೆ ಕ್ರಿಕೆಟ್ ಗಿಂತ ದೊಡ್ಡವರು ಯಾರೂ ಇಲ್ಲ. ಕ್ರಿಕೆಟ್ ದೊಡ್ಡ ವಿಷಯ. ವಿರಾಟ್​ ಕೊಹ್ಲಿಯೇ ಈ ಹೇಳಿಕೆಯನ್ನು ಇಷ್ಟಪಡುವುದಿಲ್ಲ. ತಮ್ಮ ರನ್ ಮತ್ತು ಬ್ಯಾಟಿಂಗ್ ಬಗ್ಗೆ ಮಾತನಾಡಲು ಇಷ್ಟಪಡುತ್ತಾರೆ ಎಂದು ಬಸಿತ್ ಅಲಿ ಹೇಳಿದ್ದಾರೆ.

ಡಾನ್ ಬ್ರಾಡ್ಮನ್, ಗವಾಸ್ಕರ್ ಮತ್ತು ಸಚಿನ್ ಅವರನ್ನೂ ಕಿಂಗ್​ ಎಂದು ಕರೆಯಲಾಗಿಲ್ಲ. ಆದ್ದರಿಂದ, ವಿರಾಟ್ ಕೊಹ್ಲಿ ಕಿಂಗ್ ಅಲ್ಲ ಎಂದು ನಾನು ಭಾವಿಸುತ್ತೇನೆ. ಅವರೊಬ್ಬ ಶ್ರೇಷ್ಠ ಬ್ಯಾಟರ್​. ಅದನ್ನೇ ಹೇಳುತ್ತೇನೆ. ತವರಿನಲ್ಲಿ ಮುಂಬರುವ ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ಶ್ರೀಲಂಕಾ ವಿರುದ್ಧ ಭಾರತ 2-0 ಅಂತರದಲ್ಲಿ ಏಕದಿನ ಸರಣಿ ಸೋಲನುಭವಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Paris Olympics 2024 : ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದ ಚೀನಾದ ಅಥ್ಲೀಟ್​ ಈಗ ರೆಸ್ಟೋರೆಂಟ್​​ನಲ್ಲಿ ವೇಟರ್​!

VISTARANEWS.COM


on

Paris Olympics 2024
Koo

ಬೆಂಗಳೂರು : ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ (Paris Olympics 2024) ಹಲವಾರು ಕ್ರೀಡಾಪಟುಗಳು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದ್ದಾರೆ. ಅವರಲ್ಲಿ ಬ್ಯಾಲೆನ್ಸ್ ಬೀಮ್ ಜಿಮ್ನಾಸ್ಟಿಕ್ಸ್ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದ ಚೀನಾದ ಜಿಮ್ನಾಸ್ಟ್ ಝೌ ಯಾಕಿನ್ ಒಬ್ಬರು. ಒಲಿಂಪಿಕ್ ಪೋಡಿಯಂನಲ್ಲಿ ಪದಕ ಗೆದ್ದ ಬಳಿಕ ಹೇಗೆ ಪ್ರತಿಕ್ರಿಯಿಸಬೇಕು ಎಂದು ತಿಳಿಯದೇ ಪಕ್ಕದವರನ್ನು ನಕಲು ಮಾಡಿದ 18 ವರ್ಷದ ಆಟಗಾರ್ತಿಯ ವಿಡಿಯೊವೊಂದು ವೈರಲ್ ಆಗಿತ್ತು. ಅವರು ಪಕ್ಕದಲ್ಲಿದ್ದ ವಿಜೇತರು ಪದಕ ಕಚ್ಚುವುದನ್ನು ನೋಡಿ ಅದೇ ರೀತಿ ಮಾಡಿದ್ದರು. ಅದು ಅಂತರ್ಜಾಲದಾದ್ಯಂತದ ಅಭಿಮಾನಿಗಳ ಗಮನ ಸೆಳೆದಿತ್ತು. ಇದೀಗ ಮನೆಗೆ ಹಿಂದಿರುಗಿದ ಅವರ ಜೀವನದ ಇನ್ನೊಂದು ನೋಟ ವೈರಲ್ ಆಗಿದೆ. ಅದೇನೆಂದರೆ ಅವರು ರೆಸ್ಟೋರೆಂಟ್ ಒಂದರಲ್ಲಿ ಸಪ್ಲೈರ್​ ಆಗಿ ಕೆಲಸ ಮಾಡುವುದನ್ನು ಮುಂದುವರಿಸಿದ್ದಾರೆ.

ಪ್ಯಾರಿಸ್ 2024 ರಲ್ಲಿ ಇಟಲಿಯ ಇಬ್ಬರು ಜಿಮ್ನಾಸ್ಟ್​ಗಳಾದ ಆಲಿಸ್ ಡಿ’ಅಮಾಟೊ ಮತ್ತು ಮನಿಲಾ ಎಸ್ಪೊಸಿಟೊ ನಡುವಿನ ಬ್ಯಾಲೆನ್ಸ್ ಬೀಮ್ ಸ್ಪರ್ಧೆಯಲ್ಲಿ ಝೌ ಯಾಕಿನ್ ಎರಡನೇ ಸ್ಥಾನ ಪಡೆದರು. ಪೋಡಿಯಂನಲ್ಲಿ ಫೋಟೋಗಳಿಗೆ ಪೋಸ್ ನೀಡುವಾಗ ಇಟಾಲಿಯನ್ನರು ತಮ್ಮ ಪದಕಗಳನ್ನು ಕಚ್ಚುತ್ತಿದ್ದರು. ಇದು ಝೌ ಅವರ ತಮಾಷೆಯ ಸದರ್ಭಕ್ಕೆ ಕಾರಣವಾಯಿತು. ಅವರು ಸ್ವತಃ ಹಾಗೆ ಮಾಡಲು ಪ್ರಯತ್ನಿಸಿದರು. ಅದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಯಿತು.

ಒಲಿಂಪಿಕ್ಸ್ ನಂತರ, ಝೌ ಯಾಕಿನ್ ಮತ್ತೊಮ್ಮೆ ವೈರಲ್ ಆಗಿದ್ದಾರೆ. ಆದಾಗ್ಯೂ, ಈ ಬಾರಿ, ಝೌ ಚೀನಾದ ಹುನಾನ್ ಪ್ರಾಂತ್ಯದ ತನ್ನ ಸ್ಥಳೀಯ ನಗರ ಹೆಂಗ್ಯಾಂಗ್ನ ಸ್ಥಳೀಯ ರೆಸ್ಟೋರೆಂಟ್​ನಲ್ಲಿ ಆಹಾರವನ್ನು ಬಡಿಸುತ್ತಾ ತನ್ನ ಕುಟುಂಬಕ್ಕೆ ಸಹಾಯ ಮಾಡುವುದನ್ನು ಕಾಣಬಹುದು.

ಝೌ ಯಾಕಿನ್ ಯಾರು?

ಕೇವಲ 18 ನೇ ವಯಸ್ಸಿನಲ್ಲಿಯೂ, ಝೌ ಯಾಕಿನ್ ಈಗಾಗಲೇ ತನ್ನ ಜಿಮ್ನಾಸ್ಟಿಕ್ಸ್ ವೃತ್ತಿಜೀವನದಲ್ಲಿ ಗಮನಾರ್ಹ ಪದಕಗಳನ್ನು ಗಳಿಸಿದ್ದಾರೆ. ಕೇವಲ ಮೂರು ವರ್ಷದವಳಿದ್ದಾಗ ಜಿಮ್ನಾಸ್ಟಿಕ್ಸ್ ಪ್ರಾರಂಭಿಸಿದ ಝೌ ಬ್ಯಾಲೆನ್ಸ್ ಬೀಮ್ ವಿಭಾಗದಲ್ಲಿ ಪರಿಣತಿ ಹೊಂದಿದ್ದಾರೆ.

ಇದನ್ನೂ ಓದಿ: Virat Kohli : ಕೊಹ್ಲಿ ಕಿಂಗ್ ಅಲ್ಲ; ಭಾರತದ ಸೂಪರ್​​ ಸ್ಟಾರ್​ ಬ್ಯಾಟರ್​​ ಬಗ್ಗೆ ಕಳಪೆ ಕಾಮೆಂಟ್ ಮಾಡಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ

2020ರಲ್ಲಿ ಝೌ ಚೈನೀಸ್ ಚಾಂಪಿಯನ್ಶಿಪ್​ನ ಬ್ಯಾಲೆನ್ಸ್ ಬೀಮ್​ನಲ್ಲಿ ವೈಯಕ್ತಿಕ ಚಿನ್ನ ಗೆದ್ದಿದ್ದರು. ಹಿರಿಯ ಮಟ್ಟದಲ್ಲಿ, ಝೌ ಪ್ಯಾರಿಸ್​ನಲ್ಲಿ ತನ್ನ ಮೊದಲ ಒಲಿಂಪಿಕ್ ಪದಕ ಗೆಲ್ಲುವ ಮೊದಲು ಚೀನಾದ ರಾಷ್ಟ್ರೀಯ ಕ್ರೀಡಾಕೂಟ ಮತ್ತು ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಚಿನ್ನ ಗೆದ್ದಿದ್ದಾರೆ.

ಪ್ಯಾರಿಸ್ 2024 ರಲ್ಲಿ, ಝೌ ಪ್ರಸಿದ್ಧ ಜಿಮ್ನಾಸ್ಟ್ ಸಿಮೋನ್ ಬೈಲ್ಸ್ ಅವರನ್ನು ಹಿಂದಿಕ್ಕಿ ಅರ್ಹತೆ ಪಡೆದಿದ್ದರು. ನಂತರ ಒಟ್ಟು 14.100 ಅಂಕಗಳೊಂದಿಗೆ ಬೆಳ್ಳಿ ಗೆದ್ದರು. ಇದು ಚಿನ್ನದ ಪದಕ ವಿಜೇತ ಡಿ’ಅಮಾಟೊ ಅವರ 14.366 ಕ್ಕಿಂತ ಸ್ವಲ್ಪ ಕಡಿಮೆ. ಫೈನಲ್​​ನಲ್ಲಿ ಝೌ ಮತ್ತೆ ಬೈಲ್ಸ್ ಅವರನ್ನು ಸೋಲಿಸಿದರು

Continue Reading

ಕ್ರೀಡೆ

Ishan Kishan : ಮ್ಯಾನ್​ ಆಫ್​ ದಿ ಮ್ಯಾಚ್​ ಪ್ರಶಸ್ತಿ ಪಡೆದು ಮೂಲಕ ಬಿಸಿಸಿಐಗೆ ಪ್ರತ್ಯುತ್ತರ ಕೊಟ್ಟ ಇಶಾನ್ ಕಿಶನ್​

Rinku Singh : ಇಶಾನ್​ ಆಟದ ವೇಲೆ ಅತ್ಯುತ್ತಮವಾಗಿ ಕಾಣುತ್ತಿದ್ದರು. ತಮ್ಮ ತಂಡವನ್ನು ಅನಿಶ್ಚಿತ ಪರಿಸ್ಥಿತಿಯಿಂದ ಪಾರು ಮಾಡಿದ್ದರು. ಮೊದಲ ಇನಿಂಗ್ಸ್​ನಲ್ಲಿ ಕೇವಲ 107 ಎಸೆತಗಳಲ್ಲಿ 114 ರನ್ ಗಳಿಸಿದ್ದರು. ಅದರಲ್ಲಿ 5 ಬೌಂಡರಿ ಮತ್ತು 10 ಸಿಕ್ಸರ್​ಗಳಿದ್ದವು. ಅವರ ಇನ್ನಿಂಗ್ಸ್ ಜಾರ್ಖಂಡ್​ಗೆ ಅಮೂಲ್ಯ ಮುನ್ನಡೆಯನ್ನು ಪಡೆಯಲು ನೆರವಾಯಿತು. ಕಿಶನ್ ಹೊರತುಪಡಿಸಿದರೆ ಜಾರ್ಖಂಡ್​್ನ ಯಾವುದೇ ಬ್ಯಾಟರ್​ಗಳು ಇನಿಂಗ್ಸ್​​ನಲ್ಲಿ 40 ರನ್​ಗಳ ಗಡಿ ದಾಟಲಿಲ್ಲ.

VISTARANEWS.COM


on

Koo

ನವದೆಹಲಿ: ಭಾರತದ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ (Ishan Kishan) ಪ್ರಸ್ತುತ ನಡೆಯುತ್ತಿರುವ ಬುಚ್ಚಿ ಬಾಬು ಟೂರ್ನಮೆಂಟ್ 2024 ರಲ್ಲಿ ರೆಡ್-ಬಾಲ್ ಸ್ವರೂಪಕ್ಕೆ ಮರಳಿದ್ದಾರೆ. ಮಧ್ಯಪ್ರದೇಶ ಮತ್ತು ಜಾರ್ಖಂಡ್ ನಡುವಿನ ಪಂದ್ಯದ ಮೊದಲ ಇನ್ನಿಂಗ್ಸ್​​ನಲ್ಲಿ ಕಿಶನ್ ಅದ್ಭುತ ಶತಕ ಬಾರಿಸಿ ತಮ್ಮ ತಂಡಕ್ಕೆ ಅಮೂಲ್ಯ ಕೊಡುಗೆ ನೀಡಿದರು. ಹೀಗಾಗಿ ಜಾರ್ಖಂಡ್​ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸಿತು. ಮುಂದುವರಿದ ಕಿಶನ್ ಜಾರ್ಖಂಡ್​​ನ ಎರಡನೇ ಇನ್ನಿಂಗ್ಸ್​​ನಲ್ಲಿಯೂ ಉತ್ತಮವಾಗಿ ಆಡಿದರು. 58 ಎಸೆತಗಳಲ್ಲಿ ಅಮೂಲ್ಯ 41 ರನ್ ಗಳಿಸಿ ಜಾರ್ಖಂಡ್ ತಂಡಕ್ಕೆ ನೆರವಾದರು.

ಎರಡೂ ಇನ್ನಿಂಗ್ಸ್ಗಳಲ್ಲಿ ಬ್ಯಾಟಿಂಗ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಕಿಶನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಪಂದ್ಯದ ಎರಡೂ ಇನ್ನಿಂಗ್ಸ್​ಗಳಲ್ಲಿ ಅವರು ಜಾರ್ಖಂಡ್ ಪರ ಗರಿಷ್ಠ ಸ್ಕೋರ್ ಗಳಿಸಿದರು. ಮೊದಲ ಇನ್ನಿಂಗ್ಸ್​​ನಲ್ಲಿ ಇಶಾನ್ ಕಿಶನ್ ಆರಂಭದಿಂದಲೂ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಿದ್ದರು. ಅವರು ತಮ್ಮ ಪವರ್-ಹಿಟ್ಟಿಂಗ್​​ ಸಾಮರ್ಥ್ಯದಿಂದ ಎದುರಾಳಿ ಬೌಲರ್​ಗಳನ್ನು ನಿರಂತರವಾಗಿ ಒತ್ತಡಕ್ಕೆ ಸಿಲುಕಿಸಿದ್ದರು. ಅದರಲ್ಲೂ ಸಿಕ್ಸರ್​ಗಳನ್ನು ಹೊಡೆದು ಮಿಂಚಿದ್ದರು. ಎಡಗೈ ಬ್ಯಾಟ್ಸ್ಮನ್ ವೇಗ ಮತ್ತು ಸ್ಪಿನ್ ಬೌಲಿಂಗ್ ಎರಡಕ್ಕೂ ಒಂದೇ ರೀತಿ ಉತ್ತರ ಕೊಡುತ್ತಿದ್ದರು. ಈ ಮೂಲಕ ಕಿಶನ್​ ತಮ್ಮನ್ನು ಕಡೆಗಣಿಸುತ್ತಿರುವ ಬಿಸಿಸಿಐ ಹಾಗೂ ಹಿರಿಯರ ತಂಡದ ಆಯ್ಕೆಗಾರರಿಗೆ ಪ್ರತ್ಯುತ್ತರ ಕೊಟ್ಟರು.

ಇಶಾನ್​ ಕಿಶನ್​ ಅವನ್ನು ಬಿಸಿಸಿಐ ಕೇಂದ್ರ ಗುತ್ತಿಗೆಯಿಂದ ಹೊರಗಿಡುವ ಜತೆಗೆ ಅವರನ್ನು ಯಾವುದೇ ಪ್ರವಾಸಕ್ಕೆ ಆಯ್ಕೆ ಮಾಡುತ್ತಿಲ್ಲ. ಶ್ರೇಯಸ್​ ಅಯ್ಯರ್​ಗೂ ಇದೇ ಮಾದರಿಯಲ್ಲ ಮಾಡಿದ್ದರೂ. ಲಂಕಾ ವಿರುದ್ಧದ ಸರಣಿಯಲ್ಲಿ ಅವರನ್ನು ತಂಡಕ್ಕೆ ಸೇರಿಸಲಾಗಿದೆ. ಈ ಎಲ್ಲ ತಾರತಮ್ಯಕ್ಕೆ ಇಶಾನ್ ಕಿಶನ್​ ಉತ್ತರ ಕೊಟ್ಟಿದ್ದಾರೆ.

ಇಶಾನ್​ ಆಟದ ವೇಲೆ ಅತ್ಯುತ್ತಮವಾಗಿ ಕಾಣುತ್ತಿದ್ದರು. ತಮ್ಮ ತಂಡವನ್ನು ಅನಿಶ್ಚಿತ ಪರಿಸ್ಥಿತಿಯಿಂದ ಪಾರು ಮಾಡಿದ್ದರು. ಮೊದಲ ಇನಿಂಗ್ಸ್​ನಲ್ಲಿ ಕೇವಲ 107 ಎಸೆತಗಳಲ್ಲಿ 114 ರನ್ ಗಳಿಸಿದ್ದರು. ಅದರಲ್ಲಿ 5 ಬೌಂಡರಿ ಮತ್ತು 10 ಸಿಕ್ಸರ್​ಗಳಿದ್ದವು. ಅವರ ಇನ್ನಿಂಗ್ಸ್ ಜಾರ್ಖಂಡ್​ಗೆ ಅಮೂಲ್ಯ ಮುನ್ನಡೆಯನ್ನು ಪಡೆಯಲು ನೆರವಾಯಿತು. ಕಿಶನ್ ಹೊರತುಪಡಿಸಿದರೆ ಜಾರ್ಖಂಡ್​್ನ ಯಾವುದೇ ಬ್ಯಾಟರ್​ಗಳು ಇನಿಂಗ್ಸ್​​ನಲ್ಲಿ 40 ರನ್​ಗಳ ಗಡಿ ದಾಟಲಿಲ್ಲ.

ನಾಲ್ಕನೇ ಇನ್ನಿಂಗ್ಸ್ನಲ್ಲಿ ಜಾರ್ಖಂಡ್​​ ಗೆಲುವಿಗೆ 174 ರನ್​ಗಳ ಗುರಿಯಿತ್ತು. ನಾಯಕ ಇಶಾನ್ ಕಿಶನ್ 58 ಎಸೆತಗಳಲ್ಲಿ 1 ಬೌಂಡರಿ ಮತ್ತು 2 ಸಿಕ್ಸರ್ ಸಮೇತ ಅಜೇ 41*ರನ್ ಗಳಿಸಿ ಮತ್ತೊಮ್ಮೆ ನೆರವಿಗೆ ಬಂದರು.

3 ಎಸೆತಗಳಲ್ಲಿ 2 ಸಿಕ್ಸರ್ ಸಿಡಿಸಿದ ಕಿಶನ್​

  • ತಂಡಕ್ಕೆ ಗೆಲ್ಲಲು 11 ರನ್​​ಗಳ ಅವಶ್ಯಕತೆಯಿತ್ತು. 2 ವಿಕೆಟ್ ಉರುಳಿಸಿದ್ದರು. 26 ವರ್ಷದ ಆಟಗಾರ ಮೂರು ಎಸೆತಗಳಲ್ಲಿ ಎರಡು ಸಿಕ್ಸರ್​ಗಳೊಂದಿಗೆ ತಮ್ಮ ತಂಡವನ್ನು ಗೆಲುವಿನ ಗಡಿ ದಾಟಿಸಿದರು. ಕಿಶನ್ ಅವರ ಆಕ್ರಮಣಕಾರಿ ವಿಧಾನವು ಭಾರತೀಯ ತಂಡಕ್ಕೆ ಮರಳುವ ಅವಕಾಶಗಳನ್ನು ಸೃಷ್ಟಿಸಿವೆ.

ಇಶಾನ್ ಕಿಶನ್ ಒಂದು ವರ್ಷದಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದಾರೆ. ಅವರು ಏಷ್ಯಾ ಕಪ್ 2023 ಗೆದ್ದ ಭಾರತದ ತಂಡದಲ್ಲಿದ್ದರು ಮತ್ತು 2023 ರ ಏಕದಿನ ವಿಶ್ವಕಪ್ನಲ್ಲಿ ರನ್ನರ್ ಅಪ್ ಸ್ಥಾನ ಪಡೆದರು. ಕಿಶನ್ ಪ್ಲೇಯಿಂಗ್ ಇಲೆವೆನ್ನ ನಿಯಮಿತ ಭಾಗವಾಗದಿದ್ದರೂ, ಅವರು ಎರಡೂ ಪಂದ್ಯಾವಳಿಗಳಲ್ಲಿ ಕೆಲವು ಪಂದ್ಯಗಳಲ್ಲಿ ಕಾಣಿಸಿಕೊಂಡರು ಮತ್ತು ನಿರ್ಣಾಯಕ ಇನ್ನಿಂಗ್ಸ್ಗಳನ್ನು ಆಡಿದರು.

ಇದನ್ನೂ ಓದಿ: Rinku Singh : ಆರ್​ಸಿಬಿ ಪರ ಆಡುವ ಅಭಿಲಾಷೆ ವ್ಯಕ್ತಪಡಿಸಿದ ರಿಂಕು ಸಿಂಗ್​

ಆದಾಗ್ಯೂ, ಅವರು ಮಾನಸಿಕ ಆಯಾಸವನ್ನು ಉಲ್ಲೇಖಿಸಿ ಭಾರತದ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಅರ್ಧದಲ್ಲೇ ತೊರೆಯಲು ನಿರ್ಧರಿಸಿದರು. ಇದರ ಪರಿಣಾಮವಾಗಿ, ರಾಷ್ಟ್ರೀಯ ತಂಡದಲ್ಲಿ ತಮ್ಮ ಸ್ಥಾನವನ್ನು ಮರಳಿ ಪಡೆಯಲು ಜಾರ್ಖಂಡ್ ಪರ ದೇಶೀಯ ಕ್ರಿಕೆಟ್ ಆಡಲು ಅವರಿಗೆ ತಿಳಿಸಲಾಯಿತು.

ಆದರೆ ಕಿಶನ್ ಕಳೆದ ಋತುವಿನಲ್ಲಿ ರಣಜಿ ಟ್ರೋಫಿಯಲ್ಲಿ ಆಡಲಿಲ್ಲ ಮತ್ತು ಬದಲಿಗೆ ತಮ್ಮ ಐಪಿಎಲ್ ನಾಯಕ ಹಾರ್ದಿಕ್ ಪಾಂಡ್ಯ ಅವರೊಂದಿಗೆ ಖಾಸಗಿಯಾಗಿ ತರಬೇತಿ ಪಡೆಯುತ್ತಿರುವುದು ಕಂಡುಬಂದಿದೆ. ಅವರ ನಡವಳಿಕೆಯಿಂದ ಅಸಮಾಧಾನಗೊಂಡ ಆಯ್ಕೆದಾರರು ಅವರನ್ನು ಬಿಸಿಸಿಐನ ವಾರ್ಷಿಕ ಕೇಂದ್ರ ಗುತ್ತಿಗೆ ಪಟ್ಟಿಯಿಂದ ತೆಗೆದುಹಾಕಲು ನಿರ್ಧರಿಸಿದರು.

Continue Reading

ಪ್ರಮುಖ ಸುದ್ದಿ

Rinku Singh : ಆರ್​ಸಿಬಿ ಪರ ಆಡುವ ಅಭಿಲಾಷೆ ವ್ಯಕ್ತಪಡಿಸಿದ ರಿಂಕು ಸಿಂಗ್​

Rinku Singh : ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಕೆಕೆಆರ್ ಉಳಿಸಿಕೊಳ್ಳುವ ಯೋಜನೆ ಬಗ್ಗೆ
ಸ್ಪೋರ್ಟ್ಸ್ ತಕ್ ಜೊತೆ ಮಾತನಾಡಿದ ರಿಂಕು ಸಿಂಗ್ ಅವರನ್ನು ಐಪಿಎಲ್ ಮೆಗಾ ಹರಾಜು ಮತ್ತು ಕೆಕೆಆರ್ ನಿರ್ವಹಣೆಯ ಉಳಿಸಿಕೊಳ್ಳುವ ಯೋಜನೆಗಳ ಬಗ್ಗೆ ಕೇಳಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ರಿಂಕು, ತಮ್ಮ ಮತ್ತು ಕೆಕೆಆರ್ ತಂಡದ ಮ್ಯಾನೇಜ್ಮೆಂಟ್ ನಡುವೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಹೇಳಿದ್ದಾರೆ.

VISTARANEWS.COM


on

Rinku Singh
Koo

ನವದೆಹಲಿ: ಐಪಿಎಲ್ 2025 ರ ಮೆಗಾ ಹರಾಜಿಗೆ ಕೋಲ್ಕತಾ ನೈಟ್ ರೈಡರ್ಸ್ (KKR) ಫ್ರಾಂಚೈಸಿ ತಮ್ಮನ್ನು ಉಳಿಸಿಕೊಳ್ಳುವ ಯೋಜನೆಗಳ ಬಗ್ಗೆ ಎಡಗೈ ಬ್ಯಾಟರ್​ ರಿಂಕು ಸಿಂಗ್ (Rinku Singh) ಮಾತನಾಡಿದ್ದಾರೆ. ಮುಂದಿನ ಋತುವಿನಲ್ಲಿ ಕೆಕೆಆರ್ ತನ್ನನ್ನು ಉಳಿಸಿಕೊಳ್ಳದಿದ್ದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಸೇರಲು ಬಯಸುತ್ತೇನೆ ಎಂದು 26 ವರ್ಷದ ಸಿಂಗ್ ಹೇಳಿದ್ದಾರೆ.

ರಿಂಕು ಸಿಂಗ್ ಅವರು ಪ್ಲೇಯಿಂಗ್ ಇಲೆವೆನ್​​ನಲ್ಲಿ ಅವಕಾಶ ಪಡೆದಾಗಿನಿಂದ ಕೆಕೆಆರ್ ಪರ ಉನ್ನತ ದರ್ಜೆಯ ಪ್ರದರ್ಶನ ನೀಡುತ್ತಿದ್ದಾರೆ. ಕೆಕೆಆರ್ ಪರ ಅವರ ಸಾಧನೆಗಳಿಂದಾಗಿಯೇ ಅವರು ಭಾರತಕ್ಕಾಗಿ ಅಂತರರಾಷ್ಟ್ರೀಯ ಚೊಚ್ಚಲ ಪಂದ್ಯ ಆಡುವ ಅವಕಾಶವನ್ನು ಪಡೆದುಕೊಂಡಿದ್ದರು.

ಎಡಗೈ ಹಿಟ್ಟರ್ ಅದ್ಭುತ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಅವರ ಬ್ಯಾಟಿಂಗ್ ಶೈಲಿ ಪ್ರಸ್ತುತ ಭಾರತೀಯ ಕ್ರಿಕೆಟ್ ವಲಯಗಳಲ್ಲಿ ಅತ್ಯುತ್ತಮವಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಅವರ ಅತ್ಯುತ್ತಮ ರನ್​​ಗಳು ಅವರಲ್ಲಿರುವ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಹೇಳುತ್ತವೆ.

ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಕೆಕೆಆರ್ ಉಳಿಸಿಕೊಳ್ಳುವ ಯೋಜನೆ ಬಗ್ಗೆ
ಸ್ಪೋರ್ಟ್ಸ್ ತಕ್ ಜೊತೆ ಮಾತನಾಡಿದ ರಿಂಕು ಸಿಂಗ್ ಅವರನ್ನು ಐಪಿಎಲ್ ಮೆಗಾ ಹರಾಜು ಮತ್ತು ಕೆಕೆಆರ್ ನಿರ್ವಹಣೆಯ ಉಳಿಸಿಕೊಳ್ಳುವ ಯೋಜನೆಗಳ ಬಗ್ಗೆ ಕೇಳಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ರಿಂಕು, ತಮ್ಮ ಮತ್ತು ಕೆಕೆಆರ್ ತಂಡದ ಮ್ಯಾನೇಜ್ಮೆಂಟ್ ನಡುವೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: Rishabh Pant : ರಿಷಭ್​ ಪಂತ್​ಗೆ ವಿಶೇಷ ಸನ್ಮಾನ ಮಾಡಿದ ಡೆಲ್ಲಿ ಕ್ರಿಕೆಟ್ ಸಂಸ್ಥೆ

ನನ್ನನ್ನು ಉಳಿಸಿಕೊಳ್ಳುವರೇ ಅಥವಾ ನಾನು ಹರಾಜಿನಲ್ಲಿ ತಂಡವನ್ನು ಸೇರಬೇಕೇ ಎಂಬ ಬಗ್ಗೆ ಕೆಕೆಆರ್ ಮ್ಯಾನೇಜ್ಮೆಂಟ್​ ಜತೆಗೆ ಯಾವುದೇ ಮಾತುಕತೆ ನಡೆದಿಲ್ಲ. ಏನಾಗುತ್ತದೆ ಎಂದು ನೋಡೋಣ ಎಂದು ರಿಂಕು ಉತ್ತರಿಸಿದರು. ರಿಂಕು ಸಿಂಗ್ 2018 ರಿಂದ ಕೋಲ್ಕತಾ ನೈಟ್ ರೈಡರ್ಸ್ ಪರ ಆಡುತ್ತಿದ್ದಾರೆ. ಮೊದಲ ಮೂರು ಋತುಗಳಲ್ಲಿ, ಅವರು ಸೀಮಿತ ಅವಕಾಶ ಪಡೆದಿ್ದರು. ಅವುಗಳಿಂದ ಹೆಚ್ಚಿನದನ್ನು ಪಡೆಯಲು ಸಾಧ್ಯವಾಗಲಿಲ್ಲ. ಆದರೆ ಐಪಿಎಲ್ 2022 ರಿಂದ ವಿಷಯಗಳು ಬದಲಾಗಿದ್ದವು.

ಕೆಕೆಆರ್ ಪರ ರಿಂಕು ಸಿಂಗ್ ದಾಖಲೆ

ಐಪಿಎಲ್​​ 2022 ರ ಋತುವಿನಲ್ಲಿ ಎಡಗೈ ಬ್ಯಾಟರ್​​ ಏಳು ಪಂದ್ಯಗಳನ್ನು ಆಡಿದ್ದಾರೆ. 34.80 ಸರಾಸರಿ ಮತ್ತು 148.72 ಸ್ಟ್ರೈಕ್ ರೇಟ್​​ನಲ್ಲಿ 174 ರನ್ ಗಳಿಸಿದ್ದಾರೆ. ಮುಂದಿನ ಋತುವಿನ ಆರಂಭದಿಂದಲೂ ರಿಂಕು ಕೆಕೆಆರ್​​ನ ಪ್ಲೇಯಿಂಗ್ ಇಲೆವೆನ್ನಲ್ಲಿದ್ದರು ಐಪಿಎಲ್ 2023 ಅವರಿಗೆ ಗೇಮ್ ಚೇಂಜರ್ ಆಗಿ ಪರಿಣಮಿಸಿತು, ಏಕೆಂದರೆ ಅವರು ಕೆಕೆಆರ್​​ನ ಅವಕಾಶಗಳನ್ನು ಏಕಾಂಗಿಯಾಗಿ ನಿರ್ವಹಿಸಿದ್ದರು. ರಿಂಕು 59.25ರ ಸರಾಸರಿಯಲ್ಲಿ 149.53ರ ಸ್ಟ್ರೈಕ್ ರೇಟ್ ನಲ್ಲಿ 474 ರನ್ ಗಳಿಸಿದ್ದರು.

ಅದೇ ಋತುವಿನಲ್ಲಿ, ಅವರು ಯಶ್ ದಯಾಳ್ ಗುಜರಾತ್ ತಂಡ ಬೌಲಿಂಗ್​ಗೆ 5 ಸಿಕ್ಸರ್​ಗಳನ್ನು ಬಾರಿಸಿ ಗುಜರಾತ್ ಟೈಟಾನ್ಸ್ ವಿರುದ್ಧ ಕೆಕೆಆರ್ ಪರ ಪಂದ್ಯವನ್ನು ಗೆದ್ದರು ಮತ್ತು ಮನೆಮಾತಾಗಿದ್ದರು.

ಆರ್ಸಿಬಿ ಪರ ಆಡಲು ಬಯಸುವೆ

ಮುಂದಿನ ಋತುವಿಗೆ ಮುಂಚಿತವಾಗಿ ಕೋಲ್ಕತಾ ನೈಟ್ ರೈಡರ್ಸ್ ತಂಡವು ಅವರನ್ನು ಉಳಿಸಿಕೊಳ್ಳದಿರುವ ಬಗ್ಗೆ ರಿಂಕು ಸಿಂಗ್ ಅವರನ್ನು ಕೇಳಿದಾಗ, ಯುವ ಆಟಗಾರ ತನ್ನ ಆಯ್ಕೆಯಲ್ಲಿ ಸ್ಪಷ್ಟವಾಗಿದ್ದರು. ಈ ವೇಳೆ ಅವರು ಆಡಲು ಬಯಸುವ ತಂಡವಾಗಿ ಆರ್ಸಿಬಿ ಎಂದರು.

ಐಪಿಎಲ್ ಪ್ರದರ್ಶನದ ಆಧಾರದ ಮೇಲೆ, ರಿಂಕು ಸಿಂಗ್ ಭಾರತಕ್ಕೆ ಪಾದಾರ್ಪಣೆ ಮಾಡಿದರು. ಅಲ್ಲಿ ಅವರು ಭರ್ಜರಿಯಾಗಿ ಪ್ರಾರಂಭಿಸಿದರು. ಟಿ20ಐನಲ್ಲಿ 23 ಪಂದ್ಯಗಳಲ್ಲಿ 59.71ರ ಸರಾಸರಿಯಲ್ಲಿ 174.16ರ ಸ್ಟ್ರೈಕ್ ರೇಟ್​​ನಲ್ಲಿ 418 ರನ್ ಗಳಿಸಿದ್ದಾರೆ. ಐಪಿಎಲ್ 2024 ರ ನಿರಾಶಾದಾಯಕ ಋತುವಿನಲ್ಲಿ ಅವರನ್ನು 2024 ರ ಟಿ 20 ವಿಶ್ವಕಪ್​ಗಾಗಿ ಭಾರತದ 15 ಸದಸ್ಯರ ತಂಡದಲ್ಲಿ ಆಯ್ಕೆ ಮಾಡಲಾಗಿಲ್ಲ. ಆದಾಗ್ಯೂ, ಅವರನ್ನು ಮೀಸಲು ಆಟಗಾರರಲ್ಲಿ ಆಯ್ಕೆ ಮಾಡಲಾಯಿತು. ಈ ವರ್ಷದ ಕಳಪೆ ಐಪಿಎಲ್ ಋತುವಿನ ಹೊರತಾಗಿಯೂ, ಅವರು ಭಾರತದ ಟಿ20 ಐ ಯೋಜನೆಗಳಲ್ಲಿ ಉತ್ತಮ ಆಯ್ಕೆಯಾಗಿದ್ದಾರೆ.

Continue Reading

ಕ್ರೀಡೆ

U-19 Women’s T20 World Cup; ಅಂಡರ್-19 ಮಹಿಳಾ ಟಿ20 ವಿಶ್ವಕಪ್ ವೇಳಾಪಟ್ಟಿ ಪ್ರಕಟ; ಭಾರತಕ್ಕೆ ವಿಂಡೀಸ್​ ಮೊದಲ ಎದುರಾಳಿ

U-19 Women’s T20 World Cup: ಪಂದ್ಯ ಟೈ ಆದರೆ ಸೂಪರ್‌ ಓವರ್‌ ಮೂಲಕ ಫಲಿತಾಂಶವನ್ನು ನಿರ್ಧರಿಸಲಾಗುತ್ತದೆ. ಸೂಪರ್‌ ಓವರ್‌ ಕೂಡ ಟೈ ಆದರೆ ಇನ್ನೊಂದು ಸೂಪರ್‌ ಓವರ್‌ ಇರಲಿದೆ. ಹೀಗೆ ಸ್ಪಷ್ಟ ಫಲಿತಾಂಶ ಲಭಿಸುವ ತನಕ ಸೂಪರ್‌ ಓವರ್‌ ಜಾರಿಯಲ್ಲಿರುತ್ತದೆ

VISTARANEWS.COM


on

U19 Women’s T20 World Cup
Koo

ದುಬೈ: 2ನೇ ಆವೃತ್ತಿಯ ಅಂಡರ್-19 ಮಹಿಳಾ ಟಿ20 ವಿಶ್ವಕಪ್ ಟೂರ್ನಿಗೆ(U-19 Women’s T20 World Cup) ವೇದೀಕೆ ಸಿದ್ಧಗೊಂಡಿದೆ. ಮುಂದಿನ ವರ್ಷ ನಡೆಯುವ ಈ ಪಂದ್ಯಾವಳಿಯ ವೇಳಾಪಟ್ಟಿಯನ್ನು ಐಸಿಸಿ ಭಾನುವಾರ ಪ್ರಕಟಿಸಿದೆ. ಒಟ್ಟು 16 ತಂಡಗಳು ಭಾಗವಹಿಸಲಿವೆ. ಟೂರ್ನಿ ಜನವರಿ 18 ರಿಂದ ಫೆಬ್ರವರಿ 2 ರವರೆಗೆ ನಡೆಯಲಿದೆ. ಈ ಟೂರ್ನಿಗೆ ಮಲೇಷ್ಯಾ ಆತಿಥ್ಯ ವಹಿಸಿದೆ. ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್​ ಪಟ್ಟ ಅಲಂಕರಿಸಿ ಹಾಲಿ ಎನಿಸಿರುವ ಭಾರತ ಮಹಿಳಾ ತಂಡ ಜನವರಿ 19 ರಂದು ವೆಸ್ಟ್ ಇಂಡೀಸ್ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ.

4 ಗುಂಪುಗಳು


ವಿಶ್ವಕಪ್‌ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ 16 ತಂಡಗಳನ್ನು 4 ತಂಡಗಳ 4 ಗ್ರೂಪ್‌ಗಳಾಗಿ ವಿಂಗಡಿಸಲಾಗಿದೆ. ಇಲ್ಲಿ ಪ್ರತಿಯೊಂದು ತಂಡ ಎದುರಾಳಿ ವಿರುದ್ಧ ಒಂದು ಪಂದ್ಯವಾಡಲಿದೆ. ಅಂದರೆ, ಗ್ರೂಪ್‌ ವಿಭಾಗದಲ್ಲಿ ತಂಡವೊಂದಕ್ಕೆ 3 ಪಂದ್ಯಗಳ ಅವಕಾಶ ಲಭಿಸಲಿದೆ. ಪ್ರತೀ ವಿಭಾಗದ 2 ಅಗ್ರ ತಂಡಗಳು ಸೂಪರ್‌ 6 ಹಂತಕ್ಕೆ ಪ್ರವೇಶಿಸುತ್ತವೆ. ಇಲ್ಲಿ ಮತ್ತೆ 6 ತಂಡಗಳ 2 ಗ್ರೂಪ್‌ ಇರುತ್ತದೆ. ಪ್ರತೀ ಗ್ರೂಪ್‌ನಲ್ಲಿ ಮೊದಲೆರಡು ಸ್ಥಾನ ಪಡೆದ ತಂಡಗಳಿಗೆ ಸೆಮಿಫೈನಲ್‌ ಅರ್ಹತೆ ಲಭಿಸಲಿದೆ. ಬಳಿಕ ಫೈನಲ್​ ಪಂದ್ಯ ನಡೆಯಲಿದೆ.

ತಂಡಗಳು ಮತ್ತು ವಿಭಾಗ


ಗ್ರೂಪ್​ ‘ಎ’:
ಭಾರತ, ವೆಸ್ಟ್ ಇಂಡೀಸ್, ಶ್ರೀಲಂಕಾ, ಮಲೇಷ್ಯಾ

ಗ್ರೂಪ್​ ‘ಬಿ’: ಇಂಗ್ಲೆಂಡ್, ಪಾಕಿಸ್ತಾನ, ಐರ್ಲೆಂಡ್, ಯುಎಸ್ಎ

ಗ್ರೂಪ್​ ‘ಸಿ’: ನ್ಯೂಜಿಲ್ಯಾಂಡ್​, ದಕ್ಷಿಣ ಆಫ್ರಿಕಾ, ಆಫ್ರಿಕಾ ಕ್ವಾಲಿಫೈಯರ್, ಸಮೋವಾ

ಗ್ರೂಪ್​ ‘ಡಿ’: ಆಸ್ಟ್ರೇಲಿಯಾ, ಬಾಂಗ್ಲಾದೇಶ, ಏಷ್ಯಾ ಕ್ವಾಲಿಫೈಯರ್, ಸ್ಕಾಟ್ಲೆಂಡ್

ಟೈ ಆದರೆ ಸೂಪರ್‌ ಓವರ್‌


ಪಂದ್ಯ ಟೈ ಆದರೆ ಸೂಪರ್‌ ಓವರ್‌ ಮೂಲಕ ಫಲಿತಾಂಶವನ್ನು ನಿರ್ಧರಿಸಲಾಗುತ್ತದೆ. ಸೂಪರ್‌ ಓವರ್‌ ಕೂಡ ಟೈ ಆದರೆ ಇನ್ನೊಂದು ಸೂಪರ್‌ ಓವರ್‌ ಇರಲಿದೆ. ಹೀಗೆ ಸ್ಪಷ್ಟ ಫಲಿತಾಂಶ ಲಭಿಸುವ ತನಕ ಸೂಪರ್‌ ಓವರ್‌ ಜಾರಿಯಲ್ಲಿರುತ್ತದೆ.

ಇದನ್ನೂ ಓದಿ Women’s T20 World Cup: ವಿಶ್ವಕಪ್​ ನಡೆಸಲು ಸೇನೆಯ ನೆರವು ಕೇಳಿದ ಬಾಂಗ್ಲಾ ಕ್ರಿಕೆಟ್​ ಮಂಡಳಿ

ಮಳೆ ಬಂದರೆ


ಮಳೆ ಹಾಗೂ ಇನ್ನಿತರ ಪ್ರತಿಕೂಲ ಹವಾಮಾನದಿಂದ ಪಂದ್ಯಕ್ಕೆ ಅಡಚಣೆಯಾದರೆ ಗ್ರೂಪ್‌ ಹಾಗೂ ಸೂಪರ್‌-6 ಹಂತದಲ್ಲಿ ಕನಿಷ್ಠ 5 ಓವರ್‌ಗಳ ಪಂದ್ಯದ ಮೂಲಕ ಫಲಿತಾಂಶ ನಿರ್ಧರಿಸಲಾಗುವುದು. ಸೆಮಿಫೈನಲ್ಸ್‌ ಮತ್ತು ಫೈನಲ್‌ನಲ್ಲಿ ಸ್ಪಷ್ಟ ಫಲಿತಾಂಶಕ್ಕೆ ಕನಿಷ್ಠ 10 ಓವರ್‌ನ ಪಂದ್ಯ ಆಡಿಸಲಾಗುವುದು.

ವೇಳಾಪಟ್ಟಿ


8-01-2025: ಆಸ್ಟ್ರೇಲಿಯಾ vs ಸ್ಕಾಟ್ಲೆಂಡ್

18-01-2025: ಇಂಗ್ಲೆಂಡ್ vs ಐರ್ಲೆಂಡ್

18-01-2025: ಸಮೋವಾ vs ಆಫ್ರಿಕಾ ಕ್ವಾಲಿಫೈಯರ್

18-01-2025: ಬಾಂಗ್ಲಾದೇಶ vs ಏಷ್ಯಾ ಕ್ವಾಲಿಫೈಯರ್

18-01-2025: ಪಾಕಿಸ್ತಾನ vs ಯುಎಸ್ಎ

18-01-2025: ನ್ಯೂಜಿಲ್ಯಾಂಡ್​ vs ದಕ್ಷಿಣ ಆಫ್ರಿಕಾ

19-01-2025: ಶ್ರೀಲಂಕಾ vs ಮಲೇಷ್ಯಾ

19-01-2025: ಭಾರತ vs ವೆಸ್ಟ್ ಇಂಡೀಸ್

20-01-2025: ಆಸ್ಟ್ರೇಲಿಯಾ vs ಬಾಂಗ್ಲಾದೇಶ

20-01-2025: ಐರ್ಲೆಂಡ್ vs ಯುಎಸ್ಎ

20-01-2025: ನ್ಯೂಜಿಲ್ಯಾಂಡ್​ vs ಆಫ್ರಿಕಾ ಕ್ವಾಲಿಫೈಯರ್

20-01-2025: ಸ್ಕಾಟ್ಲೆಂಡ್ vs ಏಷ್ಯಾ ಕ್ವಾಲಿಫೈಯರ್

20-01-2025: ಇಂಗ್ಲೆಂಡ್ vs ಪಾಕಿಸ್ತಾನ

20-01-2025: ದಕ್ಷಿಣ ಆಫ್ರಿಕಾ vs ಸಮೋವಾ

21-01-2025: ವೆಸ್ಟ್ ಇಂಡೀಸ್ vs ಶ್ರೀಲಂಕಾ

21-01-2025: ಭಾರತ vs ಮಲೇಷ್ಯಾ

22-01-2025: ಬಾಂಗ್ಲಾದೇಶ vs ಸ್ಕಾಟ್ಲೆಂಡ್

22-01-2025: ಇಂಗ್ಲೆಂಡ್ vs ಅಮೆರಿಕ

22-01-2025: ನ್ಯೂಜಿಲ್ಯಾಂಡ್ vs ಸಮೋವಾ

22-01-2025: ಆಸ್ಟ್ರೇಲಿಯಾ vs ಏಷ್ಯಾ ಕ್ವಾಲಿಫೈಯರ್

22-01-2025: ಪಾಕಿಸ್ತಾನ vs ಐರ್ಲೆಂಡ್

22-01-2025: ದಕ್ಷಿಣ ಆಫ್ರಿಕಾ vs ಆಫ್ರಿಕಾ ಕ್ವಾಲಿಫೈಯರ್

23-01-2025: ಮಲೇಷ್ಯಾ vs ವೆಸ್ಟ್ ಇಂಡೀಸ್

23-01-2025: ಭಾರತ vs ಶ್ರೀಲಂಕಾ

ಸೂಪರ್ ಸಿಕ್ಸ್ ಸುತ್ತು


24-01-2025: ‘ಬಿ’ ಗುಂಪಿನ 4ನೇ ತಂಡ vs ‘ಸಿ’ ಗುಂಪಿನ 3ನೇ ತಂಡ

24-01-2025: ‘ಎ’ ಗುಂಪಿನ 4ನೇ ತಂಡ vs ‘ಡಿ’ ಗುಂಪಿನ 4ನೇ ತಂಡ

25-01-2025: ಬಿ ಗುಂಪಿನ 1ನೇ ತಂಡ vs ಸಿ ಗುಂಪಿನ 2ನೇ ತಂಡ

25-01-2025: ‘ಎ’ ಗುಂಪಿನ 3ನೇ ತಂಡ vs ‘ಡಿ’ ಗುಂಪಿನ 1ನೇ ತಂಡ

25-01-2025: ‘ಸಿ’ ಗುಂಪಿನ 1 ನೇ ತಂಡ vs ‘ಬಿ’ ಗುಂಪಿನ 3ನೇ ತಂಡ

26-01-2025: ‘ಎ’ ಗುಂಪಿನ 2ನೇ ತಂಡ vs ‘ಡಿ’ ಗುಂಪಿನ 3ನೇ ತಂಡ

26-01-2025: ‘ಎ’ ಗುಂಪಿನ 1ನೇ ತಂಡ vs ‘ಡಿ’ ಗುಂಪಿನ 2ನೇ ತಂಡ

27-01-2025: ‘ಬಿ’ ಗುಂಪಿನ 1ನೇ ತಂಡ vs ‘ಸಿ’ ಗುಂಪಿನ 3ನೇ ತಂಡ

28-01-2025: ‘ಎ’ ಗುಂಪಿನ 3ನೇ ತಂಡ vs ‘ಡಿ’ ಗುಂಪಿನ 2ನೇ ತಂಡ

28-01-2025: ‘ಸಿ’ ಗುಂಪಿನ 1ನೇ ತಂಡ vs ‘ಬಿ’ ಗುಂಪಿನ 2ನೇ ತಂಡ

28-01-2025: ‘ಎ’ ಗುಂಪಿನ 1 ನೇ ತಂಡ vs ‘ಡಿ’ ಗುಂಪಿನ 3ನೇ ತಂಡ

29-01-2025: ‘ಸಿ’ ಗುಂಪಿನ 2ನೇ ತಂಡ vs ‘ಬಿ’ ಗುಂಪಿನ 3ನೇ ತಂಡ

29-01-2025: ‘ಎ’ ಗುಂಪಿನ 2ನೇ ತಂಡ vs ‘ಡಿ’ ಗುಂಪಿನ 1ನೇ ತಂಡ

31-01-2025: ಮೊದಲ ಸೆಮಿಫೈನಲ್

31-01-2025: ಎರಡನೇ ಸೆಮಿಫೈನಲ್

2-02-2025: ಫೈನಲ್

Continue Reading
Advertisement
Justice KS Hegde
ಕರ್ನಾಟಕ18 mins ago

Justice KS Hegde: ಜಸ್ಟೀಸ್‌ ಕೆ.ಎಸ್.ಹೆಗ್ಡೆ ಜೀವನ, ಕೊಡುಗೆ ಕುರಿತು ಚಂದನ ವಾಹಿನಿಯಲ್ಲಿ ವಿಶೇಷ ಕಾರ್ಯಕ್ರಮ

Paris Olympics 2024
ಪ್ರಮುಖ ಸುದ್ದಿ34 mins ago

Paris Olympics 2024 : ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದ ಚೀನಾದ ಅಥ್ಲೀಟ್​ ಈಗ ರೆಸ್ಟೋರೆಂಟ್​​ನಲ್ಲಿ ವೇಟರ್​!

Sudha Murthy'
ಪ್ರಮುಖ ಸುದ್ದಿ52 mins ago

Sudha Murthy : ವಿವಾದ ಸೃಷ್ಟಿಸಿದ ಸುಧಾ ಮೂರ್ತಿಯವರ ‘ರಕ್ಷಾ ಬಂಧನ’ದ ಕತೆ; ಸ್ಪಷ್ಟನೆ ನೀಡಿದ ಸಂಸದೆ

Zika virus
ಪ್ರಮುಖ ಸುದ್ದಿ1 hour ago

Zika virus : ಮಾರಕ ಜೀಕಾ ವೈರಸ್​ಗೆ ಕರ್ನಾಟಕದಲ್ಲಿ ಮೊದಲ ಬಲಿ; ಶಿವಮೊಗ್ಗದ ವ್ಯಕ್ತಿ ಸಾವು

Israel Attack
ವಿದೇಶ1 hour ago

Israel Attack: ರಹಸ್ಯ ತಾಣದಲ್ಲಿದ್ದ ಹಿಜ್ಬುಲ್ಲಾ ಕಮಾಂಡರ್‌ನನ್ನು ಒಂದು ಫೋನ್ ಕಾಲ್‌ ಮೂಲಕ ಕೊಂದು ಮುಗಿಸಿದ ಇಸ್ರೇಲ್!

Celebrities Rakhi Celebration
ಫ್ಯಾಷನ್2 hours ago

Celebrities Rakhi Celebration: ಫೆಸ್ಟಿವ್‌ ಸೀಸನ್‌ ವೇರ್ಸ್‌ನಲ್ಲಿ ಸೆಲೆಬ್ರೆಟಿಗಳ ರಾಖಿ ಸಂಭ್ರಮ

TRAI New Rules
ಗ್ಯಾಜೆಟ್ಸ್2 hours ago

TRAI New Rules: ನಿಮಗೆ ಗೊತ್ತಿರಲಿ; ಸೆ.1ರಿಂದ ಈ ಸಿಮ್ ಕಾರ್ಡ್‌ಗಳು ಕಪ್ಪು ಪಟ್ಟಿಗೆ!

Raksha Bandhan
ಪ್ರಮುಖ ಸುದ್ದಿ2 hours ago

Raksha Bandhan : ಪುಟಾಣಿ ಗೆಳೆಯರೊಂದಿಗೆ ರಕ್ಷಾ ಬಂಧನ ಆಚರಿಸಿಕೊಂಡ ನರೇಂದ್ರ ಮೋದಿ; ಇಲ್ಲಿವೆ ಚಿತ್ರಗಳು

Rayara Aradhane 2024
ಧಾರ್ಮಿಕ2 hours ago

Rayara Aradhane 2024: ನಾಳೆಯಿಂದ ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವ; ಗುರುಗಳ ಜೀವನ ಹೇಗಿತ್ತು, ಸಂದೇಶ ಏನಾಗಿತ್ತು?

Actor Chetan Ahimsa
ಕರ್ನಾಟಕ2 hours ago

Chetan Ahimsa: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ನಟ ಚೇತನ್ ಆಗ್ರಹ; ಆ.28ಕ್ಕೆ ಕಾಂಗ್ರೆಸ್ ಹಠಾವೋ, ದಲಿತ ಬಚಾವೋ ಹೋರಾಟ

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌