Site icon Vistara News

Virat kohli : ಸಿಕ್ಸರ್ ಹೊಡೆದು ಕಿಂಗ್​ ಥರ ಪೋಸ್​​ ಕೊಟ್ಟ ಕೊಹ್ಲಿ, ಇಲ್ಲಿದೆ ವಿಡಿಯೊ

Virat kohli

ಬೆಂಗಳೂರು: ವಿರಾಟ್ ಕೊಹ್ಲಿ (Virat kohli ) ಪಂದ್ಯವೊಂದರಲ್ಲಿ ಅತ್ಯುತ್ತಮ ಶಾಟ್ ಆಡಿದಾಗ ಕ್ರಿಕೆಟ್ ಅಭಿಮಾನಿಗಳು ಅದನ್ನು ಮತ್ತೆ ಮತ್ತೆ ನೋಡಲು ಬಯಸುತ್ತಾರೆ. ಅಂತೆಯೇ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಆರ್​ಸಿಬಿಯ ಐಪಿಎಲ್ 2024 ರ ಪಂದ್ಯದಲ್ಲಿ ಮೋಹಿತ್ ಶರ್ಮಾ ವಿರುದ್ಧ ಅವರು ಇದೇ ರೀತಿಯ ಶಾಟ್ ಆಡಿದರು. ಅಲ್ಲದೆ, ಸಿಕ್ಸರ್​ ಬಾರಿಸಿದ ಅವರು ಕಿಂಗ್ ರೀತಿಯಲ್ಲಿ ಪೋಸ್ ಕೊಟ್ಟರು. ಅವರ ಸಿಕ್ಸರ್ ಪೋಸ್​ ಸಿಕ್ಕಾಪಟ್ಟೆ ವೈರಲ್ ಆಯಿತು.

148 ರನ್​ಗಳ ಗುರಿ ಬೆನ್ನಟ್ಟಿದ್ದ ಆರ್​ಸಿಬಿಗೆ ಕೊಹ್ಲಿ ಹಾಗೂ ಫಾಫ್ ಡು ಪ್ಲೆಸಿಸ್ ಕೇವಲ 3.1 ಓವರ್​ಗಳ 50 ರನ್​ ಬಾರಿಸಿದರು. ಮೋಹಿತ್ ಆಫ್ ಸ್ಟಂಪ್ ಹೊರಗೆ ಫುಲ್ ಲೆಂತ್​ ಎಸೆತ ಎಸೆದಾಗ ಕೊಹ್ಲಿ ಸಿಕ್ಸರ್ ಬಾರಿಸಿದರು. ಪಂದ್ಯದಲ್ಲಿ ವಿರಾಟ್​ ಕೊಹ್ಲಿ 42 ರನ್ ಬಾರಿಸಿ ಮಿಂಚಿದರು.

ಪುತ್ರ ಅಕಾಯ್​ ಹುಟ್ಟಿದ ಬಳಿಕ ಮೊದಲ ಬಾರಿ ಕಾಣಿಸಿಕೊಂಡ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ

ವಿರಾಟ್​ ಕೊಹ್ಲಿಯ ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ (Anushka Sharma) ತಮ್ಮ ಮಗ ಅಕಾಯ್ ಕೊಹ್ಲಿ (AkaI kohli) ಜನಿಸಿದ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಐಪಿಎಲ್​ (IPL 2024) ಪಂದ್ಯದ ವೇಳೆ ಗ್ಯಾಲರಿಯಲ್ಲಿದ್ದ ಅನುಷ್ಕಾ ತಂಡಕ್ಕೆ ಬೆಂಬಲ ಸೂಚಿಸಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯ ನಡೆದಿದ್ದು, ಆರ್​ಸಿಬಿ ಗುಜರಾತ್​ ತಂಡವನ್ನು ಎದುರಿಸಿತು.

ನಟಿ ಸ್ಟ್ಯಾಂಡ್ ಗಳಲ್ಲಿ ಕುಳಿತಿರುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ತನ್ನ ಪತಿ ಆಡುವುದನ್ನು ನೀಡಿ ಅವರು ನಗುತ್ತಿರುವುದನ್ನು ಕಾಣಬಹುದು.

ಇದನ್ನೂ ಓದಿ: IPL 2024 : ಭಾರೀ ಭದ್ರತಾ ಲೋಪ; ಎಸ್​ಆರ್​​ಎಚ್​ ವಿದೇಶಿ ಆಟಗಾರನ ಮೇಲೆ ಮುಗಿಬಿದ್ದ ಸಾರ್ವಜನಿಕರು!

ನಟಿ ಇತ್ತೀಚೆಗೆ ತನ್ನ ಹುಟ್ಟುಹಬ್ಬವನ್ನು ವಿರಾಟ್ ಮತ್ತು ಅವರ ಸಹ ಆರ್​​ಸಿಬಿ ಆಟಗಾರರೊಂದಿಗೆ ಆಚರಿಸಿದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಟಾರ್ ಫಾಫ್ ಡು ಪ್ಲೆಸಿಸ್ ಹಂಚಿಕೊಂಡಿರುವ ಫೋಟೋದಲ್ಲಿ ಅನುಷ್ಕಾ ಶರ್ಮಾ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ನಟಿ ಮೇ 1ರಂದು ಬುಧವಾರ ತನ್ನ 36 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಅನುಷ್ಕಾ ತನ್ನ ಹುಟ್ಟುಹಬ್ಬದಂದು ಬೆಂಗಳೂರಿನಲ್ಲಿದ್ದರು ಮತ್ತು ಆತ್ಮೀಯ ಪಾರ್ಟಿ ಆಯೋಜಿಸಿದ್ದರು ಎಂದು ಕ್ರಿಕೆಟಿಗರು ಬಹಿರಂಗಪಡಿಸಿದ್ದರು.

ಅನುಷ್ಕಾ ಅವರ ಹುಟ್ಟುಹಬ್ಬದಂದು, ವಿರಾಟ್ ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್​ನಲ್ಲಿ ತಮ್ಮ ಹೆಂಡತಿಯ ಮುದ್ದಾದ ಫೋಟೋಗಳನ್ನು ಹಂಚಿಕೊಂಡಿದ್ದರು. ಅವರ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುವ ಟಿಪ್ಪಣಿಯನ್ನು ಬರೆದಿದ್ದರು. “ನಿನು ನನಗೆ ಸಿಗದಿದ್ದರೆ ನಾನು ಸಂಪೂರ್ಣವಾಗಿ ಕಳೆದುಹೋಗುತ್ತಿದ್ದೆ. ಹುಟ್ಟುಹಬ್ಬದ ಶುಭಾಶಯಗಳು” ಎಂದು ಬರೆದು ಕೆಂಪು ಹೃದಯದ ಎಮೋಜಿಗಳನ್ನು ಹಾಕಿದ್ದರು.

Exit mobile version