Site icon Vistara News

Virat Kohli: ಶೂನ್ಯಕ್ಕೆ ಔಟಾದ ಸಿಟ್ಟಿನಲ್ಲಿ ಡ್ರೆಸ್ಸಿಂಗ್​ ರೂಮ್​ನಲ್ಲಿ ಆ್ಯಂಗ್ರಿ ಮ್ಯಾನ್​ ಆದ ಕೊಹ್ಲಿ

Virat Kohli

ಲಕ್ನೋ: ಇಂಗ್ಲೆಂಡ್​ ವಿರುದ್ಧ ನಡೆಯುತ್ತಿರುವ ವಿಶ್ವಕಪ್​ ಪಂದ್ಯದಲ್ಲಿ ವಿರಾಟ್​ ಕೊಹ್ಲಿ(Virat Kohli) ಅವರು ಶೂನ್ಯ ಸಂಕಟಕ್ಕೆ ಸಿಲುಕಿದರು. ಇದೇ ಸಿಟ್ಟಿನಲ್ಲಿ ಅವರು ಡ್ರೆಸ್ಸಿಂಗ್​ ರೋಮ್​ನಲ್ಲಿ ಕೊಂಚ ಆ್ಯಂಗ್ರಿ ಮ್ಯಾನ್ ಆಗಿ ಕಾಣಿಸಿಕೊಂಡರು. ಸಿಟ್ಟಿನಲ್ಲಿ ತಾವು ಕುಳಿತ ಕುರ್ಚಿಗೆ ಕೈಯನ್ನು ಜೋರಾಗಿ ಬಡಿದಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಆಹ್ವಾನ ಪಡೆದ ಭಾರತ ಆರಂಭದಲ್ಲೇ ಆಘಾತ ಎದುರಿಸಿತು. ಶುಭಮನ್​ ಗಿಲ್​ 9 ರನ್​ಗೆ ವಿಕೆಟ್​ ಒಪ್ಪಿಸಿದರು. ಆ ಬಳಿಕ ಬಂದ ವಿರಾಟ್​ ಕೊಹ್ಲಿ ಅವರು 9 ಎಸೆತ ಎದುರಿಸಿ ಶೂನ್ಯಕ್ಕೆ ವಿಕೆಟ್​ ಕೈ ಚೆಲ್ಲಿದರು. ಭಾರತ 27 ರನ್​ಗೆ 2 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಶೂನ್ಯಕ್ಕೆ ಔಟಾದ ಬೇಸರದಲ್ಲಿ ಪೆವಿಲಿಯನ್​ ಕಡೆಗೆ ಹೆಜ್ಜೆ ಹಾಕಿದ ಕೊಹ್ಲಿ ಡ್ರೆಸ್ಸಿಂಗ್​ ರೂಮ್​ ತಲುಪಿದ ತಕ್ಷಣ ಸಿಟ್ಟಿನಲ್ಲಿ ತಮ್ಮ ಕೈಯನ್ನು ಕುರ್ಚಿಗೆ ಬಡಿದು ಸಿಟ್ಟನ್ನು ಹೊರಹಾಕಿದರು. ಇದರ ವಿಡಿಯೊ ವೈರಲ್​ ಆಗಿದೆ. ಇದು ವಿರಾಟ್​ ಅವರ ಮೊದಲ ವಿಶ್ವಕಪ್​ ಶೂನ್ಯ ಸಂಪಾದನೆಯಾಗಿದೆ.

ಟ್ರೋಲ್​ ಮಾಡಿದ ಇಂಗ್ಲೆಂಡ್​ ಅಭಿಮಾನಿಗಳು

ವಿರಾಟ್​ ಅವರು ಶೂನ್ಯಕ್ಕೆ ಔಟಾಗುತ್ತಿದ್ದಂತೆ ಇಂಗ್ಲೆಂಡ್ ಕ್ರಿಕೆಟ್ ಅಭಿಮಾನಿಗಳ ಗುಂಪು ಭಾರ್ಮಿ ಆರ್ಮಿ ಟ್ರೋಲ್ ಮಾಡಿದ್ದಾರೆ. ಕೊಹ್ಲಿಯ ಫೋಟೋವನ್ನು ಬಾತುಕೋಳಿಯ ತಲೆಗೆ ಎಡಿಟ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿದೆ. ಈಮೂಲಕ ಕೊಹ್ಲಿ ಡಕೌಟ್‌ ಅನ್ನು ಡಕ್‌ಗೆ ಹೋಲಿಕೆ ಮಾಡಿ ಟ್ರೋಲ್ ಮಾಡಿದ್ದಾರೆ. ಡೇವಿಡ್ ವಿಲ್ಲಿ ಎಸೆತದಲ್ಲಿ ಅತ್ಯಂತ ಕಷ್ಟದ ಕ್ಯಾಚನ್ನು ಸ್ಟೋಕ್ಸ್​ ಪೆವಿಕಲ್ ಗಮ್​ ಹಾಕಿದ ರೀತಿಯಲ್ಲಿ ಹಿಡಿದರು.​

ಇದನ್ನೂ ಓದಿ Rohit Sharma: ಅರ್ಧಶತಕ ಬಾರಿಸಿ 2 ದಾಖಲೆ ಬರೆದ ರೋಹಿತ್​ ಶರ್ಮ

ನೀರಿನಲ್ಲಿರುವ ಎರಡು ಬಾತುಕೋಳಿಗ ಫೋಟೋವನ್ನು ಹಾಕಿ, ಒಂದು ಬಾತುಕೋಳಿ ತಲೆಗೆ ವಿರಾಟ್ ಕೊಹ್ಲಿ ಮುಖ ಎಡಿಟ್ ಮಾಡಿ ಮತ್ತೊಂದು ಬಾತುಕೋಳಿ ನೀರಿನಲ್ಲಿ ಈಜುತ್ತಿರುವ ಪೋಸ್ಟ್ ಮಾಡಲಾಗಿದೆ. ಈ ಮೂಲಕ ಕೊಹ್ಲಿಯ ಶೂನ್ಯವನ್ನು ಇಂಗ್ಲೆಂಡ್ ಅಭಿಮಾನಿಗಳು ಟ್ರೋಲ್ ಮೂಲಕ ಸಂಭ್ರಮಿಸಿದ್ದಾರೆ. ಆದರೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಇಂಗ್ಲೆಂಡ್ ಅಂಕಪಟ್ಟಿಯಲ್ಲಿನ ಸ್ಥಾನವನ್ನು ತೋರಿಸಿ ನೀವು ಎಲ್ಲಿದ್ದೀರಿ ಅನ್ನೋದು ಗಮನದಲ್ಲಿರಲಿ ಎಂದು ತಿರುಗೇಟು ನೀಡಿದ್ದಾರೆ.

ಬಿಷನ್‌ ಸಿಂಗ್‌ ಬೇಡಿಗೆ ಗೌರವ 

ಇಂಗ್ಲೆಂಡ್​ ವಿರುದ್ಧ ಸಾಗುತ್ತಿರುವ ವಿಶ್ವಕಪ್​ನ 29ನೇ ಪಂದ್ಯದಲ್ಲಿ ಟೀಮ್​ ಇಂಡಿಯಾ(IND vs ENG) ಆಟಗಾರರು ಕಪ್ಪು ಪಟ್ಟಿ ಧರಿಸಿ(Black Arm Bands) ಆಡಲಿಳಿದರು. ಕಳೆದ ಸೋಮವಾರಂದು ನಿಧನರಾದ ಭಾರತ ಕ್ರಿಕೆಟ್​ ತಂಡದ ಮಾಜಿ ಸ್ಪಿನ್‌ ದಿಗ್ಗಜ, ದೇಶಿ ಕ್ರಿಕೆಟ್‌ ಕಂಡ ಖಡಕ್‌ ನಾಯಕರಾಗಿದ್ದ ಬಿಷನ್‌ ಸಿಂಗ್‌ ಬೇಡಿ(Bishan Singh Bedi) ಅವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಭಾರತ ತಂಡದ ಆಟಗಾರರು ತೋಳಿಗೆ ಕಪ್ಪು ಪಟ್ಟಿ ಧರಿಸಿ ಮೈದಾನಕ್ಕಿಳಿದರು.

Exit mobile version