Site icon Vistara News

Virat kohli: ಲಂಡನ್​ನಿಂದ ಮರಳಿದ ಕೊಹ್ಲಿ; ಏಕಾಏಕಿ ತಂಡ ಬಿಟ್ಟು ತೆರಳಿದ್ದು ಯಾಕೆ?

Virat kohli news

ಜೊಹಾನ್ಸ್​ಬರ್ಗ್​: ಡಿಸೆಂಬರ್ 26 ರಂದು ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕಾಗಿ ವಿರಾಟ್​ ಕೊಹ್ಲಿ ಅಭ್ಯಾಸ ಆರಂಭಿಸಿದ್ದಾರೆ. ಅವರು ಅದಕ್ಕಿಂತ ಮೊದಲು ಏಕಾಏಕಿ ಲಂಡನ್​ಗೆ ತೆರಳಿದ್ದರು. ಇದೀಗ ಟೀಮ್ ಇಂಡಿಯಾ ಸೇರಿಕೊಂಡಿದ್ದಾರೆ. ಭಾರತದ ಸ್ಟಾರ್ ಬ್ಯಾಟರ್​​ ಕಳೆದ ಕೆಲವು ದಿನಗಳಿಂದ ಲಂಡನ್​ನಲ್ಲಿದ್ದರು. ಈ ವೇಳೆ ಅವರು ಭಾರತಕ್ಕೆ ಮರಳಿದ್ದಾರೆ ಎಂಬುದಾಗಿ ವರದಿಯಾಗಿತ್ತು. ಕೌಟುಂಬಿಕ ತುರ್ತು ಕಾರಣಕ್ಕೆ ತಂಡ ತೊರೆದಿದ್ದಾರೆ ಎನ್ನಲಾಗಿತ್ತು. ಆ ಎಲ್ಲ ವರದಿಗಳು ಸುಳ್ಳಾಗಿವೆ.

ಕೊಹ್ಲಿಯ ಪ್ರಯಾಣದ ಯೋಜನೆಗಳ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಭಾರತೀಯ ತಂಡದ ಮ್ಯಾನೇಜ್ಮೆಂಟ್ ಗೆ ಮಾಹಿತಿ ಇತ್ತು. ಅವರು ಡಿಸೆಂಬರ್ 20 ರಿಂದ ಡಿಸೆಂಬರ್ 22 ರವರೆಗೆ ಪ್ರಿಟೋರಿಯಾದಲ್ಲಿ ಇಂಟರ್-ಸ್ಕ್ವಾಡ್ ಪಂದ್ಯವನ್ನು ಆಡುವುದಿಲ್ಲ ಎಂದು ಹೇಳಲಾಗಿತ್ತು.

“ವಿರಾಟ್ ಕೊಹ್ಲಿ ಇಂಟ್ರಾಸ್ಕ್ವಾಡ್​ ಪಂದ್ಯವನ್ನು ಆಡಲು ಹೋಗಿಲ್ಲ. ತಂಡದ ಮ್ಯಾನೇಜ್ಮೆಂಟ್​ಗೆ ಅವರ ಯೋಜನೆ ಮತ್ತು ವೇಳಾಪಟ್ಟಿಯ ಬಗ್ಗೆ ಮಾಹಿತಿ ಇತ್ತು. ಅವರ ಪ್ರಯಾಣ ಕುಟುಂಬದ ತುರ್ತುಸ್ಥಿತಿಯಿಂದಾಗಿ ಸಂಭವಿಸಿದ ವಿಷಯವಲ್ಲ. ವಿರಾಟ್ ಕೊಹ್ಲಿ. ಇಂಥ ವಿಷಯಗಳಿಗೆ ಸಂಬಂಧಿಸಿದ ಹಾಗೆ ಉತ್ತಮ ಯೋಜನೆ ಹೊಂದಿದ್ದಾರೆ. ಅವರ ಲಂಡನ್ ಪ್ರವಾಸವನ್ನು ಮುಂಚಿತವಾಗಿಯೇ ತಿಳಿಸಲಾಗಿದೆ”ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ದಕ್ಷಿಣ ಆಫ್ರಿಕಾದಿಂದ ಲಂಡನ್​ಗೆ ಪ್ರಯಾಣಿಸುವ ಮೊದಲು ಕೊಹ್ಲಿ ಮೂರು ದಿನಗಳ ಕಾಲ ತಂಡದೊಂದಿಗೆ ತರಬೇತಿ ಪಡೆದಿದ್ದರ. ಬಾಕ್ಸಿಂಗ್ ಡೇ ಟೆಸ್ಟ್​​ಗೆ ಮುಂಚಿತವಾಗಿ ತಂಡವನ್ನು ಮತ್ತೆ ಸೇರಿಕೊಂಡಿದ್ದಾರೆ. ಭಾರತದ ಮಾಜಿ ನಾಯಕ ಡಿಸೆಂಬರ್ 15 ರಂದು ಭಾರತದಿಂದ ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದರು. ಅವರು ಅಲ್ಲಿಂದ ಮೂರು ದಿನಗಳವರೆಗೆ ತಂಡದೊಂದಿಗೆ ಇದ್ದರು. ಡಿಸೆಂಬರ್ 19 ರಂದು ಲಂಡನ್​ಗೆ ತೆರಳಿದ್ದು.

ತಂಡದೊಂದಿಗೆ ಸಂಪರ್ಕ

“ಕೊಹ್ಲಿ ಡಿಸೆಂಬರ್ 15 ರಂದು ಭಾರತದಿಂದ ದಕ್ಷಿಣ ಆಫ್ರಿಕಾಕ್ಕೆ ಹೊರಟಿದ್ದರು. ಡಿಸೆಂಬರ್ 19 ರಂದು ಲಂಡನ್​ಗೆ ತೆರಳುವ ಮೊದಲು ಅವರು 3-4 ಉತ್ತಮ ತರಬೇತಿ ಅವಧಿಗಳನ್ನು ಪಡೆದರು. ಈಗ ಟೆಸ್ಟ್ ತಂಡದೊಂದಿಗೆ ಸಂಪರ್ಕ ಹೊಂದಿದ್ದಾರೆ. ನಾಳೆ ಸೆಂಚೂರಿಯನ್​ನಲ್ಲಿ ತರಬೇತಿ ಪಡೆಯಲಿದ್ದಾರೆ” ಎಂದು ಬಿಸಿಸಿಐ ಅಧಿಕಾರಿ ಮಾಹಿತಿ ನೀಡಿದ್ದಾರೆ.

ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಡಿಸೆಂಬರ್ 24 ರಂದು ಬೆಳಿಗ್ಗೆ ತರಬೇತಿ ಅವಧಿಯನ್ನು ಹೊಂದಿರುತ್ತದೆ. ಎರಡು ಪಂದ್ಯಗಳ ಸರಣಿಯ ಆರಂಭಿಕ ಟೆಸ್ಟ್​​ಗೆ ಮೊದಲು ಡಿಸೆಂಬರ್ 25ರಂದು ಮಧ್ಯಾಹ್ನದ ಅಭ್ಯಾಸ ಅವಧಿಯನ್ನು ಹೊಂದಿರುತ್ತದೆ. ನಂತರ ತಂಡವು ಡಿಸೆಂಬರ್ 31 ರಂದು ಕೇಪ್ ಟೌನ್ ಗೆ ತೆರಳಲಿದಎ. ಜನವರಿ 3ರಂದು ನ್ಯೂಲ್ಯಾಂಡ್ಸ್ ನಲ್ಲಿ ಪ್ರಾರಂಭವಾಗುವ ಎರಡನೇ ಟೆಸ್ಟ್ ಗೆ ಸಿದ್ಧತೆಗಳನ್ನು ಪ್ರಾರಂಭಿಸಲಿದೆ.

ಪ್ರಮುಖರ ಸೇವೆ ಅಲಭ್ಯ

ಮೊಹಮ್ಮದ್ ಶಮಿ, ಇಶಾನ್ ಕಿಶನ್ ಮತ್ತು ಋತುರಾಜ್ ಗಾಯಕ್ವಾಡ್ ಅವರ ಸೇವೆ ಈ ಸರಣಿಗೆ ಅಲಭ್ಯವಾಗಿದೆ. ಶಮಿ ಭಾಗವಹಿಸುವಿಕೆಯು ಫಿಟ್ನೆಸ್​ಗೆ ಒಳಪಟ್ಟಿತ್ತು. ವೇಗಿಗೆ ಬಿಸಿಸಿಐ ವೈದ್ಯಕೀಯ ತಂಡದಿಂದ ಅನುಮತಿ ಸಿಗಲಿಲ್ಲ. ​ ವಿರಾಮ ಕೋರಿದ ನಂತರ ಕಿಶನ್ ಅವರನ್ನು ತಂಡದಿಂದ ಬಿಡುಗಡೆ ಮಾಡಲಾಯಿತು. ಗಾಯಕ್ವಾಡ್ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದ ಸಮಯದಲ್ಲಿ ಬೆರಳಿನ ಗಾಯದಿಂದಾಗಿ ಹೊರಗುಳಿದಿದ್ದರು.

ಶಮಿಗೆ ಬದಲಿ ಆಟಗಾರನನ್ನು ಹೆಸರಿಸಲಾಗಿಲ್ಲವಾದರೂ, ಕಿಶನ್ ಮತ್ತು ಗಾಯಕ್ವಾಡ್ ಬದಲಿಗೆ ಕೆಎಸ್ ಭರತ್ ಮತ್ತು ಅಭಿಮನ್ಯು ಈಶ್ವರನ್ ಕ್ರಮವಾಗಿ ಭಾರತದ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಎ ತಂಡದಲ್ಲೂ ಬದಲಾವಣೆ

ಡಿಸೆಂಬರ್ 26ರಿಂದ ದಕ್ಷಿಣ ಆಫ್ರಿಕಾ ‘ಎ’ ವಿರುದ್ಧದ ಪಂದ್ಯಕ್ಕೆ ಭಾರತ ‘ಎ’ ತಂಡದಲ್ಲಿ ಕೆಲವು ಬದಲಾವಣೆ ಹರ್ಷಿತ್ ರಾಣಾ ಗಾಯದಿಂದಾಗಿ ಹೊರಗುಳಿದಿದ್ದಾರೆ. ಕುಲದೀಪ್ ಯಾದವ್ ಅವರನ್ನು ಬಿಡುಗಡೆ ಮಾಡಲಾಗಿದೆ. ರಜತ್ ಪಾಟಿದಾರ್, ಸರ್ಫರಾಜ್ ಖಾನ್, ಅವೇಶ್ ಖಾನ್ ಮತ್ತು ರಿಂಕು ಸಿಂಗ್ ಅವರನ್ನು ಸೇರಿಸಲಾಗಿದೆ.

ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ (ಉಪನಾಯಕ), ಪ್ರಸಿದ್ಧ್ ಕೃಷ್ಣ, ಕೆಎಸ್ ಭರತ್ (ವಿಕೆಟ್​ ಕೀಪರ್​), ಅಭಿಮನ್ಯು ಈಶ್ವರನ್.

Exit mobile version