ಬೆಂಗಳೂರು: ವಿರಾಟ್ ಕೊಹ್ಲಿ(Virat Kohli) ಅವರು ಎದುರಾಳಿ ತಂಡದ ಆಟಗಾರರನ್ನು ನಿಂದಿಸುವ ಚಾಳಿಯನ್ನು ಮತ್ತೆ ಮುಂದುವರಿಸಿದ್ದಾರೆ. ಕಳೆದ ಪಂದ್ಯದಲ್ಲಿ ಚೆನ್ನೈ ತಂಡದ ಆಟಗಾರ ರಚಿನ್ ರವಿಂದ್ರ ಅವರಿಗೆ ಅವಾಚ್ಯ ಪದಗಳಿಂದ ಬೈದಿದ್ದ ಕೊಹ್ಲಿ, ಸೋಮವಾರದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ಸ್ಪಿನ್ನರ್ ಹರ್‌ಪ್ರೀತ್ ಬ್ರಾರ್ಗೆ(Harpreet Brar) ನಿಂದಿಸಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ.
ಆರ್‌ಸಿಬಿ ಬ್ಯಾಟಿಂಗ್ ಇನಿಂಗ್ಸ್‌ನ 12ನೇ ಓವರ್ನಲ್ಲಿ ಈ ಘಟನೆ ನಡೆದಿದೆ. ಬ್ರಾರ್ ಅವರು ಗ್ಲೆನ್ ಮ್ಯಾಕ್ಸ್‌ವೆಲ್‌ಗೆ ಬೌಲಿಂಗ್ ಮಾಡಲು ತಯಾರಿ ನಡೆಸುತ್ತಿದ್ದಾಗ, ನಾನ್‌ಸ್ಟ್ರೈಕರ್‌ನ ತುದಿಯಲ್ಲಿದ್ದ ಕೊಹ್ಲಿ, ‘ನಿಧಾನವಾಗಿ ಬೌಲಿಂಗ್ ಮಾಡು B,… ಉಸಿರಾಡಲು ಸ್ವಲ್ಪ ಸಮಯ ಕೊಡು) (“Ruk jaa *, saans to lene de,”) ಎಂದು ಹೇಳಿದ್ದಾರೆ. ಇದರ ಆಡಿಯೋ ಸ್ಟಂಪ್ ಮೈಕ್‌ನಲ್ಲಿ ಸೆರೆಯಾಗಿದೆ. ಕೊಹ್ಲಿಯ ಈ ಮಾತು ಕೇಳಿ ಸ್ಟ್ರೈಕ್ನಲ್ಲಿದ್ದ ಗ್ಲೆನ್ ಮ್ಯಾಕ್ಸ್ವೆಲ್ ಜೋರಾಗಿ ನಕ್ಕಿದ್ದಾರೆ. ಜತೆಗೆ ಏನಾಗಿದೆ ಎಂದು ಸನ್ನೆ ಮಾಡಿದ್ದಾರೆ. ಇದೆಲ್ಲವನ್ನು ವಿಡಿಯೊದಲ್ಲಿ ನೋಡಬಹುದಾಗಿದೆ.
— Cricket Videos (@cricketvid123) March 25, 2024
ಈ ಪಂದ್ಯದಲ್ಲಿ ಹರ್‌ಪ್ರೀತ್ ಬ್ರಾರ್ ಶ್ರೇಷ್ಠ ಮಟ್ಟದ ಬೌಲಿಂಗ್ ಪ್ರದರ್ಶನ ತೋರಿದರು. ವಿರಾಟ್ ಕೊಹ್ಲಿಯಂತೂ ಇವರ ಎಸೆತಗಳಿಗೆ ರನ್ ಗಳಿಸಸಲು ಪರದಾಟ ನಡೆಸಿದರು. ಇದೇ ಸಿಟ್ಟಿನಲ್ಲಿ ಅವರು ಬೈದಿರುವ ಸಾಧ್ಯತೆ ಇದೆ. ಒಟ್ಟು ನಾಲ್ಕು ಓವರ್ ಬೌಲಿಂಗ್ ನಡೆಸಿದ ಹರ್‌ಪ್ರೀತ್ ಬ್ರಾರ್ ಕೇವಲ 13 ರನ್ ನೀಡಿ 2 ವಿಕೆಟ್ ಕಿತ್ತರು. ಇದರಲ್ಲಿ ಒಂದು ವಿಕೆಟ್ ಮ್ಯಾಕ್ಸ್ವೆಲ್ ಅವರದ್ದಾಗಿತ್ತು. ನಿಂದಿಸಿದ ಕೊಹ್ಲಿಯ ಕ್ಯಾಚ್ ಹಿಡಿದದ್ದು ಹರ್‌ಪ್ರೀತ್ ಬ್ರಾರ್.
ಇದನ್ನೂ ಓದಿ Virat Kohli: ಪತ್ನಿ ಅನುಷ್ಕಾ ಜತೆ ವಿಡಿಯೊ ಕಾಲ್ನಲ್ಲಿ ಮಾತನಾಡುವ ವೇಳೆ ನಾಚಿ ನೀರಾದ ಕೊಹ್ಲಿ
Harshal Patel with a HUGE wicket and @PunjabKingsIPL are back in this!
— IndianPremierLeague (@IPL) March 25, 2024
Virat Kohli departs after a well-made 77 off 49 👏👏#RCB need 47 off 24
Head to @Jiocinema & @Starsports to watch the match LIVE #TATAIPL | #RCBvPBKS pic.twitter.com/T84j0yycWa
ಮೈದಾನದಲ್ಲಿ ದುರ್ವರ್ತನೆ, ಅತಿರೇಕದ ವರ್ತನೆ ತೋರುವುದು ಹೊಸತೇನಲ್ಲ. ಓರ್ವ ಆಟಗಾರ ಉತ್ತಮವಾಗಿ ಆಡಿ ಔಟಾದಾಗ ಆತನ ಮೇಲೆ ರೇಗಾಡುವುದು ಕೊಹ್ಲಿಯ ಮೂಲ ಸ್ವಭಾವ. ಇದನ್ನು ಈಗಾಗಲೇ ಹಲವು ಬಾರಿ ಮೈದಾನದಲ್ಲಿ ನೋಡಿದ್ದೇವೆ. ಕಳೆದ ಪಂದ್ಯದಲ್ಲಿ ಚೆನ್ನೈ ಆಟಗಾರ ರಚಿನ್ ಔಟಾಗುತ್ತಿದ್ದಂತೆ ವಿರಾಟ್ ಕೊಹ್ಲಿ ಏಕಾಏಕಿ ಅವಾಚ್ಯ ಪದಗಳಿಂದ ನಿಂದಿಸುವ ಜತೆಗೆ ಬೇಗ ಪೆವಿಲಿಯನ್ಗೆ ನಡಿ ಎನ್ನುವಂತೆ ಕೈ ಸನ್ನೆ ಮಾಡಿದ್ದರು. ಕೊಹ್ಲಿಯ ಈ ಅತಿರೇಕದ ವರ್ತನೆಗೆ ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತಪಡಿಸಿದ್ದರು. ಇದೀಗ ಮತ್ತೆ ಇದೇ ರೀತಿಯ ಘಟನೆಯಿಂದ ಟೀಕೆಗೆ ಒಳಗಾಗಿದ್ದಾರೆ. ಉತ್ತಮ ಆಟಗಾರ ಎಂದೆನಿಸಿದರೆ ಸಾಲದು ವರ್ತನೆಯಲ್ಲಿಯೂ ಇದನ್ನು ಅಳವಡಿಸಿಕೊಳ್ಳಬೇಕು ಎಂದು ನೆಟ್ಟಿಗರು ಕೊಹ್ಲಿಗೆ ಸಲಹೆ ನೀಡಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಲು ಆಹ್ವಾನ ಪಡೆದ ಪಂಜಾಬ್ ಕಿಂಗ್ಸ್ ತಂಡ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 176 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಆರ್‌ಸಿಬಿ 19.2 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 178 ರನ್ ಬಾರಿಸಿ ಗೆಲುವು ಸಾಧಿಸಿತು. ನಿಧಾನಗತಿಯಲ್ಲಿ ಆಡಿದ ಕೊಹ್ಲಿ 49 ಎಸೆತಕ್ಕೆ 77 ರನ್ ಬಾರಿಸಿದರು.