Site icon Vistara News

Virat Kohli: ಆಸೀಸ್​ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಹಲವು ದಾಖಲೆ ಮೇಲೆ ಕಣ್ಣಿಟ್ಟ ವಿರಾಟ್​ ಕೊಹ್ಲಿ

Former Australian cricketer says not scoring a century is not good for star batsman Virat

#image_title

ನಾಗ್ಪುರ: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಭಾರತ(IND VS AUS) ತಂಡ ನಾಲ್ಕು ಪಂದ್ಯಗಳ ಬಾರ್ಡರ್​-ಗವಾಸ್ಕರ್(border gavaskar trophy)​ ಟೆಸ್ಟ್​ ಸರಣಿಯನ್ನಾಡಲು ಸಜ್ಜಾಗಿದೆ. ಮೊದಲ ಪಂದ್ಯ ಗುರುವಾರ(ಫೆ.9) ನಾಗ್ಪುರದಲ್ಲಿ ಆರಂಭಗೊಳ್ಳಲಿದೆ. ಈಗಾಗಲೇ ಉಭಯ ತಂಡಗಳು ಎಲ್ಲ ರೀತಿಯ ಸಿದ್ಧತೆ ನಡೆಸಿವೆ. ಆದರೆ ಈ ಪಂದ್ಯದ ಪ್ರಮುಖ ಹೈಲೆಟ್​ ರನ್​ ಮೆಷಿನ್​​ ವಿರಾಟ್​ ಕೊಹ್ಲಿ(Virat Kohli).…

ಹೌದು ಕಿಂಗ್​ ಕೊಹ್ಲಿ ಅವರು ಈ ಸರಣಿಗಾಗಿ ಜಿಮ್​, ನೆಟ್ಸ್​ನಲ್ಲಿ ಭರ್ಜರಿ ತಯಾರಿ ನಡೆಸಿದ್ದು ಕಾಂಗರೂಗಳ ಹುಟ್ಟಡಗಿಸಲು ಎದುರು ನೋಡುತ್ತಿದ್ದಾರೆ.ಫೆಬ್ರವರಿ 9 ರಂದು ನಾಗ್ಪುರದ ವಿಸಿಎ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಕೊಹ್ಲಿ ಮೇಲೆ ಭಾರತ ಹೆಚ್ಚು ಅವಲಂಬಿತವಾಗಿದೆ ಎಂದರೂ ತಪ್ಪಾಗಲಾರದು. ಇನ್ನೊಂಡೆದೆ ಈ ಸರಣಿಯಲ್ಲಿ ಕೊಹ್ಲಿ ಬ್ಯಾಟಿಂಗ್​ನಲ್ಲಿ​ ಘರ್ಜಿಸುವ ಮೂಲಕ ಹಲವು ದಾಖಲೆಗಳನ್ನು ಮುರಿಯುವ ತವಕದಲ್ಲಿದ್ದಾರೆ.

ಉಡೀಸ್​ ಆಗುತ್ತಾ ಸಚಿನ್ ದಾಖಲೆ!

ವಿರಾಟ್​ ಕೊಹ್ಲಿಗೆ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಸ್ವರೂಪಗಳಲ್ಲಿ ವೇಗವಾಗಿ 25 ಸಾವಿರ ರನ್ ಗಳಿಸುವ ಅವಕಾಶವೊಂದಿದೆ. ಕೊಹ್ಲಿ ಸದ್ಯ 546 ಇನ್ನಿಂಗ್ಸ್‌ಗಳಲ್ಲಿ ಒಟ್ಟು 24,936 ಅಂತಾರಾಷ್ಟ್ರೀಯ ರನ್‌ಗಳನ್ನು ಗಳಿಸಿದ್ದಾರೆ.ಟೆಸ್ಟ್‌ನಲ್ಲಿ 8,119 ರನ್, ಏಕ ದಿನದಲ್ಲಿ 12,809 ರನ್ ಮತ್ತು ಟಿ20ಯಲ್ಲಿ 4,008 ರನ್ ಸೇರಿವೆ. ಈ ಸರಣಿಯಲ್ಲಿ ಕೊಹ್ಲಿ 64 ರನ್ ಗಳಿಸಿದರೆ, ವೇಗವಾಗಿ 25,000 ರನ್ ಗಳಿಸಿದ ದಾಖಲೆಯೊಂದನ್ನು ಬರೆಯಲಿದ್ದಾರೆ. ಈ ಮೂಲಕ ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್​(sachin tendulkar) ಅವರ ದಾಖಲೆಯನ್ನು ಮುರಿಯಲಿದ್ದಾರೆ.​ ಸಚಿನ್ ಅವರು 576 ಇನ್ನಿಂಗ್ಸ್‌ಗಳಲ್ಲಿ 25000 ರನ್ ಗಳಿಸಿ ಮೊದಲ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ವೀರೇಂದ್ರ ಸೆಹವಾಗ್ ದಾಖಲೆ ಮೇಲೂ ಕೊಹ್ಲಿ ಕಣ್ಣು

ಇದರ ಹೊರತಾಗಿ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಮತ್ತೊಂದು ದಾಖಲೆಗೆ ಹತ್ತಿರವಾಗಿದ್ದಾರೆ. ಭಾರತ ಪರ ಟೆಸ್ಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಕೊಹ್ಲಿ ಪ್ರಸ್ತುತ ಆರನೇ ಸ್ಥಾನದಲ್ಲಿದ್ದಾರೆ. ಇದುವರೆಗೆ ಅವರು ಸುಮಾರು 49ರ ಸರಾಸರಿಯಲ್ಲಿ 8,119 ರನ್ ಗಳಿಸಿದ್ದಾರೆ. ಪ್ರಸಕ್ತ ಸರಣಿಯಲ್ಲಿ ಕೊಹ್ಲಿ ಕನಿಷ್ಠ 391 ರನ್ ಗಳಿಸಿದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದವರ ಸಾರ್ವಕಾಲಿಕ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಏರುವ ಮೂಲಕ ವೀರೇಂದ್ರ ಸೆಹವಾಗ್​ (8,503) ಅವರನ್ನು ಹಿಂದಿಕ್ಕಬಹುದಾಗಿದೆ.

ಇದನ್ನೂ ಓದಿ Border Gavaskar Trophy: ಬಾರ್ಡರ್-ಗವಾಸ್ಕರ್ ಟೆಸ್ಟ್​ ಸರಣಿಯ ಇತಿಹಾಸ, ರೋಚಕ ಸಂಗತಿಗಳ ಮಾಹಿತಿ

ನೀಗೀತೆ ಶತಕದ ಬರ?

ಸರಿ ಸುಮಾರು ಎರಡು ವರ್ಷಗಳಿಂದ ರನ್​ ಬರ ಎದುರಿಸಿ ಟೀಕೆಗೆ ಗುರಿಯಾಗಿದ್ದ ವಿರಾಟ್​ ಕೊಹ್ಲಿ ಕಳೆದ ವರ್ಷ ನಡೆದ ಏಷ್ಯಾಕಪ್​ನಲ್ಲಿ ಆಫಘಾನಿಸ್ತಾದ ವಿರುದ್ಧ ಶತಕ ಸಿಡಿಸಿ ಸಂಭ್ರಮಿಸಿದರು. ಇಲ್ಲಿಂದ ಮೇಲೆ ತಿರುಗಿ ನೋಡದ ಕಿಂಗ್​ ಕೊಹ್ಲಿ, ವರ್ಷಾರಂಭದಲ್ಲಿ ಲಂಕಾ ಮತ್ತು ಕಿವೀಸ್​ ವಿರುದ್ಧದ ಏಕದಿನ ಸಣಿಯಲ್ಲಿ ಶತಕ ಸಿಡಿಸುವ ಮೂಲಕ ತಮ್ಮ ಬ್ಯಾಟಿಂಗ್​ ಲಯ ಕಂಡುಕೊಂಡರು. ಇದೀಗ ಆಸೀಸ್​ ವಿರುದ್ಧವೂ ಇದೇ ಲಯವನ್ನು ಮುಂದುವರಿಸಲಿದ್ದಾರಾ ಎಂಬುವುದು ಈ ಸರಣಿಯ ಕೌತುಕ. ಕೊಹ್ಲಿ ಕೊನೆಯದಾಗಿ 2018ರಲ್ಲಿ ಪರ್ತ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 123 ರನ್ ಗಳಿಸಿದ್ದರು. ಅಂದಿನಿಂದ ಅವರು ಆಸೀಸ್ ವಿರುದ್ಧ ಟೆಸ್ಟ್‌ನಲ್ಲಿ ಶತಕ ಬಾರಿಸಿಲ್ಲ.

Exit mobile version