Site icon Vistara News

Virat Kohli : ಕೊಹ್ಲಿ ವಿರುದ್ಧ ಆರೋಪಗಳ ಸುರಿಮಳೆಗೈದ ನವಿನ್​ ಉಲ್ ಹಕ್​!

Navin ul Haq

#image_title

ನವ ದೆಹಲಿ: ಐಪಿಎಲ್ 2023 ರ ಋತುವಿನ ಪ್ರಮುಖ ವಿವಾದ ಗಂಭೀರ್​ ಕೊಹ್ಲಿ ಫೈಟ್​. ಈ ಜಗಳಕ್ಕೆ ಮೂಲಕ ಕಾರಣ ಲಕ್ನೊ ತಂಡದ ಬೌಲರ್​ ನವಿನ್​ ಉಲ್​ ಹಕ್​. ಆರ್​ಸಿಬಿ ಹಾಗೂ ಲಕ್ನೊ ತಂಡಗಳ ನಡುವಿನ ಪಂದ್ಯದ ವೇಳೆ ಪ್ರಸಂಗ ನಡೆದಿತ್ತು. ಇದು ಸರಣಿ ಮುಗಿಯುವ ತನಕವೂ ಮುಂದುವರಿದಿತ್ತು. ಪಂದ್ಯದ ಬಳಿಕ ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಮೂವರಿಗೂ ದಂಡ ವಿಧಿಸಲಾಗಿತ್ತು. ಕೊಹ್ಲಿ ಮತ್ತು ಗಂಭೀರ್ ಪಂದ್ಯದ ಶುಲ್ಕದ ಮೇಲೆ ಶೇ.100ರಷ್ಟು ದಂಡ ವಿಧಿಸಿದರೆ, ನವಿನ್​​ಗೆ ಶೇ.50ರಷ್ಟು ದಂಡ ವಿಧಿಸಲಾಗಿತ್ತು.

ಪಂದ್ಯದ ನಂತರದ ಪರಸ್ಪರ ಅಭಿನಂದಿಸುವ ಸಮಯದಲ್ಲಿ ಘಟನೆ ನಡೆಸಿತ್ತು. ಈ ಬಗ್ಗೆ ನವಿನ್​ ಉಲ್​ ಹಕ್​ ಇತ್ತೀಚೆಗೆ ಸ್ಪಷ್ಟನೆ ನೀಡಿದ್ದಾರೆ. ಎಲ್ಲವೂ ಕೊಹ್ಲಿಯದ್ದೇ ತಪ್ಪು. ಗಲಾಟೆಗೆ ಪ್ರಚೋದನೆ ನೀಡಿರುವುದ ಕೊಹ್ಲಿ ಎಂದು ಆರೋಪಗಳನ್ನು ಮಾಡಿದ್ದಾರೆ. ಇದಲ್ಲದೆ, ಅಫ್ಘಾನಿಸ್ತಾನದ 23 ವರ್ಷದ ಬೌಲರ್​ ಪಂದ್ಯದ ಸಮಯದಲ್ಲಿ ಯಾರೊಂದಿಗೂ ಯಾವುದೇ ವಾಗ್ವಾದ ನಡೆಸಿಲ್ಲ ಎಂಬುದಾಗಿ ಹೇಳಿಕೊಂಡಿದ್ದಾರೆ. ಉಭಯ ತಂಡಗಳು ಪರಸ್ಪರ ಕೈಕುಲುಕುತ್ತಿದ್ದಾಗ ಕೊಹ್ಲಿ ಕೈ ಹಿಡಿದಾಗ ಅವರು ಕೈ ಕೊಡವಿದ್ದಾರೆ ಎಂದು ಆರೋಪಿಸಿದ್ದಾರೆ.

ಪಂದ್ಯದ ಸಮಯದಲ್ಲಿ ಮತ್ತು ಅದರ ನಂತರ ವಿರಾಟ್ ಕೊಹ್ಲಿ ನನ್ನನ್ನು ಅನಗತ್ಯವಾಗಿ ಕೆರಳಿಸಿದರು. ನಾನು ಜಗಳವನ್ನು ಆರಂಭಿಸಿಲ್ಲ. ಪಂದ್ಯದ ನಂತರ ನಾವು ಕೈಕುಲುಕುತ್ತಿದ್ದಾಗ, ವಿರಾಟ್ ಕೊಹ್ಲಿ ಮತ್ತೆ ಪ್ರತಿರೋಧ ತೋರಿದರು. ಬಿಸಿಸಿಐ ದಂಡ ಹಾಕಿರುವುದನ್ನು ನೋಡಿದಾಗ ಜಗಳ ಯಾರು ಪ್ರಾರಂಭಿಸಿದರು ಎಂದು ನಿಮಗೆ ಅರ್ಥವಾಗುತ್ತದೆ ಎಂದು ಅವರು ಬಿಬಿಸಿ ಪಾಶ್ತೋ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ನಾನು ಸಾಮಾನ್ಯವಾಗಿ ಯಾರನ್ನೂ ಸ್ಲೆಡ್ಜ್ ಮಾಡುವುದಿಲ್ಲ. ಮಾಡಿದರೂ ನಾನು ಬೌಲಿಂಗ್ ಮಾಡುವಾಗ ಮಾತ್ರ. ಬೌಲರ್ ಆಗಿರುವ ಕಾರಣ ನನಗೆ ಅದು ಅಗತ್ಯ. ಆದರೆ, ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ, ನಾನು ಒಂದೇ ಒಂದು ಪದವನ್ನು ಉಚ್ಚರಿಸಲಿಲ್ಲ. ನಾನು ಯಾರನ್ನೂ ಸ್ಲೆಡ್ಜಿಂಗ್ ಮಾಡಿರಲಿಲ್ಲ, ಎಂದು ಹಕ್ ನುಡಿದಿದ್ದಾರೆ.

ನನ್ನ ಜತೆಗಿದ್ದ ಆಟಗಾರರಿಗೆ ನಾನು ಪರಿಸ್ಥಿತಿಯನ್ನು ಹೇಗೆ ನಿಭಾಯಿಸಿದೆ ಎಂಬುದು ತಿಳಿದಿದೆ. ನಾನು ಬ್ಯಾಟಿಂಗ್ ಮಾಡುವಾಗ ಅಥವಾ ಪಂದ್ಯದ ನಂತರ ಎಲ್ಲಿಯೂ ತಾಳ್ಮೆ ಕಳೆದುಕೊಂಡಿರಲಿಲ್ಲ. ಪಂದ್ಯದ ನಂತರ ನಾನು ಏನು ಮಾಡಿದ್ದೇನೆ ಎಂಬುದು ಸ್ಪಷ್ಟವಾಗಿದೆ. ನಾನು ಕೇವಲ ಕೈಕುಲುಕುತ್ತಿದ್ದ ಸಂದರ್ಭದಲ್ಲಿ ಕೊಹ್ಲಿ ನನ್ನ ಕೈಯನ್ನು ಬಲವಂತವಾಗಿ ಹಿಡಿದೆಳೆದರು. ನಾನು ಕೂಡ ಮನಷ್ಯನಾಗಿರುವ ಕಾರಣ ಅದಕ್ಕೆ ಪ್ರತಿಕ್ರಿಯಿಸಿದೆ ಎಂದು ಆಫ್ಘಾನ್ ವೇಗಿ ಹೇಳಿದ್ದಾರೆ.

ಟೀಕಾಕಾರರ ಬಾಯಿ ಮುಚ್ಚುವುದು ಹೇಗೆಂದು ನನಗೆ ಗೊತ್ತಿದೆ: ನವೀನ್ ಉಲ್ ಹಕ್

ಈ ಘಟನೆಯ ನಂತರ, ನವೀನ್-ಉಲ್-ಹಕ್ ತನ್ನ ಪಂದ್ಯಗಳ ವೇಳೆ ವಿರಾಟ್​ ಕೊಹ್ಲಿ ಅಭಿಮಾನಿಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೊಲ್​​ಗೆ ಗುರಿಯಾಗಿದ್ದರು. ಪಂದ್ಯ ವೇಳೆಯೂ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಅಭಿಮಾನಿಗಳು ಅವರನ್ನು ಹೀಯಾಳಿಸಿದ್ದರು. ಆದರೆ ಟೀಕಾಕಾರರ ಆಕ್ರಮಣದಿಂದ ನನ್ನ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂಬುದಾಗಿ ಹಕ್ ಹೇಳಿದ್ದಾರೆ.

ಇದು ನನ್ನ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಟೀಕಾಕಾರರ ಬಾಯಿ ಮುಚ್ಚಿಸುವುದ ಹೇಗೆಂದು ನನಗೆ ತಿಳಿದಿದೆ. ನಾನು ಅದನ್ನು ಎಲ್ಲರಿಗೂ ಉತ್ತರಿಸಬೇಕಾಗಿಲ್ಲ ನಾನು ಕೇವಲ ನನ್ನ ಆಟದತ್ತ ಗಮನ ಹರಿಸುತ್ತಿದ್ದೆ. ನನ್ನ ಸಾಮರ್ಥ್ಯಗಳ ಮೇಲೆ ನನಗೆ ನಂಬಿಕೆ ಇತ್ತು. ನನ್ನ ಪ್ರದರ್ಶನ ಮಾತನಾಡಬೇಕೆಂದು ಬಯಸಿದ್ದೆ, ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ : IPL 2023 : ಆರ್​ಸಿಬಿ ಸೋಲುತ್ತಿದ್ದಂತೆ ವಿರಾಟ್ ಕೊಹ್ಲಿಯನ್ನು ಅಪಹಾಸ್ಯ ಮಾಡಿದ ನವಿನ್​ ಉಲ್ ಹಕ್​!

ಘಟನೆಯ ನಂತರ, ನವೀನ್-ಉಲ್-ಹಕ್ ತನ್ನ ಪಂದ್ಯಗಳ ಸಮಯದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಕ್ರೀಡಾಂಗಣಗಳಲ್ಲಿ ತೀವ್ರ ಟೀಕೆಗೆ ಗುರಿಯಾದರು. ಯುವಕ ಟ್ರೋಲರ್ ಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ ಏಕೆಂದರೆ ಅವರು ತಮ್ಮ ಆಟವನ್ನು ಮಾತನಾಡಲು ಬಿಡುವುದರ ಮೇಲೆ ಹೆಚ್ಚು ಗಮನ ಹರಿಸಿದ್ದಾರೆ ಎಂದು ಹೇಳಿದರು.
“ಇದು ನನ್ನ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಟೀಕಾಕಾರರ ಬಾಯಿ ಮುಚ್ಚುವುದು ಹೇಗೆಂದು ನನಗೆ ತಿಳಿದಿದೆ. ನಾನು ಅದನ್ನು 80,000 ಜನರಿಗೆ ಹಿಂದಿರುಗಿಸಬೇಕಾಗಿಲ್ಲ, ನಾನು ಕೇವಲ ನನ್ನ ಕ್ರಿಕೆಟ್ನತ್ತ ಗಮನ ಹರಿಸುತ್ತಿದ್ದೆ, ನನ್ನ ಸಾಮರ್ಥ್ಯಗಳ ಮೇಲೆ ನನಗೆ ನಂಬಿಕೆ ಇತ್ತು ಮತ್ತು ನನ್ನ ಪ್ರದರ್ಶನವು ಮಾತನಾಡಬೇಕೆಂದು ಬಯಸಿದ್ದೆ, “ಎಂದು ಅವರು ಹೇಳಿದರು.

ಗಲಾಟೆಯನ್ನು ನಾನು ಎಂದಿಗೂ ಸಾಮಾಜಿಕ ಮಾಧ್ಯಮ ಅಥವಾ ಯಾವುದೇ ವೇದಿಕೆಯಲ್ಲಿ ಎಳೆಯಲು ಬಯಸಲಿಲ್ಲ. ಆದರೆ ವಿರೋಧಿಗಳು ಸಾಮಾಜಿಕ ಮಾಧ್ಯಮದಲ್ಲಿ ಕೆಟ್ಟದಾಗಿ ಟೀಕೆ ಮಾಡಲು ಆರಂಭಿಸಿದ ಬಳಿಕ ನನಗೆ ನನ್ನನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ನಾನು ಎಂದಿಗೂ ಯಾವುದೇ ವ್ಯಕ್ತಿಯ ಹೆಸರನ್ನು ತೆಗೆದುಕೊಳ್ಳಲಿಲ್ಲ, ನಾನು ನನ್ನ ಮಾವಿನಹಣ್ಣನ್ನು ತಿನ್ನುತ್ತಿದ್ದೆ ಎಂದು ಹಕ್ ಹೇಳಿದ್ದಾರೆ.

Exit mobile version