Site icon Vistara News

IPL 2023 : ಪಠಾಣ್​ ಸಿನಿಮಾದ ಹಾಡಿಗೆ ಶಾರುಖ್​ ಜತೆ ಹೆಜ್ಜೆ ಹಾಕಿದ ವಿರಾಟ್​ ಕೊಹ್ಲಿ

Virat Kohli stepped with Shah Rukh for the song of Pathan movie

#image_title

ಕೋಲ್ಕೊತಾ: ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಹಾಲಿ ಆವೃತ್ತಿಯ ಐಪಿಎಲ್​ನ (IPL 2023) ತನ್ನ ಎರಡನೇ ಪಂದ್ಯದಲ್ಲಿ ಕೋಲ್ಕೊತಾ ನೈಟ್​ ರೈಡರ್ಸ್ ತಂಡದ ವಿರುದ್ಧ ಹೀನಾಯ 81 ರನ್​ಗಳಿಂದ ಸೋತಿದೆ. ಈ ಪಂದ್ಯದಲ್ಲಿ ಆರ್​ಸಿಬಿಯ ಬ್ಯಾಟರ್​​ಗಳು ಹೀನಾಯ ಪ್ರದರ್ಶನ ನೀಡಿದ್ದಾರೆ. ಆರ್​ಸಿಬಿ ಪ್ರದರ್ಶನ ಅಭಿಮಾನಿಗಳ ಪಾಲಿಗೆ ಮತ್ತೆ ಕೆಟ್ಟ ಗಳಿಗೆ. ಆದರೆ ಆರ್​ಸಿಬಿಯ ಸ್ಟಾರ್ ಬ್ಯಾಟರ್​ ವಿರಾಟ್ ಕೊಹ್ಲಿಯ ಅಭಿಮಾನಿಗಳು ಖುಷಿ ಪಡುವಂಥ ಸಂದರ್ಭ ಪಂದ್ಯದ ಬಳಿಕ ನಡೆದಿತ್ತು.

ಪಂದ್ಯ ಮುಗಿದ ಬಳಿಕ ಆಟಗಾರರು ಹಾಗೂ ಫ್ರಾಂಚೈಸಿ ಮಾಲೀಕರು ಸೇರಿದಂತೆ ಎಲ್ಲರೂ ಜತೆ ಸೇರುವುದು ರೂಡಿ. ಅಂತೆಯೆ ಗುರುವಾರದ ಪಂದ್ಯದ ವೇಳೆ ಹಾಜರಿದ್ದ ಬಾಲಿವುಡ್ ಬಾದ್ ಶಾ ಶಾರುಖ್​ ಖಾನ್​ ಕೂಡ ಮೈದಾನಕ್ಕೆ ಇಳಿದಿದ್ದರು. ಈ ವೇಳೆ ಎದುರಿಗೆ ಸಿಕ್ಕ ವಿರಾಟ್ ಕೊಹ್ಲಿಯ ಜತೆ ಸೂಪರ್​ ಹಿಟ್​ ಬಾಲಿವುಡ್​ ಸಿನಿಮಾ ಪಠಾಣ್​ ಹಾಡಿಗೆ ಹೆಜ್ಜೆ ಹಾಕಿದರು. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಕೊಹ್ಲಿಯ ಅಭಿಮಾನಿಗಳು ಅದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ವಿರಾಟ್​ ಕೊಹ್ಲಿಗೆ ಡಾನ್ಸ್ ಎಂದರೆ ಸಿಕ್ಕಾಪಟ್ಟೆ ಇಷ್ಟ. ಮೈದಾನದಲ್ಲಿ ಚಾನ್ಸ್​ ಸಿಕ್ಕಾಗೆಲ್ಲ ಅವರು ಡಾನ್ಸ್ ಮಾಡುತ್ತಾರೆ. ಈ ಹಿಂದೆ ಸ್ಟೇಡಿಯಮ್​ನಲ್ಲೇ ನಾಟು ನಾಟು ಹಾಡು ಇಶ್ಕ್​ ಹಾಡಿಗೆ ಡಾನ್ಸ್ ಮಾಡಿದ್ದರು. ಇದೀಗ ಪಠಾಣ್​ ನಟ ಶಾರುಖ್​ ಖಾನ್ ಅವರ ಜತೆಯೇ ಜೂಮೇ ಜೋ ಪಠಾಣ್​ ಹಾಡಿಗೆ ಕಾಲು ಕುಣಿಸಿದ್ದಾರೆ.

ಆರ್​ಸಿಬಿಗೆ ಸೋಲಿಗೆ ಕಾರಣ ಯಾರು?

ಕೋಲ್ಕೊತಾ ವಿರುದ್ಧದ ಪಂದ್ಯದಲ್ಲಿ ಹೀನಾಐ ಪ್ರದರ್ಶನ ನೀಡಿದ ಆರ್​​ಸಿಬಿ ತಂಡ 81 ರನ್​ಗಳ ಪರಾಜಯಕ್ಕೆ ಒಳಗಾಗಿದೆ. ಈ ಸೋಲಿನ ಬಗ್ಗೆ ಭರ್ಜರಿ ವಿಮರ್ಶೆಗಳು ನಡೆಯುತ್ತಿವೆ. ಆರ್​ಸಿಬಿ ತಂಡ ನಾಯಕ ಫಾಫ್ ಡು ಪ್ಲೆಸಿಸ್​ ಕೂಡ ತಮ್ಮ ತಂಡದ ಸೋಲಿಗೆ ಕಾರಣ ಕೊಟ್ಟಿದ್ದಾರೆ

ಪಂದ್ಯದ ಮುಗಿದ ಬಳಿಕ ಮಾತನಾಡಿದ ನಾಯಕ ಫಾಫ್​ಡು ಪ್ಲೆಸಿಸ್​, ಈ ಸೋಲಿಗೆ ನಾವೆಲ್ಲರೂ ಕಾರಣ ಎಂದು ಹೇಳಿದ್ದಾರೆ. ನಿರೀಕ್ಷೆಗೆ ತಕ್ಕ ಹಾಗೆ ಆಡಲಿಲ್ಲ. ಅದಕ್ಕಿಂತಲೂ ಹೆಚ್ಚಾಗಿ ನಮ್ಮ ಯೋಜನೆಗಳೆಲ್ಲರೂ ಬುಡಮೇಲಾಯಿತು ಎಂಬುದಾಗಿ ನುಡಿದಿದ್ದಾರೆ.

ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟ್​ ಮಾಡಲು ಆಹ್ವಾನ ಪಡೆದ ಆತಿಥೇಯ ಕೆಕೆಆರ್​ ತಂಡ ನಿಗದಿತ 20 ಓವರ್​ಗಳಲ್ಲಿ ಏಳು ವಿಕೆಟ್​ ನಷ್ಟ ಮಾಡಿಕೊಂಡು 204 ರನ್​ ಬಾರಿಸಿತ್ತು. ಈ ಮೂಲಕ ಬ್ಯಾಟಿಂಗ್​ ಆಹ್ವಾನ ನೀಡಿ ಎದುರಾಳಿ ತಂಡವನ್ನು ಕಟ್ಟಿ ಹಾಕಲು ಆರ್​ಸಿಬಿ ಬೌಲರ್​ಗಳು ವಿಫಲಗೊಂಡಿದ್ದರು. ಅದೇ ರೀತಿ ಚೇಸಿಂಗ್ ಆರಂಭಿಸಿದ ಆರ್​​ಸಿಬಿ ಬಳಗ 123 ರನ್​ಗಳಿಗೆ ಆಲ್​ಔಟ್​ ಆಗಿತ್ತು.

ಡೆತ್​ ಓವರ್​ ಬೌಲಿಂಗ್​ ಕಳವಳ

ಆರಂಭದಲ್ಲಿ ನಮ್ಮ ಬೌಲರ್​ಗಳು ಹಿಡಿತ ಸಾಧಿಸಿದ್ದರು. ಎದುರಾಳಿ ತಂಡ 100 ರನ್​ ಬಾರಿಸುವ ಮೂಲಕ ಐದು ವಿಕೆಟ್​ ಕಬಳಿಸಿ ನಿಯಂತ್ರಣ ಸಾಧಿಸಿದ್ದೆವು. ಆಧರೆ, ಮಧ್ಯಮ ಕ್ರಮಾಂಕದಲ್ಲಿ ಅಡಲು ಬಂದ ಶಾರ್ದೂಲ್​ ಠಾಕೂರ್ ಅಬ್ಬರದ ಬ್ಯಾಟಿಂಗ್ ನಡೆಸಿದರು. ಅವರ ಅನಿರೀಕ್ಷಿತವಾಗಿ ಭರ್ಜರಿ ಬ್ಯಾಟಿಂಗ್​ ನಡೆಸಿದ್ದು ನಮ್ಮ ಸೋಲಿಗೆ ಕಾರಣವಾಯಿತು. ಹೀಗಾಗಿ ಎದುರಾಳಿ ತಂಡಕ್ಕೆ 20ರಿಂದ 25 ಹೆಚ್ಚುವರಿ ರನ್​ ಬಿಟ್ಟುಕೊಟ್ಟೆವು. ಡೆತ್​ ಓವರ್​ನಲ್ಲಿ ನಮ್ಮ ಬೌಲಿಂಗ್​ ಬಿಗುವಾಗಿರಲಿಲ್ಲ. ಹರ್ಷಲ್​ ಪಟೇಲ್​ ಹಾಗೂ ಮೊಹಮ್ಮದ್​ ಸಿರಾಜ್​ ಉತ್ತಮ ಬೌಲರ್​ ಆಗಿದ್ದರೂ ಎದುರಾಳಿ ತಂಡಕ್ಕೆ ನಿಯಂತ್ರಣ ಹೇರಲು ಅವರಿಗೆ ಸಾಧ್ಯವಾಗಲಿಲ್ಲ ಎಂದು ಫಾಫ್​ ಡು ಪ್ಲೆಸಿಸ್ ಹೇಳಿದ್ದಾರೆ.

ಈಡನ್​ ಗಾರ್ಡನ್ಸ್​​ ಉತ್ತಮ ವಿಕೆಟ್​ ಆಗಿತ್ತು. ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡಕ್ಕೂ ಪೂರಕವಾಗಿತ್ತು. ಆದರೆ, ನಮ್ಮ ಬ್ಯಾಟ್ಸ್​ಮನನ್​ಗಳಿಂದ ಉತ್ತಮ ಪ್ರದರ್ಶನ ಮೂಡಿ ಬರಲಿಲ್ಲ. ಈ ಸೋಲಿನಿಂದ ನಾವು ಸಾಕಷ್ಟು ಪಾಠ ಕಲಿತಿದ್ದೇವೆ. ತಪ್ಪುಗಳನ್ನು ಸರಿ ಮಾಡಿಕೊಂಡು ಮುಂದಿನ ಪಂದ್ಯದಲ್ಲಿ ಆಡಲಿದ್ದೇವೆ ಎಂದು ಫಾಫ್​ ಡು ಪ್ಲೆಸಿಸ್​ ಹೇಳಿದ್ದಾರೆ.

ಇದನ್ನೂ ಓದಿ : IPL 2023 : ತವರಿನಲ್ಲಿ ಕೆಕೆಆರ್ ಮಿಂಚು; ಆರ್​ಸಿಬಿಗೆ 81 ರನ್​ಗಳ ಹೀನಾಯ ಸೋಲು

ಕೋಲ್ಕೊತಾ ತಂಡದ ಬೌಲರ್​ಗಳು ಉತ್ತಮವಾಗಿ ಬೌಲಿಂಗ್ ಮಾಡಿದರು. ಸ್ಪಿನ್ನರ್​ಗಳಾದ ವರುಣ್​ ಚಕ್ರವರ್ತಿ ಹಾಗೂ ಸುನೀಲ್​ ನರೈನ್ ನಮ್ಮ ಮೇಲೆ ಹಿಡಿತ ಸಾಧಿಸಿಕೊಂಡರು. ಅವರ ಬೌಲಿಂಗ್​ ದಾಳಿಯನ್ನು ಎದುರಿಸಲು ನಮ್ಮ ಬ್ಯಾಟರ್​​ಗಳಿಗೆ ಸಾಧ್ಯವಾಗಲಿಲ್ಲ ಎಂದು ಹೇಳಿದರು.

ಕೋಲ್ಕೊತಾ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ಬ್ಯಾಟರ್​​ಗಳು ಬಹುತೇಕ ವೈಫಲ್ಯ ಎದುರಿಸಿದ್ದರು. ಆರಂಭದಲ್ಲಿ ವಿರಾಟ್​ ಕೊಹ್ಲಿ (21) ಹಾಗೂ ಫಾಫ್​ ಡು ಪ್ಲೆಸಿಸ್​ (23) ಸ್ವಲ್ಪ ರನ್​ ಪೇರಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್​ಗಳಿಂದ ಅಗತ್ಯಕ್ಕೆ ತಕ್ಕ ಹಾಗೆ ರನ್​ ಬರಲಿಲ್ಲ. ಕೊನೆಯಲ್ಲಿ ಡೇವಿಡ್​ ವಿಲ್ಲಿ 20 ರನ್​ ಬಾರಿಸಿ ತಂಡದ ಮೊತ್ತ 100ರ ಗಡಿ ದಾಟುವಂತೆ ನೋಡಿಕೊಂಡರು.

Exit mobile version