Site icon Vistara News

Shubhman Gill : ಸಾರಾ, ಸಾರಾ ಎಂದು ಕೂಗಿದವರಿಗೆ ಎಚ್ಚರಿಕೆ ಕೊಟ್ಟ ವಿರಾಟ್​ ಕೊಹ್ಲಿ

Virat Kohli

ಮುಂಬಯಿ: ವಿರಾಟ್ ಕೊಹ್ಲಿ ಒತ್ತಡದಲ್ಲಿ ವೇಳೆ ರನ್ ಚೇಸ್ ಮಾಡುವುದು ನೋಡುವುದೇ ಸುಂದರ. ಅವರು ಸರ್ಕಲ್​ ಒಳಗೆ ಫೀಲ್ಡಿಂಗ್ ಮಾಡುವುದನ್ನೂ ನೋಡಲೂ ಚಂದ. ಟಿವಿ ಕ್ಯಾಮೆರಾಗಳು ಅವರನ್ನೇ ಬೆನ್ನಟ್ಟುತ್ತಿರುತ್ತವೆ. . ಅವರ ಪ್ರತಿಯೊಂದು ಶಾಟ್, ಅವರು ವಿಕೆಟ್​ಗಳ ನಡುವೆ ಅವರ ಓಟ ಎಲ್ಲವೂ ಆಕರ್ಷಕ. ಮೈದಾನದಲ್ಲಿ ಅವರು ಚೆಂಡಿನ ಹಿಡಿಯಲು ಜಿಗಿಯುವ ರೀತಿ, ಭಾರತ ತಂಡ ಎದುರಾಳಿಯ ವಿಕೆಟ್ ಪಡೆದ ನಂತರ ಅವರ ಸಂಭ್ರಮಾಚರಣೆ ಎಲ್ಲವೂ ಅಭಿಮಾನಿಗಳ ಹೃದಯ ಗೆಲ್ಲುತ್ತದೆ. ಹೀಗಾಗಿ ಕೊಹ್ಲಿ ನಿಸ್ಸಂದೇಹವಾಗಿ, ಬಾಕ್ಸ್ ಆಫೀಸ್ ಕ್ರಿಕೆಟಿಗ.

ಮುಂಬಯಿಯಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿಯೂ ವಿರಾಟ್ ಕೊಹ್ಲಿ ಶೋ ಸ್ಟಾಪರ್ ಎನಿಸಿಕೊಂಡಿದ್ದರು. “ಮೈ ನೇಮ್ ಈಸ್ ಲಖನ್” ಹಾಡಿಗೆ ಕೊಹ್ಲಿ ನೃತ್ಯ ಮಾಡುತ್ತಿರುವುದನ್ನು ಪ್ರೇಕ್ಷಕರು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದರು. “ಕೊಹ್ಲಿ ಕೋ ಬೌಲಿಂಗ್ ದೋ (ಕೊಹ್ಲಿಗೆ ಚೆಂಡನ್ನು ನೀಡಿ)” ಎಂದು ಅಭಿಮಾನಿಗಳು ಕೂಗಿದ್ದೂ ನಡೆಯಿತು. ತಕ್ಷಣ ಅವರು ಅಣಕು ಬೌಲಿಂಗ್ ಕೂಡ ಮಾಡಿದ್ದರು. ಆದರೆ ಅಭಿಮಾನಿಗಳು ನಿರಂತರವಾಗಿ “ಸಾರಾ, ಸಾರಾ” ಎಂದು ಶುಭ್​ಮನ್ ಗಿಲ್ (Shubhman Gill) ಅವರನ್ನು ಕರೆದಿದ್ದ ಅಭಿಮಾನಿಗಳ ಬೇಸರಕ್ಕೆ ಕಾರಣವಾಯಿತು.

ಸ್ಲಿಪ್ ಕಾರ್ಡನ್ನಲ್ಲಿ ನಿಂತಾಗ, ಮೊದಲ ಸ್ಲಿಪ್​ನಲ್ಲಿ ಕೊಹ್ಲಿ ಮತ್ತು ಎರಡನೇ ಸ್ಥಾನದಲ್ಲಿ ಗಿಲ್ ನಿಂತಿದ್ದರು. ಪ್ರತಿ ಎಸೆತದಲ್ಲೂ ಎಸೆತದಲ್ಲೂ ಕ್ಯಾಚ್ ಪಡೆಯುವ ನಿರೀಕ್ಷೆಯಲ್ಲಿದ್ದರು ಅವರಿಬ್ಬರು. ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಮೊಹಮ್ಮದ್ ಶಮಿ ಅವರನ್ನೊಳಗೊಂಡ ಭಾರತದ ವೇಗಿಗಳು ಬೌಲಿಂಗ್​ನಲ್ಲಿ ಕ್ಯಾಚ್ ಪಡೆಯಲು ಕಾಯುತ್ತಿದ್ದರು. ಬುಮ್ರಾ ಮತ್ತು ಸಿರಾಜ್ ತಮ್ಮ ಮೊದಲ ಎಸೆತದಲ್ಲಿ ವಿಕೆಟ್ ಪಡೆದರೆ, ಶಮಿ ಎರಡು ವಿಕೆಟ್ ಓವರ್ ಪ್ರಾರಂಭಿಸಿದರು.

ಈ ಮಧ್ಯೆ ಶ್ರೀಲಂಕಾದ ಬ್ಯಾಟರ್​ಗಳಾದ ಚರಿತ್ ಅಸಲಂಕಾ ಮತ್ತು ಏಂಜೆಲೊ ಮ್ಯಾಥ್ಯೂಸ್ 6.2 ಓವರ್​ಗಳ ತನಕ ಪ್ರತಿರೋಧ ತೋರಿದರು. ಆ ಅವಧಿಯಲ್ಲಿಯೇ ಕೊಹ್ಲಿ ಮತ್ತು ಗಿಲ್ ವಾಂಖೆಡೆ ಪ್ರೇಕ್ಷಕರೊಂದಿಗೆ ಸ್ಲಿಪ್ ನಲ್ಲಿ ಅಕ್ಕಪಕ್ಕ ಇದ್ದರು. ಈ ವೇಳೆ ಪ್ರೇಕ್ಷಕರು ಗಿಲ್ ಅವರನ್ನು ‘ಸಾರಾ ಸಾರಾ’ ಘೋಷಣೆಗಳೊಂದಿಗೆ ಗೇಲಿ ಮಾಡಲು ಪ್ರಾರಂಭಿಸಿದರು. ತಕ್ಷಣ ಕೊಹ್ಲಿ ಅವರನ್ನು ಉದ್ದೇಶಿಸಿ ಆ ರೀತಿ ಹೇಳುವುದನ್ನು ನಿಲ್ಲಿಸುವಂತೆ ವಿನಂತಿಸಿದರು. ನಂತರ ಅವರು ಗಿಲ್ ಕಡೆಗೆ ತೋರಿಸಿದರು ಮತ್ತು ಗಿಲ್​ ಹೆಸರು ಹೇಳುವಂತೆ ಪ್ರೇಕ್ಷಕರನ್ನು ಕೋರಿಕೊಂಡರು ಕೊಹ್ಲಿ ಕೈ ಸನ್ನೆಗಳಿಂದ ಅವರನ್ನು ಹುರಿದುಂಬಿಸುತ್ತಿದ್ದಂತೆ “ಶುಭ್ಮನ್ ಶುಬ್ಮನ್” ಘೋಷಣೆಗಳು ಕ್ರೀಡಾಂಗಣವನ್ನು ಆವರಿಸಿದವು.

ನೆನಪಿನ ಪಂದ್ಯ

ಇದು ಭಾರತಕ್ಕೆ ಒಂದಕ್ಕಿಂತ ಹೆಚ್ಚು ರೀತಿಯಲ್ಲಿ ನೆನಪಿನಲ್ಲಿ ಉಳಿಯುವ ಪಂದ್ಯವಾಗಿತ್ತು. ನಾಯಕ ರೋಹಿತ್ ಶರ್ಮಾ ಪಂದ್ಯದ ಎರಡನೇ ಎಸೆತದಲ್ಲೇ ಔಟಾದ ನಂತರ ಗಿಲ್ ಮತ್ತು ಕೊಹ್ಲಿ ಎರಡನೇ ವಿಕೆಟ್​ಗೆ 189 ರನ್​ಗಳ ಜೊತೆಯಾಟವನ್ನು ನೀಡಿದರು. ಗಿಲ್ (92) ಮತ್ತು ಕೊಹ್ಲಿ (88) ಇಬ್ಬರೂ ತಮ್ಮ ಶತಕಗಳ ಅವಕಾಶ ಕಳೆದುಕೊಂಡರು ಆದರೆ ಅವರ ಜೊತೆಯಾಟವು ಭಾರತಕ್ಕೆ ಭದ್ರ ಅಡಿಪಾಯ ಹಾಕಿತು.

ಇದನ್ನೂ ಓದಿ: ICC World Cup 2023 : ಭಾರತ ತಂಡಕ್ಕೆ ಅಂಪೈರ್​ಗಳು ಬೇರೆಯೇ ಚೆಂಡು ಕೊಡುತ್ತಾರೆ; ಪಾಕ್ ಕ್ರಿಕೆಟಿಗನ ನಂಜಿನ ಮಾತು

ಮುಂದೆ, ಶ್ರೇಯಸ್ ಅಯ್ಯರ್ ಟೀಕಾಕಾರರ ಬಾಯಿ ಮುಚ್ಚಿಸಿದರು. 56 ಎಸೆತಗಳಲ್ಲಿ ಆರು ಸಿಕ್ಸರ್ ಗಳು ಸೇರಿದಂತೆ 82 ರನ್ ಗಳಿಸಿದರು. ಭಾರತ 8 ವಿಕೆಟ್ ನಷ್ಟಕ್ಕೆ 357 ರನ್ ಗಳಿಸಿತು. ಬುಮ್ರಾ (1/8), ಸಿರಾಜ್ (3/15) ಮತ್ತು ಶಮಿ (5/18) ಶ್ರೀಲಂಕಾವನ್ನು ಮುಗಿಸಲು ಕೇವಲ 19.4 ಓವರ್​ಗಳನ್ನು ತೆಗೆದುಕೊಂಡರು. 1996ರ ಚಾಂಪಿಯನ್ಸ್ ತಂಡ 55 ರನ್ ಗಳಿಗೆ ಆಲೌಟ್ ಆಯಿತು.

ಈ 302 ರನ್​ಗಳ ಭರ್ಜರಿ ಗೆಲುವು ಈ ವಿಶ್ವ ಕಪ್​ನಲ್ಲಿ ಭಾರತಕ್ಕೆ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿತು. ಈ ಮೂಲಕ ಸತತ 7 ಗೆಲುವುಗಳೊಂದಿಗೆ ಟೂರ್ನಿಯಲ್ಲಿ ಅಜೇಯವಾಗಿ ಉಳಿದಿರುವ ಏಕೈಕ ತಂಡ ಎನಿಸಿಕೊಂಡಿದೆ.

Exit mobile version