Site icon Vistara News

Virat Kohli : ಪಾಕ್ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿ ದಾಖಲೆಗಳ ಮೇಲೆ ದಾಖಲೆ ಬರೆದ ವಿರಾಟ್​ ಕೊಹ್ಲಿ

Virat kohli

ಕೊಲೊಂಬೊ: ವಿರಾಟ್​ ಕೊಹ್ಲಿ (Virat Kohli) ತಾವು ಮಾಸ್ಟರ್​ ಕ್ಲಾಸ್ ಆಟಗಾರ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಪಾಕಿಸ್ತಾನ ತಂಡದ ವಿರುದ್ದ (Ind vs pak) ಯಾವಾಗಲೂ ಅಬ್ಬರಿಸುವ ರನ್ ಮೆಷಿನ್ ಕೊಹ್ಲಿ ಮತ್ತೆ ಸಾಂಪ್ರದಾಯಿಕ ಎದುರಾಳಿ ತಂಡ ವಿರುದ್ಧ ಶತಕ ಬಾರಿಸಿದ್ದಾರೆ. ಕೇವಲ 94 ಎಸೆತಗಳಲ್ಲಿ 122 ರನ್ ಬಾರಿಸಿದ ಅವರು ಹಲವಾರು ದಾಖಲೆಗಳನ್ನು ಬರೆದಿದ್ದಾರೆ.

ಹಿಂದಿನ ಪಂದ್ಯದಲ್ಲಿ ಶಾಹೀನ್ ಶಾ ಅಫ್ರಿದಿಯ ಬೌಲಿಂಗ್​ಗೆ ಬೆದರಿದ್ದ ವಿರಾಟ್​ ಕೊಹ್ಲಿ ಈ ಬಾರಿ ಕ್ಯಾರೇ ಎನ್ನಲಿಲ್ಲ. ಪಾಕ್​​ ಬೌಲರ್​ಗಳನ್ನು ಬೆನ್ನಟ್ಟಿ ರನ್ ಬಾರಿಸಿದ ಅವರು ಹೊಸ ದಾಖಲೆಗಳನ್ನು ಸೃಷ್ಟಿಸಿದ್ದಾರೆ. 84 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ ಸಿಡಿಸಿದ ಅವರು ಮೂರಂಕಿ ಮೊತ್ತ ದಾಟಿದ್ದಾರೆ. ಇದು ವಿರಾಟ್​ ಕೊಹ್ಲಿಯ 47 ನೇ ಏಕದಿನ ಶತಕವಾಗಿದೆ. ಅಲ್ಲದೆ, ಕೊಹ್ಲಿ ತಮ್ಮ 77ನೇ ಅಂತರರಾಷ್ಟ್ರೀಯ ಶತಕವನ್ನೂ ಸಿಡಿಸಿದಂತಾಗಿದೆ.

ಕೊಲೊಂಬೊದಲ್ಲಿ ನಾಲ್ಕನೇ ಶತಕ

ವಿರಾಟ್​ ಕೊಹ್ಲಿಗೆ ಕೊಲೊಂಬೊ ಸ್ಟೇಡಿಯಮ್​ ಎಂದರೆ ಅಚ್ಚುಮೆಚ್ಚು. ಈ ಹಿಂದೆ ಈ ಕ್ರೀಡಾಂಗಣದಲ್ಲಿ ಸತತ 3 ಶತಕಗಳನ್ನು ಬಾರಿಸಿದ್ದ ಅವರು ಇದೀಗ ಮತ್ತೊಂದು ಶತಕ ಬಾರಿಸಿದರು. ಇದು ಅವರು ಸತತ ನಾಲ್ಕನೇ ಶಕತವಾಗಿದೆ. ಈ ಮೂಲಕ ಅವರು ಕೊಲೊಂಬೊ ಸ್ಟೇಡಿಯಮ್​ನ ರಾಜ ಎನಿಸಿಕೊಂಡಿದ್ದಾರೆ.

ಕೊಲೊಂಬೊದ ಮಳೆ ಹಾಗೂ ಮೋಡ ಕವಿದ ವಾತಾರವಣದಲ್ಲಿ ವಿರಾಟ್ ಕೊಹ್ಲಿ ತಮ್ಮ ಮಾಸ್ಟರ್ ಕ್ಲಾಸ್ ಪ್ರದರ್ಶನ ನೀಡಿದ್ದಾರೆ. ಕೊಹ್ಲಿ ತಮ್ಮ ಅರ್ಧಶತಕವನ್ನು ತಲುಪಲು ಕೇವಲ 55 ಎಸೆತಗಳನ್ನು ತೆಗೆದುಕೊಂಡರು ಮತ್ತು ನಂತರ ಸಿಕ್ಸರ್ ಮತ್ತು ಬೌಂಡರಿ ಸಿಕ್ಸರ್​ಗಳ ಮೂಲಕ ರನ್​ ಗಳಿಕೆಗೆ ವೇಗ ಕೊಟ್ಟರು.

ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಬಾರಿ 50+ ಸ್ಕೋರ್

ಅದೇ ರೀತಿ ಅಂತಾರಾಷ್ಟ್ರಿಯ ಕ್ರಿಕೆಟ್​ನಲ್ಲಿ ಅತಿ ವೇಗದಲ್ಲಿ 8000, 9000, 10000, 11000, 12000 ಮತ್ತು 13,000 ರನ್ ಗಳಿಸಿದ ಬ್ಯಾಟರ್ ಎಂಬ ಖ್ಯಾತಿಗೆ ಪಾತ್ರರಾದರು.

ಏಕದಿನ ಕ್ರಿಕೆಟ್​ನಲ್ಲಿ ಅತ್ಯಂತ ಕಡಿಮೆ ಇನ್ನಿಂಗ್ಸ್​ಗಳಲ್ಲಿ 13,000 ರನ್ ಪೂರೈಸಿದ ಆಟಗಾರರು

ಏಕದಿನ ಏಷ್ಯಾಕಪ್​ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರರು

ಇದನ್ನೂ ಓದಿ : Ind vs Pak : ರಾಹುಲ್​, ವಿರಾಟ್​ ವಿಸ್ಫೋಟಕ ಶತಕ​, 356 ರನ್ ಬಾರಿಸಿದ ಭಾರತ ತಂಡ

ವಿರಾಟ್ ಕೊಹ್ಲಿ 94 ಎಸೆತಗಳಲ್ಲಿ ಅಜೇಯ 122 ರನ್ ಸಿಡಿಸಿದ್ದಾರೆ. ಅವರು 9 ಬೌಂಡರಿ ಮತ್ತು 2 ಸಿಕ್ಸರ್​ಗಳನ್ನು ಬಾರಿಸಿ ಭಾರತಕ್ಕೆ 356 ರನ್​ಗಳ ಬೃಹತ್ ಮೊತ್ತವನ್ನು ದಾಖಲಿಸಲು ಸಹಾಯ ಮಾಡಿದರು. ಕೊನೆಯಲ್ಲಿ ಕೊಹ್ಲಿ 2 ಬೌಂಡರಿಗಳನ್ನು ಬಾರಿಸಿದರು. ನಂತರ ಭಾರತದ ಇನ್ನಿಂಗ್ಸ್ ಅನ್ನು ಬೃಹತ್ ಸಿಕ್ಸರ್ ನೊಂದಿಗೆ ಕೊನೆಗೊಳಿಸಿದರು.

ಕೊಲೊಂಬೊದಲ್ಲಿ ಭಾರತದ ನಾಲ್ಕು ಇನಿಂಗ್ಸ್​ಗಳು

Exit mobile version