ರಾಜ್ಕೋಟ್: ಸದಾ ಮೈದಾನದಲ್ಲಿ ಒಂದಲ್ಲ ಒಂದು ವಿಶೇಷ ಅವತಾರದಲ್ಲಿ ಎಲ್ಲರ ಗಮನ ಸೆಳೆಯುವ ಟೀಮ್ ಇಂಡಿಯಾದ ಸ್ಟಾರ್, ಕಿಂಗ್ ಖ್ಯಾತಿಯ ವಿರಾಟ್ ಕೊಹ್ಲಿ(Virat Kohli) ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಏಕದಿನ(India vs Australia, 3rd ODI) ಪಂದ್ಯದಲ್ಲಿ ಬ್ರೇಕ್ ಡ್ಯಾನ್ಸ್ ಮಾಡಿ ಸುದ್ದಿಯಾಗಿದ್ದಾರೆ. ಬ್ಯಾಟಿಂಗ್ ವೇಳೆ ಡ್ರಿಂಕ್ಸ್ ವಿರಾಮ ಪಡೆದ ಸ್ಟೀವನ್ ಸ್ಮಿತ್(Steven Smith) ಮತ್ತು ಮಾರ್ನಸ್ ಲಬುಶೇಬನ್(Marnus Labuschagne) ಎದುರು ಎರಡು ಸ್ಟೆಪ್ ಹಾಕಿ ಅವರನ್ನು ರಂಜಿಸಿದ ವಿಡಿಯೊ ವೈರಲ್(Viral Video) ಆಗಿದೆ.
ಏಷ್ಯಾಕಪ್ನಲ್ಲಿ ಲುಂಗಿ ಡ್ಯಾನ್ಸ್ ಮಾಡಿದ್ದ ಕೊಹ್ಲಿ
ಕೊಹ್ಲಿ ಕ್ರಿಕೆಟ್ನಲ್ಲಿ ಎಷ್ಟು ಖ್ಯಾತಿ ಪಡೆದಿದ್ದಾರೋ ಅಷ್ಟೇ ಖ್ಯಾತಿಯನ್ನು ಮೈದಾನದಲ್ಲಿ ಡ್ಯಾನ್ಸ್ ಮಾಡುವ ಮೂಲಕವೂ ಪಡೆದಿದ್ದಾರೆ. ಕೊಹ್ಲಿ ಹಲವು ಬಾರಿ ಫಿಲ್ಡಿಂಗ್ ನಡೆಸುವ ವೇಳೆ ಡ್ಯಾನ್ಸ್ ಮಾಡಿದ ವಿಡಿಯೊ ವೈರಲ್ ಆಗಿತ್ತು. ಕಳೆದ ಏಷ್ಯಾಕಪ್ನಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಬಾಲಿವುಡ್ನ ಸ್ಟಾರ್ ಹಿರಿಯ ನಟ ಶಾರೂಖ್ ಖಾನ್(Shah Rukh Khan) ಮತ್ತು ದೀಪಿಕಾ ಪಡುಕೋಣೆ ನಟನೆಯ ಚೆನ್ನೈ ಎಕ್ಸ್ ಪ್ರೆಸ್ ಸಿನೆಮಾದ ಪ್ರಸಿದ್ಧ ಲುಂಗಿ ಡ್ಯಾನ್ಸ್ ಹಾಡಿಗೆ ಹೆಜ್ಜೆ ಹಾಕಿದ್ದರು. ಇದೀಗ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿಯೂ ಅವರು ನೃತ್ಯ ಮಾಡಿ ಗಮನಸೆಳೆದಿದ್ದಾರೆ.
ವಿರಾಟ್ ಕೊಹ್ಲಿ ಅವರು ಸ್ಟೀವನ್ ಸ್ಮಿತ್ ಮತ್ತು ಮಾರ್ನಸ್ ಲಬುಶೇಬನ್ ಇನಿಂಗ್ಸ್ ವಿರಾಮವನ್ನು ಪಡೆಯುತ್ತಿದ್ದರು. ಸ್ಮಿತ್ ಬಿಸಿಲಿನ ತಾಪವನ್ನು ತಡೆಯಲಾರೆದೆ ಐಸ್ ಕ್ಯೂಬ್ ಹೆಡ್ ಮಸಾಜ್ ಮಾಡುತ್ತಿದ್ದರು. ಲಬುಶೇನ್ ಪಕ್ಕದಲ್ಲಿ ನಿಂತು ನೀರು ಮತ್ತು ಜ್ಯೂಸ್ ಕುಡಿಯಲು ಸಿದ್ಧತೆ ನಡೆಸುತ್ತಿದ್ದರು. ಇದೇ ವೇಳೆ ಅಲ್ಲಿಗೆ ಬಂದ ಕೊಹ್ಲಿ ನೃತ್ಯ ಮಾಡಿ ಸೊಂಟ ಬಳುಕಿಸಿ ಮನರಂಜನೆ ನೀಡಿದ್ದಾರೆ. ಈ ವಿಡಿಯೊ ಟ್ವಿಟರ್ನಲ್ಲಿ ವೈರಲ್ ಆಗಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 56 ರನ್ ಗಳಿಸಿದರೆ, ಸ್ಟೀವನ್ ಸ್ಮಿತ್(74) ಮತ್ತು ಮಾರ್ನಸ್ ಲಬುಶೇನ್(72) ಬಾರಿಸಿದರು.
When GOATs take a break 🕺🫶#IndiaCricketKaNayaGhar #TeamIndia #IDFCFirstBankODITrophy #ViratKohli pic.twitter.com/yQ8V0jvrj2
— JioCinema (@JioCinema) September 27, 2023
ಇದನ್ನೂ ಓದಿ IND vs AUS: ವೈಟ್ ವಾಶ್ ತಪ್ಪಿಸಿಕೊಂಡ ಆಸೀಸ್; ಅಂತಿಮ ಪಂದ್ಯದಲ್ಲಿ ಭಾರತಕ್ಕೆ ಸೋಲು
ಪಂದ್ಯ ಸೋತ ಭಾರತ
ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ(Saurashtra Cricket Association Stadium) ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸೀಸ್ ಆರಂಭದಿಂದಲೇ ಭಾರತದ ಬೌಲರ್ಗಳ ಮೇಲೆರಗಿ ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 352 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಭಾರತ ಉತ್ತಮ ಆರಂಭ ಪಡೆದು ಆ ಬಳಿಕ ನಾಟಕೀಯ ಕುಸಿತ ಕಂಡು 49.4 ಓವರ್ಗಳಲ್ಲಿ 286 ರನ್ಗೆ ಸರ್ವಪತನ ಕಂಡು ಸೋಲನುಭವಿಸಿತು. ಆದರೆ ವಿಶ್ವಕಪ್ಗೂ ಮುನ್ನ 2-1 ಅಂತರದಿಂದ ಸರಣಿ ಗೆದ್ದದ್ದು ಭಾರತದ ಸಾಧನೆಯಾಗಿದೆ.
ಕ್ಲೀನ್ ಸ್ವೀಪ್ ಯೋಜನೆ ವಿಫಲ
ಈ ಸೋಲಿನೊಂದಿಗೆ ತವರಿನಲ್ಲಿ ಆಸ್ಟ್ರೇಲಿಯಾವನ್ನು ಕ್ಲೀನ್ ಸ್ವೀಪ್ ಮಾಡುವ ಭಾರತದ ಕನಸು ಮತ್ತೊಮ್ಮೆ ಭಗ್ನವಾಯಿತು. ಅಲ್ಲದೆ ಈ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ತಂಡವೇ ಗೆದ್ದು ಬೀಗಿದ ದಾಖಲೆ ಅಜೇಯವಾಗಿ ಮುಂದುವರಿದಿದೆ. ಇದಕ್ಕೂ ಮುನ್ನ ಇಲ್ಲಿ ನಡೆದ ಮೂರೂ ಏಕದಿನ ಪಂದ್ಯಗಳಲ್ಲಿಯೂ ಮೊದಲು ಬ್ಯಾಟಿಂಗ್ ನಡೆಸಿದ್ದ ತಂಡವೇ ಗೆಲುವು ಸಾಧಿಸಿತ್ತು.