ಬೆಂಗಳೂರು: ಮೈದಾನದಲ್ಲಿ ಮತ್ತು ಮೈದಾನದ ಹೊರಗೆ ದಾಖಲೆಗಳನ್ನು ಮುರಿಯುವುದು ವಿರಾಟ್ ಕೊಹ್ಲಿಗೆ (Virat Kohli) ಸಲೀಸು. ಸುಲಭವಾಗಿ. ನಿರಂತರವಾಗಿ ಹೊಸ ದಾಖಲೆಗಳನ್ನು ಮಾಡುತ್ತಲೇ ಇರುತ್ತಾರೆ. ಇತ್ತೀಚೆಗಷ್ಟೇ ಏಕ ದಿನ ಮಾದರಿಯಲ್ಲಿ 50 ಶತಕಗಳನ್ನು ಬಾರಿಸಿ ಸಚಿನ್ ತೆಂಡೂಲ್ಕರ್ ಅವರ ದಾಖಲೆ ಮುರಿದಿದ್ದ ಅವರು ಇದೀಗ ಹೊಸ ದಾಖಲೆಯೊಂದನ್ನು ಬರೆದಿದ್ದಅರೆ. ಅವರು 25 ವರ್ಷಗಳಲ್ಲಿ ಗೂಗಲ್ ಸರ್ಚ್ ಎಂಜಿನ್ನಲ್ಲಿ ಅತಿ ಹೆಚ್ಚು ಹುಡುಕಿರುವ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
If the last 25 years have taught us anything, the next 25 will change everything. Here’s to the most searched moments of all time. #YearInSearch pic.twitter.com/MdrXC4ILtr
— Google (@Google) December 11, 2023
ಗೂಗಲ್ ತನ್ನ ವಾರ್ಷಿಕ ರೌಂಡ್-ಅಪ್ ಭಾಗವಾಗಿ ಸಾರ್ವಕಾಲಿಕವಾಗಿ ಹೆಚ್ಚು ಹುಡುಕಲಾಗಿರುವ ಕ್ಷಣಗಳ ವೀಡಿಯೊವನ್ನು ಹಂಚಿಕೊಂಡಿದೆ. ಸಚಿನ್ ತೆಂಡೂಲ್ಕರ್, ಬ್ರಿಯಾನ್ ಲಾರಾ ಮತ್ತು ಇನ್ನೂ ಅನೇಕ ದಂತಕಥೆಗಳನ್ನು ಹಿಂದಿಕ್ಕಿ ಸಾರ್ವಕಾಲಿಕ ಅತಿ ಹೆಚ್ಚು ಹುಡುಕಲಾದ ಕ್ರಿಕೆಟಿಗ ಎಂಬ ಸಾಧನೆ ಮಾಡಿದ್ದಾರೆ ಮಾಜಿ ನಾಯಕ.
ಏತನ್ಮಧ್ಯೆ, ಯುವ ಆಟಗಾರ ಶುಭ್ಮನ್ ಗಿಲ್ ಮತ್ತು ರಚಿನ್ ರವೀಂದ್ರ ಸ್ಥಳೀಯವಾಗಿ ಮತ್ತು ಜಾಗತಿಕವಾಗಿ ಟಾಪ್ ಟ್ರೆಂಡಿಂಗ್ ಕ್ರಿಕೆಟಿಗರಾಗಿ ಹೊರಹೊಮ್ಮಿದ್ದಾರೆ. ಈ ಮೂಲಕ 2023 ರ ಸಾಲಿನಲ್ಲಿ ಹೊಸ ಯುವಕರು ಪ್ರವೇಶ ಪಡೆದಿದ್ದಾರೆ.
“ಶುಭ್ಮನ್ ಗಿಲ್ ಮತ್ತು ರಚಿನ್ ರವೀಂದ್ರ ಸ್ಥಳೀಯವಾಗಿ ಮತ್ತು ಜಾಗತಿಕವಾಗಿ ಅಗ್ರ ಟ್ರೆಂಡಿಂಗ್ ಕ್ರಿಕೆಟಿಗರಾಗಿ ಹೊರಹೊಮ್ಮಿದ್ದಾರೆ” ಎಂದು ಗೂಗಲ್ ಇಯರ್ ಇನ್ ಸರ್ಚ್ 2023 ಬ್ಲಾಗ್ ಪೋಸ್ಟ್ನಲ್ಲಿ ತಿಳಿಸಲಾಗಿದೆ. ಆಟಗಾರರ ವಿಷಯದಲ್ಲಿ 2023 ರಲ್ಲಿ ಟಾಪ್ ಟ್ರೆಂಡಿಂಗ್ ಹುಡುಕಾಟದ ಪಟ್ಟಿಯಲ್ಲಿ ಕಾಣಿಸಿಕೊಂಡವರ ಪಟ್ಟಿ ಇಲ್ಲಿದೆ.
- ಶುಬ್ಮನ್ ಗಿಲ್
- ರಚಿನ್ ರವೀಂದ್ರ
- ಮೊಹಮ್ಮದ್ ಶಮಿ
- ಗ್ಲೆನ್ ಮ್ಯಾಕ್ಸ್ವೆಲ್
- ಸೂರ್ಯಕುಮಾರ್ ಯಾದವ್
- ಟ್ರಾವಿಸ್ ಹೆಡ್
ಏತನ್ಮಧ್ಯೆ, ಟೀಮ್ ಇಂಡಿಯಾ ವಿಶ್ವಾದ್ಯಂತ ಅಗ್ರ ಟ್ರೆಂಡಿಂಗ್ ಕ್ರಿಕೆಟ್ ತಂಡವಾಗಿ ಸ್ಥಾನ ಪಡೆದಿದೆ ಮತ್ತು ಜಾಗತಿಕ ಕ್ರೀಡಾ ತಂಡಗಳ ಪಟ್ಟಿಯ ಭಾಗವಾಗಿ ಸ್ಥಾನ ಪಡೆದ ಏಕೈಕ ಕ್ರಿಕೆಟ್ ತಂಡವಾಗಿದೆ. ವಿಶ್ವಕಪ್ 2023 ಮತ್ತು ಭಾರತ-ಆಸ್ಟ್ರೇಲಿಯಾ ಫೈನಲ್ಗೆ ಸಂಬಂಧಿಸಿದ ಕೆಲವು ಪ್ರಶ್ನೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದ್ದವು. ಕ್ರೀಡಾ ಘಟನೆಗಳ ವಿಷಯದಲ್ಲಿ ಟಾಪ್-4 ಟ್ರೆಂಡಿಂಗ್ ಹುಡುಕಾಟಗಳು ಈ ಕೆಳಗಿನಂತಿವೆ.
- ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)
- ಕ್ರಿಕೆಟ್ ವಿಶ್ವಕಪ್
- ಏಷ್ಯಾ ಕಪ್
- ಮಹಿಳಾ ಪ್ರೀಮಿಯರ್ ಲೀಗ್
ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಕೊಹ್ಲಿ-ಅನುಷ್ಕಾ ಜೋಡಿ
ಮುಂಬಯಿ: ಭಾರತ ಕ್ರಿಕೆಟ್ ತಂಡದ ಆಟಗಾರ ವಿರಾಟ್ ಕೊಹ್ಲಿ(Virat-Anushka) ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮ(anushka sharma) ದಂಪತಿಗೆ ಇಂದು 6ನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮ. ಈ ಜೋಡಿಗೆ ಅವರ ಅಭಿಮಾನಿಗಳು ಮತ್ತು ಮಿತ್ರರು ಶುಭ ಕೋರಿ, ನೂರಾರು ಕಾಲ ಸುಖವಾಗಿ ಬಾಳಿ ಎಂದು ಹಾರೈಸಿದ್ದಾರೆ.
ಇದನ್ನೂ ಓದಿ : Yuvaraj Singh: ಇಂದು ಯುವರಾಜ್ ಜನುಮ ದಿನ, ಅವರ ಅಮೋಘ ಆಟ ಕಾಡುವುದು ಅನುಕ್ಷಣ!
ಕೊಹ್ಲಿ ಮತ್ತು ಅನುಷ್ಕಾ 2017 ಡಿ.11 ರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಈ ಜೋಡಿಯ ವಿವಾಹ ಇಟಲಿಯ ಐತಿಹಾಸಿಕ ರೋಮ್ ನಗರದ ಟಸ್ಕನಿ ಎಂಬ ಹಳ್ಳಿಯ ಬೋರ್ಗೋ ಫಿನೊಶಿಯೆಟೊ ಎಂಬ ರೆಸಾರ್ಟ್‌ನಲ್ಲಿ ಖಾಸಗಿಯಾಗಿ ನಡೆದಿತ್ತು. 6ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಈ ಜೋಡಿ ಲಂಡನ್ನಲ್ಲಿ ಆಚರಿಸಿದ್ದಾರೆ.
ಈ ಜೋಡಿ ಅದೆಷ್ಟೋ ಜನರಿಗೆ ಸ್ಫೂರ್ತಿ
ಕೊಹ್ಲಿ ಮತ್ತು ಅನುಷ್ಕಾ ಅದೆಷ್ಟೋ ಜನರಿಗೆ ಸ್ಫೂರ್ತಿಯಾಗಿದ್ದಾರೆ. ಈ ಜೋಡಿ ಸೇವಾ (seVVA) ಎಂಬ ಹೆಸರಿನ ಎನ್ಜಿವೊ ನಡೆಸುತ್ತಿದ್ದು ಈ ಮೂಲಕ ಹಲವರಿಗೆ ಸಹಾಯವನ್ನು ಮಾಡುತ್ತಿದ್ದಾರೆ. ಕೊಹ್ಲಿಯ ಎಲ್ಲ ಏರಿಳಿತದಲ್ಲಿಯೂ ಪತ್ನಿ ಅನುಷ್ಕಾ ಬೆಂಬಲಕ್ಕೆ ನಿಂತು ಅವರಿಗೆ ಸಾದಾ ಪ್ರೋತ್ಸಾಹವನ್ನು ನೀಡುತ್ತಲೇ ಬಂದಿದ್ದಾರೆ. ಕೊಹ್ಲಿ ಕೂಡ ತನ್ನ ಬದುಕಿನಲ್ಲಿ ಅನುಷ್ಕಾ ಮುಖ್ಯ ಪಾತ್ರಹಿಸಿರುದಾಗಿ ಹಿಂದೊಮ್ಮೆ ಸಂದರ್ಶನದಲ್ಲಿ ಹೇಳಿದ್ದರು. “ಅನುಷ್ಕಾ ಅವರ ಭೇಟಿ ನನ್ನ ಜೀವನದಲ್ಲಿ ಹೊಸ ದೃಷ್ಟಿಕೋನವನ್ನು ಕೊಟ್ಟಿದೆ. ಹಾಗೇ ಎಲ್ಲವನ್ನೂ ಸ್ವೀಕರಿಸುವ ಭಾವನೆಯನ್ನು ಬೆಳೆಸಿಕೊಳ್ಳಲು ಸಹಕರಿಸಿದೆ” ಎಂದು ಕೊಹ್ಲಿ ಹೇಳಿದ್ದರು.