ನವದೆಹಲಿ: ಭಾರತ ಛಿದ್ರಗೊಂಡ ನಕ್ಷೆಯ ವಿವಾದಾತ್ಮಕ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಕೆನಡಾ ಮೂಲದ ಪಂಜಾಬಿ ಗಾಯಕಿ ಶುಭ್ ಅವರನ್ನು ಭಾರತೀಯ ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ (Virat Kohli) ಇನ್ಸ್ಟಾಗ್ರಾಮ್ನ್ಲಲಿ ಅನ್ಫಾಲೋ ಮಾಡಿದ್ದಾರೆ ಎಂದು ವರದಿಯಾಗಿದೆ. ಗಾಯಕ ಶುಭ್ ಖಲಿಸ್ತಾನಿ ಪ್ರತ್ಯೇಕತಾವಾದಿಗಳನ್ನು ಬೆಂಬಲಿಸಿದ ಆರೋಪಗಳನ್ನು ಎದುರಿಸುತ್ತಿದ್ದಾರೆ . ಅವರ ಇತ್ತೀಚಿನ ಇನ್ಸ್ಟಾಗ್ರಾಮ್ ಸ್ಟೋರಿ ಭಾರತದಲ್ಲಿ ಗಮನಾರ್ಹ ಆಕ್ರೋಶಕ್ಕೆ ಕಾರಣವಾಗಿದೆ. ಶುಭ್ ಒಂದು ಕಾಲದಲ್ಲಿ ಕೊಹ್ಲಿಯ ಅಚ್ಚುಮೆಚ್ಚಿನ ಗಾಯಕರಾಗಿದ್ದರು. 26 ವರ್ಷದ ಗಾಯಕನ ಬಗ್ಗೆ ಆಗಾಗ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ : World Cup 2023 : ಕೊರೊನಾ ಇಲ್ಲ; ಆದ್ರೂ ಪಾಕ್- ಕಿವೀಸ್ ವಿಶ್ವ ಕಪ್ ಪಂದ್ಯಕ್ಕೆ ಫ್ಯಾನ್ಸ್ಗೆ ಎಂಟ್ರಿ ಇಲ್ಲ!
ಶುಭ್ ಅವರ ವಿವಾದಾತ್ಮಕ ಪೋಸ್ಟ್ನಿಂದಾಗಿ ಕೊಹ್ಲಿ ಅಸಮಾಧಾನಗೊಂಡಿದ್ದಾರೆ ಎಂದು ತೋರುತ್ತದೆ, ಇದು ಗಾಯಕನನ್ನು ಅನ್ಫಾಲೊ ಮಾಡಲು ಕಾರಣವಾಯಿತು. ಈ ಪೋಸ್ಟ್ ಮುಂಬೈನಲ್ಲಿ ಪ್ರತಿಭಟನೆಗೆ ಕಾರಣವಾಯಿತು. ಅಲ್ಲಿ ಶುಭ್ ಸೆಪ್ಟೆಂಬರ್ 23-25 ರಿಂದ ಪ್ರದರ್ಶನ ನೀಡಲಿದ್ದಾರೆ. ಕಾರ್ಡೆಲಿಯಾ ಕ್ರೂಸ್ನ ಕ್ರೂಸ್ ಕಂಟ್ರೋಲ್ 4.0 ಕಾರ್ಯಕ್ರಮದ ಭಾಗವಾಗಿ ಶುಭ್ ಸೆಪ್ಟೆಂಬರ್ 23 ರಿಂದ 25 ರವರೆಗೆ ಮುಂಬೈನಲ್ಲಿ ಪ್ರದರ್ಶನ ನೀಡಬೇಕಿತ್ತು. ಖಲಿಸ್ತಾನಿಗಳಿಗೆ ಬೆಂಬಲ ನೀಡಿದ್ದಾರೆ ಎಂಬ ಅರೋಪ ಹೊತ್ತಿರುವ ಅವರು ಕಾರ್ಯಕ್ರಮ ನೀಡಬಾರದು ಎಂದು ಬಿಜೆವೈಎಂ (ಭಾರತೀಯ ಜನತಾ ಯುವ ಮೋರ್ಚಾ) ಒತ್ತಾಯಿಸಿದೆ.
ಏಷ್ಯಾ ಕಪ್ನಲ್ಲಿ ಕೊಹ್ಲಿ ಉತ್ತಮ ಪ್ರದರ್ಶನ
ವಿರಾಟ್ ಕೊಹ್ಲಿ ಅವರ ಇತ್ತೀಚಿನ ಪ್ರದರ್ಶನದ ಬಗ್ಗೆ ಹೇಳುವುದಾದರೆ, ಅವರು ಏಕದಿನ ಅಂತರರಾಷ್ಟ್ರೀಯ (ಒಡಿಐ) ಕ್ರಿಕೆಟ್ನಲ್ಲಿ ಉನ್ನತ ಫಾರ್ಮ್ನಲ್ಲಿದ್ದಾರೆ. ಅವರು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 122* ರನ್ಗಳ ಗಮನಾರ್ಹ ಇನ್ನಿಂಗ್ಸ್ ಆಡಿದ್ದಾರೆ. ಈ ಮೂಲಕ ಅವರು ಏಕದಿನ ಪಂದ್ಯಗಳಲ್ಲಿ ಅವರ 47 ನೇ ಶತಕವನ್ನು ದಾಖಲಿಸಿದೆ. ವಿಶೇಷವೆಂದರೆ, ಕೊಹ್ಲಿ ಮತ್ತು ಕೆಎಲ್ ರಾಹುಲ್ 200 ರನ್ಗಳ ಜತೆಯಾಟದ ಮೂಲಕ ಭಾರತವು 356 ರನ್ಗಳ ಅಸಾಧಾರಣ ಮೊತ್ತವನ್ನು ತಲುಪಲು ಸಹಾಯ ಮಾಡಿದರು.
ಗುರಿ ಬೆನ್ನಟ್ಟಿದ ಪಾಕಿಸ್ತಾನ 228 ರನ್ಗಳ ಭರ್ಜರಿ ಜಯ ದಾಖಲಿಸಿತು. ತದನಂತರ, ಭಾರತವು ಶ್ರೀಲಂಕಾವನ್ನು ಸೋಲಿಸಿ ಏಷ್ಯಾ ಕಪ್ ಫೈನಲ್ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿತು. ಆದರೆ ಬಾಂಗ್ಲಾದೇಶದ ವಿರುದ್ಧ ಕೊನೆಯ ಸೂಪರ್ ಫೋರ್ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ.
ಈ ಹಿನ್ನಡೆಯು ಏಷ್ಯಾ ಕಪ್ ಫೈನಲ್ನಲ್ಲಿ ಭಾರತದ ಪ್ರದರ್ಶನಕ್ಕೆ ಅಡ್ಡಿಯಾಗಲಿಲ್ಲ. ಮೊಹಮ್ಮದ್ ಸಿರಾಜ್ ಅವರ ಅಸಾಧಾರಣ ಬೌಲಿಂಗ್ ಪ್ರದರ್ಶನವು ಶ್ರೀಲಂಕಾವನ್ನು ಕೇವಲ 50 ರನ್ಳಿಗೆ ಆಲ್ಔಟ್ ಮಾಡಿತು. ಇದಕ್ಕೆ ಉತ್ತರವಾಗಿ ಆರಂಭಿಕ ಆಟಗಾರರಾದ ಶುಭ್ಮನ್ ಗಿಲ್ ಮತ್ತು ಇಶಾನ್ ಕಿಶನ್ ಸುಲಭವಾಗಿ ಗುರಿಯನ್ನು ಬೆನ್ನಟ್ಟುವ ಮೂಲಕ ಭಾರತಕ್ಕೆ ಎಂಟನೇ ಏಷ್ಯಾ ಕಪ್ ಪ್ರಶಸ್ತಿಯನ್ನು ತಂದುಕೊಟ್ಟರು.