Site icon Vistara News

Virat Kohli: ಗಂಭೀರ್​ ಮಾರ್ಗದರ್ಶನದಂತೆ ಅತ್ಯಂತ ಜೋಶ್​ನಿಂದ ಬ್ಯಾಟಿಂಗ್​ ಅಭ್ಯಾಸ ನಡೆಸಿದ ಕೊಹ್ಲಿ; ಫೋಟೊ ವೈರಲ್​

Virat Kohli

Virat Kohli: Virat Kohli And Gambhir Spotted In An Intense Chat As Head Coach Meets Rohit And Co

ಕೊಲಂಬೊ: ಶ್ರೀಲಂಕಾ ವಿರುದ್ಧ ಟಿ20 ಸರಣಿ ಗೆದ್ದ ಜೋಶ್​ನಲ್ಲಿರುವ ಟೀಮ್​ ಇಂಡಿಯಾ ಇದೀಗ ಏಕದಿನ ಸರಣಿಯನ್ನಾಡಲು ಸಜ್ಜಾಗಿದೆ. ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯ ಆಗಸ್ಟ್​ 2ರಂದು ನಡೆಯಲಿದೆ. ಈಗಾಗಲೇ ಲಂಕಾ ತಲುಪಿರುವ ಏಕದಿನ ತಂಡದ ಆಟಗಾರರು ಅಭ್ಯಾಸ ಆರಂಭಿಸಿದ್ದಾರೆ. ಬುಧವಾರ ವಿರಾಟ್​ ಕೊಹ್ಲಿ(Virat Kohli) ಅವರು ನೂತನ ಕೋಚ್​ ಗೌತಮ್ ಗಂಭೀರ್(Head Coach Gambhir)​ ಜತೆ ಅತ್ಯಂತ ಆತ್ಮೀಯವಾಗಿ ಚರ್ಚಿಸುತ್ತಿರುವುದು ಕಂಡು ಬಂತು. ಈ ಫೋಟೊ(photo viral) ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವಿರಾಟ್​ ಕೊಹ್ಲಿ ಅವರು ಗಂಭೀರ್(Gautam Gambhir)​ ಜತೆ ಬ್ಯಾಟಿಂಗ್​ ಮಾರ್ಗದರ್ಶನ ಮತ್ತು ಆತ್ಮೀಯವಾಗಿ ಚರ್ಚಿಸುತ್ತಿರುವ ಫೋಟೊವನ್ನು ನೆಟ್ಟಿಗರೊಬ್ಬರು ತಮ್ಮ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೊ ಕಂಡ ಅನೇಕ ನೆಟ್ಟಿಗರು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಗಂಭೀರ್​ ಕೋಚ್​ ಆಗುತ್ತಿದ್ದಂತೆಯೇ ಕೆಲ ನೆಟ್ಟಿಗರು ಗಂಭೀರ್​ ಮತ್ತು ಕೊಹ್ಲಿ ನಡುವಣ ಆನ್ ಫೀಲ್ಡ್ ಜಗಳ ಮತ್ತೆ ಶುರುವಾಗಿ ಇದು ತಂಡಕ್ಕೆ ಭಾದಿಸಲಿದೆ ಎಂದು ಹೇಳಿದ್ದರು. ನೆಟ್ಟಿಗರು ಈ ಮಾತು ಹೇಳಲು ಕೂಡ ಕಾರಣವಿತ್ತು. ಅದೇನೆಂದರೆ, ವಿರಾಟ್​ ಕೊಹ್ಲಿ ಮತ್ತು ಗಂಭೀರ್​ ಐಪಿಎಲ್​ ವೇಳೆ ಹಾವು ಮುಂಗುಸಿಯಂತೆ ಕಿತ್ತಾಡಿಕೊಳ್ಳುತ್ತಿದ್ದರು. ಕಳೆದ ವರ್ಷದ ಐಪಿಎಲ್​ ವೇಳೆ ಕೈ ಕೈ ಮಿಲಾಯಿಸುವ ಹಂತಕ್ಕೂ ಇಬರಿಬ್ಬರ ಜಗಳ ಮುಂದುವರಿದಿತ್ತು. ಕೊಹ್ಲಿಯ ವಿರುದ್ಧ ಹಲವು ಬಾರಿ ಬಹಿರಂಗವಾಗಿ ಮುನಿಸನ್ನು ಕೂಡ ಗಂಭೀರ್ ಪ್ರದರ್ಶಿಸಿದ್ದರು. ಹೀಗಿರುವಾಗ ಇವರಿಬ್ಬರ ಜಗಳ ಮತ್ತೆ ಮುಂದುವರಿದರೆ ತಂಡದ ಒಗ್ಗಟ್ಟು ಇಲ್ಲದಂತಾಗಬಹುದೆಂದು ಆತಂಕ ವ್ಯಕ್ತಪಡಿಸಿದ್ದರು. ಆದರೆ, ಇದೀಗ ಇಬರಿಬ್ಬರು ಎಲ್ಲ ಮುನಿಸು ಮರೆತು ಆತ್ಮೀಯವಾಗಿರುವಂತೆ ಕಾಣಿಸಿದೆ.

ಏಕದಿನ ಸರಣಿ ಆರಂಭಕ್ಕೂ ಮುನ್ನವೇ ಕೊಹ್ಲಿ ಅವರು ಬಿಸಿಸಿಐ ಬಳಿ ತಾನು ಗಂಭೀರ್ ಜತೆಗೆ ನಡೆಸಿದ ಕಿತ್ತಾಟಗಳನ್ನು ಮರೆತು ಅವರೊಂದಿಗೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವುದಾಗಿ, ಗಂಭೀರ್​ ಕೂಡ ತಾನು ಕೊಹ್ಲಿ ಜತೆ ಉತ್ತಮ ಬಾಂಧವ್ಯದೊಂದಿಗೆ ಇರುವುದಾಗಿ ತಿಳಿಸಿದ್ದಾಗಿ ವರದಿಯಾಗಿತ್ತು.

ಇದನ್ನೂ ಓದಿ Virat Kohli: ಬಿಸಿಸಿಐ ಅಧಿಕಾರಿಗಳನ್ನು ಸಂಪರ್ಕಿಸಿ ಕೋಚ್​ ಗಂಭೀರ್​ ವಿಚಾರದಲ್ಲಿ ಕೊಹ್ಲಿ ಕೊಟ್ಟ ಆಶ್ವಾಸನೆ ಏನು?

ದಾಖಲೆ ಬರೆಯಲು ಕೊಹ್ಲಿ ಸಜ್ಜು

ವಿರಾಟ್​ ಕೊಹ್ಲಿಗೆ(Virat Kohli) ಶ್ರೀಲಂಕಾ(India tour of Sri Lanka) ವಿರುದ್ಧದ ಏಕದಿನ ಸರಣಿಯಲ್ಲಿ ವಿಶೇಷ ದಾಖಲೆಯೊಂದನ್ನು ಬರೆಯುವ ಅವಕಾಶವಿದೆ. ಹೌದು, ಕೊಹ್ಲಿ 152 ರನ್ ಗಳಿಸಿದರೆ ಏಕದಿನ ಕ್ರಿಕೆಟ್​ನಲ್ಲಿ 14 ಸಾವಿರ ರನ್ ಪೂರೈಸಲಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ ಮೂರನೇ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಸದ್ಯ 292* ಏಕದಿನ ಪಂದ್ಯಗಳನ್ನಾಡಿರುವ ವಿರಾಟ್​ ಕೊಹ್ಲಿ 13,848* ರನ್(virat kohli odi runs)​ ಬಾರಿಸಿದ್ದಾರೆ. ಲಂಕಾ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಕೊಹ್ಲಿ 152 ರನ್​ ಬಾರಿಸಿದರೆ 14 ಸಾವಿರ ರನ್​ ಮೈಲುಗಲ್ಲು ತಲುಪಲಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 14000ಕ್ಕೂ ಹೆಚ್ಚು ರನ್ ಗಳಿಸಿದ ಸಾರ್ವಕಾಲಿದ ದಾಖಲೆ ಸಚಿನ್ ತೆಂಡೂಲ್ಕರ್ ಮತ್ತು ಕುಮಾರ ಸಂಗಕ್ಕಾರ ಹೆಸರಿನಲ್ಲಿದೆ. ಸಚಿನ್ 463 ಏಕದಿನ ಪಂದ್ಯಗಳಲ್ಲಿ 18,426 ರನ್ ಗಳಿಸಿದ್ದರೆ, ಕುಮಾರ ಸಂಗಕ್ಕಾರ 404 ಪಂದ್ಯಗಳನ್ನಾಡಿ 14,234 ರನ್ ಬಾರಿಸಿದ್ದಾರೆ. ಕೊಹ್ಲಿಗೆ ಸಂಗಕ್ಕಾರ ದಾಖಲೆ ಮುರಿಯುವ ಅವಕಾಶವಿದೆ. ಆದರೆ ಸಚಿನ್​ ದಾಖಲೆ ಮುರಿಯುವುದು ಕಷ್ಟ ಸಾಧ್ಯ.

Exit mobile version