ಪಲ್ಲೆಕೆಲೆ: ಸೂಪರ್-4 ಪ್ರವೇಶಕ್ಕೆ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಭಾರತ ತಂಡ ನೇಪಾಳ ವಿರುದ್ಧ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಆದರೆ ಭಾರತ ತಂಡದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ,(Virat Kohli) ಶ್ರೇಯಸ್ ಅಯ್ಯರ್(Shreyas Iyer) ಮತ್ತು ಇಶಾನ್ ಕಿಶನ್ ಅವರು ಸುಲಭದ ಕ್ಯಾಚ್ ಕೈಚೆಲ್ಲಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದ್ದಾರೆ.
ಶ್ರೀಲಂಕಾದ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಭಾರತೀಯ ಬೌಲರ್ಗಳು ಕ್ರಿಕೆಟ್ ಶಿಶು ಎಂದು ಕರೆಯಲ್ಪಟ್ಟ ನೇಪಾಳ ದಾಂಡಿಗರಿಂದ ಸರಿಯಾಗಿಯೇ ದಂಡಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ ಕಳಪೆ ಫಿಲ್ಡಿಂಗ್. ಒಟ್ಟು ಮೂರು ಕ್ಯಾಚ್ ಬಿಟ್ಟಿರುವ ಭಾರತೀಯ ಆಟಗಾರರು ಇದಕ್ಕೆ ತಕ್ಕ ಬೆಲೆ ತೆತ್ತಿದ್ದಾರೆ. ಅತ್ತ ನೇಪಾಳ ತಂಡ ಓವರ್ಗೆ ಸರಾಸರಿ 10 ರಂತೆ ರನ್ ಗಳಿಸಿ ಮುನ್ನುಗ್ಗುತ್ತಿದ್ದಾರೆ.
ಪಂದ್ಯ ಆರಂದ ಮೊದಲ ಓವರ್ ಶಮಿ ಎಸೆದರು. ಶಮಿ ಅವರ ಈ ಓವರ್ನ ಅಂತಿಮ ಎಸೆತವೊಂದರಲ್ಲಿ ಸ್ಪಿಪ್ನಲ್ಲಿ ನಿಂತಿದ್ದ ಶ್ರೇಯಸ್ ಅಯ್ಯರ್ ಅವರು ಕ್ಯಾಚ್ ಬಿಟ್ಟರೆ. ಆ ಬಳಿಕದ ಮೊಹಮ್ಮದ್ ಸಿರಾಜ್ ಎಸೆದ ಓವರ್ನಲ್ಲಿ ಕವರ್ ಪಾಯಿಂಟ್ನಲ್ಲಿ ವಿರಾಟ್ ಕೊಹ್ಲಿ ಅವರು ಮತ್ತೊಂದು ಕ್ಯಾಚ್ ಚೆಲ್ಲಿದರು. ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿ ಕ್ಯಾಚ್ ಬಿಟ್ಟ ಫೋಟೊವನ್ನು ಹಾಕಿ ಚೋಕ್ಲಿ ಎಂದು ಟ್ರೋಲ್ ಮಾಡಿದ್ದಾರೆ.
ಇದನ್ನೂ ಓದಿ Virat Kohli: ಧೋನಿ ದಾಖಲೆ ಮುರಿಯಲು ಸಜ್ಜಾದ ವಿರಾಟ್ ಕೊಹ್ಲಿ
ಚೋಕ್ಲಿ ಎಂದರೇನು?
ಚೋಕರ್ಸ್ ಪದಕ್ಕೆ ಉತ್ತರ ಭಾರತದಲ್ಲಿ ಇದನ್ನು ಶಾರ್ಟ್ ಆಗಿ ಚೋಕ್ಲಿ ಎಂದು ಕರೆಯುತ್ತಾರೆ. ಮಹತ್ವದ ಕಾರ್ಯ ಏನಾದರು ಮಾಡುತ್ತಿದ್ದ ವೇಳೆ ಎಡವಟ್ಟು ಮಾಡಿದರೆ ಅವರನ್ನು ಚೋಕ್ಲಿ ಎಂದು ತಮಾಷೆ ಮಾಡುತ್ತಾರೆ. ಇದೀಗ ಕೊಹ್ಲಿಯನ್ನು ಕೂಡ ಇದೇ ಕಾರಣಕ್ಕೆ ಚೋಕ್ಲಿ ಎಂದು ಕರೆದಿದ್ದಾರೆ. ಕೊಹ್ಲಿ ಅವರು ಹೆಚ್ಚಾಗಿ ಕ್ಯಾಚ್ ಬಿಡುವುದಿಲ್ಲ. ಅತ್ಯಂತ ಕಷ್ಟಕರ ಕ್ಯಾಚ್ ಕೂಡ ಹಿಡಿಯಬಲ್ಲ ಸಾಮರ್ಥ್ಯ ಅವರಿಗಿದೆ. ಇದೇ ಕಾರಣಕ್ಕೆ ಅವರನ್ನು ಸ್ಟಾರ್ ಫೀಲ್ಡರ್ ಎಂದು ಕರೆಯಲಾಗುತ್ತದೆ. ಚಿರತೆಯ ವೇಗದಲ್ಲಿ ಜಿಗಿದು ಫೀಲ್ಡಿಂಗ್ ನಡೆಸುತ್ತಾರೆ. ಆದರೆ ಸುಲಭ ಕ್ಯಾಚ್ ಕೈಚೆಲ್ಲಿದ ಕಾರಣ ಅವರನ್ನು ಟ್ರೋಲ್ ಮಾಡಲಾಗಿದೆ. ಇನ್ನು ಕೆಲವರು ಕೇವಲ ಫಿಟ್ನೆಸ್ ಹೊಂದಿದರೆ ಸಾಲದು ಅದಕ್ಕೆ ತಕ್ಕ ಪ್ರದರ್ಶನವನ್ನು ನೀಡಬೇಕು ಎಂದು ಕಾಲೆಳೆದಿದ್ದಾರೆ. ಒಟ್ಟಾರೆ ಭಾರತೀಯ ಆಟಗಾರರು 26 ಎಸೆತ ಆಗುವಷ್ಟರಲ್ಲಿ ಮೂರು ಕ್ಯಾಚ್ ಕೈಚೆಲ್ಲಿದ್ದರು.
ಇದನ್ನೂ ಓದಿ Virat Kohli: ಕ್ಲೀನ್ ಬೌಲ್ಡ್ ಆದ ಕೊಹ್ಲಿ; ಹಳೆ ಚಾಳಿ ಬಿಡದ ಪಾಕ್ ಮಾಜಿ ಆಟಗಾರ
ಧೋನಿ ದಾಖಲೆ ಮುರಿಯಲು ವಿರಾಟ್ ಸಜ್ಜು
ನೇಪಾಳ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಕೇವಲ 31 ರನ್ ಬಾರಿಸಿದರೆ ಏಷ್ಯಾಕಪ್ನಲ್ಲಿ ಅತ್ಯಧಿಕ ರನ್ ಗಳಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಲಿದ್ದಾರೆ. ಆಗ ಧೋನಿ ಅವರ ದಾಖಲೆ ಪತನಗೊಳ್ಳಲಿದೆ. ಸದ್ಯ ಧೋನಿ ಮೂರನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ(ms dhoni) ಅವರು ತಮ್ಮ ನಾಯಕತ್ವದಲ್ಲಿ 2 ಏಷ್ಯಾಕಪ್ ಗೆದ್ದಿದ್ದಾರೆ. 2010ರಲ್ಲಿ ಏಕದಿನ ಮಾದರಿಯಲ್ಲಿ ಗೆದ್ದರೆ 2016ನೇ ಸಾಲಿನನಲ್ಲಿ ಟಿ20 ಮಾದರಿಯಲ್ಲಿ ಟ್ರೋಫಿ ಗೆದ್ದಿದ್ದರು. ಈ ಟೂರ್ನಿಯಲ್ಲಿ ಧೋನಿ 19 ಪಂದ್ಯಗಳನ್ನಾಡಿ ಒಂದು ಶತಕ ಹಾಗೂ 3 ಅರ್ಧಶತಕ ನೆರವಿನಿಂದ 648 ರನ್ ಗಳಿಸಿ ಅತ್ಯಧಿಕ ರನ್ಗಳಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ.