Site icon Vistara News

Virat Kohli: ಧೋನಿಯ ಹೇರ್‌ಸ್ಟೈಲ್‌ ಕಾಪಿ ಮಾಡಿದ ವಿರಾಟ್​ ಕೊಹ್ಲಿ

Virat Kohli's new look

ಬೆಂಗಳೂರು: ಪ್ರತಿ ಬಾರಿಯ ಐಪಿಎಲ್(IPL 2024)​ ಟೂರ್ನಿಯಲ್ಲಿ ಆಟಗಾರರು ಒಂದಲ್ಲ ಒಂದು ವಿಭಿನ್ನ ಶೈಲಿಯ ಗಡ್ಡ, ಹೇರ್​ ಸ್ಟೈಲ್​ಗಳನ್ನು ಮಾಡಿ ಹೊಸ ಲುಕ್​ನಲ್ಲಿ ಕಾಣಿಸಿಕೊಳ್ಳುತ್ತಾರೆ. ಇದೀಗ 17ನೇ ಆವೃತ್ತಿಯಲ್ಲಿ ವಿರಾಟ್​ ಕೊಹ್ಲಿ ಕೂಡ ನೂತನ ಹೇರ್​ ಸ್ಟೈಲ್​ ಮೂಲಕ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಕೊಹ್ಲಿಯ ಹೊಸ ಲುಕ್​ಗೆ(Virat Kohli’s new look) ಅಭಿಮಾನಿಗಳು ಫಿದಾ ಆಗಿದ್ದಾರೆ. ಆದರೆ, ನೆಟ್ಟಿಗರು ಮಾತ್ರ ಕೊಹ್ಲಿಯ ಕಾಲೆಳೆದಿದ್ದಾರೆ. ಇದು ಧೋನಿ(ms dhoni hairstyle) ಹಾಗೂ ಇಶಾನ್​ ಕಿಶನ್​ ಅವರ ಕಾಪಿ ಎಂದು ಕಮೆಂಟ್​ ಮಾಡಿದ್ದಾರೆ.

ಧೋನಿ ಶೈಲಿ ಅನುಕರಣೆ ಮಾಡಿದ್ದ ಇಶಾನ್‌


ಐಪಿಎಲ್‌ನಲ್ಲಿ ಮಹೇಂದ್ರ ಸಿಂಗ್‌ ಧೋನಿ ಅವರು ಇದೇ ರೀತಿಯ ಶೈಲಿಯಲ್ಲಿ ಹೇರ್‌ಸ್ಟೈಲ್‌ ಮಾಡಿದ್ದರು. ಧೋನಿ ಅವರ ಶೈಲಿ ಕೊಂಚ ಸಿಂಪಲ್‌ ಆಗಿತ್ತು. ಇದೇ ರೀತಿಯಲ್ಲಿ ಕಳೆದ ವರ್ಷ ಇಶಾನ್‌ ಕಿಶನ್​ ಕೂಡ ಹೇರ್‌ಸ್ಟೈಲ್‌ ಮಾಡಿದ್ದರು. ಇಶಾನ್ದ ಅವರ ಈ ಹೊಸ ಲುಕ್​ ಕಂಡು ಸೂರ್ಯಕುಮಾರ್‌ ಯಾದವ್‌ ಅವರ ಪತ್ನಿ ದೇವಿಶಾ ಶೆಟ್ಟಿ ಇದು ಮುಳ್ಳು ಹಂದಿ ತರ ಕಾಣುತ್ತಿದೆ ಎಂದು ಕಮೆಂಟ್‌ ಮಾಡಿದ್ದರು. ಇದೀಗ ಕೊಹ್ಲಿಯ ಲುಕ್​​ ಕೂಡ ಧೋನಿ ಮತ್ತು ಇಶಾನ್ ಅವರ ಹೇರ್‌ಸ್ಟೈಲ್​ ನಂತೆ ಕಾಣಿಸಿದೆ. ಹಲವು ನೆಟ್ಟಿಗರು ಕಮೆಂಟ್‌ ಮಾಡಿದ್ದು ಇದು ಧೋನಿಯಿಂದ ಪಡೆದ ಪ್ರೇರಣೆಯಾಗಿದೆ ಎಂದಿದ್ದಾರೆ. ಧೋನಿ ಈ ಬಾರಿ ರೆಟ್ರೊ ಶೈಲಿಯ ಉದ್ದನೆಯ ಕೂದಲಿನ ಮೂಲಕ ಕಾಣಿಸಿಕೊಳ್ಳಲಿದ್ದಾರೆ. ಅವರು ಭಾರತ ತಂಡಕ್ಕೆ ಪದಾರ್ಪಣೆ ಮಾಡುವ ಸಂದರ್ಭದಲ್ಲಿ ಇದೇ ಶೈಲಿಯಲ್ಲಿ ಕಾಣಿಸಿಕೊಳಡಿದ್ದರು.

ಇದನ್ನೂ ಓದಿ IPL 2024: ರೋಹಿತ್ ಬ್ಯಾಟಿಂಗ್​​ ಅಭ್ಯಾಸದ ವಿಡಿಯೊ ಹಂಚಿಕೊಂಡ ಮುಂಬೈ ಇಂಡಿಯನ್ಸ್

ಮಾರ್ಚ್ 22ರಂದು ಲೀಗ್​ನ ಸಾಂಪ್ರದಾಯಿಕ ಬದ್ದ ಎದುರಾಳಿಗಳಾದ ಆರ್‌ಸಿಬಿ(Royal Challengers Bangalore) ಮತ್ತು ಸಿಎಸ್‌ಕೆ(rcb vs csk) ಮುಖಾಮುಖಿಯಾಗುವ ಮೂಲಕ ಟೂರ್ನಿಗೆ ಚಾಲನೆ ಸಿಗಲಿದೆ. ಈ ಪಂದ್ಯಕ್ಕೆ ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂ ಅಣಿಯಾಗಿದೆ. ಪಂದ್ಯವನ್ನು ಕಣ್ತುಂಬಿಕೊಳ್ಳಲು ಈಗಾಗಲೇ ಉಭಯ ತಂಡಗಳ ಅಭಿಮಾನಿಗಳು ದುಬಾರಿ ಬೆಲೆ ನೀಡಿ ಟಿಕೆಟ್​ ಖರೀದಿಸಿದ್ದಾರೆ. 

ವಿರಾಟ್‌ ಕೊಹ್ಲಿ ಸೋಮವಾರ ಬೆಂಗಳೂರಿನಲ್ಲಿ ಆರ್‌ಸಿಬಿ ತಂಡವನ್ನು ಸೇರಿಕೊಂಡು ಅಭ್ಯಾಸ ಆರಂಭಿಸಿದ್ದಾರೆ. ಅಕಾಯ್‌ ಜನನವಾದ ಬಳಿಕ ಭಾನುವಾರವಷ್ಟೇ ಕೊಹ್ಲಿ ಭಾರತಕ್ಕೆ ಮರಳಿದ್ದರು. ವಿರಾಟ್‌ ಕೊಹ್ಲಿ ಕಳೆದ ಐಪಿಎಲ್‌ನಲ್ಲಿ 2 ಶತಕ ಸೇರಿದಂತೆ 639 ರನ್‌ ಪೇರಿಸಿ ಭರ್ಜರಿ ಫಾರ್ಮ್ ಪ್ರದರ್ಶಿಸಿದ್ದರು. ಈ ಬಾರಿಯೂ ಶ್ರೇಷ್ಠ ಬ್ಯಾಟಿಂಗ್​ ಪ್ರದರ್ಶನ ತೋರುವ ನಿರೀಕ್ಷೆಯಲ್ಲಿದ್ದಾರೆ. ವಿರಾಟ್ ಕೊಹ್ಲಿ ಇದುವರೆಗೆ 237 ಐಪಿಎಲ್ ಮ್ಯಾಚ್​ಗಳಲ್ಲಿ ಕಣಕ್ಕಿಳಿದಿದ್ದಾರೆ. ಈ ವೇಳೆ 7 ಶತಕ ಹಾಗೂ 50 ಅರ್ಧಶತಕಗಳೊಂದಿಗೆ ಒಟ್ಟು 7263 ರನ್ ಕಲೆಹಾಕಿದ್ದಾರೆ.

ಆರ್​ಸಿಬಿ ತಂಡ


ಫಾಫ್ ಡು ಪ್ಲೆಸಿಸ್ (ನಾಯಕ), ಗ್ಲೆನ್ ಮ್ಯಾಕ್ಸ್​ವೆಲ್​, ವಿರಾಟ್ ಕೊಹ್ಲಿ, ಕ್ಯಾಮರಾನ್ ಗ್ರೀನ್, ರಜತ್ ಪಾಟಿದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯಾಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಯಾಂಕ್ ದಾಗರ್, ಮಹಿಪಾಲ್ ಲೊಮ್ರೊರ್, ಕರಣ್ ಶರ್ಮಾ, ಮನೋಜ್ ಭಾಂಡಗೆ, ವೈಶಾಕ್ ವಿಜಯ್ ಕುಮಾರ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ರೀಸ್ ಟಾಪ್ಲೆ, ಹಿಮಾಂಶು ಶರ್ಮಾ, ರಾಜನ್ ಕುಮಾರ್, ಅಲ್ಜಾರಿ ಜೋಸೆಫ್, ಯಶ್ ದಯಾಳ್, ಟಾಮ್ ಕರ್ರನ್, ಲಾಕಿ ಫರ್ಗುಸನ್, ಸ್ವಪ್ನಿಲ್ ಸಿಂಗ್.

Exit mobile version