ದುಬೈ: ಟಿ20 ಕ್ರಿಕೆಟ್ಗೆ ವಿದಾಯ(virat kohli retirement) ಹೇಳಿದ ವಿರಾಟ್ ಕೊಹ್ಲಿಗೆ(Virat Kohli) ಗೌರವ ಸೂಚಕವಾಗಿ ಅವರ ಫೋಟೊವನ್ನು ಬುರ್ಜ್ ಖಲೀಫಾ(Burj Khalifa) ಕಟ್ಟಡದ ಮೇಲೆ ಪ್ರದರ್ಶನ ಮಾಡಲಾಯಿತು. ಲೇಸರ್ ಲೈಟ್ಗಳ ಮೂಲಕ ಕೊಹ್ಲಿಯ ಫೋಟೊ ಕಂಗೊಳಿಸಿದ ವಿಡಿಯೊ ವೈರಲ್ ಆಗಿದೆ.
ವಿರಾಟ್ ಕೊಹ್ಲಿ ಅವರು ಟಿ20 ವಿಶ್ವಕಪ್ ಸ್ಮರಣೀಯ ಗೆಲುವಿನ ಬಳಿಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಫೈನಲ್ ಪಂದ್ಯದಲ್ಲಿ 76 ರನ್ ಬಾರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ವೇಳೆ ಕೊಹ್ಲಿ ತಮ್ಮ ನಿವೃತ್ತಿ ಘೋಷಿಸಿದ್ದರು. ‘ದೇವರು ದೊಡ್ಡವನು. ಭಾರತಕ್ಕಾಗಿ ಇದು ನನ್ನ ಕೊನೆಯ ಟಿ20 ಪಂದ್ಯವಾಗಿತ್ತು. ನಾವು ಆ ಕಪ್ ಎತ್ತಲು ಬಯಸಿದ್ದೆ. ಇದು ಸಾಕಾರಗೊಂಡಿದೆ. ಮುಂದಿನ ಪೀಳಿಗೆಗೆ ಟಿ20 ಆಟವನ್ನು ಮುಂದಕ್ಕೆ ಕೊಂಡೊಯ್ಯುವ ಸಮಯ ಇದು. ಅದ್ಭುತ ದಿನದಂದು ವಿದಾಯ ಹೇಳುವ ಸೌಭಾಗ್ಯ ನನಗೆ ಒದಗಿದ್ದು ನಿಜ್ಜಕ್ಕೂ ಸಂತಸ ತಂದಿದೆ” ಎಂದಿದ್ದರು. ಕೊಹ್ಲಿ ತಮ್ಮ 125 ಪಂದ್ಯಗಳ ಟಿ 20 ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ಭಾರತದ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಸ್ವರೂಪದಲ್ಲಿ ಕೊನೆಗೊಳಿಸಿದ್ದಾರೆ. 4188 ರನ್, 48.69 ಸರಾಸರಿ ಮತ್ತು ಸ್ಟ್ರೈಕ್ ರೇಟ್ 137.04 ಹೊಂದಿದ್ದಾರೆ.
829.8 ಮೀ. ಅಥವಾ 2,722 ಅಡಿ ಎತ್ತರವಿರುವ, 33 ಲಕ್ಷ ಚದರಡಿ ತಳಪಾಯ ಹೊಂದಿರುವ, 168 ಮಹಡಿಗಳುಳ್ಳ ಬುರ್ಜ್ ಖಲೀಫಾ ಈವರೆಗಿನ ಪ್ರಪಂಚದ ಅತಿ ಎತ್ತರದ ಮಾನವನಿರ್ಮಿತ ಕಟ್ಟಡ ಎಂಬ ಖ್ಯಾತಿಯನ್ನು ಹೊಂದಿದೆ. ಹೈಮೆನೋಕಾಲಿಸ್ ಎಂಬ ಮರುಭೂಮಿಯ ಹೂವಿನ ಆಕಾರವು ಈ ಕಟ್ಟಡದ ತಳವಿನ್ಯಾಸಕ್ಕೆ ಪ್ರೇರಣೆಯಾಗಿದೆ. 2004ರ ಸೆಪ್ಟಂಬರ್ 20ರಂದು ಪ್ರಾರಂಭವಾದ ಕಟ್ಟಡದ ನಿರ್ಮಾಣ ಕಾರ್ಯವು ಪೂರ್ಣಗೊಂಡದ್ದು 2010ರ ಜನವರಿ 4ರಂದು.
ಇದನ್ನೂ ಓದಿ Virat Kohli: ನನ್ನ ಅಹಂಕಾರವೇ ಬ್ಯಾಟಿಂಗ್ ವೈಫಲ್ಯಕ್ಕೆ ಕಾರಣ ಎಂದ ವಿರಾಟ್ ಕೊಹ್ಲಿ; ವಿಡಿಯೊ ವೈರಲ್
ದುಬೈ ಸರ್ಕಾರ ಈ ಹಿಂದೆ ಭಾರತದ 77ನೇ ಸ್ವಾತಂತ್ರ್ಯೋತ್ಸವದಂದು ಭಾರತದ ತ್ರಿವರ್ಣ ಧ್ವಜ, ಕೋವಿಡ್ ಸಂಕಷ್ಟದ ವೇಳೆ ಭಾರತಕ್ಕೆ ಧೈರ್ಯ ತುಂಬುವ ಸಂದೇಶವನ್ನು ಬುರ್ಜ್ ಖಲೀಫಾದಲ್ಲಿ ಪ್ರದರ್ಶಿಸಿತ್ತು. ಹಲವು ಭಾರತೀಯ ಚಲನಚಿತ್ತರಗಳ ಫೋಸ್ಟರ್ಗಳನ್ನು ಕೂಡ ಬುರ್ಜ್ ಖಲೀಫಾದಲ್ಲಿ ಪ್ರರ್ಶಿಸಲಾಗುತ್ತದೆ. ಕಟ್ಟಡದ ಹೊರ ಆವರಣದ ಒಂದು ಸುತ್ತು ಬರಬಹುದಾದ ವೀಕ್ಷಣಾ ಬಾಲ್ಕನಿ 124 ಮತ್ತು 125ನೇ ಮಹಡಿಯಲ್ಲಿವೆ. ಗಾಜಿನ ಗೋಡೆಯ ಮೂಲಕ ನಾವು ಸುತ್ತಲಿನ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು.
ಬುರ್ಜ್ ಖಲೀಫಾ ಕಟ್ಟಡದಲ್ಲಿ ಪ್ರತಿಷ್ಠಿತ ಹೊಟೇಲ್‌ಗಳು, ಪ್ರಖ್ಯಾತ ಅಪಾರ್ಟ್‌ಮೆಂಟ್‌ಗಳು, ವ್ಯಾಪಾರಿ ಕೇಂದ್ರಗಳು ಇತ್ಯಾದಿ ಇವೆ. ಈ ಕಟ್ಟಡದಲ್ಲಿ ಒಂದು ಐಷಾರಾಮಿ ಮನೆಯನ್ನು ಹೊಂದುವುದು ದೇಶ-ವಿದೇಶಗಳ ಕೋಟ್ಯಾಧಿಪತಿಗಳ ಕನಸು ಎಂದರೆ ತಪ್ಪಲ್ಲ. ಈ ಕಟ್ಟಡವನ್ನು ಪ್ರವಾಸಿಗರ ವೀಕ್ಷಣೆಗೆ ಮುಕ್ತಗೊಳಿಸಿರುವುದರಿಂದ ಪ್ರವಾಸೋದ್ಯಮಕ್ಕೂ ಒಳಿತಾಗಿದೆ. ಹಾಗೆಯೇ ದೇಶ-ವಿದೇಶಗಳ ಪ್ರವಾಸಿಗರಿಗೆ ಈ ಅದ್ಭುತ ಕಟ್ಟಡವನ್ನು ನೋಡುವ ಸ್ಮರಣೀಯ ಅನುಭವ ಲಭ್ಯವಾಗುತ್ತದೆ. ಬುರ್ಜ್ ಖಲೀಫಾದ 125ನೇ ಮಹಡಿಯವರೆಗೆ ಹೋಗಲು ಪ್ರವಾಸಿಗರಿಗೆ ಅವಕಾಶವಿದೆ. ವಾರ್ಷಿಕ ಎರಡು ಮಿಲಿಯನ್ಗೂ ಅಧಿಕ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.