Site icon Vistara News

Virat Kohli: ವಿರಾಟ್​ ಕೊಹ್ಲಿಯ ಗೈರಿಗೆ ನಿಜವಾದ ಕಾರಣವೇನು?

england test series

ಮುಂಬಯಿ: ನಿರೀಕ್ಷೆಯಂತೆ ಇಂಗ್ಲೆಂಡ್(india vs england test series)​ ವಿರುದ್ಧದ ಟೆಸ್ಟ್ ಸರಣಿಯಿಂದ ವಿರಾಟ್​ ಕೊಹ್ಲಿ(Virat Kohli) ಸಂಪೂರ್ಣವಾಗಿ ಹೊರಗುಳಿದಿದ್ದಾರೆ. ಆದರೆ ಕಾರಣ ಮಾತ್ರ ಇನ್ನೂ ನಿಗೂಢವಾಗಿದೆ. ಕೇವಲ ವೈಯಕ್ತಿಕ ಕಾರಣ ಎಂದು ಮಾತ್ರ ಕೊಹ್ಲಿ ಹೇಳಿದ್ದರೂ ಇದರ ಹಿಂದೆ ಯಾವುದೋ ಬಲವಾದ ಕಾರಣವಿದೆ. ಇದನ್ನು ಕೊಹ್ಲಿ ಹೈಡ್​ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ತಮ್ಮ ವೃತ್ತಿಜೀವನದಲ್ಲಿ ವಿರಾಟ್ ಕೊಹ್ಲಿ ತವರಿನಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಗೆ ಸಂಪೂರ್ಣವಾಗಿ ಅಲಭ್ಯರಾಗಿರುವುದು.

ಇಂಗ್ಲೆಂಡ್​(IND vs ENG) ವಿರುದ್ಧದ ಉಳಿದ ಮೂರು ಟೆಸ್ಟ್ ಪಂದ್ಯಗಳಿಗೆ ಬಿಸಿಸಿಐ ಇಂದು(ಶನಿವಾರ) ತಂಡವನ್ನು ಪ್ರಕಟಿಸಿದೆ. ಈ ವೇಳೆ ಕೊಹ್ಲಿಯ ಅಲಭ್ಯತೆಯನ್ನು ಕೂಡ ಖಚಿತಪಡಿಸಿತು. ವಿರಾಟ್ ಕೊಹ್ಲಿ ಕೈಗೊಂಡ ನಿರ್ಧಾರವನ್ನು ಬಿಸಿಸಿಐ ಗೌರವಿಸುತ್ತದೆ. ಮಾಧ್ಯಮದವರು ಮತ್ತು ಅಭಿಮಾನಿಗಳು ವಿರಾಟ್ ಕೊಹ್ಲಿಯ ಖಾಸಗಿತನಕ್ಕೆ ಧಕ್ಕೆ ನೀಡಬಾರದೆಂದು ಬಿಸಿಸಿಐ ಮನವಿ ಮಾಡಿಕೊಂಡಿದೆ.

ಟೆಸ್ಟ್ ಸರಣಿಗೆ ತಮ್ಮ ಲಭ್ಯತೆ ಬಗ್ಗೆ ವಿರಾಟ್ ಕೊಹ್ಲಿ ಶುಕ್ರವಾರವೇ ಬಿಸಿಸಿಐ ಮತ್ತು ಆಯ್ಕೆ ಸಮಿತಿಗೆ ಆನ್‌ಲೈನ್ ಮೂಲಕ ಮಾಹಿತಿ ನೀಡಿದ್ದರು ಎಂದು ವರದಿಯಾಗಿತ್ತು. ಕೆಲವೊಂದು ವೈಯುಕ್ತಿಕ ಕಾರಣಗಳಿಂದ ಅನಿವಾರ್ಯವಾಗಿ ಹೊರಗುಳಿಯುವ ಸಂದರ್ಭ ಬಂದಿದೆ ಎಂದು ಕೊಹ್ಲಿ ನಾಯಕ ರೋಹಿತ್ ಶರ್ಮಾ, ಸೆಲೆಕ್ಟರ್ಸ್‌ ಹಾಗೂ ಮ್ಯಾನೇಜ್‌ಮೆಂಟ್ ಜತೆ ಸಮಾಲೋಚನೆ ನಡೆಸಿದ್ದರು ಎಂದು ಹೇಳಲಾಗಿತ್ತು. ಇದೀಗ ಮರು ದಿನವೇ ತಂಡ ಪ್ರಕಟಗೊಂಡಿದ್ದು ಕೊಹ್ಲಿಯ ಅಲಭ್ಯತೆಯೂ ಖಚಿತಗೊಂಡಿದೆ. ಈ ಮೊದಲು ಇಂಗ್ಲೆಂಡ್ ಎದುರಿನ ಮೊದಲೆರಡು ಟೆಸ್ಟ್ ಪಂದ್ಯಕ್ಕೆ ವಿರಾಟ್ ಕೊಹ್ಲಿಗೆ ಸ್ಥಾನ ನೀಡಲಾಗಿತ್ತು. ಆದರೆ ಟೂರ್ನಿ ಆರಂಭಕ್ಕೆ ಒಂದು ದಿನ ಬಾಕಿ ಇರುವಾಗಲೇ ದಿಢೀರ್ ಎನ್ನುವಂತೆ ಅವರು ಟೆಸ್ಟ್ ಸರಣಿಯಿಂದ ಹಿಂದೆ ಸರಿದಿದ್ದರು.

ಇದನ್ನೂ ಓದಿ IND vs ENG: ಕೊನೆಗೂ ಭಾರತ ತಂಡ ಪ್ರಕಟ; ವಿರಾಟ್​ ಕೊಹ್ಲಿ ಸರಣಿಯಿಂದಲೇ ಔಟ್​

ಕಳೆದ ಶನಿವಾರ ಆನ್​ಲೈನ್ ಸಂದರ್ಶವೊಂದರಲ್ಲಿ ಮಾತನಾಡಿದ್ದ ​ಡಿ ವಿಲಿಯರ್ಸ್​, ‘ನನಗೆ ತಿಳಿದಿರುವಂತೆ ವಿರಾಟ್ ಕೊಹ್ಲಿ ಕುಟುಂಬದ ಜತೆ ಸಮಯ ಕಳೆಯಲು ಬಯಸಿದ್ದಾರೆ. ವಿರುಷ್ಕಾ ದಂಪತಿ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದಕ್ಕಿಂತ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಕುಟುಂಬಕ್ಕೆ ಸಮಯ ನೀಡುವುದು ಕೊಹ್ಲಿಗೆ ಬಿಟ್ಟ ವಿಚಾರ. ಈ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ. ಅವರ ಬದ್ಧತೆ, ಕ್ರಿಕೆಟ್ ಕುರಿತು ಪ್ರಶ್ನಿಸುವುದು ಸರಿಯಲ್ಲ. ಕೊಹ್ಲಿ ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಾರೆ” ಎಂದು ವಿಲಿಯರ್ಸ್ ಹೇಳಿದ್ದರು. ಆದರೆ ಶುಕ್ರವಾರ ಡಿ ವಿಲಿಯರ್ಸ್ ತಮ್ಮ ಹೇಳಿಕೆಯನ್ನು ಸುಳ್ಳು ಎಂದು ಹೇಳಿದ್ದರು. ವಿರಾಟ್ ಮತ್ತು ಅನುಷ್ಕಾ ಎರಡನೇ ಮಗುವಿನ ನಿರೀಕ್ಷೆಯಲ್ಲಿ ಇಲ್ಲ ಎಂದು ಹೇಳಿದ್ದರು. ಒಟ್ಟಾರೆ ಕೊಹ್ಲಿ ಸರಣಿಗೆ ಗೈರಾಗಲು ಕಾರಣ ಏನೆಂಬುವುದು ಬಹಿರಂಗವಾಗಿಲ್ಲ.

ಭಾರತ ಟೆಸ್ಟ್​ ತಂಡ

ರೋಹಿತ್ ಶರ್ಮಾ (ನಾಯಕ), ಜಸ್​ಪ್ರೀತ್​ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ಕೆಎಲ್ ರಾಹುಲ್*, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ಧ್ರುವ್ ಜುರೆಲ್ (ವಿಕೆಟ್​ ಕೀಪರ್​), ಕೆಎಸ್ ಭರತ್ (ವಿಕೆಟ್​ ಕೀಪರ್​), ಆರ್ ಅಶ್ವಿನ್, ರವೀಂದ್ರ ಜಡೇಜಾ*, ಅಕ್ಷರ್​ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಮೊಹಮ್ಮದ್. ಸಿರಾಜ್, ಮುಖೇಶ್ ಕುಮಾರ್, ಆಕಾಶ್ ದೀಪ್.

Exit mobile version