ತಿರುನವಂತಪುರ : ಶ್ರೀಲಂಕಾ ವಿರುದ್ಧದ ಏಕ ದಿನ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (VIrat Kohli) ಶತಕ ಬಾರಿಸಿದ್ದಾರೆ. ಇದು ಅವರ 74ನೇ ಅಂತಾರಾಷ್ಟ್ರೀಯ ಶತಕವಾಗಿದೆ. ಏಕ ದಿನ ಮಾದರಿಯಲ್ಲಿ 46ನೇ ಶತಕವಾಗಿದೆ. ವಿರಾಟ್ ಕೊಹ್ಲಿ ಸರಣಿಯ ಮೊದಲ ಪಂದ್ಯದಲ್ಲೂ ಶತಕ ಬಾರಿಸಿದ್ದರು. ಆ ಪಂದ್ಯ ಅಸ್ಸಾಂನ ಗುವಾಹಟಿಯಲ್ಲಿ ನಡೆದಿತ್ತು.
2023ರಲ್ಲಿ ವಿರಾಟ್ ಕೊಹ್ಲಿ ಬಾರಿಸಿದ ಎರಡನೇ ಶತಕವಾಗಿದೆ. ಅಲ್ಲದೆ, ಇತ್ತೀಚಿನ ದಿನಗಳಲ್ಲಿ ಏಕ ದಿನ ಕ್ರಿಕೆಟ್ನಲ್ಲಿ ಬಾರಿಸಿದ ಮೂರನೇ ಶತಕ. ಕಳೆದ ಬಾಂಗ್ಲಾದೇಶ ಪ್ರವಾಸದ ವೇಳೆಯಲ್ಲೂ ಅವರು ಶತಕ ಬಾರಿಸಿ 1000 ದಿನಕ್ಕೂ ಹೆಚ್ಚಿನ ಏಕ ದಿನ ಮಾದರಿಯ ಶತಕದ ಬರವನ್ನು ನೀಗಿಸಿದ್ದರು.
ವಿರಾಟ್ ಕೊಹ್ಲಿ ಈಗ ಏಕ ದಿನ ಮಾದರಿಯಲ್ಲಿ ಸಚಿನ್ ತೆಂಡೂಲ್ಕರ್ ಅವರ ದಾಖಲೆ ಸರಿಗಟ್ಟಲು ಮೂರು ಶತಕಗಳನ್ನು ಬಾರಿಸಬೇಕಾಗಿದೆ. ಸಚಿನ್ ಅವರು ಒಡಿಐನಲ್ಲಿ ಒಟ್ಟಾರೆ 49 ಶತಕ ಬಾರಿಸಿದ್ದು ಸಾಧನೆಯ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದ್ದಾರೆ.
ಪಂದ್ಯದಲ್ಲಿ ಭಾರತ ತಂಡ 44 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 313 ರನ್ ಬಾರಿಸಿದೆ. ಶುಬ್ಮನ್ ಗಿಲ್ (116) ಶತಕ ಬಾರಿಸಿದ್ದಾರೆ.
ಇದನ್ನೂ ಓದಿ | Virat Kohli | ಮಹೇಲ ಜಯವರ್ಧನೆ ವಿಶ್ವ ದಾಖಲೆ ಮುರಿದ ವಿರಾಟ್ ಕೊಹ್ಲಿ!