ಬಾರ್ಬಡಾಸ್: ವೆಸ್ಟ್ ಇಂಡೀಸ್ ವಿರುದ್ಧದ ದ್ವಿತೀಯ ಏಕದಿನ(West Indies vs India, 2nd ODI) ಪಂದ್ಯದಲ್ಲಿ ವಿರಾಟ್ ಕೊಹ್ಲಿ(Virat Kohli) ಅವರು ತೋರಿದ ನಡೆಗೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ತಾನೊಬ್ಬರ ವಿಶ್ವದ ಸ್ಟಾರ್ ಆಟಗಾರನಾಗಿದ್ದರೂ ಇದನ್ನು ಲೆಕ್ಕಿಸದೆ ಸಾಮಾನ್ಯರಂತೆ ತನ್ನ ತಂಡದ ಸಹ ಆಟಗಾರರಿಗೆ ಮೈದಾನಕ್ಕೆ ನೀರು(Virat Kohli water boy) ತಂದುಕೊಡುವ ಕೆಲಸವನ್ನು ಮಾಡಿದ್ದಾರೆ. ಕೊಹ್ಲಿ ಡ್ರಿಂಕ್ಸ್ ಬಾಯ್ ಆದ ಫೋಟೊ ಮತ್ತು ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್(viral video) ಆಗಿದೆ.
ವಿಶ್ವಕಪ್ ಟೂರ್ನಿಯ ದೃಷ್ಟಿಕೋನದಲ್ಲಿ ಈ ಸರಣಿಯಲ್ಲಿ ಭಾರತ ಕೆಲ ಪ್ರಯೋಗವನ್ನು ಮಾಡಿದೆ. ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಕ್ರಮಾಂಕದ ಬಡ್ತಿಯ ಪ್ರಯೋಗ ನಡೆಸಿದರೆ ದ್ವಿತೀಯ ಪಂದ್ಯದಲ್ಲಿ ಹಿರಿಯ ಆಟಗಾರರಾದ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಅವರಿಗೆ ವಿಶ್ರಾಂತಿ ನೀಡಿ ಅವರ ಸ್ಥಾನದಲ್ಲಿ ಯುವ ಆಟಗಾರರಿಗೆ ಅವಕಾಶ ನೀಡಲಾಯಿತು. ಈ ಮೂಲಕ ತಂಡದ ಬೆಂಚ್ ಸಾಮಾರ್ಥ್ಯ ಪರೀಕ್ಷಿಸಲಾಯಿತು.
ಪಂದ್ಯದಲ್ಲಿ ಆಡುವ ಅವಕಾಶ ಸಿಗದಿದ್ದರೂ ವಿರಾಟ್ ಕೊಹ್ಲಿ ಅವರು ವಿರಾಮದ ವೇಳೆ ಸಹ ಆಟಗಾರರಿಗೆ ಟವೆಲ್, ಬಾಳೆಹಣ್ಣು ಮತ್ತು ನೀರು ಸರಬರಾಜು ಮಾಡುವ ಮೂಲಕ ಸಹರಿಸಿದ್ದಾರೆ. ಕೊಹ್ಲಿ ನೀರಿನ ಬಾಟಲ್ ಹಿಡಿದುಕೊಂಡು ಮೈದಾನಕ್ಕೆ ಬರುತ್ತಿರುವ ಫೋಟೊವನ್ನು ಅವರ ಅಭಿಮಾನಿಗಳು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ಟಾರ್ ಆಟಗಾರ ಎಂಬುದು ಕೊಹ್ಲಿಯ ತಲೆಯಲಿಲ್ಲ. ಇದೇ ಕಾರಣಕ್ಕೆ ಅವರನ್ನು ಕ್ರಿಕೆಟ್ನ GOAT ಗ್ರೇಟೆಸ್ಟ್ ಆಲ್ ಟೈಮ್(ಸಾರ್ವಕಾಲಿಕ ಶ್ರೇಷ್ಠ ಆಟಗಾರ) ಎಂದು ಕರೆಯಲಾಗುತ್ತದೆ ಎಂದು ಅಭಿಮಾನಿಗಳು ಕೊಹ್ಲಿಯನ್ನು ಹೊಗಳಿದ್ದಾರೆ.
ಇದನ್ನೂ ಓದಿ Virat Kohli: ಕೊಹ್ಲಿ ಇಷ್ಟು ರನ್ ಬಾರಿಸಿದರೆ ಸಚಿನ್ ಸೇರಿ ಹಲವು ದಿಗ್ಗಜರ ದಾಖಲೆ ಉಡೀಸ್
ಏಷ್ಯಾ ಕಪ್ ಮತ್ತು ವಿಶ್ವಕಪ್ಗೆ ಕೆಲ ದಿನಗಳು ಮಾತ್ರ ಉಳಿದಿರುವಾಗ ತಂಡ ಸಂಯೋಜನೆಗೆ ಉತ್ತಮ ಅವಕಾಶ ಎನಿಸಿರುವ ಈ ಸರಣಿಯಲ್ಲಿ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿ ಪ್ರಯೋಗ ನಡೆಸಿದ ತಂಡದ ಕೋಚ್ ರಾಹುಲ್ ದ್ರಾವಿಡ್(Rahul Dravid) ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದು ಅವರನ್ನು ತಂಡದ ಕೋಚ್ ಹುದ್ದೆಯಿಂದ ಕೈಬಿಡಬೇಕು ಎನ್ನುವ ಮಾತುಗಳು ಕೂಡ ಕೇಳಿಬಂದಿವೆ. ಆದರೆ ದ್ರಾವಿಡ್ ಅವರು ಈ ಟೀಕೆಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.