Site icon Vistara News

Virat Kohli : ಐಪಿಎಲ್​ 2024ರ ಆರೆಂಜ್ ಕ್ಯಾಪ್ ಗೆದ್ದು ಹೊಸ ದಾಖಲೆ ಬರೆದ ವಿರಾಟ್​ ಕೊಹ್ಲಿ

Virat kohli

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್​ನ 17 ಆವೃತ್ತಿಯಾದರೂ ಪ್ರಶಸ್ತಿ ಗೆಲ್ಲದೇ ಇರಬಹುದು. ಅದರೆ, ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ (Virat Kohli) ಹೊಸ ಹೊಸ ಐಪಿಎಲ್ ದಾಖಲೆಗಳನ್ನು ಬರೆಯುತ್ತಲೇ ಇರುತ್ತಾರೆ. ಇದೀಗ ಅವರು 2024ರ ಐಪಿಎಲ್​ನಲ್ಲಿ ಅತಿ ಹೆಚ್ಚು ರನ್ ಬಾರಿಸಿ ಆರೆಂಜ್ ಕ್ಯಾಪ್ ಗೆದ್ದಿದ್ದಾರೆ. ಈ ಮೂಲಕ ಟೂರ್ನಿಯ ಇತಿಹಾಸದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಆರೆಂಜ್ ಕ್ಯಾಪ್ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೊಹ್ಲಿ ಈ ಬಾರಿ 15 ಪಂದ್ಯಗಳಲ್ಲಿ 741 ರನ್ ಗಳಿಸುವ ಮೂಲಕ ಈ ಋತುವನ್ನು ಕೊನೆಗೊಳಿಸಿದ್ದಾರೆ.

ಆಸೀಸ್ ಎಡಗೈ ಬ್ಯಾಟರ್​ ಡೇವಿಡ್ ವಾರ್ನರ್ (3) ಮತ್ತು ವಿಂಡೀಶ್ ದೈತ್ಯ ಕ್ರಿಸ್ ಗೇಲ್ (2) ಬಳಿಕ ಐಪಿಎಲ್ ಟೂರ್ನಿಯಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಆರೆಂಜ್ ಕ್ಯಾಪ್ ಗೆದ್ದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಯನ್ನು ವಿರಾಟ್ ಕೊಹ್ಲಿ ತಮ್ಮದಾಗಿಸಿಕೊಂಡಿದ್ದಾರೆ. ಕೊಹ್ಲಿ ಬ್ಯಾಟ್ನೊಂದಿಗೆ ಅದ್ಭುತ ಫಾರ್ಮ್​ನಲ್ಲಿದ್ದಾರೆ. ಈ ಋತುವಿನಲ್ಲಿ ಒಂದು ಶತಕ ಮತ್ತು ಐದು ಅರ್ಧಶತಕಗಳನ್ನು ಗಳಿಸಿದ್ದಾರೆ. 5 ಬಾರಿಯ ಚಾಂಪಿಯನ್ ಸಿಎಸ್​ಕೆ ತಂಡವನ್ನು ಮಣಿಸಿದ ಆರ್​ಸಿಬಿ ಪ್ಲೇ ಆಫ್ ಹಂತವನ್ನು ತಲುಪಿತು. ರಾಜಸ್ಥಾನ್ ವಿರುದ್ಧ ಎಲಿಮಿನೇಟರ್​ನಲ್ಲಿ ಸೋತು ನಿರಾಸೆ ಎದುರಿಸಿತು.

ವಿರಾಟ್ ಕೊಹ್ಲಿ 2016 ರಲ್ಲಿ ಮೊದಲ ಬಾರಿಗೆ 973 ರನ್​ಗಳೊಂದಿಗೆ ಆರೆಂಜ್ ಕ್ಯಾಪ್ ಗೆದ್ದಿದ್ದರು, ಇದು ಇನ್ನೂ ಐಪಿಎಲ್ ದಾಖಲೆಯಾಗಿ ಉಳಿದಿದೆ. ಸಿಎಸ್​ಕೆಯ ಋತುರಾಜ್ ಗಾಯಕ್ವಾಡ್ 583 ರನ್​ಗಳೊಂದಿಗೆ ಹಾಲಿ ಆವೃತ್ತಿಯಲ್ಲಿ ಎರಡನೇ ಸ್ಥಾನ ಪಡೆದರೆ, ರಾಜಸ್ಥಾನದ ರಿಯಾನ್ ಪರಾಗ್ 16 ಪಂದ್ಯಗಳಲ್ಲಿ 573 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.

2024ರ ಬ್ಯಾಟಿಂಗ್ ಸಾಧಕರು

ಆರೆಂಜ್ ಕ್ಯಾಪ್ ವಿಜೇತರ ಪಟ್ಟಿ

ವರ್ಷ- 2008
ಆಟಗಾರ: ಶಾನ್ ಮಾರ್ಷ್ (ಕಿಂಗ್ಸ್ ಇಲೆವೆನ್ ಪಂಜಾಬ್)
ಪಂದ್ಯಗಳು: 11
ರನ್: 616

ವರ್ಷ-2009
ಆಟಗಾರ: ಮ್ಯಾಥ್ಯೂ ಹೇಡನ್ (ಸಿಎಸ್ಕೆ)
ಪಂದ್ಯಗಳು: 12
ರನ್: 572

ವರ್ಷ- 2010
ಆಟಗಾರ: ಸಚಿನ್ ತೆಂಡೂಲ್ಕರ್ (ಎಂಐ)
ಪಂದ್ಯಗಳು: 15
ರನ್: 618

ವರ್ಷ-2011
ಆಟಗಾರ: ಕ್ರಿಸ್ ಗೇಲ್ (ಆರ್​​ಸಿಬಿ)
ಪಂದ್ಯಗಳು: 12
ರನ್: 608

ವರ್ಷ-2012
ಆಟಗಾರ: ಕ್ರಿಸ್ ಗೇಲ್ (ಆರ್​​ಸಿಬ)
ಪಂದ್ಯಗಳು: 15
ರನ್: 733

ವರ್ಷ-2013
ಆಟಗಾರ: ಮೈಕಲ್ ಹಸ್ಸಿ (ಸಿಎಸ್​ಕೆ)
ಪಂದ್ಯಗಳು: 16
ರನ್: 733

ವರ್ಷ-2014
ಆಟಗಾರ: ರಾಬಿನ್ ಉತ್ತಪ್ಪ (ಕೆಕೆಆರ್)
ಪಂದ್ಯಗಳು: 16
ರನ್: 660

ವರ್ಷ- 2015
ಆಟಗಾರ: ಡೇವಿಡ್ ವಾರ್ನರ್ (ಎಸ್ಆರ್ಎಚ್)
ಪಂದ್ಯಗಳು: 14
ರನ್: 562


ವರ್ಷ- 2016
ಆಟಗಾರ: ವಿರಾಟ್ ಕೊಹ್ಲಿ (ಆರ್​ಸಿಬಿ)
ಪಂದ್ಯಗಳು: 16
ರನ್: 973

ವರ್ಷ- 2017
ಆಟಗಾರ: ಡೇವಿಡ್ ವಾರ್ನರ್ (ಎಸ್ಆರ್ಎಚ್)
ಪಂದ್ಯಗಳು: 14
ರನ್: 641

ವರ್ಷ-2018
ಆಟಗಾರ: ಕೇನ್ ವಿಲಿಯಮ್ಸನ್ (ಎಸ್ಆರ್​ಎಚ್​​)
ಪಂದ್ಯಗಳು: 17
ರನ್: 735

ವರ್ಷ- 2019
ಆಟಗಾರ: ಡೇವಿಡ್ ವಾರ್ನರ್ (ಎಸ್ಆರ್ಎಚ್)
ಪಂದ್ಯಗಳು: 12
ರನ್: 692

ವರ್ಷ- 2020
ಆಟಗಾರ: ಕೆಎಲ್ ರಾಹುಲ್ (ಕಿಂಗ್ಸ್ ಇಲೆವೆನ್ ಪಂಜಾಬ್)
ಪಂದ್ಯಗಳು: 14
ರನ್: 670

ವರ್ಷ- 2021
ಆಟಗಾರ: ಋತುರಾಜ್ ಗಾಯಕ್ವಾಡ್ (ಸಿಎಸ್​ಕೆ)
ಪಂದ್ಯಗಳು: 16
ರನ್: 635

ವರ್ಷ- 2022
ಆಟಗಾರ: ಜೋಸ್ ಬಟ್ಲರ್ (ಆರ್​ಆರ್​)
ಪಂದ್ಯಗಳು: 17
ರನ್: 863

ವರ್ಷ-2023
ಆಟಗಾರ: ಶುಬ್ಮನ್ ಗಿಲ್ (ಗುಜರಾತ್ ಟೈಟಾನ್ಸ್​)
ಪಂದ್ಯಗಳು: 17
ರನ್: 890

ವರ್ಷ-2024
ಆಟಗಾರ: ವಿರಾಟ್ ಕೊಹ್ಲಿ (ಆರ್​ಸಿಬಿ)
ಪಂದ್ಯಗಳು: 17
ರನ್: 741

ಇದನ್ನೂ ಓದಿ: IPL 2024 Final : 3ನೇ ಬಾರಿ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿದ ಕೆಕೆಆರ್​​; ಹೈದರಾಬಾದ್​ಗೆ ನಿರಾಸೆ

ಐಪಿಎಲ್ 2024 ರಲ್ಲಿ ವಿರಾಟ್ ಕೊಹ್ಲಿ ತಮ್ಮ ಸ್ಟ್ರೈಕ್ ರೇಟ್ ಕುರಿತ ಟೀಕಾಕಾರರನ್ನು ಮೌನಗೊಳಿಸಿದ್ದರು. ಟಿ 20 ವಿಶ್ವಕಪ್​ಗೆ ಮುಂಚಿತವಾಗಿ ಅದ್ಭುತ ಬ್ಯಾಟಿಂಗ್ ಮಾಡಿದರು. ಅವರು 154.69 ಸರಾಸರಿಯಲ್ಲಿ ರನ್ ಗಳಿಸಿದರು. ಜೂನ್ 1 ರಿಂದ ಯುಎಸ್ಎ ಮತ್ತು ವೆಸ್ಟ್ ಇಂಡೀಸ್​ನಲ್ಲಿ ಪ್ರಾರಂಭವಾಗುವ ಟಿ 20 ವಿಶ್ವಕಪ್​ನಲ್ಲಿ ವಿರಾಟ್ ಕೊಹ್ಲಿ ತಮ್ಮ ಐಪಿಎಲ್ ಫಾರ್ಮ್ ಅನ್ನು ಮುಂದುವರಿಸಬೇಕೆಂದು ಭಾರತ ಬಯಸುತ್ತದೆ

Exit mobile version