ನವದೆಹಲಿ: ಇಂಗ್ಲೆಂಡ್ ವಿರುದ್ಧದ (IND vs ENG) ಉಳಿದ ಮೂರು ಟೆಸ್ಟ್ ಪಂದ್ಯಗಳಿಗೆ ವಿರಾಟ್ ಕೊಹ್ಲಿ (Virat Kohli) ಲಭ್ಯತೆಯ ಬಗ್ಗೆ ಎಲ್ಲಾ ಅನಿಶ್ಚಿತತೆಗೆ ಬಿಸಿಸಿಐ (BCCI) ಕೊನೆಗೂ ತೆರೆ ಎಳೆದಿದೆ. ಊಹಾಪೋಹಗಳಂತೆ, ವೈಯಕ್ತಿಕ ಕಾರಣಗಳಿಂದಾಗಿ ಕೊಹ್ಲಿ ತಂಡದಿಂದ ಹೊರಗುಳಿದಿದ್ದಾರೆ ಮತ್ತು ಬಿಸಿಸಿಐ ಅವರ ನಿರ್ಧಾರವನ್ನು ಗೌರವಿಸುವುದಾಗಿ ಹೇಳಿದೆ. ಇದರ ಪರಿಣಾಮವಾಗಿ, ಭಾರತದ ಮಾಜಿ ನಾಯಕ ತಮ್ಮ 12 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಸಂಪೂರ್ಣ ಟೆಸ್ಟ್ ಸರಣಿಯನ್ನು ಕಳೆದುಕೊಳ್ಳುತ್ತಿರುವುದು ಇದೇ ಮೊದಲು. ಕೊಹ್ಲಿ ಜೂನ್ 2011 ರಲ್ಲಿ ಕಿಂಗ್ಸ್ಟನ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದರು.
🚨 NEWS 🚨#TeamIndia's Squad for final three Tests against England announced.
— BCCI (@BCCI) February 10, 2024
Details 🔽 #INDvENG | @IDFCFIRSTBankhttps://t.co/JPXnyD4WBK
2012ರ ಜನವರಿಯಲ್ಲಿ ಅಡಿಲೇಡ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಶತಕ ಬಾರಿಸಿದ 35ರ ಹರೆಯದ ಕೊಹ್ಲಿ , ಆಧುನಿಕ ಯುಗದಲ್ಲಿ ಈ ಸಾಧನೆ ಮಾಡಿದ ಶ್ರೇಷ್ಠ ಬ್ಯಾಟರ್ಗಳಲ್ಲಿ ಒಬ್ಬರಾಗಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ ಆಡಿದ 113 ಪಂದ್ಯಗಳಲ್ಲಿ ಕೊಹ್ಲಿ 49.15 ಸರಾಸರಿಯಲ್ಲಿ 8848 ರನ್ ಗಳಿಸಿದ್ದಾರೆ.
ಕೊಹ್ಲಿ ಟೆಸ್ಟ್ ಕ್ರಿಕೆಟ್ ಬಗ್ಗೆ ಅಪಾರ ಪ್ರೀತಿ ಹೊಂದಿದ್ದಾರೆ. ಈ ಮಾದರಿಯ ಕ್ರಿಕೆಟ್ ಉಳಿಸಲು ಪದೇ ಪದೇ ಒತ್ತಾಯ ಮಾಡಿದ್ದಾರೆ. ಪ್ರತಿ ಬಾರಿಯೂ ದೀರ್ಘ ಸ್ವರೂಪದ ಕ್ರಿಕೆಟ್ನಲ್ಲಿ ಆಡುವ ಬದ್ಧತೆ ತೋರಿಸಿದ್ದಾರೆ. ಅವರ ನಾಯಕತ್ವದಲ್ಲಿ, ಭಾರತವು ಕ್ರಿಕೆಟ್ನ ಅತ್ಯಂತ ಹಳೆಯ ಸ್ವರೂಪದಲ್ಲಿ ನಾಗಾಲೋಟ ಹೊಂದಿತ್ತು. ಅವರು 68 ಪಂದ್ಯಗಳಿಂದ 40 ಗೆಲುವುಗಳನ್ನು ಸಾಧಿಸಿದ್ದರು. ಗೆಲುವಿನ ಶೇಕಡಾವಾರು 58.82%.ರಷ್ಟಿದೆ.
ಮೂರು ಪಂದ್ಯಗಳಿಂದ ಹೊರಗುಳಿದಿದ್ದರು
ಕೊಹ್ಲಿ 2020-21ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದರು. 2018-19ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೆಸ್ಟ್ ಸರಣಿ ಗೆದ್ದ ಮೊದಲ ಭಾರತೀಯ ನಾಯಕ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದರು. ದೆಹಲಿ ಮೂಲದ ಬ್ಯಾಟರ್ ವೈಯಕ್ತಿಕ ಕಾರಣಗಳಿಂದಾಗಿ ತಮ್ಮ ನೆಚ್ಚಿನ ಸ್ವರೂಪವನ್ನು ಕಳೆದುಕೊಂಡಿರುವುದು ಎರಡು ಸಂದರ್ಭಗಳಲ್ಲಿ ಮಾತ್ರ. ಕೊಹ್ಲಿ ಈ ಹಿಂದೆ 2020-21ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಕೊನೆಯ ಮೂರು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದರು. ಏಕೆಂದರೆ ಅವರು ಅವರ ಪುತ್ರಿ ವಾಮಿಕಾ ಈ ವೇಳೆ ಜನಿಸಿದ್ದಳು.
ಇದನ್ನೂ ಓದಿ : Rohit Sharma : ಮುಂಬೈ ಕೋಚ್ ವಿರುದ್ಧ ತಿರುಗಿ ಬಿದ್ರಾ ರೋಹಿತ್ ಶರ್ಮಾ?
ಈಗ ಸ್ಟಾರ್ ಕ್ರಿಕೆಟಿಗ ಮತ್ತೊಮ್ಮೆ ಕುಟುಂಬ ತುರ್ತುಸ್ಥಿತಿಯಿಂದಾಗಿ ಸರಣಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ವರದಿಗಳ ಪ್ರಕಾರ, 35 ವರ್ಷದ ಅವರು ಭಾರತದಿಂದ ಹೊರಗಿದ್ದಾರೆ. ಅವರ ತುರ್ತು ಪರಿಸ್ಥಿತಿಯ ವಿವರಗಳು ಇನ್ನೂ ತಿಳಿದಿಲ್ಲ. ಏತನ್ಮಧ್ಯೆ, ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿ 1-1 ರಿಂದ ಸಮಬಲಗೊಂಡಿದೆ. ಮೂರನೇ ಪಂದ್ಯ ಫೆಬ್ರವರಿ 15ರಂದು ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಪ್ರಾರಂಭವಾಗಲಿದೆ.