Site icon Vistara News

Virat kohli | ಏರುತ್ತಲೇ ಇದೆ ಕೊಹ್ಲಿಯ ಸೋಶಿಯಲ್‌ ಮೀಡಿಯಾ ಅಭಿಮಾನಿಗಳ ಸಂಖ್ಯೆ, ಈಗ ಎಷ್ಟಾಗಿದೆ?

virata kohli

ಮುಂಬಯಿ : ಸೂಪರ್‌ ಸ್ಟಾರ್‌ ವಿರಾಟ್‌ ಕೊಹ್ಲಿ ಫಾರ್ಮ್‌ನಲ್ಲಿ ಇರಲಿ, ಇಲ್ಲದೇ ಇರಲಿ. ಅವರ ಅಭಿಮಾನಿಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇರುತ್ತದೆ. ಏಷ್ಯಾ ಕಪ್‌ನಲ್ಲಿ ಮೊದಲ ಟಿ೨೦ ಅಂತಾರಾಷ್ಟ್ರೀಯ ಶತಕ ಬಾರಿಸುವ ಮೂಲಕ ಕಿಂಗ್ ಕೊಹ್ಲಿ ಮತ್ತೆ ಅಬ್ಬರಿಸಲು ಆರಂಭಿಸಿದ್ದು, ಮತ್ತಷ್ಟು ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ಫಾಲೊ ಮಾಡಲು ಆರಂಭಿಸಿದ್ದಾರೆ. ಹೀಗಾಗಿ ಅವರ ಟ್ವೀಟ್‌ ಫಾಲೋವರ್‌ಗಳ ಸಂಖ್ಯೆ ೫ ಕೋಟಿ ದಾಟಿದೆ (೫೦ ಮಿಲಿಯನ್‌).

ವಿರಾಟ್‌ ಕೊಹ್ಲಿ ಏಷ್ಯಾ ಕಪ್‌ನಲ್ಲಿ ಎರಡು ಅರ್ಧ ಶತಕ ಹಾಗೂ ಒಂದು ಶತಕ ಬಾರಿಸಿದ್ದಾರೆ. ಅಲ್ಲದೆ, ಟೂರ್ನಿಯಲ್ಲಿ ಎರಡನೇ ಗರಿಷ್ಠ ರನ್‌ ಗಳಿಕೆದಾರ ಎನಿಸಿಕೊಂಡಿದ್ದಾರೆ. ಇದೇ ವೇಳೆ ಅವರು ೭೧ನೇ ಅರ್ಧ ಶತಕ ಬಾರಿಸುವ ಮೂಲಕ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್‌ ಅವರನ್ನು ಸರಿಗಟ್ಟಿದ್ದರು. ಈ ರೀತಿಯಾಗಿ ಕ್ರಿಕೆಟ್‌ ಮೈದಾನದಲ್ಲಿ ಒಂದರ ಹಿಂದೆ ಒಂದರಂತೆ ದಾಖಲೆಗಳನ್ನು ಮಾಡುತ್ತಿರುವ ವಿರಾಟ್‌ ಕೊಹ್ಲಿ ಇದೀಗ ಟ್ವಿಟರ್‌ನಲ್ಲಿ ಹೆಚ್ಚು ಫಾಲೋವರ್‌ಗಳನ್ನು ಹೊಂದುವ ಮೂಲಕವೂ ದಾಖಲೆ ಮಾಡಿದ್ದಾರೆ.

oಕ್ರಿಕೆಟ್‌ ಕ್ಷೇತ್ರದಲ್ಲಿ ೫ ಕೋಟಿ ಅಭಿಮಾನಿಗಳನ್ನು ಹೊಂದಿರುವ ಆಟಗಾರ ವಿರಾಟ್‌ ಕೊಹ್ಲಿ ಒಬ್ಬರೇ. ಈ ಮೂಲಕವೂ ಅವರು ಉಳಿದೆಲ್ಲ ಆಟಗಾರರನ್ನು ಹಿಂದಿಕ್ಕಿದ್ದಾರೆ. ಇನ್‌ಸ್ಟಾಗ್ರಾಮ್‌ ಮೂಲಕವೂ ವಿರಾಟ್ ಕೊಹ್ಲಿ ೨೧ ಕೋಟಿ (೨೧೧ ಮಿಲಿಯನ್‌) ಫಾಲೋವರ್‌ಗಳನ್ನು ಹೊಂದಿದ್ದಾರೆ. ಪ್ರಾಯೋಜಕತ್ವದ ಇನ್‌ಸ್ಟಾಗ್ರಾಮ್‌ ಪೋಸ್ಟ್‌ ಒಂದಕ್ಕೆ ಅವರು ೬ ಕೋಟಿ ರೂಪಾಯಿಗಳನ್ನು ಪಡೆದುಕೊಳ್ಳುತ್ತಾರೆ.

ಇದನ್ನೂ ಓದಿ | Virat kohli | ಶತಕ ಬಾರಿಸಿದರೂ ವಿರಾಟ್‌ ಕೊಹ್ಲಿಯ ಟೀಕೆ ನಿಲ್ಲಿಸಲಿಲ್ಲ ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌!

Exit mobile version