Site icon Vistara News

Akaay: ಕೊಹ್ಲಿಗೆ ಮಗ ಹುಟ್ಟಿದ್ದಕ್ಕೆ ಪಾಕಿಸ್ತಾನದಲ್ಲಿ ಸಿಹಿ ಹಂಚಿ ಸಂಭ್ರಮ; ವಿಡಿಯೊ ವೈರಲ್​

Virat Kohli's Pakistan Fans

ಕರಾಚಿ: ಟೀಮ್​ ಇಂಡಿಯಾದ ಸ್ಟಾರ್​ ಕ್ರಿಕೆಟಿಗ ವಿರಾಟ್‌ ಕೊಹ್ಲಿ(Virat Kohli) ಎರಡನೇ ಮಗುವಿನ ತಂದೆಯಾಗಿದ್ದಾರೆ. ಪತ್ನಿ ಅನುಷ್ಕಾ ಶರ್ಮ(Anushka Sharma) ಫೆ. 15ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ಸುದ್ದಿ ಕೇಳಿ ಕೊಹ್ಲಿ ಅಭಿಮಾನಿಗಳು ಬಹಳ ಸಂತಸಗೊಂಡಿದ್ದಾರೆ. ಮರಿ ಕಿಂಗ್​ ಕೊಹ್ಲಿ ಆಮಗನ ಎಂದು ಸಂಭ್ರಮಿಸಿದ್ದಾರೆ. ಅತ್ತ ಪಾಕಿಸ್ತಾನದಲ್ಲಿಯೂ(Virat Kohli’s Pakistan Fans) ಕೊಹ್ಲಿ ತಂದೆಯಾದ ಖುಷಿಯನ್ನು ಅವರ ಅಭಿಮಾನಿಗಳು ಅದ್ಧೂರಿಯಾಗಿ ಸಿಹಿ ಹಂಚುವ ಮೂಲಕ ಸಂಭ್ರಮಿಸಿದ್ದಾರೆ. ಈ ವಿಡೊಯೊ ವೈರಲ್​ ಆಗಿದೆ.

ಪಾಕಿಸ್ತಾನದ ಕೊಹ್ಲಿ ಅಭಿಮಾನಿಗಳು ಸಿಹಿ ಹಂಚುವ ಮೂಲಕ ಅಕಾಯ್‌ ಕೂಡ ವಿರಾಟ್​ ಅವರಂತೇ ಗ್ರೇಟೆಸ್ಟ್​ ಕ್ರಿಕೆಟ್​ ಆಗಲಿ, ಭಾರತ ಕ್ರಿಕೆಟ್​ ತಂಡದಲ್ಲಿ ಮಿನುಗಲಿ ಎಂದು ಹಾರೈಸಿದ್ದಾರೆ. ಇದನ್ನು ವಿಡಿಯೊದಲ್ಲಿ ನೋಡಬಹುದಾಗಿದೆ.

ವಿರಾಟ್​ ಅವರು ಗಂಡು ಮಗುವಿನ ತಂದೆಯಾದ ವಿಚಾರವನ್ನು ಮಂಗಳವಾರ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಕಟಿಸುವ ಮೂಲಕ ತಿಳಿಸಿದ್ದರು. “ತುಂಬು ಸಂತೋಷ ಮತ್ತು ಪ್ರೀತಿ ತುಂಬಿದ ಹೃದಯದಿಂದ ನಾವು ಫೆ. 15ರಂದು ನಮ್ಮ ಮಗ, ವಾಮಿಕಾಳ ಚಿಕ್ಕ ಪುಟ್ಟ ಸಹೋದರ ಅಕಾಯ್‌ನನ್ನು(Akaay) ಈ ಜಗತ್ತಿಗೆ ಸ್ವಾಗತಿಸಿದ್ದೇವೆ” ಎಂದು ತಿಳಿಸುತ್ತಿದ್ದೇವೆ ಎಂದು ಕೊಹ್ಲಿ ಪೋಸ್ಟ್‌ ಮಾಡಿದ್ದರು. ಫೆ. 15ರಂದೆ ಮಗ ಜನಿಸಿದ್ದರು ಕೂಡ ಈ ವಿಚಾರವನ್ನು ಇಷ್ಟು ತಡವಾಗಿ ಹೇಳಿದ್ದು ಯಾಕೆ ಎನ್ನುವುದು ಮಾತ್ರ ತಿಳಿದುಬಂದಿಲ್ಲ.

ಇದನ್ನೂ ಓದಿ Ind vs Eng : ನಾಲ್ಕನೇ ಟೆಸ್ಟ್​ಗೆ ಜಸ್​ಪ್ರಿತ್ ಬುಮ್ರಾ ಬಿಡುಗಡೆ ​, ರಾಹುಲ್ ಔಟ್​

ಅಕಾಯ್ ಪದದ ಅರ್ಥ ಏನು?


ಈ ಮಧ್ಯೆ ಅಕಾಯ್ ಹೆಸರು ಹಲವರ ಗಮನ ಸೆಳೆದಿದೆ. ಅನೇಕರು ಈ ವಿಶೇಷ ಹೆಸರಿನ ಅರ್ಥ ಹುಡುಕಲು ಆರಂಭಿಸಿದ್ದಾರೆ. ಇದು ‘ಕಾಯಾ’ ಎಂಬ ಹಿಂದಿ ಪದದಿಂದ ಬಂದಿದೆ. ಇದರರ್ಥ ‘ದೇಹ’. ಅಕಾಯ್ ಎಂದರೆ ತನ್ನ ಭೌತಿಕ ದೇಹಕ್ಕಿಂತ ಹೆಚ್ಚಿನದನ್ನು ಹೊಂದಿರುವವನು. ಇನ್ನು ಟರ್ಕಿಶ್ ಭಾಷೆಯಲ್ಲಿ ‘ಅಕಾಯ್’ ಎಂಬ ಪದದ ಅರ್ಥ ‘ಹೊಳೆಯುವ ಚಂದ್ರ’ (Shining moon). ಒಟ್ಟಿನಲ್ಲಿ ದಂಪತಿ ತಮ್ಮ ಮಗನಿಗೆ ವಿಶಿಷ್ಟ ಹೆಸರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಕೊಹ್ಲಿ-ಅನುಷ್ಕಾ ದಂಪತಿಗೆ ಮೊದಲ ಮಗು 2021ರಲ್ಲಿ ಜನಿಸಿತ್ತು. ಈ ಹೆಣ್ಣು ಮಗುವಿಗೆ ವಾಮಿಕಾ ಎಂದು ಹೆಸರಿಡಲಾಗಿದೆ.

ಅಕಾಯ್‌ ಈಗಾಗಲೇ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾನೆ. ವಿರಾಟ್‌ ಕೊಹ್ಲಿ ತಮಗೆ ಮಗು ಜನಿಸಿದ ಮಾಹಿತಿಯನ್ನು ಪೋಸ್ಟ್‌ ಮಾಡಿದ ಕೆಲವೇ ತಾಸುಗಳಲ್ಲಿ 50 ಲಕ್ಷ ಮಂದಿ ಲೈಕ್‌ ಬಟನ್‌ ಒತ್ತಿದ್ದರು. ಜತೆಗೆ ಸಿನಿಮಾ, ಕ್ರೀಡಾರಂಗದ ಸೆಲೆಬ್ರಿಟಿಗಳು ಶುಭಾಶಯಗಳನ್ನು ತಿಳಿಸಿದ್ದಾರೆ. ನಟ ರಣವೀರ್‌ ಸಿಂಗ್‌, ನಟಿ ರಾಕುಲ್‌ ಪ್ರೀತ್‌ ಸಿಂಗ್‌ ಮತ್ತಿತರರು ಅಭಿನಂದಿಸಿದ್ದಾರೆ. ಅಲ್ಲದೆ ಐಪಿಎಲ್‌ ತಂಡಗಳೂ ಶುಭ ಹಾರೈಸಿವೆ. ಕೊಹ್ಲಿಯ ತಂಡ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು, ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತಿತರ ತಂಡಗಳು ವಿರುಷ್ಕಾ ದಂಪತಿಗೆ ಹಾರೈಸಿವೆ.

Exit mobile version