ದುಬೈ : ಕ್ರೀಡಾ ಕ್ಷೇತ್ರದ ಅತ್ಯಂತ ಫಿಟ್ ಆಗಿರುವ ಅಥ್ಲೀಟ್ಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವವರು ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ. ಗಾಯದ ಸಮಸ್ಯೆ ಅಥವಾ ಫಿಟ್ನೆಸ್ ಸಮಸ್ಯೆ ಕಾರಣಕ್ಕೆ ಅವರು ಆಟದಿಂದ ವಿಶ್ರಾಂತಿ ಪಡೆದಿರುವುದೇ ಅಪರೂಪ. ಅವರೀಗ ಯುಎಇನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅಂತೆಯೇ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 34 ಎಸೆತಗಳಲ್ಲಿ 35 ರನ್ ಬಾರಿಸುವ ಮೂಲಕ ಉತ್ತಮ ಆರಂಭ ಪಡೆದುಕೊಂಡಿದ್ದಾರೆ. ಇದೀಗ ಮತ್ತೆ ಅವರು ಬುಧವಾರ ನಡೆಯಲಿರುವ ಏಷ್ಯಾ ಕಪ್ಗಾಗಿ ಅಭ್ಯಾಸ ಆರಂಭಿಸಿದ್ದಾರೆ. ಏತನ್ಮಧ್ಯೆ ಅವರು ಜಿಮ್ನಲ್ಲಿ ಕಸರತ್ತು ನಡೆಸುತ್ತಿರುವ ಚಿತ್ರವನ್ನು ಟ್ವೀಟ್ನಲ್ಲಿ ಪ್ರಕಟಿಸಿದ್ದು, ಅವರ ದೈಹಿಕ ಕ್ಷಮತೆಯನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.
ವಿರಾಟ್ ಕೊಹ್ಲಿ ಮೊದಲಿನಿಂದ ಫಿಟ್ನೆಸ್ಗೆ ಹೆಚ್ಚು ಆದ್ಯತೆ ಕೊಡುತ್ತಾರೆ. ಆಹಾರ ಹಾಗೂ ಡಯೆಟ್ ವಿಚಾರಕ್ಕೆ ಬಂದಾಗಲೂ ಅವರು ಹೆಚ್ಚು ಜಾಗರೂಕರಾಗಿರುತ್ತಾರೆ. ಉತ್ತಮ ಡಯೆಟ್ಗಾಗಿ ಅವರು ಡೈರಿ ಉತ್ಪನ್ನಗಳು ಹಾಗೂ ಮಾಂಸಹಾರವನ್ನೂ ತ್ಯಜಿಸಿದ್ದಾರೆ. ದೇಹಕ್ಕೆ ಬೇಕಾಗುವಷ್ಟು ಪೌಷ್ಟಿಕಾಂಶಗಳನ್ನು ಸೇವಿಸುತ್ತಾರೆ. ಹೀಗಾಗಿ ಸದಾ ಫಿಟ್ ಅಗಿರುತ್ತಾರೆ.
ಜಿಮ್ನಲ್ಲಿ ವಿರಾಟ್ ಕೊಹ್ಲಿ ಡಂಬಲ್ಸ್, ಬ್ಯಾಲೆನ್ಸ್ ಹಾಗೂ ವೇಟ್ಲಿಫ್ಟಿಂಗ್ನಂಥ ದೇಹದಾರ್ಢ್ಯ ಕಾಪಾಡಿಕೊಳ್ಳಬಹುದಾದ ಕಸರತ್ತು ನಡೆಸುತ್ತಾರೆ. ಈ ಹಿಂದೆಯೂ ಅವರು ವೇಟ್ಲಿಫ್ಟಿಂಗ್ ಮಾಡುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ವಿರಾಟ್ ಕೊಹ್ಲಿಯ ಸಾಕಷ್ಟು ಅಭಿಮಾನಿಗಳು ಅವರ ಕ್ರಿಕೆಟ್ ಆಟದಷ್ಟೇ ಫಿಟ್ನೆಸ್ ಅನ್ನೂ ಇಷ್ಟ ಪಡುತ್ತಾರೆ.
ಇದನ್ನೂ ಓದಿ | IND vs PAK- ಪಾಕ್ ವೇಗಿಗೆ ಹಸ್ತಾಕ್ಷರವುಳ್ಳ ಜರ್ಸಿ ಗಿಫ್ಟ್ ಕೊಟ್ಟ ವಿರಾಟ್ ಕೊಹ್ಲಿ