Site icon Vistara News

Virat kohli : ಮಾಂಸ ತಿನ್ನಲ್ಲ, ಹಾಲು ಕುಡಿಯಲ್ಲ ಹಾಗಾದ್ರೆ ಫಿಟ್ನೆಸ್​ಗಾಗಿ ಕೊಹ್ಲಿ ತಿನ್ನೋದೇನು? ಎಲ್ಲ ಮಾಹಿತಿ ಬಹಿರಂಗ

Virat kohli

ನವ ದೆಹಲಿ: ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ (Virat kohli) ಕ್ರಿಕೆಟ್​ ದಂತಕಥೆಗಳಲ್ಲಿ ಒಬ್ಬರು. ನುರಿತ ಕ್ರಿಕೆಟಿಗನಲ್ಲದೆ, ಭಾರತದ ಮಾಜಿ ನಾಯಕ ಅತ್ಯಂತ ಫಿಟ್​ ಆಗಿರುವ ಅಥ್ಲೀಟ್ ಎಂಬುದಾಗಿಯೂ ಹೆಸರುವಾಸಿಯಾಗಿದ್ದಾರೆ. ವಿರಾಟ್ ಕೊಹ್ಲಿ ಯಾವಾಗಲೂ ಫಿಟ್ನೆಸ್ ಅನ್ನು ತಮ್ಮ ಆದ್ಯತೆಯಾಗಿ ಇಟ್ಟುಕೊಂಡಿದ್ದಾರೆ. ಎಲ್ಲಾ ಮೂರು ಸ್ವರೂಪಗಳ ಕ್ರಿಕೆಟ್​ನಲ್ಲಿ ಅಗ್ರಸ್ಥಾನದಲ್ಲಿರಲು ಸೂಕ್ತ ವ್ಯಾಯಾಮದ ದಿನಚರಿಗಳೊಂದಿಗೆ ಸಮತೋಲಿತ ಆಹಾರವನ್ನು ತೆಗೆದುಕೊಳ್ಳುತ್ತಾರೆ. 34ರ ಹರೆಯದ ವಿರಾಟ್​​ ವಿಶ್ವಕಪ್ ಟೂರ್ನಿಯಲ್ಲೂ ತಮ್ಮ ಕಟ್ಟುನಿಟ್ಟಾದ ಆಹಾರ ಕ್ರಮವನ್ನು ಮುಂದುವರಿಸಿದ್ದಾರೆ.

ಕೊಹ್ಲಿ ತಮ್ಮ ಬ್ಯಾಟಿಂಗ್ ಮಾಸ್ಟರ್ ಕ್ಲಾಸ್ ಬ್ಯಾಟಿಂಗ್ ಮೂಲಕ ಎದುರಾಳಿ ಬೌಲರ್​ಗಳನ್ನು ದಂಡಿಸುತ್ತಿದ್ದಾರೆ. ಡಬಲ್ಸ್ ಮತ್ತು ತ್ವರಿತ ಸಿಂಗಲ್ಸ್ ರನ್​ಗಳನ್ನು ಹೆಚ್ಚಾಗಿ ತೆಗೆಯುವ ಮೂಲಕ ತಮ್ಮ ಅದ್ಭುತ ಫಿಟ್ನೆಸ್ ಪ್ರದರ್ಶಿಸುತ್ತಾರೆ. ಹೀಗಾಗಿ ಅವರ ತಿನ್ನೋ ಆಹಾರ ಹಾಗೂ ದಿನಚರಿ ಬಗ್ಗೆ ಅಭಿಮಾನಿಗಳಿಗೆ ಕುತೂಹಲವಿರುತ್ತದೆ. ಆ ಕುತೂಹಲಕ್ಕೆ ಅವರು ತಂಗಿರುವ ಹೋಟೆಲ್​ ಒಂದರ ಶೆಫ್​ ತೆರೆ ಎಳೆದಿದ್ದಾರೆ. ಅವರು ಸೇರಿದಂತೆ ಭಾರತ ತಂಡದ ಆಟಗಾರು ಏನು ತಿಂತಾರೆ ಎಂಬ ಮಾಹಿತಿ ನೀಡಿದ್ದಾರೆ.

ಟೋಪು ಮತ್ತು ಸೋಯಾ

ಭಾರತ ಕ್ರಿಕೆಟ್ ತಂಡ ತಂಗಿದ್ದ ಹೋಟೆಲ್ ಒಂದರ ಬಾಣಸಿಗರೊಬ್ಬರು ಪಂದ್ಯಾವಳಿಯ ಸಮಯದಲ್ಲಿ ವಿರಾಟ್ ಕೊಹ್ಲಿಯ ಆಹಾರಕ್ರಮವನ್ನು ಬಹಿರಂಗಪಡಿಸಿದ್ದಾರೆ. ಟೋಫು ಮತ್ತು ಸೋಯಾ ಆಧಾರಿತ ಊಟ ಸೇರಿದಂತೆ ಹೆಚ್ಚಿನ ಪ್ರೋಟೀನ್ ಆಹಾರವನ್ನು ಭಾರತದ ಮಾಜಿ ನಾಯಕ ಸೇವಿಸುತ್ತಿದ್ದಾರೆ ಎಂದು ಲೀಲಾ ಪ್ಯಾಲೇಸ್​​ನ ಕಾರ್ಯನಿರ್ವಾಹಕ ಬಾಣಸಿಗ ಮಾಹಿತಿ ನೀಡಿದ್ದಾರೆ.

ಬಫೆಯಲ್ಲಿ ಎಲ್ಲಾ ರೀತಿಯ ಮಾಂಸವಿರುತ್ತದೆ. ಕ್ರಿಕೆಟ್​​ ಆಟಗಾರರು ಬೇಯಿಸಿದ ಅಥವಾ ಗ್ರಿಲ್ಡ್ ಚಿಕನ್ ಅಥವಾ ಮೀನುಗಳನ್ನು ಆಯ್ಕೆ ಮಾಡುತ್ತಾರೆ ಎಂದು ಲೀಲಾ ಪ್ಯಾಲೇಸ್​​ನ ಕಾರ್ಯನಿರ್ವಾಹಕ ಬಾಣಸಿಗ ಅನುಷ್ಮಾನ್​ ಬಾಲಿ ತಿಳಿಸಿದ್ದಾರೆ. ಆದರೆ, ಪ್ರಸ್ತುತ ವಿಶ್ವಕಪ್​​ನಲ್ಲಿ ಭಾರತಕ್ಕಾಗಿ ಅತಿ ಹೆಚ್ಚು ರನ್ ಗಳಿಸಿದ ಕೊಹ್ಲಿ, ಮಾಂಸವನ್ನು ತಿನುತ್ತಿಲ್ಲ ಎಂಬುದಾಗಿಯೂ ಹೇಳಿದ್ದಾರೆ.

ವಿರಾಟ್ ಮಾಂಸವನ್ನು ತಿನ್ನುವುದಿಲ್ಲ . ಆದ್ದರಿಂದ ನಾವು ಸಸ್ಯಾಜನ್ಯ ವಸ್ತುಗಳನ್ನು ಹಬೆಯಲ್ಲಿ ಬೇಯಿಸಿ ನೀಡುತ್ತೇವೆ. ಸೋಯಾ ಮತ್ತು ಟೋಫುವಿನಂತಹ ಮೃದು ಪ್ರೋಟೀನ್​ಗಳಿರುವ ಇತರ ತರಕಾರಿ ಆಧಾರಿತ ಆಹಾರವನ್ನು ಅವರಿಗೆ ನೀಡಲಾಗುತ್ತದೆ. ನಾವು ಅವರ ಊಟದಲ್ಲಿ ಸಾಧ್ಯವಾದಷ್ಟು ಕಡಿಮೆ ಹಾಲಿನ ಉತ್ಪನ್ನಗಳನ್ನು ಸೇರಿಸುತ್ತೇವೆ ಎಂದು ಅನುಷ್ಮಾನ್​ ಮಾಹಿತಿ ನೀಡುತ್ತಾರೆ.

ರಾಗಿ ದೋಸೆ ಇಷ್ಟಪಟ್ಟ ಭಾರತ ತಂಡ

ಬಾಣಸಿಗರು ಭಾರತೀಯ ತಂಡದ ಆಹಾರದ ಬಗ್ಗೆ ಒಳನೋಟವನ್ನು ನೀಡಿದ್ದಾರೆ. ತಂಡವು ಬೆಳಗ್ಗಿನ ಉಪಾಹಾರಕ್ಕಾಗಿ ರಾಗಿ ದೋಸೆಗಳನ್ನು ಇಷ್ಟಪಡುತ್ತಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ
MS Dhoni : ಧೋನಿ ಮುಂದಿನ ಐಪಿಎಲ್​ನಲ್ಲಿ ಆಡುವುದು ಪಕ್ಕಾ; ಸಿಕ್ಕಿತು ಖಚಿತ ಮಾಹಿತಿ
ICC World Cup 2023 : ಬಾಂಗ್ಲಾ ಹುಲಿಗಳಿಗೆ ಪೆಟ್ಟು ಕೊಡುವರೇ ಡಚ್ಚರು?

“ನಾವು ಮೆನುವಿನಲ್ಲಿ ರಾಗಿ ದೋಸೆ, ರಾಗಿ ಇಡ್ಲಿ ಮತ್ತು ಕ್ವಿನೋವಾ ಇಡ್ಲಿಯನ್ನು ನೀಡುತ್ತಿದ್ದೇವೆ. ಇದು ಆರೋಗ್ಯಕರ ಪ್ರೋಟೀನ್ ಎಂದು ಎಲ್ಲಾ ಆಟಗಾರರಿಗೆ ತಿಳಿದಿದೆ, ಆದ್ದರಿಂದ ಅವರೆಲ್ಲರೂ ಅದನ್ನು ಪ್ರಯತ್ನಿಸಿದ್ದಾರೆ. ಬೆಳಗಿನ ಉಪಾಹಾರಕ್ಕೆ ರಾಗಿ ದೋಸೆಗಳು ಭಾರತೀಯ ತಂಡಕ್ಕೆ ಅಚ್ಚುಮೆಚ್ಚಿನವು, “ಎಂದು ಅವರು ಅನ್ಷುಮಾನ್ ಹೇಳಿದ್ದಾರೆ.

ಗೆಲುವಿನ ನಂತರದ ಪಾರ್ಟಿಗಾಗಿ ತಂಡಗಳು ಆಲ್ಕೋಹಾಲ್ ಅನ್ನು ಮಾತ್ರ ಆರ್ಡರ್ ಮಾಡುತ್ತವೆ ಎಂದು ಬಾಣಸಿಗ ಬಹಿರಂಗಪಡಿಸಿದ್ದಾರ. ಟೀಮ್ ಇಂಡಿಯಾ ಪ್ರಸ್ತುತ ಲಕ್ನೋದಲ್ಲಿದ್ದು, ಅಕ್ಟೋಬರ್ 29 ರಂದು ನಡೆಯಲಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯಕ್ಕೆ ತಯಾರಿ ನಡೆಸುತ್ತಿದೆ.‘

ಭಾರತ ತಂಡದ ಸದಸ್ಯರು

ಬ್ಯಾಟರ್​ಗಳು: ರೋಹಿತ್ ಶರ್ಮಾ, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್

ವಿಕೆಟ್​ಕೀಪರ್​ : ಇಶಾನ್ ಕಿಶನ್, ಕೆಎಲ್ ರಾಹುಲ್

ವೇಗದ ಬೌಲಿಂಗ್ ಆಲ್​ರೌಂಡರ್​​ಗಳು : ಹಾರ್ದಿಕ್ ಪಾಂಡ್ಯ (ಉಪನಾಯಕ), ಶಾರ್ದೂಲ್ ಠಾಕೂರ್

ಸ್ಪಿನ್ ಆಲ್​ರೌಂಡರ್​ಗಳು: ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್

ವೇಗಿಗಳು: ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್

ಸ್ಪಿನ್ನರ್: ಕುಲದೀಪ್ ಯಾದವ್

Exit mobile version