Site icon Vistara News

Virat Kohli : ಕೊಹ್ಲಿಗೆ ಗೌರವ ಸಲ್ಲಿಸಲೇಬೇಕು ಎಂದು ಹೇಳಿದ ಆಸ್ಟ್ರೇಲಿಯಾದ ಮಾಜಿ ಬ್ಯಾಟರ್​​

Virat Kohli

ಬೆಂಗಳೂರು: ಮೇ 22 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2024 ರ ಎಲಿಮಿನೇಟರ್‌ನಲ್ಲಿ ರಾಜಸ್ಥಾನ್ ರಾಯಲ್ಸ್ (Rajasthan Royals) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಾಲ್ಕು ವಿಕೆಟ್‌ಗಳ ಸೋಲನ್ನು ಆಸ್ಟ್ರೇಲಿಯಾದ ಮಾಜಿ ಬ್ಯಾಟರ್ ಮತ್ತು ವೀಕ್ಷಕ ವಿವರಣೆಗಾರ ಮ್ಯಾಥ್ಯೂ ಹೇಡನ್ ಬೇಸರದ ವಿಷಯ ಎಂದು ವಿಶ್ಲೇಷಿಸಿದ್ದಾರೆ. ಇದೇ ವೇಳೆ ಅವರು ವಿರಾಟ್​ ಕೊಹ್ಲಿಗೆ ನಿಜವಾದ ಗೌರವ ಸಲ್ಲಿಸಬೇಕು. ತಂಡದ ಸೋಲಿಗೆ ಅವರನ್ನು ಹೊಣೆಗಾರನನ್ನಾಗಿ ಮಾಡಬಾರದು ಒತ್ತಿ ಹೇಳಿದರು. ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗರು ಪಂದ್ಯದುದ್ದಕ್ಕೂ ಕೊಹ್ಲಿಯ ಸಮರ್ಪಣೆ ಮತ್ತು ಪ್ರಭಾವಶಾಲಿ ಆಟವನ್ನು ಶ್ಲಾಘಿಸಿದ್ದಾರೆ.

ವಿರಾಟ್ ಕೊಹ್ಲಿ ಬ್ಯಾಟಿಂಗ್ ಸಾಮರ್ಥ್ಯವನ್ನು ಮಾತ್ರ ಮ್ಯಾಥ್ಯೂ ಹೇಡನ್ ಹೊಗಳಲಿಲ್ಲ. ಅವರ ಫೀಲ್ಡಿಂಗ್​ ಕರಾಮತ್ತನ್ನು ಕೂಡ ಮೆಚ್ಚಿದ್ದಾರೆ. ಮೈದಾನದಲ್ಲಿ ಚಿಗರೆಯಂತೆ ಓಡಿ ಫೀಲ್ಡಿಂಗ್ ಮಾಡುವ ಅವರಿಂದಾಗಿ ವಿಕೆಟ್​ಗಳು ಲಭಿಸಿವೆ ಎಂಬುದಾಗಿ ಹೇಡನ್​ ಹೇಳಿದ್ದಾರೆ. ಅವರ ಅತ್ಯುತ್ತಮ ಪ್ರಯತ್ನದಿಂದಾಗಿಯೇ ಆರ್​ಸಿಬಿ ತಂಡ ಪ್ಲೇಆಫ್​ ಹಂತಕ್ಕೆ ಏರಲು ಸಾಧ್ಯವಾಯಿತು. ಹೀಗಾಗಿ ಕೊಹ್ಲಿಗೆ ನಿಜವಾದ ಗೌರವ ಸಲ್ಲಬೇಕು ಎಂದು ಮಾಜಿ ಆರಂಭಿಕ ಬ್ಯಾಟರ್ ನುಡಿದಿದ್ದಾರೆ.

ಆರ್‌ಆರ್ ವಿರುದ್ಧ 24 ಎಸೆತಗಳಲ್ಲಿ 33 ರನ್ ಬಾರಿಸಿದ ಕೊಹ್ಲಿ ಅದ್ಭುತ ಮೈಲಿಗಲ್ಲನ್ನು ಸಾಧಿಸಿದ್ದರು. ಐಪಿಎಲ್‌ನಲ್ಲಿ 8000 ರನ್ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಹೇಡನ್ ಇದನ್ನು ಅಸಾಮಾನ್ಯ ಸಾಧನೆ ಎಂದು ಕರೆದಿದ್ದಾರೆ. ಭಾರತೀಯ ಬ್ಯಾಟಿಂಗ್ ಮಾಸ್ಟರ್ ಅವರು ಎಂದು ಹೇಳಿದ್ದಾರೆ

ಇದಲ್ಲದೆ, ಐಪಿಎಲ್ 2024 ರಲ್ಲಿ ಆರ್​​ಬಿಗಾಗಿ ಕೊಹ್ಲಿ ತೋರಿದ ಸ್ಪರ್ಧಾತ್ಮಕ ಮನೋಭಾವ ಸ್ಥಿರ ಪ್ರದರ್ಶನವನ್ನು ಹೇಡನ್ ಶ್ಲಾಘಿಸಿದರು. ಬಲಗೈ ಬ್ಯಾಟರ್​ ಈ ಋತುವಿನಲ್ಲಿ ರನ್‌ಗಾಗಿ ಹಸಿದ ರೀತಿಯಲ್ಲಿ ತೋರುತ್ತಿದ್ದರು. ಮೈದಾದನದಲ್ಲಿ ಅವರ ಉಪಸ್ಥಿತಿಯು ಪರಿಣಾಮ ಬೀರಿತ್ತು. ಬೆಂಗಳೂರು ತಂಡ ಪ್ಲೇಆಫ್‌ ಪ್ರವೇಶಿಸುವಲ್ಲಿ ಅವರ ಪಾತ್ರ ಮುಖ್ಯ ಎಂದು ಹೇಳಿದರು.

ಆರ್‌ಆರ್‌ಗೆ ಆರ್‌ಸಿಬಿ ಸೋಲಿಗೂ ವಿರಾಟ್ ಕೊಹ್ಲಿಗೂ ಯಾವುದೇ ಸಂಬಂಧವಿಲ್ಲ: ಮ್ಯಾಥ್ಯೂ ಹೇಡನ್

ಮ್ಯಾಥ್ಯೂ ಹೇಡನ್ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಹೀಗೆ ಹೇಳಿದ್ಧಾರೆ. “ಈ ಸೋಲಿಗೆ ಕೊಹ್ಲಿಯೊಂದಿಗೆ ಯಾವುದೇ ಸಂಬಂಧವಿಲ್ಲ. ನಮಗೆ ತಿಳಿದಿದೆ, ಅವರು ತನ್ನ ಸಂಪೂರ್ಣ ಹೃದಯ ಮತ್ತು ಆತ್ಮವನ್ನು ತಂಡಕ್ಕಾಗಿ ಕೊಟ್ಟಿದ್ದಾರೆ. ಅವರ ಫೀಲ್ಡಿಂಗ್ ಪ್ರಯತ್ನದ ಬಗ್ಗೆ ನೀವು ಯೋಚಿಸಿದಾಗ ಇನ್ನು ವಿಶೇಷ ಎನಿಸುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Glenn Maxwell : ಮ್ಯಾಕ್ಸ್​​ವೆಲ್​ಗೆ ಕೊಟ್ಟ ಹಣ ವಾಪಸ್​ ಪಡೆಯಿರಿ; ಅಭಿಮಾನಿಗಳ ಒತ್ತಾಯ

ವಿರಾಟ್ ಕೊಹ್ಲಿ ಈ ಋತುವಿನಲ್ಲಿ ಬ್ಯಾಟ್‌ನೊಂದಿಗೆ ಅದ್ಭುತವಾಗಿದ್ದರು. 15 ಪಂದ್ಯಗಳಲ್ಲಿ 154 ರ ಪ್ರಭಾವಶಾಲಿ ಸ್ಟ್ರೈಕ್ ರೇಟ್‌ನಲ್ಲಿ 741 ರನ್ ಗಳಿಸಿದ್ದಾರೆ. ಪಂದ್ಯಾವಳಿಯಲ್ಲಿ ಕೊಹ್ಲಿ ಆಗಾಗ್ಗೆ ಆರ್​ಸಿಬಿ ತಂಡವನ್ನು ಅನ್ನು ಏಕಾಂಗಿಯಾಗಿ ಗೆಲ್ಲಿಸಿದ್ದರು. 2024 ರಲ್ಲಿ ಮುಂಬರುವ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಕೊಹ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕೊಹ್ಲಿ ಶೀಘ್ರದಲ್ಲೇ T20 ವಿಶ್ವಕಪ್ 2024 ಗಾಗಿ ಭಾರತೀಯ ತಂಡದೊಂದಿಗೆ ಯುಎಸ್​ಎ ಮತ್ತು ವೆಸ್ಟ್​ ಇಂಡೀಸ್​​ಗೆ ತೆರಳಲಿದ್ದಾರೆ. ಅವರು ಜೂನ್ 5 ರಂದು ನ್ಯೂಯಾರ್ಕ್‌ನಲ್ಲಿ ಐರ್ಲೆಂಡ್ ವಿರುದ್ಧ ತಮ್ಮ ಅಭಿಯಾನ ಪ್ರಾರಂಭಿಸಲಿದ್ದಾರೆ. ಆರ್​ಸಿಬಿ ಓಪನರ್ ಐಪಿಎಲ್ 2024 ರಲ್ಲಿ ಉತ್ತಮ ಫಾರ್ಮ್​ ತೋರಿದ ಕಾರಣ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಆರಂಭಿಕ ಆಟಗಾರನಾಗಿ ಆಡುವ ಸಾಧ್ಯತೆಯಿದೆ.

Exit mobile version