Site icon Vistara News

Virat kohli : ಸ್ಲೆಜಿಂಗ್ ಮಾಡಿದ ಬರ್ಗರ್​ಗೆ ತಿರುಗೇಟು ಕೊಟ್ಟ ಕೊಹ್ಲಿ!

Virat kohli

ಬೆಂಗಳೂರು: ವಿರಾಟ್ ಕೊಹ್ಲಿ (Virat kohli) ಕ್ರಿಕೆಟ್ ಮೈದಾನದಲ್ಲಿ ಆಕ್ರಮಣಕಾರಿ ನಡವಳಿಕೆಗೆ ಹೆಸರುವಾಸಿಯಾಗಿದ್ದಾರೆ. ಒಂದು ಅಥವಾ ಎರಡು ಪದಗಳನ್ನು ಎದುರಾಳಿ ತಂಡದ ಆಟಗಾರರ ಜತೆ ವಿನಿಯಮ ಮಾಡಿಕೊಳ್ಳುವುದಕ್ಕೆ ಎಂದೂ ಅವರು ಹಿಂಜರಿಯುವುದಿಲ್ಲ. ಕೇಪ್​ಟೌನ್​ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್​ನಲ್ಲಿ ದಕ್ಷಿಣ ಆಫ್ರಿಕಾದ ವೇಗಿ ನಾಂಡ್ರೆ ಬರ್ಗರ್ ವಿರಾಟ್ ಕೊಹ್ಲಿ ವಿರುದ್ಧ ಸ್ವಲ್ಪ ಆಕ್ರಮಣಶೀಲತೆಯನ್ನು ಪ್ರದರ್ಶಿಸಿದರು. ಈ ವೇಳೆಯೂ ಕೊಹ್ಲಿ ಸಮರ್ಪಕ ಪ್ರತಿಕ್ರಿಯೆಯನ್ನು ನೀಡಿ ಅವರನ್ನು ಸುಮ್ಮನಾಗಿಸಲು ಯತ್ನಿಸಿದರು.

ಸರಣಿಯಲ್ಲಿ ಇಲ್ಲಿಯವರೆಗೆ ಅದ್ಭುತವಾಗಿ ಬೌಲಿಂಗ್ ಮಾಡಿದ ಬರ್ಗರ್ ಅವರಿಂದ ಲೆಂತ್​ ಎಸೆತ ಹಾಕಿದ್ದರು. ವಿರಾಟ್ ಕೊಹ್ಲಿ ಅದನ್ನು ರಕ್ಷಣಾತ್ಮಕ ಆಟ ಆಡಿದರು. ಚೆಂಡು ಬರ್ಗರ್ ಕಡೆಗೆ ವಾಪಸ್ ಹೋಯಿತು. ಚೆಂಡು ಕೈಯಲ್ಲಿ ಇಡಿದ ಬರ್ಗರ್ ನಂತರ ವಿರಾಟ್ ಕೊಹ್ಲಿಯನ್ನು ಕೆಣಕಿದರು. ಅಲ್ಲದೆ, ಅವರ ಮೇಲೆ ಚೆಂಡು ಎಸೆಯುವುದಾಗಿ ಬೆದರಿಕೆ ಹಾಕಿದರು. ವಿರಾಟ್ ಕೊಹ್ಲಿ ತಮ್ಮ ಹಿಂದಿನ ರೀತಿಯಲ್ಲಿ ವಾಗ್ವಾದ ಮಾಡಲಿಲ್ಲ. ಭಿನ್ನವಾಗಿ ಮುದ್ದಾದ ನಗುವಿನೊಂದಿಗೆ ಪ್ರತಿಕ್ರಿಯಿಸಿದರು. ಬರ್ಗರ್​ಗೆ ಪ್ರತಿ್ಕರಿಯೆ ಕೊಡಲು ಯಾವುದೇ ಆಯ್ಕೆ ಇರಲಿಲ್ಲ.

ಇದನ್ನೂ ಓದಿ : Suryakumar Yadav : ಐಸಿಸಿ ವರ್ಷದ ಟಿ20 ತಂಡ ಸ್ಪರ್ಧೆಯಲ್ಲಿ ಭಾರತದ ಸ್ಫೋಟಕ ಬ್ಯಾಟರ್​ಗೆ ಅಗ್ರಸ್ಥಾನ

ದಕ್ಷಿಣ ಆಫ್ರಿಕಾ ತಂಡ ಕೇವಲ 55 ರನ್​ಗಳಿಗೆ ಆಲೌಟ್ ಆಯಿತು. ಭಾರತ ತಂಡವು ಉತ್ತಮ ಆರಂಭದೊಂದಿಗೆ ಮುಂದುವರಿಯು ಲಕ್ಷಣ ತೋರುತ್ತಿದೆ.

ವೇಗದ ಬೌಲರ್​ ಬರ್ಗರ್ ಇತ್ತೀಚೆಗೆ ದಕ್ಷಿಣ ಆಫ್ರಿಕಾಕ್ಕಾಗಿ ಎಲ್ಲಾ ಸ್ವರೂಪಗಳಲ್ಲಿ ಪಾದಾರ್ಪಣೆ ಮಾಡಿದ್ದಾರೆ. ಆರಂಭದಲ್ಲೇ ಸಾಕಷ್ಟು ಹೆಚ್ಚು ಖ್ಯಾತಿ ಪಡೆದುಕೊಂಡಿದ್ದಾರೆ. ಐಪಿಎಲ್ 2024 ರ ಹರಾಜಿನಲ್ಲಿ ಅವರನ್ನು ರಾಜಸ್ಥಾನ್ ರಾಯಲ್ಸ್ ಖರೀದಿಸಿದೆ. ಟೆಸ್ಟ್ ಪಂದ್ಯವು ಮುಂದುವರಿಯುತ್ತಿದ್ದಂತೆ ಬರ್ಗರ್ ಮತ್ತು ವಿರಾಟ್ ಕೊಹ್ಲಿ ನಡುವಿನ ಮೈದಾನದ ಗಲಾಟೆ ಎಷ್ಟು ಹೊತ್ತು ಮುಂದುವರಿಯುತ್ತದೆ ಎಂದು ಕಾದು ನೋಡಬೇಕಿದೆ.

ವಿರಾಟ್ ಕೊಹ್ಲಿ ಸಾಕಷ್ಟು ದೃಢವಾಗಿ ಕಾಣುತ್ತಿದ್ದಾರೆ. ಹೊಸ ವರ್ಷವನ್ನು ಭರ್ಜರಿಯಾಗಿ ಪ್ರಾರಂಭಿಸಲು ದೊಡ್ಡ ಶತಕದ ಮೇಲೆ ಕಣ್ಣಿಟ್ಟಿದ್ದಾರೆ.

ರಾಮ ಧನಸ್ಸು ಭಂಗಿಯೊಂದಿಗೆ ಕೇಶವ್ ಮಹಾರಾಜ್ ಸ್ವಾಗತಿಸಿದ ಕೊಹ್ಲಿ

ಕೇಪ್ ಟೌನ್​​: ನ್ಯೂಲ್ಯಾಂಡ್ಸ್ ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಟಾಸ್ ಗೆದ್ದ ಭಾರತ ತಂಡ 55ಕ್ಕೆ ಆಲ್ಔಟ್ ಆಗಿದೆ. ಬಲಗೈ ವೇಗಿ ಮೊಹಮ್ಮದ್ ಸಿರಾಜ್ 16 ರನ್​ಗಳನ್ನು ನೀಡಿ 6 ವಿಕೆಟ್​ ಪಡೆದು ವೃತ್ತಿಜೀವನದ ಅತ್ಯುತ್ತಮ ಅಂಕಿಅಂಶಗಳನ್ನು ದಾಖಲಿದರು. ಪಂದ್ಯದಲ್ಲಿ ವಿಕೆಟ್​ ಪತನಗೊಂಡಿರುವ ಅವಧಿಯಲ್ಲಿ ಭಾರತದ ಸ್ಟಾರ್ ಬ್ಯಾಟರ್​​ ವಿರಾಟ್ ಕೊಹ್ಲಿ (Virat kohli) ಸ್ಪಿನ್ನರ್ ಕೇಶವ್ ಮಹಾರಾಜ್ ಅವರನ್ನು ವಿಶಿಷ್ಟ ರೀತಿಯಲ್ಲಿ ಸ್ವಾಗತಿಸುವ ಮೂಲಕ ವಿಶಿಷ್ಟ ಕ್ಷಣಕ್ಕೆ ಸಾಕ್ಷಿಯಾದರು. ವಿಶೇಷವೆಂದರೆ, ಆರನೇ ವಿಕೆಟ್ ಪತನದ ನಂತರ ಮಹಾರಾಜ್ ಬ್ಯಾಟಿಂಗ್​​ಗೆ ಇಳಿದರು.

ಮೊಹಮ್ಮದ್​ ಸಿರಾಜ್​​ ಮೈದಾನಕ್ಕೆ ಇಳಿದ ತಕ್ಷಣ ಸಂಪ್ರದಾಯದಂತೆ, ಧಾರ್ಮಿಕ ಗೀತೆ ‘ರಾಮ್ ಸಿಯಾ ರಾಮ್’ ಅನ್ನು ಹಾಕಲಾಯಿತು. ಈ ವೇಳೆ ಸ್ಲಿಪ್​ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಕೊಹ್ಲಿ ಭಗವಾನ್ ರಾಮನಂತೆ ‘ಬಿಲ್ಲು ಮತ್ತು ಬಾಣ’ ಭಂಗಿಯಲ್ಲಿ ನಿಂತರು. ಸ್ಟಾರ್ ಬ್ಯಾಟರ್​​ ನಗುತ್ತಾ ಮತ್ತೆ ತಮ್ಮ ಭಂಗಿಯನ್ನು ಪುನರಾವರ್ತಿಸಿದರು. ಬಳಿಕ ಕೈಗಳನ್ನು ಜೋಡಿಸಿ ನಮಸ್ಕರಿಸಿದರು.

Exit mobile version