Site icon Vistara News

Virat Kohli : ಸಚಿನ್​ ದಾಖಲೆ ಮುರಿದ ಬಳಿಕ ವಿರಾಟ್ ಕೊಹ್ಲಿ ತಲೆಬಾಗಿ ನಮಿಸಿದ್ದು ಯಾರಿಗೆ?

Virat kohli

ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ (Virat kohli) ಬುಧವಾರ ಏಕದಿನ ಕ್ರಿಕೆಟ್​ನಲ್ಲಿ 50ನೇ ಶತಕ ಬಾರಿಸುವ ಮೂಲಕ ಹೊಸ ಸಾರ್ವಕಾಲಿಕ ದಾಖಲೆ ಬರೆದಿದ್ದಾರೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಕೊಹ್ಲಿ ಈ ಸಾಧನೆ ಮಾಡಿದ್ದಾರೆ. ಈ ತಿಂಗಳ ಆರಂಭದಲ್ಲಿ ಕೋಲ್ಕತ್ತಾದ ಈಡನ್ ಗಾರ್ಡನ್ಸ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಗ್ರೂಪ್ ಹಂತದ ಪಂದ್ಯದಲ್ಲಿ 35 ವರ್ಷದ ಬ್ಯಾಟರ್​ ಸಚಿನ್ ತೆಂಡೂಲ್ಕರ್ ಅವರ 49 ಏಕದಿನ ಶತಕಗಳ ದಾಖಲೆಯನ್ನು ಸರಿಗಟ್ಟಿದ್ದರು.

ಬುಧವಾರ, ಕೊಹ್ಲಿ ಕಿವೀಸ್ ವೇಗಿ ಲಾಕಿ ಫರ್ಗುಸನ್ ಎಸೆತಕ್ಕೆ ಎರಡು ರನ್​ ಗಳಿಸುವ ಮೂಲಕ 98ರಿಂದ 100 ರನ್ ಬಾರಿಸಿದರು. ಈ ವೇಳೆ ಅವರು ಸಚಿನ್​ ಅವರ ದಾಖಲೆಯನ್ನು ಮುರಿದರು. ಹೊಸ ದಾಖಲೆ ಬರೆ ನಂತರ, ಕೊಹ್ಲಿ ಸ್ಟ್ಯಾಂಡ್ ಗಳಲ್ಲಿ ಕುಳಿತಿದ್ದ ಸಚಿನ್ ಗೆ ತಲೆ ಬಾಗಿ ನಮಸ್ಕರಿಸಿದರು. ತೆಂಡೂಲ್ಕರ್ ಕೂಡ ಕೊಹ್ಲಿಯ ಸನ್ನೆಯನ್ನು ಚಪ್ಪಾಳೆ ತಟ್ಟಿ ಶ್ಲಾಘಿಸಿದರು. ಈ ಸಾಧನೆಯನ್ನು ಸಾಧಿಸಿದ್ದಕ್ಕಾಗಿ ಕೊಹ್ಲಿಯನ್ನು ಶ್ಲಾಘಿಸಿದರು.

ಕೊಹ್ಲಿ 44ನೇ ಓವರ್​ನಲ್ಲಿ ಶತಕ ಬಾರಿಸಿದರು. ಅವರು 113 ಎಸೆತಗಳಲ್ಲಿ 117 ರನ್ ಗಳಿಸಿದರು. ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ (2003 ರಲ್ಲಿ 673 ರನ್) ಅವರನ್ನು ಹಿಂದಿಕ್ಕಿ ಕೊಹ್ಲಿ ವಿಶ್ವ ಕಪ್​ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ಕೀನ್ಯಾ ಆತಿಥ್ಯ ವಹಿಸಿದ್ದ 2003ರ ವಿಶ್ವಕಪ್ ಆವೃತ್ತಿಯಲ್ಲಿ ಸಚಿನ್ ತೆಂಡೂಲ್ಕರ್ ಸೃಷ್ಟಿಸಿದ್ದ ದಾಖಲೆಯನ್ನು ಕೊಹ್ಲಿ ಮುರಿದಿದ್ದರು. ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ (591) ಮತ್ತು ನ್ಯೂಜಿಲೆಂಡ್​​ನ ರಚಿನ್ ರವೀಂದ್ರ (565) ನಂತರದ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: Virat kohli : ಕೊಹ್ಲಿಯ ಶತಕಗಳ ದಾಖಲೆಗೆ ಪ್ರಧಾನಿ ಮೋದಿಯ ಪ್ರಶಂಸೆ ಹೀಗಿತ್ತು

ತಮ್ಮ ದಾಖಲೆ ಮುರಿದ ವಿರಾಟ್​ ಕೊಹ್ಲಿ ಬಗ್ಗೆ ತೆಂಡೂಲ್ಕರ್​ ಹೇಳಿದ್ದೇನು?

ಮುಂಬಯಿ: ಭಾರತ ತಂಡ ಸ್ಟಾರ್ ಬ್ಯಾಟರ್​ ವಿರಾಟ್​ ಕೊಹ್ಲಿ (Virat kohli) ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಶತಕಗಳ ದಾಖಲೆ ಮುರಿದಿದ್ದಾರೆ. ವಿರಾಟ್ ಕೊಹ್ಲಿ ಕೊಹ್ಲಿ ಈಗ ಏಕ ದಿನ ಮಾದರಿಯ ಕ್ರಿಕೆಟ್​ನಲ್ಲಿ ಅತ್ಯಧಿಕ ಶತಕಗಳನ್ನು ಬಾರಿಸಿದ ಆಟಗಾರ. ಅವರ ಖಾತೆಯಲ್ಲಿ ಒಟ್ಟು 50 ಏಕ ದಿನ ಶತಕಗಳಿವೆ. ಈ ಮೂಲಕ ಅವರು ಸಚಿನ್ ತೆಂಡೂಲ್ಕರ್ ಅವರ 49 ಶತಕಗಳ ದಾಖಲೆಯನ್ನು ಮುರಿದಿದ್ದಾರೆ. ತಮ್ಮ ದಾಖಲೆಯನ್ನು ಮುರಿದ ವಿರಾಟ್​ ಕೊಹ್ಲಿಯನ್ನು ಸಚಿನ್ ತೆಂಡೂಲ್ಕರ್ ಮನದುಂಬಿ ಹಾರೈಸಿದ್ದಾರೆ. ತಮ್ಮ ತವರು ಮೈದಾನವಾದ ಮುಂಬೈನಲ್ಲೇ ಸಾಧನೆ ಮಾಡಿದ ಅವರಿಗೆ ಶುಭಾಶಯಗಳನ್ನು ಹೇಳುವ ಜತೆಗೆ ಅವರ ಶ್ರಮವನ್ನು ಕೊಂಡಿದ್ದಾರೆ.

ನಾನು ನಿಮ್ಮನ್ನು ಮೊದಲ ಬಾರಿಗೆ ಭಾರತೀಯ ಡ್ರೆಸ್ಸಿಂಗ್ ರೂಮ್​ನಲ್ಲಿ ಭೇಟಿಯಾದಾಗ ಇತರ ಸಹ ಆಟಗಾರರ ಎದುರು ನನ್ನ ಪಾದಗಳನ್ನು ಮುಟ್ಟಿ ತಮಾಷೆ ಮಾಡಿದ್ದೀರಿ. ಆ ದಿನ ನನಗೆ ನಗು ನಿಲ್ಲಿಸಲು ಸಾಧ್ಯವಾಗಲಿಲ್ಲ. ಆದರೆ ಶೀಘ್ರದಲ್ಲೇ, ನೀವು ನಿಮ್ಮ ಉತ್ಸಾಹ ಮತ್ತು ಕೌಶಲ್ಯದಿಂದಾಗಿ ನನ್ನ ಹೃದಯವನ್ನು ಸ್ಪರ್ಶಿಸಿದಿರಿ. ಆ ಹುಡುಗ ‘ವಿರಾಟ್’ ಆಟಗಾರನಾಗಿ ಬೆಳೆದಿದ್ದಾನೆ ಎಂದು ನನಗೆ ತುಂಬಾ ಸಂತೋಷವಾಗಿದೆ. ಒಬ್ಬ ಭಾರತೀಯ ಕ್ರಿಕೆಟಿಗ ನನ್ನ ದಾಖಲೆಯನ್ನು ಮುರಿದಿದ್ದಾನೆ ಎಂಬುದೇ ನನಗೆ ಸಂತೋಷದ ವಿಷಯ. ಅದೂ ದೊಡ್ಡ ಪಂದ್ಯವೊದರಲ್ಲಿ ಎಂಬುದು ಇನ್ನೂ ಖುಷಿಯ ಸಂಗತಿ. ಅದೂ ನನ್ನ ತವರು ಮೈದಾನವಾಗಿರುವ ವಾಂಖೆಡೆಯಲ್ಲಿ ಸಾಧನೆ ಮಾಡಿರುವುದಕ್ಕೆ ಖುಷಿಯಿದೆ ಎಂದು ಸಚಿನ್ ಬರೆದುಕೊಂಡಿದ್ದಾರೆ.

Exit mobile version