Site icon Vistara News

Virat kohli : ಕೊಹ್ಲಿಯ ಸ್ಟ್ರೈಕ್​ರೇಟ್​ ಕುರಿತ ಪ್ರಶ್ನೆಗೆ ರೋಹಿತ್​, ಅಗರ್ಕರ್​ ಪ್ರತಿಕ್ರಿಯೆ ಹೀಗಿತ್ತು…

Virat kohli

ನವದೆಹಲಿ: ಮುಂಬರುವ ಐಸಿಸಿ ಟಿ20 ವಿಶ್ವಕಪ್ 2024ಗಾಗಿ (T20 World Cup) 15 ಸದಸ್ಯರ ಭಾರತ ತಂಡದಲ್ಲಿ ವಿರಾಟ್ ಕೊಹ್ಲಿ (Virat kohli) ಸೇರ್ಪಡೆಗೆ ಏನು ಕಾರಣ ಎಂಬುದನ್ನು ಬಿಸಿಸಿಐ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ (Ajit Agarkar) ವಿವರಿಸಿದ್ದಾರೆ. ಯಾಕೆಂದರೆ ಕೊಹ್ಲಿಯ ಸ್ಟ್ರೈಕ್​ರೇಟ್​​ ಬಗ್ಗೆ ಜೋರು ಚರ್ಚೆ ನಡೆಯುತ್ತಿರುವ ಜತೆಗೆ ಅವರ ಆಯ್ಕೆಯನ್ನು ಹಲವರು ಪ್ರಶ್ನಿಸಿದ್ದಾರೆ. ಹೀಗಾಗಿ ಅಗರ್ಕರ್ ಉತ್ತರ ನೀಡಿದ್ದಾರೆ.

ವಿರಾಟ್ ಕೊಹ್ಲಿ ಎಲ್ಲಾ ಸ್ವರೂಪಗಳಲ್ಲಿ ದೊಡ್ಡ ಮಟ್ಟದ ಸ್ಕೋರ್ ಮಾಡುತ್ತಿದ್ದರೂ, ಇತ್ತೀಚಿನ ದಿನಗಳಲ್ಲಿ ಅವರ ಸ್ಟ್ರೈಕ್ ರೇಟ್​ ಕಾರಣಕ್ಕೆ ಟೀಕೆಗಳನ್ನು ಎದುರಿಸುತ್ತಿದ್ದಾರೆ. ವರದಿಗಳ ಪ್ರಕಾರ ಆಯ್ಕೆದಾರರು ಈ ವರ್ಷದ ಆರಂಭದಲ್ಲಿ ಅವರನ್ನು ಟಿ20 ಐ ತಂಡಕ್ಕೆ ಮರಳಿ ಕರೆಸಿಕೊಳ್ಳುವ ಮೊದಲು ತಂಡದ ಬೇಡಿಕೆಗಳಿಗೆ ಅನುಗುಣವಾಗಿ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಲು ಹೇಳಲಾಗಿತ್ತು. ಅದೇ ಷರತ್ತಿನ ಮೇರೆಗೆ ಅವರಿಗೆ ಅವಕಾಶ ನೀಡಲಾಗಿದೆ.

ಅಂದ ಹಾಗೆ ಈ ಪ್ರಶ್ನೆಯನ್ನು ರೋಹಿತ್​ ಶರ್ಮಾ ಅವರಿಗೂ ಕೇಳಲಾಗಿತ್ತು. ಆದರೆ, ಅವರು ಜೋರಾಗಿ ನಗುವ ಮೂಲಕ ಇದೊಂದು ಚರ್ಚೆಯ ವಿಷಯವೇ ಅಲ್ಲ ಎಂಬುದಾಗಿ ಹೇಳಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ಐಪಿಎಲ್ 2024 ರಲ್ಲಿ, ಬಲಗೈ ಬ್ಯಾಟರ್​ ಅದ್ಭುತ ಫಾರ್ಮ್​ನಲ್ಲಿದ್ದಾರೆ. ಆದರೆ ಸ್ಟ್ರೈಕ್ ರೇಟ್ ಟೀಕೆಗಳು ಅವರ ಬಗ್ಗೆ ಟೀಕೆ ಮಾಡಲು ಅವಕಾಶ ಕೊಟ್ಟಿದೆ. 10 ಪಂದ್ಯಗಳಲ್ಲಿ 1 ಶತಕ ಹಾಗೂ 4 ಅರ್ಧಶತಕಗಳ ನೆರವಿನಿಂದ 500 ರನ್ ಗಳಿಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಸ್ಪರ್ಧೆಯಲ್ಲಿ ಋತುರಾಜ್ ಗಾಯಕ್ವಾಡ್ ಮಾತ್ರ ಅವರಿಗಿಂತ ಹೆಚ್ಚು ಸ್ಕೋರ್ ಮಾಡಿದವರು.

ಕೊಹ್ಲಿಯನ್ನು ಸಮರ್ಥಿಸಿಕೊಂಡ ಅಜಿತ್ ಅಗರ್ಕರ್

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ತಂಡದಲ್ಲಿದ್ದಾರೆ. ಉತ್ತಮ ಇನ್ನಿಂಗ್ಸ್ ನಿರ್ಮಿಸಲು ಬಯಸುವ ಮತ್ತು ಅನೇಕ ಆಧುನಿಕ ಟಿ 20 ಬ್ಯಾಟರ್​ಗಳಂತೆ ಆರಂಭದಿಂದಲೇ ವೇಗವಾಗಿ ಸ್ಕೋರ್ ಮಾಡಲು ಪ್ರಾರಂಭಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಕೊಹ್ಲಿಯ ಅಗತ್ಯವಿಲ್ಲ ಎಂದು ಅನೇಕರ ವಾದ ಮಾಡಿದ್ದಾರೆ.

ವಿರಾಟ್ ಕೊಹ್ಲಿ ತಮ್ಮ ಸ್ಟ್ರೈಕ್ ರೇಟ್ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಅಜಿತ್ ಅಗರ್ಕರ್, ಇದು ಆಯ್ಕೆದಾರರು ಮತ್ತು ತಂಡದ ಮ್ಯಾನೇಜ್ಮೆಂಟ್ ನಡುವೆ ಚರ್ಚೆಯ ವಿಷಯವೂ ಅಲ್ಲ ಎಂದು ಹೇಳಿದ್ದಾರೆ. ವಿರಾಟ್ ಕೊಹ್ಲಿ ಅವರ ಅನುಭವವು ತಂಡಕ್ಕೆ ದೊಡ್ಡ ಉತ್ತೇಜನ ನೀಡಲಿದೆ ಎಂದು ಭಾರತದ ಮಾಜಿ ವೇಗಿ ಗಮನಸೆಳೆದರು.

ಇದನ್ನೂ ಓದಿ: KL Rahul : ವಿಶ್ವ ಕಪ್​ ತಂಡದಲ್ಲಿ ರಾಹುಲ್​ಗೆ ಸ್ಥಾನ ನೀಡದಿರುವ ಬಗ್ಗೆ ಸ್ಪಷ್ಟನೆ ನೀಡಿದ ಆಯ್ಕೆಗಾರ ಅಜಿತ್ ಅಗರ್ಕರ್​​

“ನಾವು ಕೊಹ್ಲಿಯ ಸ್ಟ್ರೈಕ್ ರೇಟ್ ಬಗ್ಗೆ ಚರ್ಚಿಸುತ್ತಿಲ್ಲ. ಐಪಿಎಲ್ ಮತ್ತು ಅಂತಾರರಾಷ್ಟ್ರೀಯ ಕ್ರಿಕೆಟ್ ನಡುವೆ ವ್ಯತ್ಯಾಸವಿದೆ. ನಿಮಗೆ ಅನುಭವ ಬೇಕು. ನಾವು ತಂಡದಲ್ಲಿ ಸಾಕಷ್ಟು ಸಮತೋಲನ ಹೊಂದಿದ್ದೇವೆ. ಐಪಿಎಲ್​​ನಲ್ಲಿ ಏನಾಗುತ್ತಿದೆ ಎಂಬುದನ್ನು ನೀವು ನೋಡುತ್ತೀರಿ. ಸಕಾರಾತ್ಮಕತೆಯನ್ನು ಪಡೆದುಕೊಳ್ಳಲು ಪ್ರಯತ್ನಿಸಬೇಕಾಗುತ್ತದೆ. ವಿಶ್ವಕಪ್ ಪಂದ್ಯದ ಒತ್ತಡವೇ ಬೇರೆ. ಹೀಗಾಗಿ ವಿರಾಟ್ ಕೊಹ್ಲಿ ಅವರ ಸ್ಟ್ರೈಕ್ ರೇಟ್ ಬಗ್ಗೆ ನಡೆದ ಮಾತುಕತೆಗಳನ್ನು ಅಜಿತ್ ಅಗರ್ಕರ್ ತಳ್ಳಿಹಾಕಿದ್ದಾರೆ.

ಕಳೆದ ಆವೃತ್ತಿಯ ಟಿ20 ವಿಶ್ವಕಪ್​​ನಲ್ಲಿ ವಿರಾಟ್ ಕೊಹ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಅವರು 6 ಪಂದ್ಯಗಳಲ್ಲಿ ನಾಲ್ಕು ಅರ್ಧಶತಕಗಳ ಸಹಾಯದಿಂದ 296 ರನ್ ಗಳಿಸಿದ್ದರು. ಸುಮಾರು 100 ರ ಅದ್ಭುತ ಸರಾಸರಿ ಹೊಂದಿದ್ದರು. ಮುಂಬರುವ ವಿಶ್ವಕಪ್​​ನಲ್ಲಿಯೂ ಸ್ಟಾರ್ ಬ್ಯಾಟರ್​​ ತಮ್ಮ ಪ್ರದರ್ಶನವನ್ನು ಪುನರಾವರ್ತಿಸುತ್ತಾರೆ ಎಂದು ಭಾರತ ತಂಡ ಆಶಿಸುತ್ತಿದೆ.

Exit mobile version