Site icon Vistara News

Virat Kohli: ಪಾಕ್​ನ ವಿಶೇಷ ಚೇತನ ಅಭಿಮಾನಿಯಿಂದ ಕೊಹ್ಲಿಗೆ ಆಲ್​ ದಿ ಬೆಸ್ಟ್​

Pakistan Supporter

ಪಲ್ಲೆಕೆಲೆ: ವಿರಾಟ್ ಕೊಹ್ಲಿ(Virat Kohli) ವಿಶ್ವದ ಅತ್ಯಂತ ಜನಪ್ರಿಯ ಕ್ರೀಡಾಪಟುಗಳಲ್ಲಿ ಒಬ್ಬರು, ಮತ್ತು ಅವರ ಅಭಿಮಾನಿಗಳಿಗೆ ಯಾವುದೇ ಗಡಿಯ ಮಿತಿ ಇಲ್ಲ. ಭಾರತದ ಬದ್ಧ ಎದುರಾಳಿ ಪಾಕಿಸ್ತಾನದಲ್ಲಿಯೂ(virat kohli pakistan fans) ವಿರಾಟ್​ ಕೊಹ್ಲಿ ಅಪಾರ ಅಭಿಮಾನಿಗಳಿದ್ದಾರೆ. ಅವರನ್ನು ಭೇಟಿಯಾಗಲೇ ಎಷ್ಟೇ ಮಂದಿ ವರ್ಷಾನು ಗಟ್ಟಲೆ ಕಾದು ಕುಳಿತಿರುತ್ತಾರೆ. ಇದೀಗ ಕೊಹ್ಲಿ ಅವರು ಪಾಕಿಸ್ತಾನ ವಿಶೇಷ ಚೇತನ ಅಭಿಮಾನಿಯನ್ನು ಭೇಟಿಯಾದ(Pakistan Supporter) ವಿಡಿಯೊ ವೈರಲ್ ಆಗಿದೆ.

ಕೊಹ್ಲಿ ಅವರು ಪಾಕಿಸ್ತಾನ(IND vs PAK) ವಿರುದ್ಧ ಪಂದ್ಯವನ್ನಾಡಲು ಶ್ರೀಲಂಕಾಕ್ಕೆ ತೆರಳಿದ ವೇಳೆ ಪಾಕ್​ನ ವಿಶೇಷ ಚೇತನ ಅಭಿಮಾನಿಯೊಬ್ಬರು ಕೊಹ್ಲಿ ಭೇಟಿಗಾಗಿ ಕಾದು ಕುಳಿತಿದ್ದ. ಈ ಅಭಿಮಾನಿಯನ್ನು ಕಂಡ ಕೊಹ್ಲಿ ನೇರವಾಗಿ ಆತನ ಬಳಿ ಬಂದು ಫೋಟೊಗೆ ಫೋಸ್​​ ಮತ್ತು ಆತನ ಆರೋಗ್ಯವನ್ನು ವಿಚಾರಿಸಿದ್ದಾರೆ. ಇದೇ ವೇಳೆ ಅಭಿಮಾನಿ ಸಂತಸದಿಂದ ಕೊಹ್ಲಿಯನ್ನು ಹೊಗಳಿದ್ದಾರೆ. ‘ನಿಮ್ಮಂತೆ ಯಾರೂ ಇರಲು ಸಾಧ್ಯವಿಲ್ಲ. ನೀವು ಕ್ರಿಕೆಟ್​ನ ಶ್ರೇಷ್ಠ ಆಟಗಾರ. ನಿಮ್ಮ ಬ್ಯಾಟಿಂಗ್​ ನೋಡುವುದೇ ನನಗೆ ಆನಂದ. ಏಷ್ಯಾಕಪ್​ನಲ್ಲಿ(Asia Cup 2023) ಉತ್ತಮ ಸಾಧನೆ ತೋರುವಂತಾಗಿ’ ಎಂದು ಹಾರೈಸಿದ್ದಾರೆ.

ಪಾಕ್​ ಬೌಲಿಂಗ್​ ಬಗ್ಗೆ ಸಹ ಆಟಗಾರರಿಗೆ ಎಚ್ಚರಿಕೆ ನೀಡಿದ ಕೊಹ್ಲಿ

ಸ್ಟಾರ್​ ಸ್ಪೋರ್ಟ್ಸ್​ ಸಂದರ್ಶನದಲ್ಲಿ ಶುಕ್ರವಾರ ಮಾತನಾಡಿದ ವಿರಾಟ್​ ಕೊಹ್ಲಿ, ನಮ್ಮ ತಂಡ ಎಷ್ಟೇ ಬಲಿಷ್ಠವಾಗಿದ್ದರೂ ಪಾಕ್​ ಬೌಲರ್​ಗಳನ್ನು ಕಡೆಗಣಿಸಬಾರದು ಅವರ ಬೌಲಿಂಗ್​ ಉತ್ಕೃಷ್ಟ ಮಟ್ಟದಿಂದ ಕೂಡಿದೆ. ಯಾವುದೇ ಹಂತದಲ್ಲಿ ಪಂದ್ಯದ ಚಿತ್ರಣವನ್ನೇ ಬದಲಾಯಿಸಬಲ್ಲ ಪ್ರಭಾವಶಾಲಿ ಬೌಲರ್‌ಗಳನ್ನು ಬಾಬರ್​ ಪಡೆ ಹೊಂದಿದೆ. ಹೀಗಾಗಿ ನಮ್ಮ ಎಲ್ಲ ಬ್ಯಾಟರ್​ಗಳು ಎಚ್ಚರಿಕೆಂದ ಆಡಬೇಕು. ಹಗುರವಾಗಿ ಕಾಣಬಾರದು. ಅವರ ದಾಳಿಯನ್ನು ಸಮರ್ಥವಾಗಿ ಎದುರಿಸಲು ಸಿದ್ಧತೆ ರೂಪಿಸಬೇಕು ಎಂದು ಪಂದ್ಯಕ್ಕೂ ಮುನ್ನವೇ ಎಚ್ಚರಿಸಿದ್ದಾರೆ.

ಇದನ್ನೂ ಓದಿ IND vs PAK: ಭಾರತಕ್ಕೆ ಒಲಿಯಲಿ ಗೆಲುವಿನ ‘ಕ್ಯಾಂಡಿ’

ವಿಶ್ವದಾಖಲೆಯ ಸನಿಹ ಕೊಹ್ಲಿ

ವಿರಾಟ್​ ಕೊಹ್ಲಿ ಅವರು ಏಷ್ಯಾಕಪ್​ನಲ್ಲಿ ಒಟ್ಟಾರೆ 102 ರನ್​ ಬಾರಿಸಿದರೆ ಏಕದಿನ ಮಾದರಿಯಲ್ಲಿ 13 ಸಾವಿರ ರನ್​ ಪೂರ್ತಿಗೊಳಿಸಲಿದ್ದಾರೆ. ಇದೇ ವೇಳೆ ಸಚಿನ್​ ಅವರ ಹೆಸರಿನಲ್ಲಿದ ದಾಖಲೆ ಮುರಿಯಲಿದ್ದಾರೆ. ಅತಿ ಕಡಿಮೆ ಏಕದಿನ ಪಂದ್ಯಗಳಲ್ಲಿ ವೇಗವಾಗಿ 13 ಸಾವಿರ ರನ್​ ಗಳಿಸಿದ ವಿಶ್ವದ ಮೊದಲ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ. ಈ ಮೂಲಕ ಸಚಿನ್​ ಅವರ ದಾಖಲೆ ಮುರಿಯಲಿದ್ದಾರೆ. ಸಚಿನ್​ ಅವರು 321 ಪಂದ್ಯಗಳನ್ನು ಆಡುವ ಮೂಲಕ ಈ ದಾಖಲೆ ಬರೆದಿದ್ದರು. ಸದ್ಯ ಕಿಂಗ್​ ಕೊಹ್ಲಿ 275 ಏಕದಿನ ಪಂದ್ಯ ಆಡಿ 12,898 ರನ್​ ಗಳಿಸಿದ್ದಾರೆ. ಸಚಿನ್​ ಮಾತ್ರವಲ್ಲದೆ ಆಸೀಸ್​ ಮಾಜಿ ನಾಯಕ ರಿಕಿ ಪಾಂಟಿಂಗ್​, ಲಂಕಾದ ಕುಮಾರ ಸಂಗಕ್ಕರ ಮತ್ತು ಸನತ್​ ಜಯಸೂರ್ಯ ದಾಖಲೆಯೂ ಪತನಗೊಳ್ಳಲಿದೆ.

ಏಷ್ಯಾಕಪ್​ ಟೂರ್ನಿಯಲ್ಲಿ ಪಂದ್ಯವೊಂದರಲ್ಲಿ ಅತ್ಯಧಿಕ ವೈಯಕ್ತಿಕ ರನ್​ ಗಳಿಸಿದ ದಾಖಲೆ ವಿರಾಟ್​ ಕೊಹ್ಲಿ ಹೆಸರಿನಲ್ಲಿದೆ. ಸಾರಸ್ಯವೆಂದರೆ ಕಿಂಗ್​ ಕೊಹ್ಲಿ 2012ರಲ್ಲಿ ಪಾಕಿಸ್ತಾನ ವಿರುದ್ಧವೇ 183ರನ್​ ಬಾರಿಸಿದ್ದರು. ಈ ಸಾಧನೆಯ ಪಟ್ಟಿಯಲ್ಲಿ ಬಾಬರ್​ಗೆ(151) ದ್ವಿತೀಯ ಸ್ಥಾನ. ಮೂರನೇ ಸ್ಥಾನ ಯೂನಿಸ್​ ಖಾನ್​(144), ನಾಲ್ಕನೇ ಸ್ಥಾನ ಬಾಂಗ್ಲಾದ ಮುಸ್ಫಿಕರ್​ ರಹಿಂ(144) ಪಡೆದಿದ್ದಾರೆ.

Exit mobile version