ತಿರುವನಂತಪುರ : ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat kohli) ಶ್ರೀಲಂಕಾ ವಿರುದ್ಧದ ಏಕ ದಿನ ಸರಣಿಯ ಮೂರನೇ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿದ್ದಾರೆ. ಕೇವಲ 110 ಎಸೆತಗಳಲ್ಲಿ 166 ರನ್ ಬಾರಿಸಿದ ಅವರ ತಾವು ರನ್ ಮಷಿನ್ ಎಂಬುದನ್ನು ಸಾಬೀತು ಮಾಡಿದ್ದಾರೆ. ಈ ಇನಿಂಗ್ಸ್ನಲ್ಲಿ ಅವರು ಬಾರಿಸಿದ 97 ಮೀಟರ್ ದೂರ ಸಿಕ್ಸರ್ ಅತ್ಯಾಕರ್ಷಕವಾಗಿತ್ತು ಹಾಗೂ ಅದು ಧೋನಿ ಮಾದರಿಯ ಹೆಲಿಕಾಪ್ಟರ್ ಶಾಟ್ ಆಗಿತ್ತು.
ಇನಿಂಗ್ಸ್ನ 43. 4ನೇ ಎಸೆತದಲ್ಲಿ ಅವರು ಸಿಕ್ಸರ್ ಬಾರಿಸಿದ್ದಾರೆ. ಕಸುನ್ ರಜಿತ ಅವರ ನಿಧಾನಗತಿಯ ಎಸೆತಕ್ಕೆ ವಿರಾಟ್ ಕೊಹ್ಲಿ ಹೆಲಿಕಾಪ್ಟರ್ ಶಾಟ್ ಬಾರಿಸಿದರು. ಅದು 97 ಮೀಟರ್ ದೂರಕ್ಕೆ ಸಾಗಿತು. ಸಿಕ್ಸರ್ ಬಾರಿಸಿದ ವಿರಾಟ್ ಕೊಹ್ಲಿಯೂ ಅಚ್ಚರಿಗೊಳಪಡುವಂತೆ ಚೆಂಡು ಗ್ರೀನ್ಫೀಲ್ಡ್ ಸ್ಟೇಡಿಯಮ್ನ ಪ್ರೇಕ್ಷಕರ ಗ್ಯಾಲರಿ ದಾಟಿ ಹೋಯಿತು.
ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ 74ನೇ ಅಂತಾರಾಷ್ಟ್ರೀಯ ಶತಕ ಬಾರಿಸಿದರು. ಅಲ್ಲದೆ, ಏಕ ದಿನ ಮಾದರಿಯಲ್ಲಿ 46ನೇ ಶತಕವಾಗಿದೆ. ವಿರಾಟ್ ಕೊಹ್ಲಿ ಶತಕ ಬಾರಿಸಲು 85 ಎಸೆತಗಳನ್ನು ತೆಗೆದುಕೊಂಡರೆ ನಂತರದ 25 ಎಸೆತಗಳಲ್ಲಿ 66 ರನ್ ಬಾರಿಸಿದರು. ಅವರ ಬ್ಯಾಟ್ನಿಂದ 8 ಸಿಕ್ಸರ್ಗಳು ಹಾಗೂ 13 ಫೋರ್ಗಳು ಸಿಡಿದವು. 150 ಸ್ಟ್ರೈಕ್ರೇಟ್ನಲ್ಲಿ ಆಡಿದ ಅವರು ತಂಡ ಬೃಹತ್ ಮೊತ್ತ ಪೇರಿಸಲು ನೆರವಾದರು.
ಇದನ್ನೂ ಓದಿ | Virat Kohli | ಲಂಕಾ ವಿರುದ್ಧ ಶತಕ ಬಾರಿಸಿ ಸಚಿನ್ ದಾಖಲೆ ಮುರಿದ ವಿರಾಟ್ ಕೊಹ್ಲಿ!