Site icon Vistara News

IPL 2024 : ಮುಂಬೈ ಬ್ಯಾಟರ್​​ಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ ಎಂದು ಮಾಲೀಕರಿಗೆ ಸಲಹೆ ನೀಡಿದ ಮಾಜಿ ಕ್ರಿಕೆಟಿಗ

IPL 2024

ಬೆಂಗಳೂರು: ಐಪಿಎಲ್​ 17ನೇ ಆವೃತ್ತಿಯಲ್ಲಿ (IPL 2024) ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 24 ರನ್​ಗಳ ಭರ್ಜರಿ ಜಯ ಸಾಧಿಸಿ ಪ್ಲೇ ಆಫ್ಗೆ ಪ್ರವೇಶಿಸುವ ಅವಕಾಶ ಹೆಚ್ಚಿಸಿಕೊಂಡಿದೆ. ಆಡಿರುವ 11 ಪಂದ್ಯಗಳಲ್ಲಿ 8ನೇ ಸೋಲು ಕಂಡಿರುವ ಮುಂಬೈ ಇಂಡಿಯನ್ಸ್ ಅಗ್ರ 4ರಲ್ಲಿ ಸ್ಥಾನ ಪಡೆಯುವ ಅವಕಾಶ ಕಳೆದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ನೈಟ್ ರೈಡರ್ಸ್ 169 ರನ್​ಗಳಿಗೆ ಆಲ್​ಔಟ್ ಆಯಿತು. ಆದರೆ, ಅದಕ್ಕಿಂತ ಮೊದಲು 57 ರನ್​ಗೆ 5 ವಿಕೆಟ್​ ಕಳೆದುಕೊಂಡಿತ್ತು. ಆದರೆ ಆ ಬಳಿಕ ಚೇತರಿಸಿಕೊಂಡಿತ್ತು. ಆದರೆ, ಮುಂಬೈ ತಂಡ ಗೆಲುವಿನ ಅವಕಾಶವನ್ನು ಎಲ್ಲಿಯೂ ಸೃಷ್ಟಿ ಮಾಡಿಕೊಂಡಿರಲಿಲ್ಲ.

ಚೇಸಿಂಗ್ ಮಾಡುತ್ತಿದ್ದ ಮುಂಬೈ ತಂಡದ ಬ್ಯಾಟಿಂಗ್ ಕ್ರಮಾಂಕವು ಮತ್ತೊಮ್ಮೆ ಪರಿಣಾಮಕಾರಿಯಾಗಲಿಲ್ಲ; ಸೂರ್ಯಕುಮಾರ್ ಯಾದವ್ (56) ಹೊರತುಪಡಿಸಿ ರನ್ ಚೇಸ್​​ನಲ್ಲಿ ಯಾವುದೇ ಬ್ಯಾಟ್ಸ್ಮನ್ 30 ಕ್ಕಿಂತ ಹೆಚ್ಚು ರನ್ ಗಳಿಸಲಿಲ್ಲ. ಇದಲ್ಲದೆ, ನಾಯಕ ಹಾರ್ದಿಕ್ ಪಾಂಡ್ಯ 7 ನೇ ಕ್ರಮಾಂಕದಲ್ಲಿ ಮತ್ತು ಟಿಮ್ ಡೇವಿಡ್ 8 ನೇ ಕ್ರಮಾಂಕದಲ್ಲಿ ಬಂದಿದ್ದರಿಂದ ಕೆಲವು ಬ್ಯಾಟಿಂಗ್ ಕ್ರಮಾಂಕದ ಆಯ್ಕೆಗಳು ಪ್ರಶ್ನೆಗಳನ್ನು ಹುಟ್ಟುಹಾಕಿದವು.

“ಟಿಮ್ ಡೇವಿಡ್ ಮತ್ತು ಹಾರ್ದಿಕ್ ಪಾಂಡ್ಯ ಕೂಡ ತಡವಾಗಿ ಬ್ಯಾಟಿಂಗ್​ಗೆ ಬಂದರು. ಆ ರೀತಿ ಮಾಡುವುದರಿಂದ ನೀವು ಯಾವ ಫಲಿತಾಂಶಗಳನ್ನು ನಿರೀಕ್ಷೆ ಮಾಡುತ್ತೀರಿ. ಕೆಲವೇ ಎಸೆತಗಳು ಉಳಿದಾಗ ಅವರು ಬಂದರೆ ಏನು ಉಪಯೋಗ. ಅವರು ಮೊದಲೇ ಆಡಲು ಬರಬೇಕಿತ್ತು. ಆಟವನ್ನು ಬೇಗನೆ ಮುಗಿಸಬಹುದಿತ್ತು. ಚೇಸಿಂಗ್ ನಲ್ಲಿ ಅವರಿಗೆ ಏನಾಗಿದೆ ಎಂದು ನಾನು ನಿಜವಾಗಿಯೂ ಆಶ್ಚರ್ಯ ಪಡುತ್ತೇನೆ. ಪಾಂಡ್ಯ 7ನೇ ಕ್ರಮಾಂಕದಲ್ಲಿ ಮತ್ತು ಡೇವಿಡ್ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರೆ ಏನು ಪ್ರಯೋಜ ಎಂದು ಸೆಹ್ವಾಗ್ ಹೇಳಿದ್ದಾರೆ.

“ಹಾರ್ದಿಕ್ ಪಾಂಡ್ಯ ಜಿಟಿ ನಾಯಕರಾಗಿದ್ದಾಗ ಅವರು ಸಾಮಾನ್ಯವಾಗಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಅನುಭವಿ ಆಟಗಾರರ ಈಗ ಕೊನೆಯಲ್ಲಿ ಏಕೆ ಬರುತ್ತಿದ್ದಾರೆ? ಇದು ನಿಜವಾಗಿಯೂ ಗೊಂದಲಮಯ” ಎಂದು ಅವರು ಸೆಹ್ವಾಗ್​ ಟೀಕಿಸಿದ್ದಾರೆ.

2025 ರ ಋತುವಿಗೆ ಯೋಜನೆ ಹಾಕುತ್ತಿರುವ ಎಂಐ ನೇಹಾಲ್ ವಧೇರಾ ಮತ್ತು ನಮನ್ ಧೀರ್ ಅವರನ್ನು ಅಗ್ರ ಕ್ರಮಾಂಕದಲ್ಲಿ ಕಳುಹಿಸಿದೆ ಎಂದು ಟಿವಿ ನಿರೂಪಕ ಪ್ರತಿಕ್ರಿಯಿಸಿದ್ದಾರೆ. ಈಗ ಪಂದ್ಯಗಳನ್ನು ಗೆಲ್ಲದಿದ್ದರೆ ತಂಡವು ಭವಿಷ್ಯಕ್ಕಾಗಿ ಯೋಜನೆ ಹಾಕಿ ಏನು ಪ್ರಯೋಜನ ಎಂದು ಸೆಹ್ವಾಗ್ ವಾದಿಸಿದ್ದಾರೆ.

ಇದನ್ನೂ ಓದಿ: Rinku Singh : ಕೊಹ್ಲಿಯ ಬ್ಯಾಟ್​ನಲ್ಲಿ ರಿಂಕು ಚೆನ್ನಾಗಿ ಆಡುತ್ತಿಲ್ಲ; ನೆಟ್ಟಿಗರಿಂದ ಟ್ರೋಲ್​!

“2025 ಕ್ಕೆ ತಯಾರಿ ನಡೆಸಲಿ. ಆದರೆ ಈಗ ಯಾರು ಎಲ್ಲಿ ಬ್ಯಾಟಿಂಗ್ ಮಾಡಬೇಕು ಎಂಬುದರ ಬಗ್ಗೆ ಯೋಚಿಸಬೇಕು. ಈ ಕ್ಷಣದಲ್ಲಿ ಭವಿಷ್ಯವನ್ನು ಹೇಗೆ ಊಹಿಸಬಹುದು? ಪ್ಲೇಆಫ್ ಗೆ ಅರ್ಹತೆ ಪಡೆದಿದ್ದರೆ ಅವಕಾಶಗಳನ್ನು ತೆಗೆದುಕೊಳ್ಳಬಹುದಿತ್ತು. ಮುಂಬಯಿ ತಂಡ ಬ್ಯಾಟಿಂಗ್ ಕ್ರಮಾಂಕದಲ್ಲಿ ಗೊಂದಲದಲ್ಲಿದೆ ಮತ್ತು ಪಂದ್ಯಗಳನ್ನು ಗೆಲ್ಲುತ್ತಿಲ್ಲ,” ಎಂದು ಸೆಹ್ವಾಗ್ ನುಡಿದಿದ್ದಾರೆ.

ಇದು ತುಂಬಾ ವಿಚಿತ್ರವಾಗಿದೆ. ಮ್ಯಾನೇಜ್ಮೆಂಟ್​ ಆಟಗಾರರನ್ನು ಪ್ರಶ್ನಿಸಬೇಕು ಮತ್ತು ಅವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಪರ್ಯಾಯವಾಗಿ, ಆಟಗಾರರು ತಾವು ವಿಭಿನ್ನ ಸ್ಥಾನದಲ್ಲಿ ಏಕೆ ಬ್ಯಾಟಿಂಗ್ ಮಾಡುತ್ತಿದ್ದೇವೆ ಎಂಬುದನ್ನು ಸ್ಪಷ್ಟಪಡಿಸಬೇಕಾಗಿದೆ. ಇದು ಸಹಾಯಕ ಸಿಬ್ಬಂದಿ, ಬ್ಯಾಟಿಂಗ್ ಕೋಚ್, ಬೌಲಿಂಗ್ ಕೋಚ್ ಮತ್ತು ನಾಯಕನ ತಪ್ಪು. ಮಾಲೀಕರು ಕಠಿಣ ಪ್ರಶ್ನೆಗಳನ್ನು ಕೇಳಬೇಕಾಗುತ್ತದೆ” ಎಂದು ಅವರು ಹೇಳಿದರು.

Exit mobile version