Site icon Vistara News

Virender Sehwag: ‘ಇದು ಟೀಮ್‌ ಇಂಡಿಯಾ ಅಲ್ಲ’; ವಿಶ್ವಕಪ್​ ತಂಡ ಪ್ರಕಟದ ಬೆನ್ನಲ್ಲೇ ಅಚ್ಚರಿಯ ಟ್ವೀಟ್​ ಮಾಡಿದ ಸೆಹವಾಗ್

Virender Sehwag Wants 'Bharat' On Indian Players' Jersey In World Cup

ನವದೆಹಲಿ: ಕೇಂದ್ರ ಸರ್ಕಾರವು, ಸಂವಿಧಾನದಲ್ಲಿ ‘ಇಂಡಿಯಾ’ (India) ಎಂಬ ಪದ ಇರುವೆಡೆ ‘ಭಾರತ’ (Bharat) ಎಂದು ಬದಲಿಸುವ ಸಂಬಂಧ ವಿಶೇಷ ಸಂಸತ್ ಅಧಿವೇಶನ (Parliament Special Session) ವೇಳೆ ವಿಧೇಯಕವನ್ನು ಮಂಡಿಸಲಿದೆ ಎಂಬ ಸುದ್ದಿ ಎಲ್ಲಡೆ ಪಸರಿಸಿದ್ದೇ ತಡ, ಟೀಮ್​ ಇಂಡಿಯಾದ ಮಾಜಿ ಡ್ಯಾಶಿಂಗ್​ ಓಪನರ್​ ವೀರೇಂದ್ರ ಸೆಹವಾಗ್​(Virender Sehwag) ಅವರು ಟ್ವಿಟರ್​ನಲ್ಲಿ ಅಚ್ಚರಿಯ ಟ್ವೀಟ್​ ಒಂದನ್ನು ಮಾಡಿದ್ದಾರೆ.

ಮಂಗಳವಾರ ಬಿಸಿಸಿಐ ಏಕದಿನ ವಿಶ್ವಕಪ್​ಗೆ 15 ಸದಸ್ಯರ ತಂಡವನ್ನು(icc world cup india squad) ಪ್ರಕಟಿಸಿದೆ. ಈ ತಂಡಕ್ಕೆ ಬೆಂಬಲ ಸೂಚಿಸಿ ಟ್ವೀಟ್‌ ಮಾಡುವ ಮೂಲಕ ದೇಶಕ್ಕೆ ಇಂಡಿಯಾ ಎನ್ನುವ ಹೆಸರಿನ ಬದಲು ಭಾರತ್‌ ಎನ್ನುವ ಹೆಸರನ್ನು ಇಡುವುದಕ್ಕೆ ಬೆಂಬಲ ಸೂಚಿಸಿದ್ದಾರೆ. ಅಲ್ಲದೆ ಏಷ್ಯಾಕಪ್​ನಲ್ಲಿ ಸೆಪ್ಟೆಂಬರ್​ 10ರಂದು ನಡೆಯುವ ಭಾರತ ಮತ್ತು ಪಾಕಿಸ್ತಾನ ವಿರುದ್ಧದ ಸೂಪರ್​-4 ಪಂದ್ಯದ ಹ್ಯಾಶ್​ ಟ್ಯಾಗನ್ನು IND vs PAK ಬದಲು BHA vs PAK ಎಂದು ಬದಲಿಸಿದ್ದಾರೆ. ಜತೆಗೆ ಬಿಸಿಸಿಐ ಕೂಡ ಭಾರತ್​ ಎಂದು ತಂಡಕ್ಕೆ ಹೆಸರಿಡುವಂತೆ ಒತ್ತಾಯಿಸಿದ್ದಾರೆ.

ಬ್ರಿಟಿಷರು ಇಟ್ಟ ಹೆಸರು

ನಮ್ಮಲ್ಲಿ ಹೆಮ್ಮೆಯನ್ನು ಹುಟ್ಟಿಸುವ ಹೆಸರು ಇರಬೇಕು ಎಂದು ನಾನು ಯಾವಾಗಲೂ ನಂಬಿದ್ದೇನೆ. ನಾವು ಭಾರತೀಯರು, ಇಂಡಿಯಾ(INDIA) ಎಂಬುದು ಬ್ರಿಟಿಷರು ನೀಡಿದ ಹೆಸರು. ಮತ್ತು ನಮ್ಮ ಮೂಲ ಹೆಸರನ್ನು ‘ಭಾರತ್’ ಎಂದು ಅಧಿಕೃತವಾಗಿ ಮರಳಿ ಪಡೆಯಲು ಸಂತಸವಾಗುತ್ತಿದೆ. ವಿಶ್ವಕಪ್​ನಲ್ಲಿ ನಮ್ಮ ತಂಡದ ಆಟಗಾರರ ಜೆರ್ಸಿಯ ಎದೆಯ ಭಾಗದಲ್ಲಿ ‘ಭಾರತ್​’ ಎನ್ನುವ ಹೆಸರು ಇರಲಿ ಎಂದು ಬಿಸಿಸಿಐ ಮತ್ತು ಜಯ್​ ಶಾ ಅವರಲ್ಲಿ ಮನವಿ ಮಾಡುತ್ತೇನೆ ಎಂದು ಟ್ವಿಟ್​​ ಮಾಡಿದ್ದಾರೆ.

ಕೂತೂಹಲ ಕೆರಳಿಸಿದ ವಿಶೇಷ ಅಧಿವೇಶ

ಸಂಸತ್​ ಅಧಿವೇಶ ಮುಗಿದಿದ್ದರೂ ಸೆಪ್ಟೆಂಬರ್​ 18 ರಿಂದ 21ರವರೆಗೆ ವಿಶೇಷ ಅಧಿವೇಶನದ ಕರೆಯಲಾಗಿದೆ. ಆರಂಭದಲ್ಲಿ ಈ ಅಧಿವೇಶನದಲ್ಲಿ ಒಂದು ದೇಶ ಒಂದು ಚುನಾವಣೆಯ ಪ್ರಸ್ತಾಪ ನಡೆಯಲಿದೆ ಎಂದು ಊಹಿಸಲಾಗಿತ್ತು. ಆದರೆ ಈಗ ದೇಶದ ಹೆಸರನ್ನು ಮರು ನಾಮಕರಣ ಮಾಡುವ ಪ್ರಸ್ತಾಪವನ್ನು ಸರ್ಕಾರ ಮಾಡಲಿದೆ ಎಂಬ ಮಾತುಗಳು ಕೇಳಿಬಂದಿದೆ.

ಇದನ್ನೂ ಓದಿ ಧೋನಿಗೂ ಇತ್ತು ಮೂಢನಂಬಿಕೆ ಮೇಲೆ ವಿಶ್ವಾಸ; ರಹಸ್ಯ ಬಯಲು ಮಾಡಿದ ಸೆಹವಾಗ್​

ರಿಪಬ್ಲಿಕ್‌ ಆಫ್‌ ಇಂಡಿಯಾ ಬದಲಿಗೆ ರಿಪಬ್ಲಿಕ್‌ ಆಫ್‌ ಭಾರತ ಎನ್ನುವ ಹೆಸರನ್ನು ಸರ್ಕಾರ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಭಾರತದ ಸಂವಿಧಾನದ 1ನೇ ವಿಧಿಯು ಭಾರತ, ಅಂದರೆ ಭಾರತವು ರಾಜ್ಯಗಳ ಒಕ್ಕೂಟವಾಗಿದೆ ಎಂದು ಹೇಳುತ್ತದೆ. ಈ ಲೇಖನ ಕೂಡ ಬದಲಾಗುವ ಸಾಧ್ಯತೆ ಇದೆ ಎನ್ನುವ ಚರ್ಚೆಯೂ ಆರಮಭವಾಗಿದೆ. ಇದೇ ವಿಚಾರವಾಗಿ ಈಗ ರಾಜಕೀಯ ಕಿತ್ತಾಟವೂ ಆರಂಭವಾಗಿದೆ. ಇನ್ನು ಕೆಲವರು ಈ ಹೆಸರಿಗೆ ಬೆಂಬಲ ಸೂಚಿಸಿದ್ದಾರೆ. ಇದರಲ್ಲಿ ಅಮಿತಾಭ್ ಬಚ್ಚನ್ (Amitabh Bachchan) ಅವರು ಭಾರತ್ ಮಾತಾ ಕಿ ಜಯ ಎಂದು ಟ್ವೀಟ್ ಮಾಡಿ ಈ ಹೆಸರಿಗೆ​ ಬೆಂಬಲಿಸಿದ್ದಾರೆ.

Exit mobile version