Site icon Vistara News

VISTARA TOP 10 NEWS : ಪಾಕಿಸ್ತಾನವನ್ನು ಬಗ್ಗುಬಡಿದ ಭಾರತ, ಶುರುವಾಗಲಿದೆ ದಸರಾ ವೈಭವ ಮತ್ತು ಇತರ ಸುದ್ದಿ

Top 10 news

1. ವಿಶ್ವಕಪ್‌ ಕ್ರಿಕೆಟ್:‌ ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಮಹೋನ್ನತ ಜಯ

ಬೌಲರ್​ಗಳ ಸಂಘಟಿತ ಹೋರಾಟ ನಾಯಕ ರೋಹಿತ್​ ಶರ್ಮಾ (86) ಅವರ ಅಬ್ಬರದ ಅರ್ಧ ಶತಕದ ನೆರವು ಪಡೆದ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ (Ind vs Pak) ವಿರುದ್ಧದ ವಿಶ್ವ ಕಪ್​ (ICC World Cup 2023) ಪಂದ್ಯದಲ್ಲಿ 7 ವಿಕೆಟ್​ಗಳ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ತವರೂರು ಗುಜರಾತ್​ನ ಅಹಮದಾಬಾದ್​ನಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಹೀನಾಯವಾಗಿ ಸೋಲಿಸಿತು. ಪಂದ್ಯ ನಡೆದ ಸ್ಟೇಡಿಯಮ್​ ಕೂಡ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹೆಸರಿನಲ್ಲಿರುವ ಕಾರಣ ಚರ್ಚೆ ಯೂ ಜೋರಾಗಿತ್ತು. ಆದರೆ ಭಾರತ ಬಳಗ ಪಾಕ್​ ತಂಡವನ್ನು ಕ್ಯಾರೇ ಎನ್ನದೇ ಗೆಲುವು ಸಾಧಿಸಿತು.

ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

2. ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಕಮಿಷನ್‌: ಸದ್ದು ಮಾಡಿ ತಣ್ಣಗಾದ ಆರೋಪ
ಮೈಸೂರು ದಸರಾ ಸಾಂಸ್ಕೃತಿಕ ಉತ್ಸವದಲ್ಲಿ ಕಾರ್ಯಕ್ರಮ ನೀಡುವ ಅತಿಥಿಗಳ ಸಂಭಾವನೆಯಲ್ಲೂ ಕಮಿಷನ್‌ ಹೊಡೆಯಲಾಗುತ್ತಿದೆ ಎಂಬ ಆರೋಪವೊಂದು ಭಾರಿ ಸದ್ದು ಮಾಡಿದೆ. ಸರೋದ್‌ ವಾದಕ ಪಂಡಿತ್‌ ರಾಜೀವ್‌ ತಾರಾನಾಥ್‌ ಅವರು ಮಾಡಿದ್ದಾರೆನ್ನಲಾದ ಈ ಆರೋಪವನ್ನು ಬಿಜೆಪಿ ಸರ್ಕಾರದ ಮೇಲಿನ ದಾಳಿಗೆ ಬಳಸಿಕೊಂಡಿತು. ಆದರೆ, ಕೊನೆಗೆ ರಾಜೀವ್‌ ತಾರಾನಾಥ್‌ ಅವರು ತನ್ನಿಂದ ಯಾರೂ ಕಮಿಷನ್‌ ಕೇಳಿಲ್ಲ ಎಂದು ಹೇಳುವ ಮೂಲಕ ಆರೋಪ ಠುಸ್ಸಾಯಿತು.

ವರದಿ 1: ಪಂ. ರಾಜೀವ್‌ ತಾರಾನಾಥ್‌ಗೂ ಕಮಿಷನ್‌ ಕಾಟ; ಲಜ್ಜೆಗೆಟ್ಟ ಸರ್ಕಾರ ಎಂದ ವಿಜಯೇಂದ್ರ
ವರದಿ 2: ದಸರಾ ಕಮಿಷನ್‌ ಆರೋಪದ ತನಿಖೆಗೆ ಸರ್ಕಾರ ಆದೇಶ; FAKE NEWS ಎಂದ ಕಾಂಗ್ರೆಸ್‌
ವರದಿ 3: Dasara Commission : ನನ್ನಲ್ಲಿ ಯಾರೂ ಕಮಿಷನ್‌ ಕೇಳಿಲ್ಲ; ಪಂ. ರಾಜೀವ್‌ ತಾರಾನಾಥ್‌ ಸ್ಪಷ್ಟನೆ

3. IT Raid : ಕಂಟ್ರಾಕ್ಟರ್ ಮನೆಯಲ್ಲಿ 42 ಕೋಟಿ ರೂ. ಪತ್ತೆ; ಸಿಬಿಐ ತನಿಖೆಗೆ ಬಿಜೆಪಿ ಆಗ್ರಹ
ಗುತ್ತಿಗೆದಾರರ ಸಂಘದ (Contractors Association) ಉಪಾಧ್ಯಕ್ಷ ಅಂಬಿಕಾಪತಿ ಅವರ ಮನೆ ಮೇಲೆ ನಡೆದ ಐಟಿ ದಾಳಿ (IT Raid in Bangalore) ವೇಳೆ ಪತ್ತೆಯಾದ 42 ಕೋಟಿ ರೂ. ಹಣದ ವಿಚಾರವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

4. ಬಾಯಲ್ಲಿ ಬಿಸ್ಮಿಲ್ಲಾ, ಕೈಯಲ್ಲಿ ರೈಫಲ್‌ ಮತ್ತು ಒತ್ತೆಯಾಳು ಮಕ್ಕಳು: ಹಮಾಸ್‌ ಉಗ್ರರ ಹೊಸ ವಿಡಿಯೋ
ಹಮಾಸ್‌ ಉಗ್ರರು (Hamas Terrorists) ತಾವು ಒತ್ತೆಯಾಳುಗಳಾಗಿ ಇರಿಸಿಕೊಂಡ ಇಸ್ರೇಲಿ ಮಕ್ಕಳ ಫೂಟೇಜ್‌ ಬಿಡುಗಡೆ ಮಾಡಿದ್ದಾರೆ. ಇದೇ ವಿಡಿಯೋವನ್ನು ಇಸ್ರೇಲ್‌ ಸೈನ್ಯ (Israel military) ಕೂಡ ಶೇರ್‌ ಮಾಡಿಕೊಂಡಿದ್ದು, ʼಇವರೇ ನಾವು ಯಾರ ವಿರುದ್ಧ ಹೋರಾಡುತ್ತಿದ್ದೇವೆಯೋ (Israel Palestine War) ಆ ಹಮಾಸ್‌ ಉಗ್ರರುʼ ಎಂದು ಹೇಳಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

5.Narendra Modi: ಮೋದಿ ಈಗ ಗೀತ ರಚನೆಕಾರ; ಪ್ರಧಾನಿ ವಿರಚಿತ ಗರ್ಬಾ ಹಾಡನ್ನು ನೀವೂ ಕೇಳಿ!
ಹಲವು ಆಸಕ್ತಿಗಳನ್ನು ಹೊಂದಿರು ನರೇಂದ್ರ ಮೋದಿ (Narendra Modi) ಅವರೀಗ ಗೀತರಚನೆಕಾರರೂ ಆಗಿದ್ದಾರೆ. ಇವರು ರಚಿಸಿದ ಗರ್ಬಾ ಹಾಡಿನ (Garba Song) ವಿಡಿಯೊ ರಿಲೀಸ್‌ ಆಗಿದ್ದು, ಭಾರಿ ವೈರಲ್‌ ಆಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

6. ವಿಸ್ತಾರ ಅಂಕಣ: ಇಸ್ರೇಲ್‌ನಿಂದ ಭಾರತ ಕಲಿಯಬೇಕಾದ ಮೂರು ಪಾಠಗಳು
1948ರಲ್ಲಿ ಜನ್ಮ ತಾಳಿದ ಇಸ್ರೇಲ್‌ ಹಾಗೂ 1947ರಲ್ಲಿ ಸ್ವತಂತ್ರವಾದ ಭಾರತ- ಎರಡೂ ದೇಶಗಳಿಗೂ ಸಾಮ್ಯಗಳಿವೆ. ಆದರೆ ಇಸ್ರೇಲ್‌ ಎದುರಿಸಿದ ಪರಿಸ್ಥಿತಿ ಭೀಕರ. ಅದನ್ನು ಎದುರಿಸಿ ನಿಂತ ಆ ದೇಶದ ಛಲ ನಮಗೊಂದು ಪಾಠ. ಈ ಬಗ್ಗೆ ವಿಶ್ಲೇಷಣೆ ಮಾಡಿದ್ದಾರೆ ವಿಸ್ತಾರ ನ್ಯೂಸ್‌ನ ಪ್ರಧಾನ ಸಂಪಾದಕರಾದ ಹರಿಪ್ರಕಾಶ್‌ ಕೋಣೆಮನೆ ಅವರು ತಮ್ಮ ವಿಸ್ತಾರ ಅಂಕಣದಲ್ಲಿ. ಪೂರ್ಣ ಲೇಖನ ಓದಲು ಈ ಲಿಂಕ್‌ ಕ್ಲಿಕ್‌ ಮಾಡಿ

7. Mysore dasara : ದಸರಾ ಮಹೋತ್ಸವದ ಉದ್ಘಾಟನೆಗೆ ಕ್ಷಣಗಣನೆ; ನಾಳೆ ಹಂಸಲೇಖ ಚಾಲನೆ
ಅಕ್ಟೋಬರ್‌ 15ರಂದು ಭಾನುವಾರ ಬೆಳಗ್ಗೆ 10.15ಕ್ಕೆ ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿಗೆ (Devi Chamundeshwari) ಪೂಜೆ ಸಲ್ಲಿಸುವ ಮೂಲಕ ವೈಭವದ ಮೈಸೂರು ದಸರಾ ಸಂಭ್ರಮ ತೆರೆದುಕೊಳ್ಳಲಿದೆ. ಸಂಗೀತ ನಿರ್ದೇಶಕ, ನಾದಬ್ರಹ್ಮ ಹಂಸಲೇಖ ದಸರಾವನ್ನು ಉದ್ಘಾಟನೆ ಮಾಡಲಿದ್ದಾರೆ. ಮುಂದಿನ 10 ದಿನಗಳ ಕಾಲ ಮೈಸೂರು ಕಣ್ಣು ಕೋರೈಸುವ ವೈಭವದೊಂದಿಗೆ ಬೆಳಗಲಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಪೂರಕ ವರದಿ1 : ಜಂಬೂ ಸವಾರಿಯಲ್ಲಿ ಗಜ ಗಾಂಭೀರ್ಯ; ಗಮನ ಸೆಳೆವ ಆನೆಗಳ ಸೌಂದರ್ಯ
ಪೂರಕ ವರದಿ2: ದಸರಾ ನಾಡಹಬ್ಬದಲಿ ಚಿನ್ನದ ಅಂಬಾರಿ, ಜಂಬೂ ಸವಾರಿ; ನೋಡ ಬನ್ನಿ ಮೈಸೂರು ನಗರಿ!

8. Money Guide: ಈಗಷ್ಟೇ ಕೆಲಸಕ್ಕೆ ಸೇರಿದವರೂ ಹಣ ಉಳಿಸಬಹುದು; ಇಲ್ಲಿವೆ ಸರಳ ಸೂತ್ರಗಳು
ನೀವು ಹೊಸದಾಗಿ ಮೊದಲ ಸಂಬಳ (First salary) ಪಡೆಯುತ್ತಿರುವವರೇ? ನೀವು ಮಿಲೇನಿಯಲ್ಸ್ (millennials) ಮತ್ತು GenZನವರಾ? ಹಾಗಿದ್ದರೆ ಹಣ ಉಳಿಸುವುದು ಹೇಗೆ ಎಂಬುದಕ್ಕೆ ಸರಳ ಸೂತ್ರಗಳನ್ನು ಹೇಳುತ್ತೇವೆ ಕೇಳಿ.. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

9. BBK Season 10: ಬಾತ್‌ ರೂಮ್‌ನಲ್ಲಿ ಬಿಕ್ಕಿ ಬಿಕ್ಕಿ ಅತ್ತ ಡ್ರೋನ್‌ ಪ್ರತಾಪ್‌; ಕ್ಷಮೆ ಕೇಳಿದ ಸ್ಪರ್ಧಿಗಳು!
ಪ್ರಥಮ್‌ ಕೂಡ ಈಗಾಗಲೇ ಮನೆಯಲ್ಲಿ ತುಕಾಲಿ ಸಂತೋಷ್‌ ಅವರಿಗೆ ಈ ರೀತಿ ಅವರನ್ನು ತೇಜೋವಧೆ ಮಾಡುವುದು ಸರಿಯಲ್ಲ ಎಂದು ವಾರ್ನಿಂಗ್‌ ಕೂಡ ಕೊಟ್ಟಿದ್ದಾರೆ. ಆದರೆ ಇಂತಹ ಸನ್ನಿವೇಶಗಳು ಮರುಕಳಿಸುತ್ತಿದ್ದು, ಡ್ರೋನ್‌ ಪ್ರತಾಪ್‌ ಬಾತ್‌ರೂಮ್‌ನಲ್ಲಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

10.Viral Video: ಪಾರಿವಾಳವನ್ನು ಹಿಡಿಯಲು ಸ್ಕೆಚ್‌ ಹಾಕಿದ 3 ಬೆಕ್ಕುಗಳು; ಆಮೇಲೇನಾಯ್ತು ನೀವೇ ನೋಡಿ
ಒಬ್ಬ ನಾಯಕನನ್ನು ಹಿಡಿಯಲು ಹಲವು ಖಳ ನಾಯಕರು ಮುಗಿ ಬೀಳುವುದು, ನಾಯಕ ಎಲ್ಲರಿಂದ ತಪ್ಪಿಸಿಕೊಳ್ಳುವುದನ್ನು ನೀವು ಕಮರ್ಷಿಯಲ್‌ ಚಿತ್ರಗಳಲ್ಲಿ ನೋಡಿರುತ್ತೀರಿ. ಇಲ್ಲಿ ಹೀರೊ ಸ್ಥಾನದಲ್ಲಿ ಪಾರಿವಾಳ ಇದ್ದರೆ ಖಳ ನಾಯಕರ ಪಾತ್ರ ತೊಟ್ಟಿದ್ದು ಬೆಕ್ಕುಗಳು. ಏನಾಯ್ತು? ನೀವೇ ಓದಿ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version