Site icon Vistara News

Viral Video: ಪ್ರೀತಿಯ ತಂಗಿಯನ್ನು ಗಂಡನ ಮನೆಗೆ ಬೀಳ್ಕೊಡುವಾಗ ಮಕ್ಕಳಂತೆ ಅತ್ತ ಆರ್​ಸಿಬಿ ಆಟಗಾರ ಹಸರಂಗ

Wanindu Hasaranga Breaks Down During Younger Sister’s Marriage

ಕೊಲೊಂಬೊ: ಅಣ್ಣ ತಂಗಿಯರ ಈ ಬಂಧ, ಜನುಮ ಜನುಮಗಳ ಅನುಬಂಧ ಎನ್ನುವ ಹಾಡಿಗೆ ಬೆಲೆ ಕಟ್ಟಲು ಸಾಧವಿಲ್ಲ. ಪ್ರತಿಯೊಬ್ಬ ಅಣ್ಣನು ತನಗೊಂದು ತಂಗಿ ಬೇಕು ಹಾಗೆಯೇ ತಂಗಿಗೂ ಕೂಡ ತನಗೊಂದು ಅಣ್ಣ ಬೇಕು ಎಂಬ ಬಯಕೆಯಲ್ಲಿರುತ್ತಾರೆ. ಅಣ್ಣ ತಂಗಿಯರ ಮಧುರ ಬಾಂಧವ್ಯವನ್ನು ವರ್ಣಿಸಲು ಪದಗಳೇ ಸಾಲದು. ಸದಾ ತಮಾಷೆಯಾಗಿ ಜಗಳವಾಡುತ್ತಾ ಇರುವ ಅಣ್ಣ ತಂಗಿಯರು ಮದುವೆಯ ಬಳಿಕ ತಂಗಿ ಗಂಡನ ಮನೆಗೆ ತೆರಳುವ ವೇಳೆ ಎಂತಹ ಅಣ್ಣನಾದರೂ ಕಣ್ಣೀರು ಸುರಿಸದೇ ಇರನು. ಇತಂಹದ್ದೇ ಘಟನೆಗೆ ಶ್ರೀಲಂಕಾದ ಕ್ರಿಕೆಟಿಗ ವನಿಂದು ಹಸರಂಗ(Wanindu Hasaranga)​ ಬಾಳಲ್ಲಿಯೂ ನಡೆದಿದೆ.

ವನಿಂದು ಹಸರಂಗ ಅವರು ತಮ್ಮ ತಂಗಿಯ ಮದುವೆಯಲ್ಲಿ ಬೇಸರದಿಂದ ಕಣ್ಣೀರು ಹಾಕಿರುವ ವಿಡಿಯೊ ಇನ್​ಸ್ಟಾಗ್ರಾಮ್​ನಲ್ಲಿ ವೈರಲ್(Viral Video)​ ಆಗಿದೆ. ಈ ವಿಡಿಯೊ ಕಂಡ ಅನೇಕರು ಅಣ್ಣ ತಂಗಿಯ ಈ ಪ್ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಸರಂಗ ಅವರು ತಮ್ಮ ಕಿರಿಯ ತಂಗಿಯನ್ನು ಮದುವೆ(wanindu hasaranga sister wedding) ಮಾಡಿ ಗಂಡನ ಮನೆಗೆ ಬೀಳ್ಕೊಡುವಾಗ ತಮ್ಮ ತಂಗಿಯನ್ನು ಅಪ್ಪಿಕೊಂಡು ಮಕ್ಕಳಂತೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ತಂಗಿಯೂ ಕೂಡ ಅಣ್ಣನನ್ನು ಅಪ್ಪಿಕೊಂಡು ಕಣ್ಣೀರು ಸುರಿಸಿದ್ದಾರೆ.

ಟೆಸ್ಟ್ ಕ್ರಿಕೆಟ್​ಗೆ ದಿಢೀರ್​ ವಿದಾಯ ಹೇಳಿದ್ದ ಹಸರಂಗ

ಐಪಿಎಲ್​ನಲ್ಲಿ(IPL) ರಾಯಲ್​ ಚಾಲೆಂಜರ್ಸ್​ ಬೆಂಗಳೂರು(RCB) ತಂಡದ ಪರ ಆಡುವ ಶ್ರೀಲಂಕಾದ ಸ್ಪಿನ್​ ಬೌಲರ್​ ವನಿಂದು ಹಸರಂಗ ಅವರು ಕೆಲ ದಿನಗಳ ಹಿಂದಷ್ಟೇ ಟೆಸ್ಟ್​ ಕ್ರಿಕೆಟ್​ಗೆ ದಿಢೀರ್​ ನಿವೃತ್ತಿ ಘೋಷಿಸಿದ್ದರು. ಸೀಮಿತ ಓವರ್​ಗಳ ಕ್ರಿಕೆಟ್​ಗೆ ಹೆಚ್ಚಿನ ಮಹತ್ವ ನೀಡುವ ಸಲುವಾಗಿ ಅವರು ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದರು.

ಆಲ್​ರೌಂಡರ್​ ಆಗಿರುವ ಹಸರಂಗ 2020ರಲ್ಲಿ ಸೆಂಚುರಿಯನ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಆಡುವ ಮೂಲಕ ಟೆಸ್ಟ್‌ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದರು. ಒಟ್ಟಾರೆಯಾಗಿ 4 ಟೆಸ್ಟ್​ ಪಂದ್ಯಗಳನ್ನು ಆಡಿರುವ ಅವರು ಹೇಳಿಕೊಳ್ಳವಂತ ಸಾಧನೆಯನ್ನು ಮಾಡಿಲ್ಲ. ಕೇವಲ 4 ವಿಕೆಟ್​ ಮಾತ್ರ ಕಬಳಿಸಿದ್ದಾರೆ. ಬ್ಯಾಟಿಂಗ್​ನಲ್ಲಿ 196 ರನ್​ ಕಲೆಹಾಕಿದ್ದಾರೆ. 2021ರಲ್ಲಿ ಬಾಂಗ್ಲಾ ವಿರುದ್ಧ ತವರಿನಲ್ಲಿ ಕೊನೆಯ ಟೆಸ್ಟ್​ ಪಂದ್ಯ ಆಡಿದ್ದರು. ಇದಾದ ಬಳಿಕ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು. 48 ಏಕದಿನ ಪಂದ್ಯಗಳು ಮತ್ತು 58 T20 ಪಂದ್ಯಗಳಲ್ಲಿ ಆಡಿರುವ ಅವರು ಒಟ್ಟು 158 ವಿಕೆಟ್​ಗನ್ನು ಪಡೆದಿದ್ದಾರೆ. ಜತೆಗೆ 1,365 ರನ್​ ಗಳಿಸಿದ್ದಾರೆ.

ಇದನ್ನೂ ಓದಿ Viral News: ಖಾತೆಯಲ್ಲಿ ಇದ್ದಿದ್ದೇ 17 ರೂ. ಆದ್ರೆ ಹುಂಡಿಗೆ 100 ಕೋಟಿ ರೂ. ಚೆಕ್ ಹಾಕಿದ್ದ ಭಕ್ತ!


ವಿಶ್ವಕಪ್​ ಅರ್ಹತಾ ಪಂದ್ಯದಲ್ಲಿ ಶ್ರೇಷ್ಠ ಸಾಧನೆ

ಭಾರತದಲ್ಲಿ ಇದೇ ಅಕ್ಟೋಬರ್​ 5ರಿಂದ ಆರಂಭಗೊಳ್ಳಲಿರುವ ಐಸಿಸಿ ಏಕದಿನ ವಿಶ್ವಕಪ್​ ಟೂರ್ನಿಗೆ ಶ್ರೀಲಂಕಾ ತಂಡ ಅರ್ಹತೆ ಪಡೆಯುವಲ್ಲಿ ಹಸರಂಗ ಪ್ರಮುಖ ಪಾತ್ರವಹಿಸಿದ್ದರು. ಜಿಂಬಾಬ್ವೆಯಲ್ಲಿ ನಡೆದ ಕ್ವಾಲಿಫೈಯರ್ ಟೂರ್ನಿಯಲ್ಲಿ ಹಸರಂಗ ಒಟ್ಟು 22 ವಿಕೆಟ್​ ಉರುಳಿಸಿ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದ್ದರು.

Exit mobile version