Site icon Vistara News

MotoGp : ಭಾರತದಲ್ಲಿ ನಡೆಯಲಿರುವ ಬೈಕ್​ ರೇಸ್​ ನೋಡುವ ಆಸೆಯೇ? ಟಿಕೆಟ್​ ರೇಟ್​ ಕೇಳಿದ್ರೆ ಗಾಬರಿ ಗ್ಯಾರಂಟಿ!

MotoGP

ನವದೆಹಲಿ: ಭಾರತಕ್ಕೆ ಇದೇ ಮೊದಲ ಬಾರಿಗೆ ವಿಶ್ವ ಪ್ರಸಿದ್ಧ ಬೈಕ್​ ರೇಸ್​ ಮೊಟೊ ಜಿಪಿ (MotoGp) ಕಾಲಿಡಲಿದೆ. ನೊಯ್ಡಾದ ಬುದ್ಧ ಇಂಟರ್​ನ್ಯಾಷನಲ್ ಸರ್ಕೀಟ್​ನಲ್ಲಿ ಈ ರೇಸ್​​ ಸೆಪ್ಟೆಂಬರ್​22ರಿಂದ 24ರವರೆಗೆ ನಡೆಯಲಿದೆ. ಈ ರೇಸ್​ನ ರೋಚಕತೆಯನ್ನು ನೇರವಾಗಿ ವೀಕ್ಷಿಸುವುದು ಭಾರತೀಯ ರೇಸ್​ ಪ್ರೇಮಿಗಳ ಕನಸಾಗಿರುತ್ತದೆ. ಆದರೆ, ಇದರ ಟಿಕೆಟ್​ ಬೆಲೆಯನ್ನು ಕೇಳಿಸಿಕೊಂಡರೆ ಎಲ್ಲರೂ ಬೆಚ್ಚಿ ಬೀಳುವುದು ಗ್ಯಾರಂಟಿ. ಯಾಕೆಂದರೆ ಈ ರೇಸ್​ನ ಅಗ್ಗದ ಟಿಕೆಟ್ ಬೆಲೆ 800 ರೂಪಾಯಿ ಇದ್ದರೆ ದುಬಾರಿ ಟಿಕೆಟ್ ಬೆಲೆ ಸುಮಾರು 1.5 ಲಕ್ಷ ರೂಪಾಯಿ.

ಭಾರತದಲ್ಲಿ ಈ ರೇಸ್​ನ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಫೇರ್​ಸ್ಟ್ರೀಟ್​ ಸ್ಪೋರ್ಟ್ಸ್​ ಇನ್ನು ಕೆಲವೇ ದಿನಗಳಲ್ಲಿ ಟಿಕೆಟ್​ ಮಾರಾಟ ಆರಂಭಿಸಲಿದೆ. ಅದಕ್ಕಿಂತ ಮೊದಲು ಟಿಕೆಟ್​​ಗಳ ಬೆಲೆಯನ್ನು ಪ್ರಕಟಿಸಿದೆ. ಈ ಮಾಹಿತಿಯು ಇದೀಗ ಸಾರ್ವಜನಿಕರಿಗೆ ಲಭ್ಯವಾಗಿದ್ದು ಟಿಕೆಟ್​ ಬೆಲೆ ರೇಸ್​ ಪ್ರೇಮಿಗಳಿಗೆ ನಿರಾಸೆ ಮೂಡಿಸಬಹುದು ಎನ್ನಲಾಗಿದೆ.

ರೇಸ್​​ ಅಭಿಮಾನಿಗಳು ವಾರಾಂತ್ಯದಲ್ಲಿ (ಮೂರು ದಿನಗಳು) ಒಂದು ದಿನದ ಟಿಕೆಟ್ ಮತ್ತು ಅಥವಾ ಒಂದು ದಿನದ ಟಿಕೆಟ್​ ಎಂದು ಆಯ್ಕೆ ಮಾಡಬಹುದು. ಒಂದು ದಿನ ವಿಕ್ಷಣೆ ಮಾಡುವ ಅಗ್ಗದ ಬೆಲೆಯ ಟಿಕೆಟ್​ಗೆ 800 ರೂಪಾಯಿ. ಅತ್ಯಂತ ದುಬಾರಿ ಬೆಲೆಯ ಟಿಕೆಟ್​ಗೆ 1.5 ಲಕ್ಷ ರೂಪಾಯಿಗ ನಿಗದಿ ಮಾಡಿದ್ದೇವೆ ಎಂಬುದಾಗಿ ಮೂಲಗಳು ತಿಳಿಸಿವೆ ಎಂದ ಪಿಟಿಐ ವರದಿ ಮಾಡಿದೆ.

ಫಾರ್ಮುಲಾ 1 ಇಂಡಿಯನ್ ಗ್ರಾನ್​ ಪ್ರಿ ನಂತರ ಭಾರತದಲ್ಲಿ ನಡೆಯುತ್ತಿರುವ ಅತಿದೊಡ್ಡ ಮೋಟೋ ಸ್ಪೋರ್ಟ್ ಈವೆಂಟ್ ಇದಾಗಿದೆ. 2011ರಲ್ಲಿ ಭಾರತದಲ್ಲಿ ನಡೆದ ಉದ್ಘಾಟನಾ ಆವೃತ್ತಿಯ ಫಾರ್ಮುಲಾ 1 ರೇಸ್​​ನ ಅಗ್ಗದ ಬೆಲೆಯ ಟಿಕೆಟ್​ 1500 ರೂಪಾಯಿಗಳಾಗಿತ್ತು. ಬೇರೆ ದೇಶಗಳ ಮೋಟೊ ಜಿಪಿಯ ಟಿಕೆಟ್​ಗೆ ಹೋಲಿಸಿದರೆ ಇದು ಅತ್ಯಂತ ಕಡಿಮೆ ಎಂಬುದಾಗಿಯೂ ಮೂಲಗಳು ತಿಳಿಸಿವೆ.

“ಬೈಕ್​ ರೇಸಿಂಗ್​ನಲ್ಲಿ ಅತ್ಯಾಸಕ್ತಿ ಹೊಂದಿರುವ ಯಾರಿಗಾದರೂ ಇದು ಸಣ್ಣ ಮೊತ್ತವಾಗಿದೆ. ವಾರಾಂತ್ಯದಲ್ಲಿ ಅಭಿಮಾನಿಗಳನ್ನು ತೊಡಗಿಸಿಕೊಳ್ಳಲು ಸಾಕಷ್ಟು ಚಟುವಟಿಕೆಗಳು ಆಯೋಜಿಸಿಕೊಳ್ಳಲಾಗಿದೆ. ಆಹಾರ ಮತ್ತು ಸಂಗೀತ ಉತ್ಸವಗಳು ಕೂಡ ನಡೆಯಲಿವೆ ಎಂಬುದಾಗಿ ಮೂಲಗಳು ತಿಳಿಸಿವೆ.

ಈ ತಿಂಗಳ ಕೊನೆಯಲ್ಲಿ ಇಟಾಲಿಯನ್ ಮೋಟೋಜಿಪಿ ನಡೆಯಲಿದೆ. ಅದರ ಬೆಲೆಯನ್ನು ಅಧಿಕೃತ ವೆಬ್​ಸೈಟ್​ನಲ್ಲಿ ಪರಿಶೀಲಿಸಿದರೆ ಅಗ್ಗದ ಟಿಕೆಟ್​ ಬೆಲೆ 500 ಯುರೊ. ಇದು ಸರಿಸುಮಾರು 44,000 ರೂಪಾಯಿಗೆ ಸಮ.

ಇದನ್ನೂ ಓದಿ : Viral Video : ಸ್ಟೈಲಿಷ್‌ ಆಗಿ ಬೈಕ್‌ ರೈಡ್‌ ಹೊರಟ ನಾಯಿ! ಈ ವಿಡಿಯೊಗೆ ಮರುಳಾಗದವರಿಲ್ಲ!

ಬುಕ್ಕಿ ಮೈಶೋ ಭಾರತದಲ್ಲಿ ಮೋಟೋಜಿಪಿ ಟಿಕೆಟ್​ ಮಾರಾಟದ ಪಾಲುದಾರಿಕೆ ಪಡೆದುಕೊಂಡಿದೆ ಎಂದು ಗುರುವಾರ ಘೋಷಿಸಲಾಗಿದೆ. ಟಿಕೆಟ್​ಗಳು ಶೀಘ್ರದಲ್ಲೇ ಮಾರಾಟಕ್ಕೆ ಬರಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಭಾರತದಲ್ಲಿ ನಡೆಯಲಿರುವ ಈ ಬಹುನಿರೀಕ್ಷಿತ ಮೋಟೋಜಿಪಿ ಕಾರ್ಯಕ್ರಮಕ್ಕೆ ಅಧಿಕೃತ ಟಿಕೆಟ್​ ಮಾರಾಟ ಪಾಲುದಾರರಾಗಿ ಬುಕ್ ಮೈ ಶೋ ಜತೆಗಿನ ಒಪ್ಪಂದವನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ. ಈ ಸಹಯೋಗವು ಭಾರತೀಯ ಅಭಿಮಾನಿಗಳಿಗೆ ಸಾಟಿಯಿಲ್ಲದ ರೇಸಿಂಗ್ ಅನುಭವ ನೀಡಲಿದೆ ” ಎಂದು ಫೇರ್ ಸ್ಟ್ರೀಟ್ ಸ್ಪೋರ್ಟ್ಸ್ ಸಿಒಒ ಪುಷ್ಕರ್ ನಾಥ್ ಶ್ರೀವಾಸ್ತವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Exit mobile version