Site icon Vistara News

ICC World Cup 2023 : ಹೈದರಾಬಾದ್​ ಬಿರಿಯಾನಿ vs ಕರಾಚಿ ಬಿರಿಯಾನಿ; ಕ್ರಿಕೆಟ್​ ವೇದಿಕೆಯಲ್ಲಿ ಜೋರು ಚರ್ಚೆ

Hyderabad biriyani

ಬೆಂಗಳೂರು: ಬಿರಿಯಾನಿಗೆ ಮನಸೋಲದ ನಾನ್​ವೆಜ್​ ಪ್ರಿಯರೇ ಇಲ್ಲ. ಮಾಂಸ ಮತ್ತು ಅನ್ನ ಹಾಗೂ ಹದವಾದ ಮಸಾಲೆಯೊಂದಿಗೆ ಬೆರೆತ ಬಿರಿಯಾನಿ ತಿನ್ನುವುದು ಸಂಭ್ರಮವೇ ಸರಿ. ಇದರಲ್ಲಿ ನಾನಾ ವೆರೈಟಿಗಳಿರುತ್ತವೆ. ಹಳೆ ಮೈಸೂರು ಪ್ರಾಂತ್ಯದಲ್ಲಿ ದೊನ್ನೆ ಬಿರಿಯಾನಿ ಫೇಮಸ್ ಆಗಿದ್ದರೆ, ದಕ್ಷಿಣ ಕನ್ನಡ ಕಡೆಯಲ್ಲಿ ಮಲಬಾರ್ ಬಿರಿಯಾನಿ ಹೆಚ್ಚು ಜನಪ್ರಿಯ. ಇನ್ನು ಕೇರಳದಲ್ಲಿ ಇನ್ನೂ ಫೇಮಸ್​. ಆದರೆ, ಭಾರತದಲ್ಲಿ ಇವೆಲ್ಲದಕ್ಕಿಂತ ಫೇಮಸ್ ಎಂದರೆ ಹೈದರಾಬಾದ್ ಬಿರಿಯಾನಿ. ಇಂಥ ಫೇಮಸ್​ ಬಿರಿಯಾಗಿ ಇದೀಗ ನಡೆಯುತ್ತಿರುವ ಏಕ ದಿನ ವಿಶ್ವ ಕಪ್​ನಲ್ಲೂ (ICC World Cup 2023) ಚರ್ಚೆಗೆ ಕಾರಣವಾಗಿದೆ. ಅದಕ್ಕೆ ಕಾರಣ ಭಾತಕ್ಕೆ ಏಳು ವರ್ಷಗಳ ಬಳಿಕ ಭೇಟಿ ನೀಡಿರುವ ಪಾಕಿಸ್ತಾನ ತಂಡ.

ಹೈದಾರಾಬಾದ್​ನಲ್ಲಿ ಉಳಿದುಕೊಂಡಿರುವ ಪಾಕ್ ತಂಡಕ್ಕೆ ಸಿಕ್ಕಾಪಟ್ಟೆ ಬಿರಿಯಾನಿ ಆತಿಥ್ಯ ನೀಡಲಾಗಿದೆ. ಅಲ್ಲಿನ ಆಟಗಾರರು ಕೂಡ ಇಲ್ಲಿನ ಬಿರಿಯಾನಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ, ಪಾಕಿಸ್ತಾನದಲ್ಲೂ ಫೇಮಸ್ ಬಿರಿಯಾನಿಯೊಂದಿದೆ. ಅದುವೇ ಕರಾಚಿ ಬಿರಿಯಾನಿ. ಇದೀಗ ಕ್ರಿಕೆಟ್​ ವೇದಿಯಲ್ಲಿ ಈ ಎರಡು ಬಿರಿಯಾನಿಗಳ ನಡುವೆ ಯಾವುದು ಬೆಸ್ಟ್​ ಎಂಬ ಚರ್ಚೆ ಆರಂಭಗೊಂಡಿದೆ.

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಾಸಿಮ್ ಅಕ್ರಮ್ ಇತ್ತೀಚೆಗೆ ನಡೆದ ಚರ್ಚೆಯಲ್ಲಿ ಹೈದರಾಬಾದ್ ಬಿರಿಯಾನಿಗಿಂತ ಕರಾಚಿ ಬಿರಿಯಾನಿಯನ್ನು ಚೆನ್ನಾಗಿದೆ ಎಂದು ಹೇಳಿದ್ದಾರೆ. ಶೋಯೆಬ್ ಮಲಿಕ್ ಕೂಡ ಈ ಚರ್ಚೆಯಲ್ಲಿ ಉಪಸ್ಥಿತರಿದ್ದರು ಹಾಗೂ ಅಕ್ರಮ್​ ಮಾತಿಗೆ ಮಸಾಲೆ ಸೇರಿಸಿದ್ದಾರೆ. ತಮ್ಮ ರಾಷ್ಟ್ರದ ಬಿರಿಯಾನಿ ಯಾರಿಗೂ ಕಡಿಮೆಯಿಲ್ಲ ಎಂದು ಭರವಸೆ ಅವರಿಬ್ಬರೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತಮ್ಮ ಅಭಿಪ್ರಾಯದಿಂದ ಅಸಮಾಧಾನಗೊಳ್ಳದಂತೆ ಭಾರತೀಯ ಸ್ನೇಹಿತರನ್ನು ವಿನಂತಿಸುವ ಮೂಲಕ ಲೆಜೆಂಡರಿ ಕ್ರಿಕೆಟಿಗ ಅಕ್ರಮ್​, ಕರಾಚಿ ಬಿರಿಯಾನಿಗೆ ಜಗತ್ತಿನಗೆ ಯಾವುದೂ ಸರಿಸಾಟಿಯಿಲ್ಲ ಎಂದು ಹೇಳಿದ್ದಾರೆ.

ಕರಾಚಿ ಬಿರಿಯಾನಿ ಯಾಕೆ ಚೆನ್ನಾಗಿದೆ ಎಂಬುದಕ್ಕೆ ಅವರು ಕಾರಣವನ್ನೂ ಕೊಟ್ಟಿದ್ದಾರೆ. ಹೈದರಾಬಾದ್ ಬಿರಿಯಾನಿಯಲ್ಲಿ ಬಣ್ಣದ ಅಕ್ಕಿ ಮತ್ತು ಚಿಕನ್ ಅಥವಾ ಮಟನ್ ತುಂಡುಗಳನ್ನು ಹಾಕಿರಲಾಗುತ್ತದೆ. ಆದರೆ ಬಿರಿಯಾನಿ ಒಣ ಒಣ ಆಗಿರುತ್ತದೆ ಅಕ್ರಂ ಹೇಳಿದ್ದಾರೆ.

ಶೋಯೆಬ್​ ಮಲಿಕ್ ತನಗಿಂತ ಹೆಚ್ಚಾಗಿ ಹೈದರಾಬಾದ್​ನ ಭಕ್ಷ್ಯವನ್ನು ತಿನ್ನುವ ಅವಕಾಶ ಹೊಂದಿದ್ದರೂ, ಹಲವಾರು ಅಂಶಗಳಿಂದಾಗಿ ಕರಾಚಿಯ ಬಿರಿಯಾನಿಯನ್ನು ಅವರು ಖಂಡಿತವಾಗಿಯೂ ಅತ್ಯುತ್ತಮವೆಂದು ಕರೆಯಬಹುದು ಎಂದು ಮಾಜಿ ವೇಗಿ ಹೇಳಿದ್ದಾರೆ. ಹೈದರಾಬಾದ್​ನ ಬಿರಿಯಾನಿಯಲ್ಲಿ ಮಸಾಲೆ ಸಂಪೂರ್ಣವಾಗಿ ತಳದಲ್ಲಿರುತ್ತವೆ ಎಂದು ಹೇಳಿದರು. ಬಳಿಕ ಅವರಿಬ್ಬರೂ ಜೋರಾಗಿ ನಕ್ಕರು.

ಇದನ್ನೂ ಓದಿ: ICC World Cup 2023 : ಹೈದರಾಬಾದ್​​ನಲ್ಲಿ ಮಜಾ ಉಡಾಯಿಸಿದ ಪಾಕಿಸ್ತಾನ ಕ್ರಿಕೆಟ್​ ತಂಡದ ಆಟಗಾರರು!

ಪಾಕಿಸ್ತಾನ ಕ್ರಿಕೆಟ್ ತಂಡವು ಭಾರತಕ್ಕೆ (ಹೈದರಾಬಾದ್) ಬಂದಿಳಿದಾಗಿನಿಂದ ಬಿರಿಯಾನಿ ಚರ್ಚೆಯ ವಿಷಯವಾಗಿದೆ. ಪಾಕ್​ ತಂಡ ಎಲ್ಲಾ ಸ್ಥಳಗಳಲ್ಲಿ ಉನ್ನತ ಮಟ್ಟದ ಸ್ವಾಗತವನ್ನು ಪಡೆಯುತ್ತಿದೆ. ಆತಿಥ್ಯವನ್ನು ಹೆಚ್ಚಿಸಲು, ಪಾಕಿಸ್ತಾನ ಕ್ರಿಕೆಟಿಗರಿಗೆ ಸಾಕಷ್ಟು ವಿಶ್ವಪ್ರಸಿದ್ಧ ಹೈದರಾಬಾದ್ ಬಿರಿಯಾನಿಯನ್ನು ನೀಡಲಾಗಿದೆ. ಈ ಎಲ್ಲ ಆತ್ಮೀಯತೆಗೆ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ರವಿಶಾಸ್ತ್ರಿ ಕೇಳಿದ್ದರು ಪ್ರಶ್ನೆ

ಪಾಕ್​ ನಾಯಕ ಬಾಬರ್ ಅಜಮ್ ಅವರಿಗೆ ಬಿರಿಯಾನಿಯನ್ನು ಹೇಗೆ ಇಷ್ಟಪಟ್ಟದ್ದೀರಿ ಎಂದು ಎಂದು ರವಿಶಾಸ್ತ್ರಿ ಕೇಳಿದ ನಂತರ ಹೈದರಾಬಾದ್ನ ಬಿರಿಯಾನಿ ಚರ್ಚೆ ಇನ್ನಷ್ಟು ಜೋರಾಗಿತ್ತು, ಅಕ್ಟೋಬರ್ 04 ರ ಬುಧವಾರ ನಡೆದ ವಿಶ್ವಕಪ್ 2023 ರ ನಾಯಕರ ಸಭೆಯಲ್ಲಿ ಎಲ್ಲಾ 10 ನಾಯಕರು ಕುಳಿತಾಗ ಈ ಪ್ರಶ್ನೆ ಉದ್ಭವಿಸಿತು.

ಬಾಬರ್ ಬಿರಿಯಾನಿ ಕೈಸಾ ಥಾ (ಬಿರಿಯಾನಿ ಹೇಗಿತ್ತು?)” ಎಂದು ರವಿ ಶಾಸ್ತ್ರಿ ಕೇಳಿದ್ದರು.. ನಾನು ಈಗಾಗಲೇ 100 ಬಾರಿ ಹೇಳಿದ್ದೇನೆ. ಬಿರಿಯಾನಿ ಸೂಪರ್​. ಹೈದರಾಬಾದ್​ನ ಬಿರಿಯಾನಿ ಒಳ್ಳೆಯದು ಎಂದು ನಾನು ಕೇಳಿದ್ದೆ ಮತ್ತು ನಾವು ಅದನ್ನು ಇಷ್ಟಪಟ್ಟಿದ್ದೇವೆ ಎಂದು ಬಾಬರ್ ಉತ್ತರಿಸಿದ್ದಾರೆ.

Exit mobile version