ಮುಂಬಯಿ: ಭಾರತದಲ್ಲಿ ಕ್ರಿಕೆಟ್ ಎಂದರೆ ಒಂದು ಎಮೋಷನ್. ಅದರಲ್ಲೂ ನೆಚ್ಚಿನ ಕ್ರಿಕೆಟಿಗನೆಎಂದರೆ ಆತನ್ನು ದೇವರಂತೆ ಆರಾಧಿಸುತ್ತಾರೆ. ಪಂದ್ಯ ನಡೆಯುವಾಗಲೇ ಮೈದಾನಕ್ಕೆ ನುಗ್ಗಿ ಕಾಲಿಗೆ ಬೀಳುವುದು, ಅಪ್ಪಿಕೊಳ್ಳುವುದು ಹೀಗೆ ಹಲವು ನಿದರ್ಶನಗಳನ್ನು ನೋಡಿದ್ದೇವೆ. ಇದೀಗ ಅಭಿಮಾನಿಯೊಬ್ಬ ಕಾಲು ಮುಟ್ಟಿ ನಮಸ್ಕರಿಸಲು ಬಂದ ವೇಳೆ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಕೆ.ಎಲ್ ರಾಹುಲ್(KL Rahul) ಗಲಿಬಿಲಿಗೊಂಡಿದ್ದಾರೆ ಈ ವಿಡಿಯೊ ವೈರಲ್ ಆಗಿದೆ(Viral Video).
ರೆಸ್ಟೋರೆಂಟ್ ಒಂದರಿಂದ ರಾಹುಲ್ ಹೊರಬರುತ್ತಿದ್ದಂತೇ ಅವರ ಜತೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಈ ಪೈಕಿ ಓರ್ವ ಅಭಿಮಾನಿ ನೇರವಾಗಿ ರಾಹುಲ್ ಕಾಲು ಮುಟ್ಟಿ ನಮಸ್ಕರಿಸಿದ್ದಾನೆ. ಅಭಿಮಾನಿ ಕಾಲಿಗೇ ಬಿದ್ದಾಗ ರಾಹುಲ್ ಕೊಂಚ ಗಲಿಬಿಲಿಯಾದರು. ಆದರೆ ತಕ್ಷಣವೇ ಸಾವರಿಸಿಕೊಂಡು ಆತನನ್ನು ಎಬ್ಬಿಸಿ ಆತಕ ಜತೆ ಸೆಲ್ಫಿ ತೆಗೆದುಕೊಂಡರು. ಈ ವಿಡಿಯೊ ವೈರಲ್ ಆಗಿದೆ.
A fan touches KL Rahul's feet. pic.twitter.com/VWaY1Y5E3p
— Mufaddal Vohra (@mufaddal_vohra) January 10, 2024
ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ 20 ಸರಣಿಗೆ (INDvsAFG) ಆಯ್ಕೆ ಮಾಡಲಾಗಿರುವ ಭಾರತ ತಂಡದಿಂದ ಭಾರತದ ವಿಕೆಟ್ ಕೀಪರ್ ಕೆಎಲ್ ರಾಹುಲ್ ಅವರನ್ನು ಹೊರಗಿಡಲಾಗಿದೆ. ಇದು ಅವರ ಅಭಿಮಾನಿಗಳಿಗೆ ಬೇಸರ ಉಂಟು ಮಾಡಿದೆ. ನಾಯಕ ರೋಹಿತ್ ಶರ್ಮಾ (Rohit Sharma) ನೇತೃತ್ವದ ಬಲಿಷ್ಠ ತಂಡದಲ್ಲಿ ವಿರಾಟ್ ಕೊಹ್ಲಿ (Virat kohli) ಸೇರಿದಂತೆ ಇತರ ಹಿರಿಯ ಆಟಗಾರರು ಇದ್ದಾರೆ. ಆದರೆ, ಟಿ0 ವಿಶ್ವ ಕಪ್ (T20 World Cup 2024) ಹಿನ್ನೆಲೆಯಲ್ಲಿ ರೂಪಿಸುತ್ತಿರುವ ತಂಡದಲ್ಲಿ ರಾಹುಲ್ಗೆ ಸ್ಥಾನ ಇಲ್ಲದಿರುವುದು ಅಚ್ಚರಿ ಮೂಡಿಸಿದೆ.
ಇದನ್ನೂ ಓದಿ KL Rahul: ರಾಹುಲ್ ಕೈ ತಪ್ಪಿದ ವಿಕೆಟ್ ಕೀಪಿಂಗ್; ಇಂಗ್ಲೆಂಡ್ ಟೆಸ್ಟ್ಗೆ ಹೊಸ ಕೀಪರ್ ಆಯ್ಕೆ!
ಆಯ್ಕೆದಾರರು ಕೆಎಲ್ ರಾಹುಲ್ ಅವರನ್ನು ತಂಡದಿಂದ ಕಡೆಗಣಿಸಿ ಸಂಜು ಸ್ಯಾಮ್ಸನ್ ಮತ್ತು ಜಿತೇಶ್ ಶರ್ಮಾ ಅವರನ್ನು ಹೆಸರಿಸಿದ್ದಾರೆ. ಕರ್ನಾಟಕದ ಆಟಗಾರ ಕಳೆದ ಕೆಲವು ತಿಂಗಳುಗಳಿಂದ ಭಾರತದ ಆಲ್-ಫಾರ್ಮ್ಯಾಟ್ ವಿಕೆಟ್ ಕೀಪರ್ ಆಗಿದ್ದರೂ, ಟಿ20 ಐ ತಂಡದಲ್ಲಿ ಅವರಿಗೆ ಸ್ಥಾನ ನೀಡದಿರುವ ಬಗ್ಗೆ ಆಯ್ಕೆ ಸಮಿತಿಯ ವಿರುದ್ಧ ಅನಕ ಮಾಜಿ ಆಟಗಾರರು ಕೂಡ ಕಿಡಿಕಾರಿದ್ದಾರೆ.
ರಾಹುಲ್ ಟಿ20ಯಲ್ಲಿ ಉತ್ತಮ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ. 72 ಟಿ20 ಪಂದ್ಯಗಳಲ್ಲಿ 37.75ರ ಸರಾಸರಿಯಲ್ಲಿ 2265 ರನ್ ಗಳಿಸಿದ್ದಾರೆ. ರಾಹುಲ್ ಈಗ ಟಿ20 ಐ ಪಂದ್ಯಗಳಲ್ಲಿ ಆಡಿ ಒಂದು ವರ್ಷಕ್ಕಿಂತ ಸ್ವಲ್ಪ ಹೆಚ್ಚು ಸಮಯವಾಗಿದೆ 2022ರ ನವೆಂಬರ್ನಲ್ಲಿ ಅಡಿಲೇಡ್ನಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಟಿ20 ಪಂದ್ಯವನ್ನಾಡಿದ್ದರು.