Site icon Vistara News

ICC World Cup 2023 : ಬಾಲ್​ ಆಫ್​​ ದಿ ಟೂರ್ನಮೆಂಟ್, ಬೌಲ್ಡ್​ ಪರೀಕ್ಷಿಸಲು ರಿವ್ಯೂ!

Pakistan Crikcet Team

ಕೋಲ್ಕೊತಾ: ಶುಭ್​ಮನ್ ಗಿಲ್​ ಪ್ರತಿಭಾವಂತ ಕ್ರಿಕೆಟಿಗ. ಬ್ಯಾಟಿಂಗ್​ನಲ್ಲಿ ಯಾವುದೇ ದೌರ್ಬಲ್ಯ ಹೊಂದಿರದ ಆಟಗಾರ. ಹೀಗಾಗಿ ಅವರನ್ನು ಔಟ್ ಮಾಡಬೇಕಾದರೆ ವಿಶೇಷ ಎಸೆತ ಬೇಕಾಗುತ್ತದೆ. ಈ ಮಾತು ಹೌದು ಎಂಬುದನ್ನು ದಕ್ಷಿಣ ಆಫ್ರಿಕಾದ ಸ್ಪಿನ್ನರ್​ ಕೇಶವ್ ಮಹಾರಾಜ್ ತೋರಿಸಿಕೊಟ್ಟಿದ್ದಾರೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ವಿಶ್ವಕಪ್ ಮುಖಾಮುಖಿಯಲ್ಲಿ (ICC World Cup 2023) ಅವರು ಅದನ್ನು ಸಾಧಿಸಿದ್ದಾರೆ. ಅಚ್ಚರಿ ಎಂದರೆ ಕೇಶವ್​ ಎಸೆತಕ್ಕೆ ಶುಭ್​ಮನ್​ ಬೌಲ್ಡ್​ ಆಗಿದ್ದು, ಅದನ್ನು ಗುರುತಿಸಲು ಅಂಪೈರ್​ಗೂ ಸಾಧ್ಯವಾಗಿರಲಿಲ್ಲ. ಟಿವಿ ಅಂಪೈರ್ ನೆರವು ಪಡೆದು ಔಟ್ ಘೋಷಿಸಲಾಯಿತು.

ಮೂರನೇ ಅಂಪೈರ್​ ಚೆಂಡು ಬಡಿದದ್ದು ಎಲ್ಲಿಗೆ ಎಂದು ಪರೀಕ್ಷೆ ಮಾಡಬೇಕಾಯಿತು. ಅಥವಾ ವಿಕೆಟ್​ ಕೀಪರ್​ನ ಗ್ಲವ್ಸ್​ ತಗುಲಿ ಬೇಲ್ಸ್ ಉರುಳಿತೇ ಎಂಬುದನ್ನು ಗಮನಿಸಬೇಕಾಯಿತು. ಅದನ್ನು ಶುಬ್ಮನ್ ಗಿಲ್ 4 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿ ಭಾರತದ ಇನಿಂಗ್ಸ್​​ ವೇಗವನ್ನು ಹೆಚ್ಚಿಸಿದರು. ರೋಹಿತ್ ಶರ್ಮಾ ಆಕ್ರಮಣ ಶೀಲತೆ ಪ್ರದರ್ಶಿಸಿದರೆ, ಗಿಲ್ ಇನ್ನೊಂದು ತುದಿಯಲ್ಲಿ ರನ್​ ಗಳಿಕೆ ಹೆಚ್ಚಿಸಿದರು.

ಕೇಶವ್ ಮಹಾರಾಜ್ ಅವರ ವಿಶೇಷ ಎಸೆತವು ಭಾರತೀಯ ಬ್ಯಾಟರ್​ಗಳನ್ನು ಗೊಂದಲಕ್ಕೀಡು ಮಾಡಿತು. 11ನೇ ಓವರ್​ನ ಮೂರನೇ ಎಸೆತದಲ್ಲಿ ಮಹಾರಾಜ್ ಪರಿಪೂರ್ಣ ಎಸೆತವನ್ನು ಎಸೆದರು. ನಿಧಾನ ಎಸೆತವು ಕಾಲಿನ ಹೊರಗಿನಿಂದ ವಿಕೆಟ್​​ಗೆ ಬಡಿಯಿತು.

ಕೊಹ್ಲಿಗೆ ಬಂಗಾರದ ಬ್ಯಾಟ್​ ಗಿಫ್ಟ್​

35ನೇ ವಸಂತಕ್ಕೆ ಕಾಲಿಟ್ಟ ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ(Virat Kohli) ಅವರಿಗೆ ಬಂಗಾಳ ಕ್ರಿಕೆಟ್‌ ಮಂಡಳಿ ಚಿನ್ನದ ಲೇಪಿತ ಬ್ಯಾಟ್​ ಉಡುಗೊರೆ ನೀಡಲು ನಿರ್ಧರಿಸಿದೆ. ಕೋಲ್ಕೊತ್ತಾದ ಪ್ರಸಿದ್ಧ ಈಡನ್ ಗಾರ್ಡನ್​ನಲ್ಲಿ ಕೊಹ್ಲಿಯ ಹುಟ್ಟುಹಬ್ಬನ್ನು ಭರ್ಜರಿಯಾಗಿ ಆಚರಿಸಿಲು ಬಂಗಾಳ ಕ್ರಿಕೆಟ್‌ ಮಂಡಳಿ ವ್ಯವಸ್ಥೆಯನ್ನು ಮಾಡಿತ್ತು. ಆದರೆ ಐಸಿಸಿ ನಿಯಮದ ಉಲ್ಲಂಘನೆಯಾಗುವ ನಿಟ್ಟಿನಲ್ಲಿ ದಿಢೀರ್​ ರದ್ದುಗೊಳಿಸಿತ್ತು. ವಿರಾಟ್​ ಅವರ ಹುಟ್ಟುಹಬ್ಬ ಆಚರಣೆ ರದ್ದುಗೊಂಡ ಬೆನ್ನಲೇ ಏನಾದರೂ ಉಡುಗೊರೆ ನೀಡಲು ನಿರ್ಧರಿಸಿದ ಪಂದ್ಯದ ಆಯೋಜಕರು ಪರ್ಯಾಯ ಮಾರ್ಗ ಕಂಡುಕೊಂಡಿದ್ದು ಚಿನ್ನದ ಲೇಪಿತ ಬ್ಯಾಟ್ ಗಿಫ್ಟ್​ ನೀಡಲು ನಿರ್ಧರಿಸಿದೆ.

70 ಸಾವಿರ ಮಾಸ್ಕ್​ ವಿತರಣೆ ರದ್ದು

ವಿರಾಟ್​ ಕೊಹ್ಲಿಯ ಜನ್ಮದಿನವಾದ ಕಾರಣ ಬಂಗಾಳ ಕ್ರಿಕೆಟ್‌ ಮಂಡಳಿ ವಿನೂತನ ಶೈಲಿಯ ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು. ಪಂದ್ಯ ನಡೆಯುವ ವೇಳೆ 70 ಸಾವಿರ ಕೊಹ್ಲಿಯ ಫೋಟೊ ಇರುವ ಮಾಸ್ಕ್​ಗಳನ್ನು ಅಭಿಮಾನಿಗಳಿಗೆ ಉಚಿತವಾಗಿ ವಿತರಿಸಲು ನಿರ್ಧರಿಸಿತ್ತು. ಆದರೆ ಐಸಿಸಿ ನಿಯಮ ಉಲ್ಲಂಘನೆಯಾಗುವ ನಿಟ್ಟಿನಲ್ಲಿ ಅಂತಿಮ ಕ್ಷಣದಲ್ಲಿ ಈ ಕಾರ್ಯಕ್ರಮವನ್ನು ರದ್ದುಗೊಳಿಸಿತ್ತು.

ಡ್ರೆಸ್ಸಿಂಗ್​ ರೂಮ್​ನಲ್ಲಿ ಸೆಲೆಬ್ರೇಷನ್

ಐಸಿಸಿ ನಿಯಮ ಉಲ್ಲಂಘನೆಯಾಗುವ ನಿಟ್ಟಿನಲ್ಲಿ ಕೊಹ್ಲಿ ಅವರ ಹುಟ್ಟುಹಬ್ಬವನ್ನು ಕೇವಲ ಡ್ರೆಸ್ಸಿಂಗ್​ ರೂಮ್​ನಲ್ಲಿ ಮಾತ್ರ ಆಚರಿಸಲು ನಿರ್ಧರಿಸಲಾಗಿದೆ. ಇದೇ ವೇಳೆ ಕೊಹ್ಲಿಗೆ ಬಂಗಾಳ ಕ್ರಿಕೆಟ್‌ ಮಂಡಳಿಯ ವತಿಯಿಂದ ಚಿನ್ನದ ಲೇಪಿತ ಬ್ಯಾಟ್ ಗಿಫ್ಟ್​ ನೀಡಲಾಗುವುದು. ಪಂದ್ಯ ಮುಕ್ತಾಯದ ಬಳಿಕ ಈ ಕಾರ್ಯಕ್ರಮ ಇರಲಿದೆ ಎಂದು ಸಿಎಬಿ ಮುಖ್ಯಸ್ಥ ಸ್ನೇಹಶಿಶ್‌ ಗಂಗೂಲಿ ತಿಳಿಸಿದ್ದಾರೆ.

Exit mobile version