Site icon Vistara News

World Cup 2023 : ವಿಶ್ವ ಕಪ್​ ನಮ್ಮದೇ; ರೋಹಿತ್ ಶರ್ಮಾ ವಿಶ್ವಾಸ

Rohit Sharma

ಮುಂಬಯಿ: 2023ರ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಚಾಂಪಿಯನ್ ಆಗಿ ಹೊರಹೊಮ್ಮಲಿದೆ ಎಂದು ರೋಹಿತ್ ಶರ್ಮಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದಶಕದಲ್ಲಿ ಮೊದಲ ಬಾರಿಗೆ ಐಸಿಸಿ ಪ್ರಶಸ್ತಿಯನ್ನು ಗೆಲ್ಲುವ ಗುರಿಯನ್ನು ಹೊಂದಿರುವ ಟೀಮ್ ಇಂಡಿಯಾ ಪ್ರತಿ ಸ್ಥಳದಲ್ಲೂ ಅಪಾರ ತವರಿನ ಬೆಂಬಲ ಪಡೆಯಲಿದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. 12 ವರ್ಷಗಳ ಬಳಿಕ ಭಾರತ ಏಕದಿನ ವಿಶ್ವಕಪ್ ಆತಿಥ್ಯ ವಹಿಸಲಿದ್ದು, ಇದೇ ಕೊನೆಯ ಬಾರಿಗೆ ಭಾರತ ವಿಶ್ವಕಪ್ ಗೆದ್ದಿದೆ.

“ನಾನು ವಿಶ್ವ ಕಪ್​ ಗೆಲುವನ್ನು ಹತ್ತಿರದಿಂದ ನೋಡಿಲ್ಲ. 2011ರಲ್ಲಿ ನಾವು ಗೆದ್ದಾಗಲೂ ನಾನು ತಂಡದ ಭಾಗವಾಗಿರಲಿಲ್ಲ. ಗೆಲುವು ಸುಂದರವಾಗಿ ಕಾಣುತ್ತದೆ. ಟ್ರೋಫಿಯ ಹಿಂದೆ ಅನೇಕ ನೆನಪುಗಳು, ಭೂತ ವರ್ತಮಾನ ಇರುತ್ತೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

“ಹೌದು, ಗೆಲುವು ಸುಂದರವಾಗಿ ಕಾಣುತ್ತದೆ. ನಾವು ಅದನ್ನು ಎತ್ತಬಹುದು ಎಂದು ಆಶಿಸುತ್ತೇನೆ ಎಂದು ಅಮೆರಿಕದಲ್ಲಿ ರೋಹಿತ್​ ಶರ್ಮಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಅಕ್ಟೋಬರ್ 5ರಂದು ವಿಶ್ವ ಕಪ್​ ಟೂರ್ನಿ ಆರಂಭವಾಗಲಿದ್ದು, ಭಾರತದಾದ್ಯಂತ 10 ಸ್ಥಳಗಳಲ್ಲಿ ನಡೆಯಲಿದೆ.

ನಾವು ಸಾಗುವ ಪ್ರತಿಯೊಂದು ಮೈದಾನ, ಪ್ರತಿಯೊಂದು ಸ್ಥಳದಲ್ಲಿ ಪ್ರೇಕ್ಷಕರಿಂದ ಉತ್ತಮ ಬೆಂಬಲವನ್ನು ಪಡೆಯುತ್ತೇವೆ ಎಂಬ ವಿಶ್ವಾಸ ನಮಗಿದೆ. ಇದು ವಿಶ್ವಕಪ್, ಆದ್ದರಿಂದ ಎಲ್ಲರೂ ಗೆಲುವನ್ನು ಎದುರು ನೋಡುತ್ತಿದ್ದಾರೆ. 12 ವರ್ಷಗಳ ನಂತರ ವಿಶ್ವಕಪ್ ಭಾರತಕ್ಕೆ ಮರಳುತ್ತಿದೆ. 2011ರಲ್ಲಿ ನಾವು ಕೊನೆಯ ಬಾರಿಗೆ 50 ಓವರ್​ಗಳ ವಿಶ್ವಕಪ್ ಆಡಿದ್ದೆವು. ನಾವು 2016ರಲ್ಲಿ ಟಿ20 ವಿಶ್ವಕಪ್ ಆಡಿದ್ದೇವೆ. ಆದರೆ ದೇಶದಲ್ಲಿ 12 ವರ್ಷಗಳ ನಂತರ 50 ಓವರ್​ಗಳ ವಿಶ್ವಕಪ್ ನಡೆಯುತ್ತಿದ್ದು, ಅಭಿಮಾನಿಗಳು ಉತ್ಸಾಹದಲ್ಲಿದ್ದಾರೆ. ಎಲ್ಲಾ ಸ್ಥಳಗಳಲ್ಲಿ ಆಡಲು ಎದುರು ನೋಡುತ್ತಿದ್ದೇನೆ ರೋಹಿತ್​ ಹೇಳಿದ್ದಾರೆ.

ಗೆಲುವಿನ ಮೆಲುಕು

2011ರ ವಿಶ್ವ ಕಪ್​ ನಮ್ಮೆಲ್ಲರಿಗೂ ಸ್ಮರಣೀಯವಾಗಿತ್ತು. ಅದನ್ನು ಮನೆಯಲ್ಲಿ ಕುಳಿತು ನೋಡಿದ್ದೆ. ನನಗೆ ನೆನಪಿದೆ, ಪ್ರತಿ ಪಂದ್ಯದ ಪ್ರತಿಯೊಂದು ಚೆಂಡನ್ನು ನಾನು ನೆನಪಿಸಿಕೊಳ್ಳುತ್ತಿದ್ದೇನೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ನನಗೆ ಎರಡು ರೀತಿಯ ಭಾವನೆಗಳು ಇದ್ದವು. ಒಂದು ನಿಸ್ಸಂಶಯವಾಗಿ ನಾನು ಅದರ ಭಾಗವಾಗಿರಲಿಲ್ಲ, ಆದ್ದರಿಂದ ನಾನು ಸ್ವಲ್ಪ ನಿರಾಶೆಗೊಂಡೆ. ನಾನು ವಿಶ್ವಕಪ್ ವೀಕ್ಷಿಸಲು ಹೋಗುವುದಿಲ್ಲ ಎಂದು ನಿರ್ಧರಿಸಿದ್ದೆ. ಎರಡನೇ ನೆನಪು ಏನೆಂದರೆ, ಕ್ವಾರ್ಟರ್ ಫೈನಲ್ ನಂತರ ಭಾರತವು ಉತ್ತಮವಾಗಿ ಆಡಿರುವುದು ಎಂದು ರೋಹಿತ್​ ಶರ್ಮಾ 2011ರ ವಿಶ್ವ ಕಪ್​ ಗೆಲುವನ್ನು ಮೆಲುಕು ಹಾಕಿಕೊಂಡಿದ್ದಾರೆ.

2019ರ ಸೋಲಿನ ಬೇಸರ

2015 ಮತ್ತು 2019ರಲ್ಲಿ ನಾನು ಭಾರತ ತಂಡದ ಭಾಗವಾಗಿದ್ದೆ. ವಿಶ್ವಕಪ್ ಆಡುವುದು ನಿಜವಾಗಿಯೂ ಒಳ್ಳೆಯದು ಎಂದು ಭಾವಿಸಿದೆ. ಆದರೆ ಸೆಮಿಫೈನಲ್​​ನಲ್ಲಿ ನಮಗೆ ನಿರಾಸೆ ಎದುರಾಯಿತು. ಉತ್ತಮವಾಗಿ ಆಡಲು ನಮ್ಮಿಂದ ಸಾಧ್ಯವಾದ ರೀತಿ ಪ್ರಯತ್ನಿಸಿದೆವು. ಆದರೆ ಫೈನಲ್​ಗೇರದಿರುವುದು ದುರದೃಷ್ಟಕರ ಎಂದು ರೋಹಿತ್ ಶರ್ಮಾ ಹೇಳಿದರು.

ಇದನ್ನೂ ಓದಿ : ind vs wi : ಅಪಾಯದಲ್ಲಿದೆ ಭಾರತದ ಸರಣಿ ಗೆಲುವಿನ ದಾಖಲೆ

ಪ್ರತಿ ಪಂದ್ಯವನ್ನು ಹೊಸತನದಿಂದ ಆಡುವುದು ಗೆಲುವಿನ ಸೂತ್ರವಾಗಿದೆ. ಪ್ರತಿ ದಿನವೂ ಹೊಸತು ಎಂದು ನನಗೆ ತಿಳಿದಿದೆ. ಇದು ಟೆಸ್ಟ್ ಮ್ಯಾಚ್​ನಂತೆ ಅಲ್ಲ. ದಿನದಿಂದ ದಿನಕ್ಕೆ ಆವೇಗ ಹೆಚ್ಚಿಸುವುದಕ್ಕಿಂತ ದಿನವೂ ಹೊಸತಾಗಿ ಆಡಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

ಏಕದಿನ ಕ್ರಿಕೆಟ್, ಸೀಮಿತ ಓವರ್​ಗಳ ಸ್ವರೂಪದಲ್ಲಿ ಪ್ರತಿ ದಿನ ಸವಾಲು ಬರುತ್ತದೆ. ನೀವು ಪ್ರತಿದಿನ ತಾಜಾತನವನ್ನು ಪ್ರಾರಂಭಿಸಬೇಕು. ನಾನು (2019 ರಲ್ಲಿ) ಅಲ್ಲಿಯೇ ಇದ್ದೆ ಎಂದು ನಿಮಗೆ ತಿಳಿದಿದೆ ಎಂದು ಅವರು ಹೇಳಿದರು.

Exit mobile version