Site icon Vistara News

Ind vs Aus : ಭಾರತ – ಆಸ್ಟ್ರೇಲಿಯಾ ಪಂದ್ಯಕ್ಕೆ ಮಳೆಯ ಅಡಚಣೆ ಇದೆಯೇ?

Chinnaswamy Stadium

ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ (ಡಿಸೆಂಬರ್ 03) ನಡೆಯಲಿರುವ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನವ (Ind vs Aus) 5ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿವೆ. ಭಾರತವು ಸರಣಿಯನ್ನು 3-1 ಅಂತರದಿಂದ ಭದ್ರಪಡಿಸಿಕೊಂಡಿದ್ದರೂ, ಹವಾಮಾನ ಪರಿಸ್ಥಿತಿ ಅನುಮತಿಸಿದರೆ ಎರಡೂ ಕಡೆಯವರು ತಮ್ಮ ಬೆಂಚ್ ಸಾಮರ್ಥ್ಯವನ್ನು ಹೆಚ್ಚಿಸುವ ಪ್ರಯತ್ನ ಮಾಡಬಹುದು. ರಾಯ್ಪುರದಲ್ಲಿ ಭಾರತ ತಂಡ ಬ್ಯಾಟ್ ಮತ್ತು ಬಾಲ್​ನಲ್ಲಿ ಪರಾಕ್ರಮವನ್ನು ಪ್ರದರ್ಶಿಸಿತತ್ತು. ಅಂತೆಯೇ ಬೆಂಗಳೂರಿನಲ್ಲಿ ವರಣದೇವ ಕೃಪೆ ತೋರಿದರ ಸರಣಿಯ ಅಂತಿಮ ಮುಖಾಮುಖಿ ಕುತೂಹಲಕಾರಿಯಾಗಿರುವುದರಲ್ಲಿ ಯಾವುದೇ ಅನುಮಾನ ಇಲ್ಲ.

ರಾಯ್ಪುರದ ಪಂದ್ಯದಲ್ಲಿ ಅಕ್ಷರ್ ಪಟೇಲ್ ಮತ್ತು ರಿಂಕು ಸಿಂಗ್ 20 ರನ್ ಗಳ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದ್ದರು ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡದಲ್ಲಿ ತಮ್ಮ ಮೇಲಿನ ವಿಶ್ವಾಸವನ್ನು ಹೆಚ್ಚಿಸಿಕೊಂಡರು. 4-1 ಮುನ್ನಡೆ ಸಾಧಿಸಲು ನಿರ್ಧರಿಸಿರುವ ಭಾರತ ಉತ್ತಮ ಪ್ರದರ್ಶನ ನೀಡುವ ಗುರಿ ಹೊಂದಿದೆ. 2024ರ ಟಿ20 ವಿಶ್ವಕಪ್​​ಗೆ ಮುನ್ನ ಇನ್ನು ಕೇವಲ 6 ಟಿ20 ಪಂದ್ಯಗಳು ಬಾಕಿ ಉಳಿದಿದ್ದು, ಪ್ರತಿಯೊಂದು ಪಂದ್ಯವೂ ಮಹತ್ವದ್ದಾಗಿದೆ . ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಿರ್ಣಾಯಕ ಪಂದ್ಯಕ್ಕೆ ಮಳೆ ಬರುವುದೇ ಎಂಬ ಆತಂಕ ಶುರುವಾಗಿದೆ.

ಮಳೆ ಭೀತಿ ಬಹುತೇಕ ಇಲ್ಲ

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದನೇ ಟಿ 20 ಪಂದ್ಯಕ್ಕೆ ಮಳೆ ಅಡ್ಡಿಯಾಗುವ ನಿರೀಕ್ಷೆಯಿಲ್ಲದ ಕಾರಣ ಪ್ರೇಕ್ಷಕರು ರನ್​ಗಳ ಮಳೆಯನ್ನು ಅನುಭವಿಸಬಹುದು. ಬೆಂಗಳೂರಿನಲ್ಲಿ ಡಿಸೆಂಬರ್ 3ರಂದು ಹವಾಮಾನ ಮುನ್ಸೂಚನೆಯು 26 ಡಿಗ್ರಿ ಸ್ಥಿರ ತಾಪಮಾನ ಇದೆ ಎಂದು ಹೇಳಿದೆ ಭಾಗಶಃ ಮೋಡ ಕವಿದ ವಾತಾವರಣ ಇರುತ್ತದೆ. ಇದು 72% ಆರ್ದ್ರತೆಯ ಸೂಚನೆ ನೀಡಿದೆ. ರಾತ್ರಿ 8-9 ರ ನಡುವೆ ಹನಿ ಮಳೆಯಾಗಬಹುದು. ಇದು ಆದರೂ ಪಂದ್ಯ ಕೊಚ್ಚಿಹೋಗುವ ಅಪಾಯವನ್ನುಂಟು ಮಾಡುವುದಿಲ್ಲ.

ಬೌಲರ್​ಗಳಿಗೆ ಕಷ್ಟಕರ ಪಿಚ್​

ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಅಸಾಧಾರಣ ಬ್ಯಾಟಿಂಗ್ ಪ್ರದರ್ಶನಗಳಿಗೆ ಅನುಕೂಲಕರವಾಗಿದೆ. ಇದು ಬ್ಯಾಟರ್​ಗಳಿಗೆ ಸೂಕ್ತ ಹೊಡೆಗಳಿಗೆ ಅನುಕೂಲಕರವಾಗಿದೆ. ಇದು ವೇಗದ ಬೌಲರ್​ಗಳಿಗೆ ಮತ್ತು ಸ್ಪಿನ್ನರ್​ಗಳಿಗೆ ಎಂದಿಗೂ ನೆರವಾಗುವುದಿಲ್ಲ. ಇದು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಹೆಚ್ಚಿನ ಸ್ಕೋರ್ ಪಂದ್ಯಕ್ಕೆ ವೇದಿಕೆಯನ್ನು ಒದಗಿಸಲಿದೆ. ಟಾಸ್ ಗೆದ್ದ ತಂಡ ಚೇಸ್ ಮಾಡುವುದೇ ಉತ್ತಮ. ಪಿಚ್​ನ ಸಮ ಸ್ವರೂಪ ಮತ್ತು ಸಣ್ಣ ಬೌಂಡರಿಗಳು ಚೇಸಿಂಗ್ ತಂಡಕ್ಕೆ ಅನುಕೂಲಕರವಾಗಿವೆ.

ಇದನ್ನೂ ಓದಿ : Virat kohli : ಸಿಹಿ ಮಾವಿನ ಹಣ್ಣಿನ ಕತೆ ಕೆದಕಿದ ನವಿನ್ ಉಲ್ ಹಕ್​

ಸಂಭಾವ್ಯ ಪ್ಲೇಯಿಂಗ್ ಇಲೆವೆನ್

ಭಾರತ: ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರಿಂಕು ಸಿಂಗ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ದೀಪಕ್ ಚಹರ್, ಅವೇಶ್ ಖಾನ್, ಮುಖೇಶ್ ಕುಮಾರ್.

ಆಸ್ಟ್ರೇಲಿಯಾ: ಟ್ರಾವಿಸ್ ಹೆಡ್, ಜೋಶ್ ಫಿಲಿಪ್, ಆರೋನ್ ಹಾರ್ಡಿ, ಬೆನ್ ಮೆಕ್ಡರ್ಮಾಟ್, ಟಿಮ್ ಡೇವಿಡ್, ಮ್ಯಾಟ್ ಶಾರ್ಟ್, ಮ್ಯಾಥ್ಯೂ ವೇಡ್ (ನಾಯಕ/ ವಿಕೆಟ್ ಕೀಪರ್), ಬೆನ್ ಡ್ವಾರ್ಶುಯಿಸ್, ತನ್ವೀರ್ ಸಂಘಾ, ಕ್ರಿಸ್ ಗ್ರೀನ್, ಜೇಸನ್ ಬೆಹ್ರೆನ್ಡಾರ್ಫ್.

ಇತ್ತಂಡಗಳ ಮುಖಾಮುಖಿ ವಿವರ

ನೇರ ಪ್ರಸಾರ ವಿವರಗಳು

Exit mobile version