Site icon Vistara News

Virat Kohli: ವಿಂಡೀಸ್​ ಆಟಗಾರನ ತಾಯಿಯಿಂದ ಕೊಹ್ಲಿಗೆ ಮಮತೆಯ ಅಪ್ಪುಗೆ; ವಿಡಿಯೊ ವೈರಲ್​

Joshua's mother with Virat

ಪೋರ್ಟ್ ಆಫ್ ಸ್ಪೇನ್: ಭಾರತ ಮತ್ತು ವೆಸ್ಟ್​ ಇಂಡೀಸ್​ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್​ ಪಂದ್ಯ 2ನೇ ದಿನ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಯಿತು. ವಿರಾಟ್​ ಕೊಹ್ಲಿಯ(Virat Kohli) ಅಪ್ಪಟ ಅಭಿಮಾನಿಯಾಗಿರುವ ವಿಂಡೀಸ್​ ಆಟಗಾರನ ತಾಯಿಯೊಬ್ಬರು ವಿರಾಟ್​ ಕೊಹ್ಲಿಯನ್ನು ಪ್ರೀತಿಯಿಂದ ಅಪ್ಪಿಕೊಂಡು ತನ್ನ ಮಗನಂತೆ ಮುದ್ದಾಡಿ ಹಾರೈಸಿದ್ದಾರೆ. ಈ ವಿಡಿಯೊ ವೈರಲ್(viral video)​ ಆಗಿದೆ.

2ನೇ ದಿನಾದಾಟ ಆರಂಭಕ್ಕೂ ಮುನ್ನ ಭಾರತ ತಂಡದ ಆಟಗಾರರು ಹೊಟೇಲ್​ನಿಂದ ಸ್ಟೇಡಿಯಂಗೆ ಬರುವ ಬರುವ ವೇಳೆ ವಿಂಡೀಸ್​ ಆಟಗಾರ ಜೋಶುವಾ ಡ ಸಿಲ್ವಾ ಅವರ ತಾಯಿ ವಿರಾಟ್​ ಕೊಹ್ಲಿಯನ್ನು ಭೇಟಿ ಮಾಡಿದ್ದಾರೆ ಕೊಹ್ಲಿಯನ್ನು ಅಪ್ಪಿಕೊಂಡು ಸಿಹಿ ಮುತ್ತು ನೀಡಿ ತನ್ನ ಮಗನಂತೆ ಮಮತೆ ತೋರಿದ್ದಾರೆ. ಕೊಹ್ಲಿಯೂ ಕೂಡ ಈ ತಾಯಿ ಪ್ರೀತಿ ಕಂಡು ಸಂತಸಗೊಂಡಿದ್ದಾರೆ. ಕೊಹ್ಲಿಯನ್ನು ಬಿಗಿದಪ್ಪಿದ ಬಳಿಕ ಖುಷಿಯಲ್ಲಿ ಈ ತಾಯಿ ಕಣ್ಣಲ್ಲಿ ಆನಂದಭಾಷ್ಪ ಕಂಡುಬಂದಿತು.

ತಾಯಿ ಕೊಹ್ಲಿಯನ್ನು ಭೇಟಿ ಮಾಡಿದ ದೃಶ್ಯ ಕಂಡು ಪ್ರತಿಕ್ರಿಯೆ ನೀಡಿದ ಜೋಶುವಾ”ತನ್ನ ತಾಯಿ ನನಗೆ ಕರೆ ಮಾಡಿ ಇಂದು ವಿರಾಟ್​ ಕೊಹ್ಲಿಯ ಆಟ ನೋಡು ನಾನು ಸ್ಟೇಡಿಯಂಗೆ ಬರುತ್ತೇನೆ ಎಂದಿದ್ದರು. ಆದರೆ ನಾನು ಇದನ್ನು ನಂಬಲಿಲ್ಲ. ಈ ದೃಶ್ಯ ಕಂಡು ನನಗೆ ಅಚ್ಚರಿ ಹಾಗೂ ಸಂತಸಗೊಂಡಿದ್ದೇನೆ. ಕೊಹ್ಲಿಯ ಅಪ್ಪಟ ಅಭಿಮಾನಿಯಾಗಿರುವ ನನ್ನ ತಾಯಿಯ ಆಸೆ ಕೊನೆಗೂ ಈಡೇರಿದೆ” ಎಂದು ಹೇಳಿದರು.

ಇದನ್ನೂ ಓದಿ Ind vs wi : ವಿರಾಟ್​ ಕೊಹ್ಲಿ ದಾಖಲೆಯ ಶತಕ, ಭಾರತ 438 ರನ್​ಗಳಿಗೆ ಆಲ್​ಔಟ್​

ವಿರಾಟ್​ ಕೊಹ್ಲಿಯನ್ನು ಈ ತಾಯಿ ಅಪ್ಪಿಕೊಂಡ ಬಳಿಕ ಮಾತನಾಡಿ, “ಕೊಹ್ಲಿ ನಿಜಕ್ಕೂ ಓರ್ವ ಅಪ್ರತಿಮ ಆಟಗಾರ ಆತ ನನಗೆ ಎರಡನೇ ಮಗನಂತೆ ಈ ತಾಯಿಯ ಆಶಿರ್ವಾದ ಅವನ ಮೇಲೆ ಸದಾ ಇರುತ್ತದೆ. ಆತ ಕ್ರಿಕೆಟ್​ನಲ್ಲಿ ಇನ್ನೂ ಉತ್ತುಂಗಕ್ಕೇರಲಿ” ಎಂದು ಆನಂದಭಾಷ್ಪ ಸುರಿಸುತ್ತಲೇ ಹಾರೈಸಿದರು. ಈ ತಾಯಿಯ ಆಶಿರ್ವಾದದ ಬಳಿಕ ವಿರಾಟ್​ ಅವರು 76ನೇ ಶತಕ ಬಾರಿಸಿ ಸಂಭ್ರಮಿಸಿದರು. ಜತೆಗೆ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದರು. ವಿಂಡೀಸ್​ ಆಟಗಾರನ ತಾಯಿಯ ಆಶಿರ್ವಾದ ಮತ್ತು ಹಾರೈಕೆ ಕೊಹ್ಲಿಗೆ ವರವಾಗಿ ಪರಿಣಮಿಸಿತು.

ಬ್ರಾಡ್ಮನ್ ದಾಖಲೆ ಮುರಿದ ಕೊಹ್ಲಿ

ವಿರಾಟ್​ ಕೊಹ್ಲಿ ತಮ್ಮ ವೃತ್ತಿಜೀವನದಲ್ಲಿ 29 ಟೆಸ್ಟ್ ಶತಕಗಳನ್ನು ಬಾರಿಸಿದಂತಾಗಿದ್ದು. ಆಸ್ಟ್ರೇಲಿಯಾದ ಶ್ರೇಷ್ಠ ಬ್ಯಾಟ್ಸ್ಮನ್ ಮತ್ತು ಕ್ರಿಕೆಟ್​ ಇತಿಹಾಸದಲ್ಲಿ ಅತ್ಯುತ್ತಮ ಬ್ಯಾಟರ್​ ಆಗಿದ್ದ ಸರ್ ಡೊನಾಲ್ಡ್ ಬ್ರಾಡ್ಮನ್ ಅವರ ಸಾಧನೆಯನ್ನು ಸರಿಗಟ್ಟಿದ್ದಾರೆ. ಇದೀಗ ಅವರು ಸಚಿನ್ ತೆಂಡೂಲ್ಕರ್, ದ್ರಾವಿಡ್ ಮತ್ತು ಸುನಿಲ್ ಗವಾಸ್ಕರ್ ನಂತರದ ಸ್ಥಾನದಲ್ಲಿದ್ದಾರೆ. ಹೆಚ್ಚುವರಿಯಾಗಿ, ಇದು ವೆಸ್ಟ್ ಇಂಡೀಸ್​​ನಲ್ಲಿ ಅವರ ಎರಡನೇ ಟೆಸ್ಟ್ ಶತಕವಾಗಿದೆ. ಅಲ್ಲದೆ ದೀರ್ಘ ಸ್ವರೂಪದ ಕ್ರಿಕೆಟ್​ನಲ್ಲಿ ವಿಂಡೀಸ್ ತಂಡದ ವಿರುದ್ಧ ಒಟ್ಟಾರೆ 3ನೇ ಶತಕವಾಗಿದೆ.

Exit mobile version