ಚೆನ್ನೈ : ಭಾರತ ತಂಡದ ವೇಗದ ಬೌಲರ್ಗಳಾದ ಅರ್ಶ್ದೀಪ್ ಸಿಂಗ್ (Arshdeep Singh) ಹಾಗೂ ಉಮ್ರಾನ್ ಮಲಿಕ್ ಬೌಲಿಂಗ್ ಎಕಾನಮಿ ವಿಚಾರಕ್ಕೆ ಚರ್ಚೆಗೆ ಹುಟ್ಟುಹಾಕಿದ್ದಾರೆ. ಅದರಲ್ಲೂ ಅರ್ಶ್ದೀಪ್ ಸಿಂಗ್ ನೋ ಬಾಲ್ ಎಸೆತ ಎಸೆಯುವ ಮೂಲಕ ಟೀಕೆಗೆ ಒಳಗಾಗಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಅವರು ಕೊನೇ ಓವರ್ನಲ್ಲಿ 27 ರನ್ ಬಿಟ್ಟುಕೊಟ್ಟಿದ್ದರು. ಅದರಲ್ಲೊಂದು ನೋಬಾಲ್ ಕೂಡ ಸೇರಿತ್ತು. ಹೀಗಾಗಿ ಹಿರಿಯ ಆಟಗಾರರನೇಕರು ಅರ್ಶ್ದೀಪ್ಗೆ ಸಲಹೆಗಳನ್ನು ಕೊಡುತ್ತಿದ್ದಾರೆ. ಅಂತೆಯೇ ಭಾರತ ತಂಡದ ಮಾಜಿ ಬೌಲರ್ ಲಕ್ಷ್ಮೀಪತಿ ಬಾಲಾಜಿ ಕೂಡ ಅರ್ಶ್ದೀಪ್ ಸಿಂಗ್ಗೆ ಬೌಲಿಂಗ್ ಸಲಹೆ ಕೊಟ್ಟಿದ್ದಾರೆ.
ಅರ್ಶ್ದೀಪ್ ಸಿಂಗ್ ತಮ್ಮ ನೋಬಾಲ್ ಕಡಿಮೆಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ನೋಬಾಲ್ನಂಥ ಸಮಸ್ಯೆಯನ್ನು ಸರಿಪಡಿಸುವುದು ಅಷ್ಟೊಂದು ಸುಲಭವಲ್ಲ. ಅವರು ರನ್ಅಪ್ ಎಷ್ಟು ಇರಬೇಕು ಎಂಬುದನ್ನು ನಿರ್ಧರಿಸಬೇಕಾಗಿದೆ. ಅದೇ ರೀತಿ ಅವರು ಒತ್ತಡದಲ್ಲಿ ಬೌಲಿಂಗ್ ಮಾಡುವುದು ಹೇಗೆ ಎಂಬುದನ್ನೂ ಕಲಿತುಕೊಳ್ಳಬೇಕಾಗುತ್ತದೆ. ಒಂದು ವೇಳೆ ಇದೇ ರೀತಿಯಾಗಿ ನೋಬಾಲ್ ಎಸೆಯಲು ಆರಂಭಿಸಿದರೆ ಇನ್ನಷ್ಟು ಒತ್ತಡಕ್ಕೆ ಬೀಳಲಿದ್ದಾರೆ ಎಂದು ಹೇಳಿದರು.
ಅರ್ಶ್ದೀಪ್ ಸಿಂಗ್ ಫೂಟ್ವರ್ಕ್ ಹೆಚ್ಚಿಸಿಕೊಳ್ಳಬೇಕು. ಬೌಲಿಂಗ್ ಕೋಚ್ ನೆರವು ಪಡೆಯುವುದು ಅಗತ್ಯ. ಮುಂದಿನ ಪಂದ್ಯಗಳಲ್ಲಿ ಅವರು ವಿಶ್ವಾಸ ಮೂಡಿಸಬೇಕು ಎಂದು ಅವರು ಹೇಳಿದರು.
ಇದನ್ನೂ ಓದಿ | IND VS SL | ಅಂತಿಮ ಟಿ20 ಪಂದ್ಯದಿಂದ ಅರ್ಶ್ದೀಪ್ ಸಿಂಗ್ಗೆ ಕೊಕ್ ಸಾಧ್ಯತೆ; ಮುಕೇಶ್ ಕುಮಾರ್ಗೆ ಅವಕಾಶ?
ಫ್ರಂಟ್ಫೂಟ್ ನೊಬಾಲ್ ದೊಡ್ಡ ಸಮಸ್ಯೆಯೇ ಆಗಿದೆ. ಹೀಗಾಗಿ ಅವರು ವಿಶ್ವಾಸ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಓಟದ ಲಯವನ್ನು ಹೆಚ್ಚಿಸಿಕೊಳ್ಳಬೇಕು. ಸರಿಯಾಗಿ ಎಲ್ಲಿ ಹೆಜ್ಜೆ ಇಡಬೇಕು ಎಂಬುದನ್ನು ಮೊದಲೇ ನಿರ್ಧರಿಸಿಕೊಳ್ಳಬೇಕು ಎಂಬುದಾಗಿ ಬಾಲಾಜಿ ಹೇಳಿದರು.