ನವ ದೆಹಲಿ : ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆದ್ದು ಸಾಧನೆ ಮಾಡಿದ ಭಾರತದ ಅಥ್ಲೀಟ್‌ಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಆತಿಥ್ಯದಿಂದ ಅತೀವ ಆನಂದವಾಗಿದೆ. ಕ್ರೀಡಾಪಟುಗಳು ವಿಭಿನ್ನ ರೀತಿಯಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ. ಅಂತೆಯೇ ಚಿನ್ನದ ಗದ್ದಿರುವ ಭಾರತದ ಮಹಿಳಾ ಬಾಕ್ಸರ್ ನಿಖತ್ ಜರೀನ್ ಪ್ರಧಾನಿ ಮೋದಿ ಅವರಿಗೆ ಬಾಕ್ಸಿಂಗ್ ಗ್ಲವ್ಸ್ ನೀಡಿ ಸಂಭ್ರಮಪಟ್ಟಿದ್ದಾರೆ. ಜತೆಗೆ ಇನ್ನೂ ಹಲವು ಕ್ರೀಡಾಪಟುಗಳು ಮೋದಿ ಅವರಿಗೆ ಗಿಫ್ಟ್ ಕೊಟ್ಟು ಸಂಭ್ರಮಿಸಿದ್ದಾರೆ.
ಶನಿವಾರ ಮಧ್ಯಾಹ್ನ ಪ್ರಧಾನಿ ಮೋದಿ ಅವರು ಸಾಧಕ ಅಥ್ಲೀಟ್‌ಗಳಿಗೆ ತಮ್ಮ ನಿವಾಸದಲ್ಲಿ ಆತಿಥ್ಯ ನೀಡಿದ್ದರು. ಈ ಕಾರ್ಯಕ್ರಮಲ್ಲಿ ಕೋಚ್‌ಗಳು ಹಾಗೂ ತರಬೇತಿ ಸಿಬ್ಬಂದಿ ಪಾಲ್ಗೊಂಡಿದ್ದರು. ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ಸಚಿವ ನಿಶೀತ್ ಪ್ರಮಾಣಿಕ್ ಕೂಡ ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ನಡುವೆ ಬಾಕ್ಸರ್ ನಿಖತ್ ಅವರು ಪ್ರಧಾನಿಗೆ ಬಾಕ್ಸಿಂಗ್ ಗ್ಲವ್ಸ್ ನೀಡುವ ಅಭಿಲಾಷೆ ವ್ಯಕ್ತಪಡಿಸಿದ್ದರು. ಅಂತೆಯೇ ಮೋದಿ ಅವರು ಕೈಗವಸನ್ನು ಅಭಿಮಾನದಿಂದ ಸ್ವೀಕರಿಸಿದ್ದಾರೆ. ನಿಖತ್ ಅವರ ಜತೆ ಓಟಗಾರ್ತಿ ಹಿಮಾ ದಾಸ್ ಅಸ್ಸಾಮ್‌ನ ಸಾಂಪ್ರದಾಯಿಕ ಗಮ್ಚಾ ನೀಡಿದ್ದರು.
“ಬಾಕ್ಸರ್‌ಗಳಾದ ನಾವೆಲ್ಲರೂ ಸಹಿ ಹಾಕಿರುವ ಗ್ಲವ್ಸ್ ಅನ್ನು ಪ್ರಧಾನಿ ಮೋದಿಯವರಿಗೆ ನೀಡಲು ಸಿಕ್ಕಿರುವ ಅವಕಾಶ ಅವಿಸ್ಮರಣೀಯ. ಈ ಸುಸಂದರ್ಭಕ್ಕಾಗಿ ಧನ್ಯವಾದಗಳು. ಅಥ್ಲೀಟ್‌ಗಳ ಜತೆ ಮೋದಿ ಅವರೊಂದಿಗೆ ಸಮಯ ಕಳೆಯಲು ಸಿಕ್ಕಿದ ಅವಕಾಶ ಅದ್ಭುತವಾಗಿತ್ತು,” ಎಂದು ನಿಖತ್ ಟ್ವೀಟ್ ಮಾಡಿದ್ದರು.
ಹಿಮಾದಾಸ್ ಕೂಡ ಮೋದಿ ಅವರಿಗೆ ಟ್ವೀಟ್ ಮೂಲಕ ಧನ್ಯವಾದ ಹೇಳಿದ್ದಾರೆ. “ಪ್ರಧಾನಿ ಮೋದಿ ಅವರಿಗೆ ನಮ್ಮ ಸಾಂಪ್ರದಾಯಿಕ ಗಮ್ಚಾ ನೀಡಲು ಸಿಕ್ಕಿರುವ ಅವಕಾಶ ಅಮೋಘ,” ಎಂದು ಬರೆದುಕೊಂಡಿದ್ದಾರೆ.
ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಕೂಡ ಮೋದಿ ಅವರ ಪ್ರೇರಣದಾಯಕ ಮಾತುಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಕಾರ್ಯಕ್ರಮದಲ್ಲಿ ಅವರು ವೇಟ್‌ಲಿಫ್ಟರ್‌ಗಳು ಸಹಿ ಹಾಕಿದ್ದ ಟಿಶರ್ಟ್ ಅನ್ನು ಮೋದಿ ಅವರಿಗೆ ನೀಡಿದ್ದರು.
ಬ್ಯಾಡ್ಮಿಂಟನ್ ಅಟಗಾರ ಲಕ್ಷ್ಯ ಸೇನ್ ಕೂಡ ಮೋದಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ. “ನಿಮ್ಮ ಬೆಂಬಲಕ್ಕೆ ನಾವೆಲ್ಲರೂ ಚಿರಋಣಿ,’ ಎಂದು ಅವರು ಬರೆದುಕೊಂಡಿದ್ದಾರೆ.
ಪ್ಯಾರಾ ಟೇಬಲ್ ಟನಿಸ್ ತಾರೆ ಭವಿನಾ ಬೆನ್ ಪಟೇಲ್, ಟೇಬಲ್ ಟೆನಿಸ್ Racket ಅನ್ನು ಮೋದಿ ಅವರಿಗೆ ಹಸ್ತಾಂತರಿಸಿದರು. “ಮೋದಿ ಅವರನ್ನು ಭೇಟಿಯಾಗಿ ಮಾತನಾಡಿರುವುದೇ ಒಂದು ಆಶೀರ್ವಾದ,” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ | CWG-2022 | ಕಾಮನ್ವೆಲ್ತ್ ಸಾಧಕರಿಗೆ ಶನಿವಾರ ಮೋದಿ ನಿವಾಸದಲ್ಲಿ ಆತಿಥ್ಯ