ಅಹಮದಾಬಾದ್: ಐಪಿಎಲ್ 2023ರ ಫೈನಲ್ ಪಂದ್ಯದಲ್ಲಿ ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ಈ ಹಣಾಹಣಿ ನಡೆಯಲಿದ್ದು ಅದಕ್ಕಿಂತ ಮೊದಲು ಸಮಾರೋಪ ಸಮಾರಂಭ ನಡೆಯಲಿದೆ. ಐಪಿಎಲ್ 2023ರ ಉದ್ಘಾಟನಾ ಸಮಾರಂಭ ಮಾರ್ಚ್ 31ರಂದು ಇದೇ ಸ್ಟೇಡಿಯಮ್ನಲ್ಲಿ ನಡೆಯಲಿದೆ.
ಮೂರು ವರ್ಷಗಳ ನಂತರ ಐಪಿಎಲ್ ಟೂರ್ನಿ ಹೋಮ್ ಮತ್ತು ಅವೇ ಮಾದರಿಯಲ್ಲಿ ನಡೆದಿದೆ. ಕೋವಿಡ್ -19 ಸೋಂಕಿನ ಕಾರಣಕ್ಕೆ ಹಿಂದಿನ ಮೂರು ಸೀಸನ್ಗಳನ್ನು ತಟಸ್ಥ ಸ್ಥಳಗಳಲ್ಲಿ ಆಯೋಜಿಸಲಾಗಿತ್ತು. ಹಾಲಿ ಆವೃತ್ತಿಯನ್ನು ಅದ್ಧೂರಿಯಾಗಿ ಆಯೋಜಿಸಿದ್ದು ಅರ್ಜಿತ್ ಸಿಂಗ್, ರಶ್ಮಿಕಾ ಮಂದಣ್ಣ ಮತ್ತು ತಮನ್ನಾ ಭಾಟಿಯಾ ಸೇರಿದಂತೆ ಸೆಲೆಬ್ರಿಟಿಗಳು ತಮ್ಮ ಪ್ರದರ್ಶನ ನೀಡಿದ್ದರು.
ಉದ್ಘಾಟನಾ ಸಮಾರಂಭದಂತೆಯೇ ಸಮಾರೋಪ ಸಮಾರಂಭವೂ ಕಣ್ಣಿಗೆ ರಸದೌತಣ ನೀಡಲಿದೆ. ಅನೇಕ ಪ್ರಮುಖ ಬಾಲಿವುಡ್ ನಟರು, ಗಾಯಕರು ಮತ್ತು ಕಲಾವಿದರು ತಮ್ಮ ಅದ್ಭುತ ಪ್ರದರ್ಶನಗಳಿಂದ ಈ ಕಾರ್ಯಕ್ರಮಕ್ಕೆ ಮೆರುಗು ನೀಡುವ ನಿರೀಕ್ಷೆಯಿದೆ. ಐಪಿಎಲ್ 2023ರ ಸಮಾರೋಪ ಸಮಾರಂಭವನ್ನು ಯಾವಾಗ ಮತ್ತು ಎಲ್ಲಿ ಲೈವ್ ಆಗಿ ನೋಡಬೇಕು ಮತ್ತು ಯಾರೆಲ್ಲಾ ಪ್ರದರ್ಶನ ನೀಡುತ್ತಿದ್ದಾರೆ ಎಂಬ ವಿವರ ಇಲ್ಲಿದೆ.
ಸಮಾರಂಭ ಸ್ಥಳ: ಅಹ್ಮದಾಬಾದ್ನ ನ ರೇಂದ್ರ ಮೋದಿ ಸ್ಟೇಡಿಯಂನಲ್ಲಿ ಐಪಿಎಲ್ 2023ರ ಸಮಾರೋಪ ಸಮಾರಂಭ ನಡೆಯಲಿದೆ.
ಇದನ್ನೂ ಓದಿ : Rashmika Mandanna: ನಟಿ ಐಶ್ವರ್ಯಾ ರಾಜೇಶ್ ಜತೆಗಿನ ವಿವಾದಕ್ಕೆ ಅಂತ್ಯ ಹಾಡಿದ ರಶ್ಮಿಕಾ ಮಂದಣ್ಣ
ಸಮಾರಂಭ ದಿನಾಂಕ: ಐಪಿಎಲ್ 2023 ರ ಸಮಾರೋಪ ಸಮಾರಂಭವು ಮೇ 28ರ ಭಾನುವಾರ ನಡೆಯಲಿದೆ.
ಸಮಯ: ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭ ಆರಂಭವಾಗಲಿದೆ.
ಅತಿಥಿಗಳು ಮತ್ತು ಕಾರ್ಯಕ್ರಮ ನೀಡುವವರು ಯಾರು?: ಭಾರತೀಯ ರ್ಯಾಪರ್ ಡಿವೈನ್, ಬ್ರಿಟಿಷ್ ಗಾಯಕ ಆಶ್ ಕಿಂಗ್, ಭಾರತೀಯ ಸಂಗೀತ ನಿರ್ಮಾಪಕ ನ್ಯೂಕ್ಲಿಯಾ ಮತ್ತು ಕೆನಡಾದ ಹಿನ್ನೆಲೆ ಗಾಯಕಿ ಜೋನಿತಾ ಗಾಂಧಿ ಈ ಸಂದರ್ಭದಲ್ಲಿ ಪ್ರದರ್ಶನ ನೀಡುವ ನಿರೀಕ್ಷೆಯಿದೆ. ಬಾಲಿವುಡ್ ನಟ ರಣವೀರ್ ಸಿಂಗ್ ಮತ್ತು ಅಕಾಡೆಮಿ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಎ.ಆರ್.ರೆಹಮಾನ್ ಈ ಕಾರ್ಯಕ್ರಮಕ್ಕೆ ಮೆರುಗು ನೀಡಲಿದ್ದಾರೆ.
ಸಮಾರಂಭದ ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ ಚಾನೆಲ್ಗಳು ಐಪಿಎಲ್ 2023 ರ ಸಮಾರೋಪ ಸಮಾರಂಭವನ್ನು ನೇರ ಪ್ರಸಾರ ಮಾಡಲಿವೆ.
ಲೈವ್ ಸ್ಟ್ರೀಮಿಂಗ್: ಐಪಿಎಲ್ 2023 ರ ಸಮಾರೋಪ ಸಮಾರಂಭದ ಲೈವ್ ಸ್ಟ್ರೀಮ್ ಜಿಯೋ ಸಿನೆಮಾ ಅಪ್ಲಿಕೇಶನ್ ಮತ್ತು ವೆಬ್ಸೈಟ್ನಲ್ಲಿ ಲಭ್ಯವಿದೆ.